- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸ್ಥಳೀಯಾಡಳಿತ ಚುನಾವಣೆ ಫೈಟ್ ಗಿಳಿದ226 ಮಹಿಳೆಯರು !

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ  ಏಳು ಸ್ಥಳೀಯಾಡಳಿತ ಪ್ರದೇಶಗಳಿಗೆ ನಡೆಯಲಿರುವ ಚುನಾವಣಾ ಕದನದಲ್ಲಿ  226ಮಂದಿ ಮಹಿಳೆಯರು ಫೈಟ್ ಗಿಳಿದಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ, ಮೂಡುಬಿದಿರೆ. ಉಳ್ಳಾಲ, ಬಂಟ್ವಾಳ, ಪುತ್ತೂರು ಪುರಸಭೆ,  ಬೆಳ್ತಂಗಡಿ, ಸುಳ್ಯ ಪಟ್ಟಣ ಪಂಚಾಯಿತಿ  ವ್ಯಾಪ್ತಿಯಲ್ಲಿ  ಚುನಾವಣಾ  ಕದನ ಕಣದಲ್ಲಿ ರುವ ಒಟ್ಟು 677ಮಂದಿ ಅಭ್ಯರ್ಥಿಗಳ ಪೈಕಿ 226ಮಂದಿ ಮಹಿಳೆಯರು !

ಕಾಂಗ್ರೆಸ್ ಮತ್ತು ಬಿಜೆಪಿಯಿಂದ ತಲಾ 72ಮಂದಿ ಮಹಿಳೆಯರು ಕಣದಲ್ಲಿದ್ದರೆ, ಜೆಡಿಎಸ್ ನಿಂದ  42 ಮಂದಿ  ಸ್ತ್ರೀಯರು ಸ್ಪರ್ಧಿಸುತ್ತಿದ್ದಾರೆ. ಉಳಿದಂತೆ ಎಸ್ ಡಿಪಿಐ 15, ಸಿಪಿಎಂ 17, ಕೆಜೆಪಿ 11, ಮುಸ್ಲಿಂ 2, ವೆಲ್ಪೇರ್ ಪಾರ್ಟಿಯಿಂದ ಎರಡು  ಮಹಿಳೆಯರು  ಪೈಟ್ ನೀಡುತ್ತಿದ್ದಾರೆ. 13ಮಂದಿ ಸ್ವತಂತ್ರ ಮಹಿಳಾ ಅಭ್ಯರ್ಥಿಗಳು  ಅದೃಷ್ಠ ಪರೀಕ್ಷೆಗೆ ಇಳಿದಿದ್ದಾರೆ.

ವಾರ್ಡ್ ವಾರು ಲೆಕ್ಕಾಚಾರ

ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್ ಗಳಿಗೆ ಒಟ್ಟು 243 ಮಂದಿ ಸ್ರ್ಪಗಳಲ್ಲಿ 93ಮಂದಿ ಮಹಿಳೆಯರು. ಮೂಡುಬಿದಿರೆಪುರಸಭೆಯ 23ವಾರ್ಡ್ ಗಳಲ್ಲಿ 77ಮಂದಿ ಅಭ್ಯರ್ಥಿ ಗಳ ಪೈಕಿ 29ಮಂದಿ ಸ್ತ್ರೀಯರು. ಉಳ್ಳಾಲ ಪುರಸಭೆಯ 27ವಾರ್ಡ್ ಗಳಲ್ಲಿ 93ಮಂದಿ ಸ್ಪರ್ಧಾ ಕಣದಲ್ಲಿದ್ದು, ಈ ಪೈಕಿ 31ಮಂದಿ ಮಹಿಳೆಯರು. ಬಂಟ್ವಾಳ ಪುರಸಭೆಯ 23 ವಾರ್ಡ್ ಗಳಲ್ಲಿ 83ಮಂದಿ  ಸ್ರ್ಪಗಳಲ್ಲಿ 27ಮಂದಿ ಸ್ತ್ರೀಯರು. ಪುತ್ತೂರು ಪುರಸಭೆಯ 27ವಾರ್ಡ್ ಗಳಿಗೆ 88ಮಂದಿ ಸ್ಪರ್ಧಿಸುತ್ತಿದ್ದು,  ಈ ಪೈಕಿ 31ಮಂದಿ ಮಹಿಳೆಯರು. ಬೆಳ್ತಂಗಡಿ ಪಟ್ಟಣ ಪಂಚಾಯಿತಿ 11ವಾರ್ಡ್ ಗಳಲ್ಲಿ 38ಮಂದಿಯಲ್ಲಿ  22ಮಂದಿ  ಸ್ತ್ರೀಯರು. ಸುಳ್ಯ ಪಟ್ಟಣ ಪಂಚಾಯಿತಿಯ 18ವಾರ್ಡ್ ಗಳಲ್ಲಿ  55ಮಂದಿ ಸ್ಪರ್ಧಿಸುತ್ತಿದ್ದು, ಈ ಪೈಕಿ 24ಮಂದಿ ಮಹಿಳೆಯರಿದ್ದಾರೆ.

ಬಿಎಸ್ಪಿ, ಎನ್ಸಿಪಿ, ಸಮಾಜವಾದಿ ಪಕ್ಷ, ಅಖಿಲ ಭಾರತ ಪ್ರಗತಿಪರ ಜನತಾದಳ, ಶಿವಸೇನೆ, ವಾಟಾಳ ಪಕ್ಷ, ಸಿಪಿಐ(ಎಂಎಲ್ ) (ಲೇನಿನ್ವಾದ),  ಆರ್ಪಿಐ, ಭಾರತೀಯ ಪ್ರಜಾ ಪಕ್ಷಗಳು  ಈ ಚುನಾವಣೆಯಲ್ಲಿ   ಕಣಕ್ಕಿಳಿಯಲಿಲ್ಲ.  ಬಹುತೇಕ ವಾರ್ಡ್ ಗಳಲ್ಲಿ ಮಹಿಳೆ-ಮಹಿಳೆಯರ ನಡುವೆ ಕದನ ನಡೆಯಲಿದ್ದು, ಕೆಲವೇ ಕೆಲವು ವಾರ್ಡ್ ಗಳಲ್ಲಿ ಪುರುಷರ ವಿರುದ್ಧ ಮಹಿಳೆಯರು  ಫೈಟ್  ನೀಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆ ನಡೆಯಲಿರುವ 189ವಾರ್ಡ್ ಗಳ ಪೈಕಿ  ಎಲ್ಲಿಯೂ ಅವಿರೋಧ ಆಯ್ಕೆ ನಡೆದಿಲ್ಲ.