- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ನಮ್ಮವರು ಹಳೆಮೈಸೂರು ಸಂಪ್ರದಾಯದ “ಮೈಸೂರು ದಸರಾ ಬೊಂಬೆ ಪ್ರದರ್ಶನ”

ಮೈಸೂರು ದಸರಾ ಬೊಂಬೆ ಪ್ರದರ್ಶನ [1]ಮಂಗಳೂರು:  ಮಂಗಳೂರುವಾಸಿ –  ಹಳೆಮೈಸೂರು ವಿಪ್ರ ಕೂಟವು ಹದಿನಾಲ್ಕು ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಮ್ಮವರು  ಸಂಘಟನೆಯ ಹೆಸರಿನಲ್ಲಿ ಸ್ಥಾಪನೆಯಾಯಿತು.  ಇಲ್ಲಿಗೆ ಮೈಸೂರು, ಚಾಮರಾಜಪೇಟೆ, ತುಮುಕೂರು, ಮಂಡ್ಯ, ಚಿತ್ರದುರ್ಗ, ಬಳ್ಳಾರಿ, ಶಿವಮೊಗ್ಗ, ಕೋಲಾರ ಮುಂತಾದ ಕಡೆಗಳಿಂದ ದ.ಕ ಜಿಲ್ಲೆಗೆ ಉದ್ಯೋಗಕ್ಕಾಗಿ ಬಂದು ಇಲ್ಲೇ ನೆಲೆ ನಿಂತು ಹಳೇ ಮೈಸೂರಿನ ಸಾಂಸ್ಕೃತಿಕ ಆಚಾರ ವಿಚಾರ, ಪದ್ದತಿ-ಪರಂಪರೆಗಳು, ಹಾಗೂ ಮೂಲ ಸಂಸ್ಕೃತಿಯನ್ನು ಉಳಿಸಿ, ಹೊಸ ಜನಾಂಗಕ್ಕೆ ತಿಳಿಸುವ ಉದ್ದೇಶದಿಂದ ಈ ಸಂಘಟನೆ ಸ್ಥಾಪನೆಯಾಗಿದೆ.

ಮೈಸೂರು ದಸರಾ ಬೊಂಬೆ ಪ್ರದರ್ಶನ [2]
ಮೈಸೂರು ಪ್ರಾಂತ್ಯದಲ್ಲಿ “ಬೊಂಬೆ ಕೂಡಿಸುವ” ಪದ್ಧತಿಯು ಸುಮಾರು 500 ವರ್ಷಗಳಿಂದ ನಡೆದುಕೊಂಡು ಬರುತ್ತಿವೆ. ಇಂತಹ ಶ್ರೀಮಂತ ಪರಂಪರೆಯನ್ನು ಕರಾವಳಿ ಜನತೆಗೆ ತೋರಿಸುವ ಮತ್ತು ತಿಳಿಸುವ ಕೆಲಸವನ್ನು ಪ್ರತಿ ವರ್ಷ ನಮ್ಮವರು ಸಂಘಟನೆ ಮಂಗಳೂರಿನ ನೆಲ್ಲಿಕಾಯಿ ರಾಘವೇಂದ್ರ ಸ್ವಾಮಿಗಳ ಮಠದ ಸಹಯೋಗದಿಂದ ನಡೆಸಿಕೊಂಡು ಬಂದಿದೆ. ಅ.13 ಬುಧವಾರ ಶರವು ರಾಘವೇಂದ್ರ ಶಾಸ್ತ್ರಿಗಳಿಂದ ಬೊಂಬೆ ಕೂಡಿಸುವ ಪ್ರದರ್ಶನಕ್ಕೆ ಚಾಲನೆ ನೀಡಲಾಗಿದೆ. ಅ 17 ಭಾನುವಾರದವರೆಗೆ “ಮೈಸೂರು ದಸರಾ ಬೊಂಬೆ ಪ್ರದರ್ಶನ” ವನ್ನು ನಡೆಯಲಿದೆ. ಸಂಘದ ಸದಸ್ಯರ ಮನೆಗಳಲ್ಲಿರುವ ಬೊಂಬೆಗಳನ್ನೇ ತಂದು ಇಲ್ಲಿ ಪ್ರದರ್ಶನಕ್ಕಿಡಲಾಗುವುದು, ಸುಮಾರು 300 ಕ್ಕೂ ಮಿಕ್ಕಿ ಬೊಂಬೆಗಳು ಇದರಲ್ಲಿ ಪ್ರದರ್ಶನಗೊಳ್ಳಲಿದೆ.

ಮೈಸೂರು ದಸರಾ ಬೊಂಬೆ ಪ್ರದರ್ಶನ [3]
ಒಂಭತ್ತು ಫಂಕ್ತಿಗಳಲ್ಲಿ ನಾನಾ ರೀತಿ ಬೊಂಬೆಗಳನ್ನು ಜೋಡಿಸಲಾಗಿದೆ. ಮಣ್ಣು ಮತ್ತು ಮರದಿಂದ ತಯಾರಾದ ಬೊಂಬೆಗಳನ್ನು ಸಂಘಟನೆಯ ಸದಸ್ಯರು ಖರೀದಿಸಿ ಇಲ್ಲಿ ಪ್ರದರ್ಶನಕ್ಕಿಡುತ್ತಾರೆ.  ಇಲ್ಲಿ ಪ್ರದರ್ಶನಗೊಳ್ಳಲಿರುವ ಬೊಂಬೆಗಳಲ್ಲಿ ಮುಖ್ಯವಾದವುಗಳೆಂದರೆ, ಪಟ್ಟದ ಗೊಂಬೆಗಳು, ರಾಮಾಯಣ ಮಹಾಭಾರತಕ್ಕೆ ಸಂಬಂಧಪಟ್ಟವುಗಳು, ದಶಾವತಾರ, ಅಷ್ಟಲಕ್ಷ್ಮಿಯರು, ರಥೋತ್ಸವ, ಪಲ್ಲಕ್ಕಿ, ಗೀತೋಪದೇಶ, ಸತ್ಯನಾರಾಯಣ ಪೂಜೆ, ಸಾಂಪ್ರಾದಾಯಿಕ ಮದುವೆ, ಕೃಷ್ಣನ ರಾಸಲೀಲೆ, ಮೈಸೂರು ಅರಮನೆ, ಅಂಬಾರಿ, ಶ್ರೀರಂಗಪಟ್ಟಣದ ಶ್ರೀ ರಂಗ ಸ್ವಾಮಿ ದೇವಸ್ಥಾನದ ಪ್ರತಿರೂಪ, ಮೈಸೂರು ಗ್ರಾಮೀಣ ಪರಿಸರದಲ್ಲಿನ ಮಹಿಳೆಯರು, ರೈತರು ಗದ್ದೆಯಲ್ಲಿ ಉಳುವ ಹಾಗೂ ನೆಡುವ ಕಾಯಕದ ಪ್ರತಿರೂಪ, ಹಾಗೆಯೇ ಮೀನುಗಾರಿಕೆ, ಕೋಳಿಸಾಕಣೆ, ಚಾಮುಂಡೇಶ್ವರಿ ಬೆಟ್ಟವನ್ನೊಳಗೊಂಡಂತೆ ಒಂದು ಉದ್ಯಾನವನ. ಹೀಗೆ ಹಲವಾರು ವಿಷಯಗಳನ್ನು ಬಿಂಬಿಸುವ ಬೊಂಬೆಗಳಿವೆ.

ಮೈಸೂರು ದಸರಾ ಬೊಂಬೆ ಪ್ರದರ್ಶನ [4]
ಬೊಂಬೆ ಪ್ರದರ್ಶನ ಕೇವಲ ಪ್ರದರ್ಶನವಲ್ಲ, ಅದರಲ್ಲಿ ಕ್ರಿಯಾಶೀಲತೆಯಿರಬೇಕು, ವ್ಯಕ್ತಿಯ ಕಲ್ಪನೆಗಳಿಗೆ ಸಹಕಾರ ರೂಪ ನೀಡಲು ಬೊಂಬೆ ಪ್ರದರ್ಶನದಿಂದ ಸಾಧ್ಯ ಎಂದು ನಮ್ಮವರು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಗುರುರಾಜ್ ಮೆಗಾ ಮೀಡಿಯಾಕ್ಕೆ ತಿಳಿಸಿದೆ.
ಮೈಸೂರು ದಸರಾ ಬೊಂಬೆ ಪ್ರದರ್ಶನ [5]