ಪುತ್ತೂರು : ಪುತ್ತೂರು ಪೊಲೀಸ್ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಎಂಎಲ್ ಎ ಅಶೋಕ್ ರೈ ಎರಡು ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದರು.
ಅಶೋಕ್ ರೈ ಒಂದು ವಾರ ಕಳೆದರು ದಾಖಲೆ ಬಿಡುಗಡೆ ಮಾಡದ ಕಾರಣ ಫೇಸ್ ಬುಕ್ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗಿತ್ತು,
ಟ್ರೋಲನ್ನು ಹಂಚಿಕೊಂಡಿದ್ದ ಪ್ರಮೀತ್ ಅದಕ್ಕೆ “ಅಪ್ಪನಿಗೆ ಹುಟ್ಟಿದ್ರೆ ಎರಡು ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡಿ” ಎಂದು ಕಮೆಂಟ್ ಮಾಡಿದ್ದರು.
ಕಂಮೆಟ್ ಮಾಡಿದ ಆರೋಪದ ಮೇಲೆ ಶಾಸಕರ ಅಭಿಮಾನಿಗಳು ಎಂದುಕೊಂಡು ರಾತ್ರೋ ರಾತ್ರಿ ಯುವಕನ ಮನೆಗೆ ಹೋಗಿ ಗೂಂಡಾಗಿರಿ ನಡೆಸಿದ ಘಟನೆ ನಡೆದಿದೆ.
ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಜಯನಗರದ ಪ್ರಮೀತ್ ಎಂಬಾತನ ಮೇಲೆ ಕೆರಳಿದ ಅಶೋಕ್ ರೈ ಗಳ ಬೆಂಬಲಿಗರು ರಾತ್ರೋ ರಾತ್ರಿ ಪ್ರಮೀತ್ ಎಂಬವರ ಮನೆಗೆ ಹೋಗಿ, ಫೇಸ್ ಬುಕ್ ನಿಂದ ಬರಹವನ್ನ ಡಿಲಿಟ್ ಮಾಡುವಂತೆ ಬೆದರಿಕೆ ಹಾಕಿದ್ದಾರೆ.
ಈ ಸಂದರ್ಭ ಮಾತಿಗೆ ಮಾತು ಬೆಳೆದು ಎರಡು ತಂಡಗಳ ನಡುವೆ ವಾಗ್ವಾದ ನಡೆದಿದೆ.
ಮಾಹಿತಿ ಪಡೆದ ಸುಳ್ಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಸ್ಥಳಕ್ಕೆ ಡಿವೈಎಸ್ಪಿ ಗಾನ ಕುಮಾರ್ ಆಗಮಿಸಿ ಎರಡು ತಂಡದವರನ್ನ ಸಮಾಧಾನಪಡಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಪಡೆದರು.
ಆದರೂ ಅಶೋಕ್ ರೈ ಬೆಂಬಲಿಗರು ಪ್ರಮೀತ್ ಕ್ಷಮೆಯಾಚಿಸುಂತೆ ಪಟ್ಟು ಹಿಡಿದಿದ್ದು, ಕೊನೇ ಕ್ಷಣದಲ್ಲಿ ಪ್ರಮೀತ್ ಅಶೋಕ್ ರೈ ಬಗ್ಗೆ ನಿಂದನೆ ಮಾಡಿದ್ದಕ್ಕೆ ಕ್ಷಮೆಯಾಚನೆ ಮಾಡಿದ್ದಾರೆ.
Click this button or press Ctrl+G to toggle between Kannada and English