- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಏಳೇ ದಿನಗಳ ಕಲೆಕ್ಷನ್ 117 ಕೋಟಿ

'ಎಂದಿರನ್ [1]‘ಎಂದಿರನ್’ ಬಿಡುಗಡೆಯ ನಂತರ ಕೇವಲ ಏಳೇ ದಿನಗಳ ಕಲೆಕ್ಷನ್ 117 ಕೋಟಿ ರೂಪಾಯಿಗಳನ್ನು ತಲುಪಿದೆ. ಸೂಪರ್ ಸ್ಟಾರ್ ರಜನೀಕಾಂತ್, ಐಶ್ವರ್ಯಾ ರೈ ಅಭಿನಯದ ಆ ಮೂಲಕ ಎಂದಿರನ್’ ತ್ರಿ ಈಡಿಯಟ್ಸ್‌ನ್ನು  ಹಿಂದೆ ಹಾಕಿದೆ.  ಸಲ್ಮಾನ್ ಖಾನ್ ಅಭಿನಯದ ದಬಾಂಗ್ ಚಿತ್ರದ ದಾಖಲೆಯನ್ನೂ ಕೂಡಾ ಎಂದಿರನ್  ಮುರಿದಿದೆ.
ಎಂದಿರನ್ ಮತ್ತು  ರೋಬೋಟ್ 2,200 ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು. ತಮಿಳುನಾಡೊಂದರಲ್ಲೇ ಒಂದು ವಾರದಲ್ಲಿ ಎಂದಿರನ್ 60 ಕೋಟಿ ರೂಪಾಯಿಗಳಿಸಿದೆ. ಆಂಧ್ರಪ್ರದೇಶದಲ್ಲಿ 30 ಕೋಟಿ, ಕರ್ನಾಟಕದಲ್ಲಿ ಇದು ಎಂಟು ಕೋಟಿ ತಲುಪಿದೆ. ಇನ್ನುಳಿದಂತೆ ಕೇರಳದಲ್ಲಿ ನಾಲ್ಕು ಕೋಟಿ ರೂಪಾಯಿ ಗಳಿಸಿದ್ದು,  ರೋಬೋಟ್ 15 ಕೋಟಿ ರೂಪಾಯಿಗಳನ್ನು ಗಳಿಸಿದೆ.
ಭಾರತೀಯ ಚಿತ್ರರಂಗದಲ್ಲೇ ಡಬ್ಬಿಂಗ್ ಚಿತ್ರ ಮಾಡದ ಸಾಧನೆಯೊಂದನ್ನು ರೋಬೋಟ್ ಮಾಡಿದೆ. ಡಬ್ಬಿಂಗ್ ಅವತರಣಿಕೆಯ ರೋಬೋಟ್ ವಾರದಲ್ಲಿ 30 ಕೋಟಿ ಗಳಿಸಿದ್ದು, ಇಂತಹ ಸಾಧನೆಯ್ನನು ಈವರೆಗೆ ಯಾವೊಂದು ಡಬ್ಬಿಂಗ್ ಚಿತ್ರವೂ ಮಾಡಿಲ್ಲ. ಡಬ್ಬಿಂಗ್ ಚಿತ್ರವೊಂದು ವಾರವೊಂದರಲ್ಲಿ ಒಂದು ಕೋಟಿ ರೂ ಗಳಿಸಿದ ಸಾಧನೆಯನ್ನೂ ಬಹುಶಃ ಈವರೆಗೆ ಮಾಡಿಲ್ಲ.