ಮಂಗಳೂರು : ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡಿದಲ್ಲಿ ಅಧಿಕ ಲಾಭಂಶ ನೀಡುವುದಾಗಿ ವಂಚಿಸಿದ ಕೇರಳದ ಕಲ್ಲಿಕೋಟೆಯ ವ್ಯಕ್ತಿಯೊಬ್ಬನನ್ನು ಮಂಗಳೂರು ನಗರ ಸೆನ್ ಕ್ರೈಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕೇರಳದ ಕಲ್ಲಿಕೋಟೆಯ ಜಿಜೊ ಜಾನ್ ಪಿ.ಕೆ (29) ಎಂಬಾತ ಈಗ ಮಂಗಳೂರು ನಗರ ಸೆನ್ ಕ್ರೈಂ ಠಾಣೆಯ ಪೊಲೀಸರ ಅತಿಥಿಯಾಗಿದ್ದಾನೆ.
ಆರೋಪಿಯು ಪ್ರತೀ ತಿಂಗಳು ಶೇ.15 ಲಾಭಾಂಶ ನೀಡುವುದಾಗಿ ಶಕ್ತಿನಗರದ ನಿವಾಸಿಯಿಂದ ಸುಮಾರು 1 ಕೋ.ರೂ. ಗಳನ್ನು ಹೂಡಿಕೆ ಮಾಡಿಸಿ ಬಳಿಕ ಲಾಭಾಂಶ ನೀಡದೆ ವಂಚಿಸಿದ್ದ ಎಂದು ಆರೋಪಿಸಲಾಗಿತ್ತು.
ಆರೋಪಿ ಪತ್ತೆ ಕಾರ್ಯಾಚರಣೆಯಲ್ಲಿ ಸೆನ್ ಕ್ರೈಂ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸತೀಶ್ ಜಿ.ಜೆ, ಎಸ್ಸೈ ಲೀಲಾವತಿ ಮತ್ತಿತರರು ಪಾಲ್ಗೊಂಡಿದ್ದರು.
Click this button or press Ctrl+G to toggle between Kannada and English