ಫೆಬ್ರವರಿ 24- ಪೋಲಿಯೋ ಲಸಿಕಾ ದಿನ

2:01 PM, Thursday, February 21st, 2013
Share
1 Star2 Stars3 Stars4 Stars5 Stars
(No Ratings Yet)
Loading...

polio dropಮಂಗಳೂರು : ಪೋಲಿಯೋ ರೋಗವನ್ನು ದೇಶದಿಂದ ತೊಲಗಿಸಿ ದೇಶವನ್ನು ಪೋಲಿಯೋ ಮುಕ್ತವಾಗಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸುತ್ತಿವೆ. ಈ ನಿಟ್ಟಿನಲ್ಲಿ ದ.ಕ. ಜಿಲ್ಲೆಯಲ್ಲಿಯೂ 2013ರ ಫೆಬ್ರವರಿ 24ರಂದು ಎರಡನೇ ಸುತ್ತಿನ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ದ,ಕ.ಜಿಲ್ಲೆಯಲ್ಲಿ 0-5 ವಯೋಮಾನದ ಮಕ್ಕಳ ಸಂಖ್ಯೆ 1,63,860 ಇದ್ದು, ಇವರಲ್ಲಿ ವಲಸೆ ಕಾರ್ಮಿಕರ ಮಕ್ಕಳ ಸಂಖ್ಯೆ ಅಂದಾಜು 2319 ಎಂದು ಪರಿಗಣಿಸಲಾಗಿದೆ.ಪ್ರತಿಯೊಂದು ಮಗುವಿಗೂ ಪೋಲಿಯೋ  ಲಸಿಕೆ ಹಾಕಿಸುವುದರಿಂದ ಪೋಲಿಯೋ ನಿಯಂತ್ರಣ ಸಾಧ್ಯವಾಗುತ್ತದೆ. ಅದರಲ್ಲಿಯೂ ವಿಶೇಷವಾಗಿ ವಲಸೆ ಕಾರ್ಮಿಕರ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸುವುದು ಪ್ರಾಮುಖ್ಯವಾಗಿರುತ್ತದೆ. ಮಂಗಳೂರಿಗೆ ಆಗಮಿಸುವ ಕಾರ್ಮಿಕರು ಬೇರೆ ರಾಜ್ಯಗಳಿಗೆ ಸಂಬಂಧಿಸಿದವರಾಗಿದ್ದು, ಸಾಮಾನ್ಯವಾಗಿ ಅವರ ಮಕ್ಕಳಿಗೆ ಸಾರ್ವಾತ್ರಿಕ  ಲಸಿಕಾಕರಣ ಸರಿಯಾಗಿ ಆಗಿಲ್ಲದಿರುವುದು, ಅಲೆಮಾರಿ ಜನರು ವಾಸಿಸುವ ಪ್ರದೇಶಗಳಲ್ಲಿ ನೈರ್ಮಲ್ಯದ ಕೊರತೆ ಇರುವುದು, ಈ ಕಾರಣಗಳಿಂದ ಯಾವುದೇ ಸಮಯದಲ್ಲಿ ಪೋಲಿಯೋ ರೋಗ ಹರಡಿದರೆ ಆಶ್ಚರ್ಯವಲ್ಲ. ಇದಲ್ಲದೆ ನಮ್ಮ ಜಿಲ್ಲೆಯ ಮಕ್ಕಳನ್ನು ಸಹ ನಾವು ಪೋಲಿಯೋ ರಹಿತರನ್ನಾಗಿ ಕಾಪಾಡುವುದು ಅಗತ್ಯವಾಗಿರುತ್ತದೆ.

ಆದ್ದರಿಂದ ಜಿಲ್ಲೆಯಲ್ಲಿ ಲಸಿಕಾ ಕಾರ್ಯಕ್ರಮದ ಯಶಸ್ವಿಗಾಗಿ ಒಟ್ಟು 921 ಲಸಿಕಾ ಕೇಂದ್ರಗಳು,ಮತ್ತು 11 ಸಂಚಾರಿ ತಂಡ ಹಾಗೂ 27 ಟ್ರಾನ್ಸಿಟ್ ಲಸಿಕಾ ಘಟಕಗಳನ್ನು ರೂಪಿಸಲಾಗಿರುತ್ತದೆ. ಇದಲ್ಲದೆ ಮಕ್ಕಳಿಗೆ 3822 ಲಸಿಕೆ ನೀಡುವವರು ಹಾಗೂ 193 ಮೇಲ್ವಿಚಾರಕರನ್ನು ನಿಯುಕ್ತಿಗೊಳಿಸಲಾಗಿದೆ.

ನೋಂದಣಿ ಮಾಡದಿದ್ದರೆ ವೈದ್ಯ ಸಂಸ್ಥೆ ರದ್ದು :ಎಚ್ಚರಿಕೆ

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಅಧಿನಿಯಮದಂತೆ 2010 ಅಕ್ಟೋಬರ್ 24ರ ಮೊದಲು ಹಾಗೂ ಅನಂತರ ರಾಜ್ಯದ ಎಲ್ಲ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು ಈ ತನಕ ಜಿಲ್ಲಾ ನೋಂದಣಾ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಂಡಿರದ ಎಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳು ನಿಯಮಾನುಸಾರ ಕಡ್ಡಾಯವಾಗಿ2013, ಮಾರ್ಚ್,2ರೊಳಗೆ ನೋಂದಾಯಿಸಿಕೊಳ್ಳಬೇಕು. ಇಲ್ಲದಿದ್ದರೆ ಅಂತಹ ಸಂಸ್ಥೆಗಳನ್ನು ಮುಚ್ಚಲಾಗುವುದು ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

ನೂತನವಾಗಿ ತೆರೆಯುವ ಎಲ್ಲ ಖಾಸಗಿ ವೈದ್ಯಕೀಯ ಸಂಸ್ಥೆಗಳು (ಅಲೋಪತಿ, ಯುನಾನಿ ಆಯುರ್ವೇದ , ಸಿದ್ದ, ಹೋಮಿಯೋಪತಿ ಮತ್ತು ಪ್ರಕೃತಿ ಚಿಕಿತ್ಸೆಯ ಪದ್ದತಿಗಳಲ್ಲಿ ಚಿಕಿತ್ಸೆಯನ್ನು ನೀಡಿತ್ತಿರುವ ಎಲ್ಲ ಮೆಡಿಕಲ್ ಕ್ಲಿನಿಕ್, ಕನ್ಸಲ್ಟೆಶನ್ ಸೆಂಟರ್, ಪಾಲಿಕ್ಲಿನಿಕ್ ಲ್ಯಾಬೋರೇಟರಿ, ಸ್ಕ್ಯಾನಿಂಗ್ ಸೆಂಟರ್ ಮತ್ತು ನರ್ಸಿಂಗ್  ಹೋಂ/ಆಸ್ಪತ್ರೆಗಳು) ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುವ ಜಿಲ್ಲಾ ನೋಂದಣಾ ಪ್ರಾಧಿಕಾರದಲ್ಲಿ ನೋಂದಾಯಿಸಿಯೇ ಕಾರ್ಯಾರಂಭವನ್ನು ಮಾಡಬೇಕು. ಕಾನೂನಿನಲ್ಲಿ ಹೇಳಲಾದ ಸವಲತ್ತುಗಳನ್ನು ಹೊಂದಿರಬೇಕು. ಪ್ರಾಧಿಕಾರದಿಂದ ಅನುಮತಿಯನ್ನು ಪಡೆಯದೆ ತೆರೆಯುವ ವೈದ್ಯಕೀಯ ಸಂಸ್ಥೆಗಳ ಮುಖ್ಯಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಆರೋಗ್ಯಾಧಿಕಾರಿ ಎಚ್ಚರಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English