- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸಿಟಿ ಸೆಂಟರ್ ಮಾಲ್ ನಲ್ಲಿ ಇಂದು ಬಿಡುಗಡೆಗೊಂಡ ಏರ್ ಟೆಲ್ ವೈಫೈ

Airtel Wi Fi Hotspot Zone [1]ಮಂಗಳೂರು ನಗರದಲ್ಲಿ ಇಂದು ಏರ್ ಟೆಲ್ ವೈಫೈ ವ್ಯವಸ್ಥೆಯನ್ನು ಭಾರ್ತಿ ಏರ್ ಟೆಲ್ ಮುಖ್ಯ ಕಾರ್ಯಕಾರಿ ಅಧಿಕಾರಿ ಸೌರಭ್ ಘೋಯೆಲ್ ರವರು ಸಿಟಿ ಸೆಂಟರ್ ಮಾಲ್ ನಲ್ಲಿ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿ  ನಮ್ಮ ತಂತ್ರಜ್ಞಾನವು ಹೆಚ್ಚು ಹೆಚ್ಚು ಗ್ರಾಹಕರನ್ನು ತಲುಪಬೇಕೆಂಬುದು ನಮ್ಮ ಉದ್ಧೇಶವಾಗಿದ್ದು, ತಮ್ಮ ಕಂಪನಿಯ ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ ಮತ್ತು ಇತರ ಸ್ಮಾರ್ಟ್ ಸಾಧನಗಳೊಂದಿಗೆ ಸಮಯ ಕಳೆಯುವಂತಹ ಜನಸಂದಣಿ ಇರುವ ತಾಣಗಳು  ಮತ್ತು  ಸಾರ್ವಜನಿಕ ಪ್ರದೇಶಗಳಲ್ಲಿ ಹೈ-ಸ್ಪೀಡ್ ಇಂಟರ್ ನೆಟ್ ಸೌಲಭ್ಯವನ್ನು ಒದಗಿಸುತ್ತದೆ ಎಂದರು. ಅಲ್ಲದೆ ಇದು ಕೇವಲ ಏರ್ ಟೆಲ್ ಗ್ರಾಹಕರಿಗಷ್ಟೇ ಸೀಮಿತವಾಗಿಲ್ಲದೆ ಟ್ರಾಯ್ ನಿಂದ ಅನುಮೋದಿಸಲ್ಪಟ್ಟ ನಿರ್ದೇಶನ ತತ್ವಗಳು ಮತ್ತು ನಿಬಂಧನೆಗಳ ಚೌಕಟ್ಟಿನಲ್ಲಿ ರೂಪಿಸಲ್ಪಟ್ಟಿರುವ ಒಂದು ಸುರಕ್ಷಿತವಾದ ನೆಟ್ ವರ್ಕ್ ಇದಾಗಿದೆ ಎಂದವರು ಹೇಳಿದರು.

ಮೋತಿಶಾಮ್ ಪ್ರ್ರೈ.ಲಿ. ನ ಆಡಳಿತ ನಿರ್ದೇಶಕ ಹರ್ಷದ್, ಎಕ್ಸಿಕ್ಯೂಟಿವ್ ಡೈರೆಕ್ಟರ್ ಸವೂದ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.