- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮತದಾನದಲ್ಲಿ ಚೇತರಿಕೆ ಸಂಜೆ 3 ಕ್ಕೆ ದ.ಕ : 61:46% ಉಡುಪಿ 63.42%

MCC election [1]ಮಂಗಳೂರು : ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ಸಂಜೆಯ ವೇಳೆಗೆ ಚುರುಕುಗೊಂಡಿದ್ದು ಸಂಜೆ 3 ಗಂಟೆಗೆಯವರೆಗೆ ದ.ಕ ಜಿಲ್ಲೆಯಲ್ಲಿ 61.46 % ಮತ್ತು ಉಡುಪಿ ಜಿಲ್ಲೆಯಲ್ಲಿ 63.42% ಮತದಾನವಾಗಿದೆ.

ಮಂಗಳೂರು ನಗರ 51% ಉಳ್ಳಾಳ ಪುರಸಭೆ 54.8%, ಮೂಡಬಿದ್ರೆ ಪುರಸಭೆ 63.3%, ಬಂಟ್ವಾಳ ಪುರಸಭೆ  65.6% ,ಪುತ್ತೂರು ಪುರಸಭೆ 60.4%, ಬೆಳ್ತಂಗಡಿ ಪಟ್ಟಣ ಪಂಚಾಯತ್ 63.6%, ಸುಲ್ಯ ಪಟ್ಟಣ ಪಂಚಾಯತ್ 71.7% ಮತದಾನವಾಗಿದೆ.

MCC election [2]ಉಡುಪಿ ಜಿಲ್ಲೆಯಲ್ಲಿ ಉಡುಪಿ ನಗರ ಸಭೆ 60.35%, ಸಾಲಿಗ್ರಾಮ 67.14%, ಕುಂದಾಪುರ 61.90%, ಕಾರ್ಕಳ 64.20% ಮತದಾನವಾಗಿದೆ. ಉಭಯ ಜಿಲ್ಲೆಗಳಲ್ಲಿ ಬಹುತೇಕ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ. ಉಡುಪಿಯಲ್ಲಿ ಮತದಾನ ಮಾಡುವುದಿಲ್ಲ ಎಂದಿದ್ದ ಪೇಜಾವರ ಶ್ರಿಗಳು ಮಧ್ಯಾಹ್ನ ತೆಂಕ ಪೇಟೆಯ ಉತ್ತರ ಶಾಲೆಯಲ್ಲಿ ಮತ ಚಲಾಯಿಸಿದರು.

MCC election [3]ಬಳಿಕ ಮಾತನಾಡಿದ ಅವರು ಮತದಾನ ಮಾಡದಿದ್ದರೆ ಚರ್ಚೆಗೆ ಕಾರಣವಾಗುತ್ತದೆ ಎಂಬ ಕಾರಣಕ್ಕೆ ಕೊನೆಗೆ ನಿರ್ಧಾರ ಬದಲಾಯಿಸಿ ಮತ ಚಲಾಯಿಸಿದೆ ಎಂದರು.

ಮಂಗಳೂರಿನ ಶಿವಭಾಗ್ ನಲ್ಲಿ ಮತದಾನ ಕೇಂದ್ರದ ಸಮೀಪ ಹಾಕಿದ ಬೂತನ್ನು ತೆರವುಗೊಳಿಸಲಾಯಿತು.