ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಧ್ವಜಾರೋಹಣ

7:15 PM, Monday, January 16th, 2023
Share
1 Star2 Stars3 Stars4 Stars5 Stars
(5 rating, 1 votes)
Loading...
Kadri-Jatre

ಮಂಗಳೂರು: ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಜನವರಿ 14 ರಿಂದ 25 ರವರೆಗೆ ನಡೆಯುವ ವಾರ್ಷಿಕ ಜಾತ್ರೋತ್ಸವಕ್ಕೆ ಜನವರಿ 15 ರಂದು ಏಳು ಪಟ್ನ ಮೊಗವೀರ ಸಭಾದವರಿಂದ ಧ್ವಜ ಸ್ತಂಭ ಆರೋಹಣ ರಾತ್ರಿ 10ಕ್ಕೆ ಧ್ವಜಾರೋಹಣ, ಧ್ವಜ ಬಲಿ, ಗರುಡಾರೋಹಣ ನಡೆಯಿತು.

ಜನವರಿ 15ರಂದು ಬೆಳಿಗ್ಗೆ 4ಕ್ಕೆ ತೀರ್ಥಸ್ನಾನ, ರಾತ್ರಿ 10ಕ್ಕೆ ಕಂಚುದೀಪ ಬೆಳಗಿಸುವುದು, ದೀಪದ ಬಲಿ ಉತ್ಸವ, ಮಲರಾಯ ದೈವದ ಭೇಟಿ, ಕಂಚಿಲು ಸೇವೆ ಮತ್ತು ಸಣ್ಣರಥೋತ್ಸವ ನಡೆಯಿತು.

ಜನವರಿ 17ರಂದು ಬಿಕರ್ಣಕಟ್ಟೆ ಸವಾರಿ ಬಲಿ, 18ರಂದು ಮಲ್ಲಿಕಟ್ಟೆ ಸವಾರಿ ಬಲಿ, 19ರಂದು ಮುಂಡಾಣ ಕಟ್ಟೆ ಸವಾರಿ ಬಲಿ ಮತ್ತು 20ರಂದು ಕೊಂಚಾಡಿ ಸವಾರಿ ಬಲಿ, ಕೆರೆದೀಪೋತ್ಸವ , 21ರಂದು ಏಳನೇ ದೀಪೋತ್ಸವ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. 

ಜನವರಿ 22ರಂದು ಮಧ್ಯಾಹ್ನ 12ಕ್ಕೆ ಮಹಾಪೂಜೆ, ಮಧ್ಯಾಹ್ನ 1.30ಕ್ಕೆ ರಥಾರೋಹಣ ಸಂಜೆ 6ಕ್ಕೆ ಮಹಾರಥೋತ್ಸವ, ಬೆಳ್ಳಿ ರಥೋತ್ಸವ, ಚಂದ್ರಮಂಡಲ ಉತ್ಸವಗಳು ನಡೆಯಲಿವೆ.

ಜನವರಿ 23ರಂದು ತುಲಾಭಾರ ಸೇವೆ, ತ್ರಿಶೂಲ ಸ್ನಾನ, ಮಹಾಪೂಜೆ, ಸಂಜೆ 7.30ಕ್ಕೆ ಉತ್ಸವ ಬಲಿ, ಚಂದ್ರಮಂಡಲ ಉತ್ಸವ, ರಾತ್ರಿ 10.30ಕ್ಕೆ ಅವಭೃತ ಸ್ನಾನ, ಧ್ವಜಾವರೋಹಣ,

ಜನವರಿ 25ರಂದು ರಾತ್ರಿ 9ಕ್ಕೆ ಮಲರಾಯ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English