- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ “ತುಳುನಾಡ ಜಾನಪದ ವೈಭವ ಕಾರ್ಯಕ್ರಮ “

Tulunada Janapada Vaibhava [1]ಮಂಗಳೂರು : ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಇದರ ವತಿಯಿಂದ ಪ್ರತಿಭಾ ದಿನಾಚರಣೆ “ತುಳುನಾಡ ಜಾನಪದ ವೈಭವ” ಕಾರ್ಯಕ್ರಮ ಕಾಲೇಜಿನ ವಿದ್ಯಾರ್ಥಿಗಳಿಂದ ಬುಧವಾರ ಫೆಬ್ರವರಿ 27 ರಂದು ಬೆಳಗ್ಗೆ ನಡೆಯಿತು.

Tulunada Janapada Vaibhava [2]ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ತುಳುನಾಡಿನ ಸಂಸ್ಕೃತಿಗೆ ಸಂಬಂಧಪಟ್ಟ, ಯಕ್ಷಗಾನ, ಹುಲಿವೇಷ, ಆಟಿಕಳಂಜ, ಕೋಟಿ ಚೆನ್ನಯ್ಯ, ಜನಪದ ನೃತ್ಯ, ಕಂಗೀಲು ಮೊದಲಾದ ಪ್ರದರ್ಶನಗಳನ್ನು ನಡೆಸಿಕೊಟ್ಟರು.

Tulunada Janapada Vaibhava [3]ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ರಂಗಭೂಮಿ ಮತ್ತು ಚಲನಚಿತ್ರ ಕಲಾವಿದೆ ಶ್ರೀಮತಿ ಸರೋಜಿನಿ ಶೆಟ್ಟಿ ಮಾತನಾಡಿ, ಆಧುನಿಕತೆಯ ಪ್ರಭಾವದಿಂದ ನಾವು ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ, ಮಕ್ಕಳಿಗೆ ಶಾಲಾ, ಕಾಲೇಜುಗಳಲ್ಲೇ, ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಿದರೆ ಮುಂದಿನ ಪೀಳಿಗೆಗೂ  ಜನಪದ ಕಲೆ ಹಾಗೂ ಸಂಸ್ಕೃತಿಯನ್ನು ತಿಳಿಸಲು ಸಾಧ್ಯ ಎಂದು ಹೇಳಿದರು.

Tulunada Janapada Vaibhava [4]ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಲಕ್ಷ್ಮಿ ನಾರಾಯಣ ಭಟ್ಟ, ಎಚ್. ಆರ್. ಪ್ರಾಂಶುಪಾಲರು ವಿಶ್ವವಿದ್ಯಾನಿಲಯ ಕಾಲೇಜು ಇವರು ವಹಿಸಿದ್ದರು.

ಶ್ರೀಮತಿ ಭುವನೇಶ್ವರಿ ಹೆಗಡೆ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು ಪ್ರಸ್ತಾವನೆಗೈದರು. ವಾರ್ಷಿಕ ವರದಿಯನ್ನು ಡಾ.ರತಿ ಗಣಪತಿ, ಸಹ ನಿರ್ದೇಶಕರು ಲಲಿತ ಕಲಾಸಂಘ ಇವರು ನೆರವೇರಿಸಿದರು. ಪವಿತ್ರ ಬಿ, ಕಾರ್ಯದರ್ಶಿ, ಲಲಿತ ಕಲಾ ಸಂಘ ವಿಶ್ವವಿದ್ಯಾನಿಲಯ ಕಾಲೇಜು ಇವರು ವಂದನಾರ್ಪಣೆ ಗೈದರು. ಕಾರ್ಯಕ್ರಮದ ನಿರ್ವಹಣೆ ಕುಮಾರಿ ಸೌಮ್ಯ ನಿರ್ವಹಿಸಿದರು.

ಕಾಲೇಜು ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.

Tulunada Janapada Vaibhava [5]

Tulunada Janapada Vaibhava [6]

Tulunada Janapada Vaibhava [7]

Tulunada Janapada Vaibhava [8]

Tulunada Janapada Vaibhava [9]

Tulunada Janapada Vaibhava [10]