- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಎರಡು ದಿನಗಳ ಕಾಲ ನಡೆದ ವೀರ ರಾಣಿ ಅಬ್ಬಕ್ಕ ದಶಮಾನೋತ್ಸವ ಸಮಾರಂಭದ ಸಮಾರೋಪ

Veerarani Abbakka Dashamanotsav [1]ಮಂಗಳೂರು : ಉಳ್ಳಾಲ ಭಾರತ್ ಶಾಲೆಯ ಮೈದಾನದಲ್ಲಿ ಕಳೆದ ಎರಡು ದಿನಗಳಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ವೀರ ರಾಣಿ ಅಬ್ಬಕ್ಕ ದಶಮಾನೋತ್ಸವ-2013 ಭಾನುವಾರ ಸಂಪನ್ನಗೊಂಡಿತು. ಸಮಾರೋಪದಲ್ಲಿ ಸಾಹಿತಿ, ಪತ್ರಕರ್ತೆ ಜಯಂತಿ ಎಸ್. ಬಂಗೇರ ಹಾಗೂ ಜಾನಪದ ಕಲಾವಿದೆ ಮತ್ತು ನಾಟಿವೆದ್ಯೆ ಕರ್ಗಿ ಶೆಡ್ತಿ ಅವರಿಗೆ ವೀರರಾಣಿ ಅಬ್ಬಕ್ಕ ಪುರಸ್ಕಾರ ಪ್ರಧಾನ ಮಾಡಲಾಯಿತು.

ಮಂಗಳೂರು ಶಾಸಕ, ಉತ್ಸವ ಸಮಿತಿ ಗೌರವಾಧ್ಯಕ್ಷ ಯು.ಟಿ. ಖಾದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭ ಈವರೆಗಿನ ಅಬ್ಬಕ್ಕ ಉತ್ಸವದಲ್ಲಿ ಪ್ರಶಸ್ತಿ ಮತ್ತು ಪುರಸ್ಕಾರ ಪಡೆದ ಡಾ| ಸುಶೀಲ ಉಪಾಧ್ಯಾಯ, ಎಚ್‌. ಶಕುಂತಳಾ ಭಟ್‌ ಹಳೆಯಂಗಡಿ, ಜಾನಕಿ ಬ್ರಹ್ಮಾವರ, ಲಲಿತಾ ರೈ, ಭಾನುಮತಿ ಮೆಂಡನ್‌, ಶಶಿಕಲಾ ಎ., ಕೆ. ಸರೋಜಿನಿ ಶೆಟ್ಟಿ, ಗೀತಾ ಬಾಯ್ ಉಳ್ಳಾಲ, ಜಯಶೀಲ ಅವರಿಗೆ ಸನ್ಮಾನ ಪತ್ರ ನೀಡಿ   ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಕೊರಗಪ್ಪ ನಾಯ್ಕ, ವಿಧಾನ ಪರಿಷತ್‌ ಸದಸ್ಯ ಕೆ. ಮೋನಪ್ಪ ಭಂಡಾರಿ, ಮೇಯರ್‌ ಗುಲ್ಜಾರ್‌ ಬಾನು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮಾನಾಥ ಎ. ಕೋಟ್ಯಾನ್‌, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್‌, ಬೆಂಗಳೂರು ಜವಾಹರ್‌ ಬಾಲಭವನ ಸೊಸೈಟಿ ಅಧ್ಯಕ್ಷ ಸುಲೋಚನಾ ಜಿ.ಕೆ. ಭಟ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಕರ್ನಾಟಕ ತೆಂಗಿನ ನಾರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಮಂಗಳೂರು ತಾಲೂಕು ಪಂಚಾಯತ್‌ ಅಧ್ಯಕ್ಷ ಕೆ. ಹರೀಶ್‌ ಕುಮಾರ್‌, ಉಳ್ಳಾಲ ಪುರಸಭೆ ಅಧ್ಯಕ್ಷ ಬಾಜಿಲ್‌ ಡಿಸೋಜ. ಜಿಲ್ಲಾಧಿಕಾರಿ ಎನ್‌. ಪ್ರಕಾಶ್‌, ಲಯನ್ಸ್‌ ಜಿಲ್ಲಾ ರಾಜ್ಯಪಾಲ ಎಂ.ಬಿ. ಸದಾಶಿವ, ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಮೂಡಾ ಅಧ್ಯಕ್ಷ ಎಸ್‌. ರಮೇಶ್‌ ಭಾಗವಹಿಸಿದ್ದರು.

ವೀರರಾಣಿ ಅಬ್ಬಕ್ಕ ದಶಮಾನೋ ತ್ಸವ-2013ರ ಸಮಾರೋಪದಲ್ಲಿ ಸಾಂಸ್ಕೃತಿಕ ರಂಜನೆಯಾಗಿ ಬೆಳಗ್ಗೆ ರಾಗಸಂಗಮ ಉಳ್ಳಾಲ ತಂಡದ ಎಸ್.ಶ್ರೀ ನಿವಾಸ ಮೂರ್ತಿ ಅವರ ನೇತತ್ವದಲ್ಲಿ ‘ವಂದನಾ’, ಭಾರತ್ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ‘ಕಡಲ ಮುತ್ತು’ ವಿಶೇಷ ಕಾರ್ಯಕ್ರಮ, ಮಧ್ಯಾಹ್ನ ಹವ್ಯಾಸಿ ಬಳಗ ಕದ್ರಿ ತಂಡದ ಶರತ್ ಕುಮಾರ್ ಕದ್ರಿ ಅವರ ನೇತತ್ವದಲ್ಲಿ ಹವ್ಯಾಸಿ ಹಾಗೂ ಕೂಟದ ಕಲಾವಿದರಿಂದ ‘ಉಳ್ಳಾಲದ ಉಳ್ಳಾಲ್ತಿ ಅಬ್ಬಕ್ಕ’ ಯಕ್ಷಗಾನ ಬಯಲಾಟ, ಉಡುಪಿಯ ಸಂಧ್ಯಾ ಶೆಣೆ ಮತ್ತು ದೇವರಾಜ್ ಅವರಿಂದ ನಗೆಬುಗ್ಗೆ ಹಾಸ್ಯ ಹರಟೆ, ನಿಲಾವು ಕಲಾವಿದರು ಕಾಟಿಪಳ್ಳ ತಂಡದ ಹುಸೆನ್ ಕಾಟಿಪಳ್ಳ ನೇತತ್ವದಲ್ಲಿ ‘ಪಿರ್ಸತ್ತೋ ಸಂದೋಲ’ ಬ್ಯಾರಿ ಭಾಷೆಯಲ್ಲಿನ ಕಲಾ ವೆವಿಧ್ಯ, ಸಂಜೆ ಪೊಲದವರ ಯಾನೆ ಗಟ್ಟಿ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ‘ನವದುರ್ಗಾ ವಿಲಾಸ’ ದಶ್ಯ ರೂಪಕ, ರಾತ್ರಿ ಬಾಲಕಷ್ಣ ಮಂಜೇಶ್ವರ ಅವರ ಬಳಗದಿಂದ ‘ನತ್ಯ ಸಂಭ್ರಮ’ ಹಾಗೂ ಉಳ್ಳಾಲದ ವ್ಯಾಘ್ರ ಚಾಮುಂಡೇಶ್ವರೀ ಸಾಂಸ್ಕೃತಿಕ ರಂಗದಿಂದ ‘ತುಳು ಸಿರಿ’ ಧ್ವನಿ ಬೆಳಕು ರೂಪಕ ಪ್ರದರ್ಶನ ನಡೆಯಿತು.

ಕಳೆದ ಎರಡು ದಿನಗಳ ಕಾಲ ನಡೆದ ವೀರರಾಣಿ ಅಬ್ಬಕ್ಕ ಉತ್ಸವದ ದಶಮಾನೋತ್ಸವ ಕಾರ್ಯಕ್ರಮಕ್ಕೆ ಪ್ರೇಕ್ಷಕರ ಕೊರತೆ ಒಂದೆಡೆಯಾದರೆ,ಪ್ರಮುಖ ರಾಜಕೀಯ ನಾಯಕರುಗಳಾದ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಕೇಂದ್ರ ಸಚಿವ ಡಾ| ಎಂ. ವೀರಪ್ಪ ಮೊಲಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌. ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ಉಸ್ತುವಾರಿ ಸಚಿವ ಸಿ.ಟಿ. ರವಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕನ್ನಡ ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ, ಕರ್ನಾಟಕ ವಿಧಾನಸಭೆ ಉಪಾಧ್ಯಕ್ಷ ಎನ್‌. ಯೋಗೀಶ್‌ ಭಟ್‌, ಬಂಟ್ವಾಳ ಶಾಸಕ ಬಿ. ರಮಾನಾಥ ರೈ, ಮಂಗಳೂರು ಉತ್ತರ ಶಾಸಕ ಕೃಷ್ಣ ಜೆ. ಪಾಲೆಮಾರ್‌, ಮೂಲ್ಕಿ – ಮೂಡಬಿದ್ರೆ ಶಾಸಕ ಕೆ. ಅಭಯಚಂದ್ರ, ಪುತ್ತೂರು ಶಾಸಕ ಮಲ್ಲಿಕಾ ಪ್ರಸಾದ್‌ ಮೊದಲಾದವರು ಗೈರು ಸಂಘಟಕರಿಗೆ ನಿರಾಸೆಯನ್ನುಂಟು ಮಾಡಿತ್ತು.