ಖ್ಯಾತ ನ್ಯಾಯವಾದಿ ಮೋರ್ಲ ರತ್ನಾಕರ ಶೆಟ್ಟಿ ಯವರಿಗೆ ‘ಆರ್ಯಭಟ’ ಪ್ರಶಸ್ತಿ

10:15 PM, Wednesday, May 24th, 2023
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಮೂಲತ: ದಕ್ಷಿಣಕನ್ನಡ ಜಿಲ್ಲೆಯ ಪ್ರತಿಷ್ಠಿತ ಬಂಟ ತರವಾಡು ಮನೆ ಮೋರ್ಲದ ರತ್ನಾಕರ ಶೆಟ್ಟಿಯವರು ಪ್ರತಿಷ್ಠಿತ ಅಂತಾರ್ರಾಷ್ಟ್ರೀಯ ಆರ್ಯಭಟ ಸಂಸ್ಥೆಯವರು ಕೊಡಮಾಡುವ 2023ನೇ ಸಾಲಿನ “ಆರ್ಯಭಟ ಪ್ರಶಸ್ತಿ”ಗೆ ಆಯ್ಕೆಯಾಗಿರುತ್ತಾರೆ.

ಮೇ25ರಂದು ಬೆಂಗಳೂರಿನ ರವೀಂದ್ರ ಕಲಾಮಂದಿರದಲ್ಲಿ ಗಣ್ಯರನೇಕರ ಸಮ್ಮುಖದಲ್ಲಿ ಪ್ರಶಸ್ತಿ ಸ್ವೀಕರಿಸಲಿರುವ ಮೋರ್ಲ ರತ್ನಾಕರ ಶೆಟ್ಟಿಯವರು ಅನ್ಯಾನ್ಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದವರು. ಶಿಕ್ಷಣ, ಕಲೆ, ಸಾಹಿತ್ಯ, ಸಂಘಟನೆ, ಸಮಾಜ ಸೇವೆಯಲ್ಲಿ ಧಾರ್ಮಿಕ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಹೊರನಾಡು ಮುಂಬೈಯ ಖ್ಯಾತ ನ್ಯಾಯವಾದಿಗಳಾಗಿಯೂ ಜನಾನುರಾಗಿಯಾಗಿರುವರು. ಗಡಿನಾಡ ಧ್ವನಿ ರಾಷ್ಟ್ರ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳಿಗೆ ಪಾತ್ರರಾಗಿರುವ ಮೋರ್ಲ ರತ್ನಾಕರ ಶೆಟ್ಪಿಯವರನ್ನು ಬಂಟರ ಯಾನೆ ನಾಡವರ ಸಂಘ “ಸೇವಾರತ್ನ ಚಿನ್ನದ ಪದಕ” ನೀಡಿ ಗೌರವಿಸಿದೆ.

ಊರ ಹೊರನಾಡ ಮುಂಬೈಯ ಅನೇಕ ಸಂಘ ಸಂಸ್ಥೆಗಳ ಗೌರವಕ್ಕೆ ಪಾತ್ರರಾಗಿರುವ ಮೋರ್ಲ ರತ್ನಾಕರ ಶೆಟ್ಟಿಯವರಿಗೆ ಅಭಿನಂದನೆಗಳು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English