ಮಂಗಳೂರು : ಮಂಗಳೂರಿನ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಬಜಾಲ್ – ಫೈಸಲ್ ನಗರ ವಾರ್ಡ್ ನ ಕಾಂಗ್ರೇಸ್ ಸಕ್ರೀಯ ಕಾರ್ಯಕರ್ತರಾದ ಶ್ರೀಮತಿ ರೆಹನಾರವರು ಕಾಂಗ್ರೇಸ್ ನ ನಡವಳಿಕೆಯ ಬಗ್ಗೆ ಬೇಸತ್ತು ಇಂದು ಜಾತ್ಯಾತೀತ ಜನತಾದಳ ಪಕ್ಷಕ್ಕೆ ಸೇರ್ಪಡೆಗೊಂಡರು ಇವರನ್ನು ಜೆಡಿಎಸ್ ರಾಜ್ಯಾ ಉಪಾಧ್ಯಕ್ಷರಾದ ಮಾಜಿ ಸಚಿವ ನಾಗರಾಜ್ ಶೆಟ್ಟಿಯವರು ಪಕ್ಷದ ಧ್ವಜ ನೀಡುವುದರೊಂದಿಗೆ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು.
ಮಂಗಳೂರು ಮಹಾನಗರ ಪಾಲಿಕೆಯ 53 ನೇ ಬಜಾಲ್ ವಾರ್ಡ್ ನ ಅಭ್ಯರ್ಥಿಯಾಗಿ ಅವರು ಈ ಸಂದರ್ಭದಲ್ಲಿ ಘೋಷಿಸಿದರು. ಈ ಸಂದರ್ಭದಲ್ಲಿ ಶ್ರೀ ಎಂ.ಜಿ.ಹೆಗಡೆ, ಕ್ಷೇತ್ರ ಅಧ್ಯಕ್ಷ ಶ್ರೀ ಗೋಪಾಲಕೃಷ್ಣ ಅತ್ತಾವರ, ಶಶಿರಾಜ್ ಶೆಟ್ಟಿ, ಯುವ ಜನತಾದಳದ ಅಧ್ಯಕ್ಷ ಅಕ್ಷಿತ್ ಸುವರ್ಣ, ಶ್ರೀ ಚಿತ್ತರಂಜನ್ ರೈ, ಬಜಾಲ್ ವಾರ್ಡ್ ನ ಅಧ್ಯಕ್ಷರಾದ ರಿಯಾಜ್ ಬಜಾಲ್, ಉಮರುಲ್ ಫಾರೂಕ್, ಸೀತಾರಾಮ್ ಬಜಾಲ್ ಇನ್ನಿತರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English