- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ದಕ: ಜೆಲ್ಲಿ ಕ್ರಶರ್ಗಳ ಎತ್ತಂಗಡಿ !

ಮಂಗಳೂರು : ಧೂಳು ಮೂಲಕ ಪರಿಸರ ಹಾನಿ ಮಾಡುವ ಜೆಲ್ಲಿ ಕಲ್ಲು ಪುಡಿ ಮಾಡುವ ಕ್ರಶರ್ ಉದ್ಯಮ ಸ್ಥಗಿತೊಳಿಸಿ, ಸುರಕ್ಷಿತ ವಲಯದಲ್ಲಿ ಸ್ಥಾಪಿಸಬೇಕು ಎಂಬ ರಾಜ್ಯ ಹೈಕೋರ್ಟ್ ಆದೇಶದಂತೆ ರೂಪಿಸಿದ ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ (ಕ್ರಷರ್ಗಳ) ನಿಯಂತ್ರಣ ವಿಧೇಯಕದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಪ್ರಥಮ ಹಂತದಲ್ಲಿ  12 ಸುರಕ್ಷಿತ ವಲಯ ಗುರುತಿಸಲಾಗಿದೆ.

ಮಂಗಳೂರು ತಾಲೂಕಿನ ಪಡುಕೊಣಾಜೆ, ಕಡಂದಲೆ, ಪುಚ್ಚಮೊಗರು, ಐಕಳದ ಮೂರು ಕಡೆ ಮತ್ತು ನೆಲ್ಲಿಕಾರಿನ ಎರಡು ಕಡೆ, ಪುತ್ತೂರು ತಾಲೂಕಿನ ಕಬಕ, ಬೆಳ್ತಂಗಡಿಯ ಅಂಡಿಂಜೆ, ಬಂಟ್ವಾಳದ ವಿಟ್ಲಮುಡ್ನೂರು, ನರಿಂಗಾನ ಸೇರಿದಂತೆ 12 ಕಡೆಗಳಲ್ಲಿ  ಸುರಕ್ಷಿತ ವಲಯ ಗುರುತಿಸಲಾಗಿದೆ. ಇವೆಲ್ಲವೂ ಬಹುತೇಕ ಸರಕಾರಿ ಜಾಗದಲ್ಲೇ  ಇವೆ.

131 ಅಜರ್ಿ ಸಲ್ಲಿಗೆ: ಹೈಕೋರ್ಟ್ ಆದೇಶದಂತೆ ಎರಡು ತಿಂಗಳ ಹಿಂದೆ ಕ್ರಶರ್ಗಳನ್ನು ಮುಚ್ಚಿದ್ದರೂ, ಸಮಸ್ಯೆಗಳ ಹಿನ್ನೆಲೆಯಲ್ಲಿ ಡಿ.23ರ ತನಕ ಸಡಿಲಿಕೆ ನೀಡಲಾಗಿದೆ. ಜಿಲ್ಲೆಯಲ್ಲಿ  120 ಕ್ರಶರ್ಗಳು ಕಾಯರ್ಾಚರಿಸುತ್ತಿದ್ದವು. ಅವುಗಳನ್ನು ಮುಚ್ಚಿ, ಸುರಕ್ಷಿತ ವಲಯಕ್ಕೆ ಸ್ಥಳಾಂತರ ಮಾಡಲು ಆದೇಶಿಸಿದ ಹಿನ್ನೆಲೆಯಲ್ಲಿ  ಹಳೆಯ ಹಾಗೂ ಹೊಸ ಕ್ರಶರ್ ಉದ್ಯಮಿಗಳು ಸೇರಿದಂತೆ ಒಟ್ಟು 131 ಅರ್ಜಿ ಬಂದಿತ್ತು. ಇದರಲ್ಲಿ ಈಗಾಗಲೇ ಕ್ರಶರ್ ನಡೆಸುತ್ತಿದ್ದವರಿಗೆ ಪ್ರಥಮ ಆದ್ಯತೆ ನೀಡಲಾಗಿದೆ.

22 ಕ್ರಶರ್ಗೆ ಅವಕಾಶ: ಗುರುತಿಸಿರುವ 12 ಸುರಕ್ಷಿತ ವಲಯದ ಪ್ರಥಮ ಹಂತದಲ್ಲಿ 22 ಕ್ರಶರ್ ಸ್ಥಾಪನೆಗೆ ಮಾತ್ರ ಅವಕಾಶವಿದೆ. ವಲಯದಲ್ಲಿ ಕೆಐಎಡಿಬಿ ಸಮೀಕ್ಷೆ ನಡೆಸಿ, ನೀರು, ರಸ್ತೆ, ವಿದ್ಯುತ್ ಸೌಲಭ್ಯ ಕಲ್ಪಿಸಿ, ಉದ್ಯಮಿಗಳಿಗೆ ಹಸ್ತಾಂತರ ಮಾಡಲಿದೆ. ಮೂರು ತಿಂಗಳಲ್ಲಿ ಕ್ರಶರ್ ಉದ್ಯಮ ಆರಂಭಗೊಳ್ಳುವ ನಿರೀಕ್ಷೆ ಇದೆ. ಎರಡನೇ ಹಂತದಲ್ಲಿ 60 ಕ್ರಶರ್ ಆರಂಭಿಸಲು ಸರಕಾರಿ ಹಾಗೂ ಪಟ್ಟಾ ಭೂಮಿ ಗುರುತಿಸಲಾಗಿದೆ. ಇದಕ್ಕೆ ಕಂದಾಯ, ಅರಣ್ಯ ಇಲಾಖೆ ಅನುಮತಿ ಬಳಿಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿರಪೇಕ್ಷಣಾ ಪ್ರಮಾಣಪತ್ರ ನೀಡಬೇಕಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ಡಾ.ಬಿ.ಎಂ.ರವೀಂದ್ರ ತಿಳಿಸಿದ್ದಾರೆ.

ಒಬ್ಬ ಉದ್ಯಮಿಗೆ ಕ್ರಶರ್ ಸ್ಥಾಪನೆಗೆ ಕನಿಷ್ಠ ಒಂದು ಎಕರೆ ಜಮೀನು ನೀಡಲಾಗಿದೆ. ನರಿಂಗಾನದಲ್ಲಿ 10 ಎಕರೆ ಜಾಗವಿದ್ದರೂ, ಒಬ್ಬರು ಮಾತ್ರ ಅರ್ಜಿ  ಸಲ್ಲಿಸಿದ್ದಾರೆ. ವಿಟ್ಲಮುಡ್ನೂರಿನಲ್ಲಿ ಐದು ಎಕರೆ ಜಾಗವಿದ್ದರೂ ಒಬ್ಬರು ಮಾತ್ರ, ಅಂಡಿಂಜೆಯಲ್ಲಿ 15 ಎಕರೆ ಜಮೀನು ಇದ್ದರೂ, ಇಬ್ಬರು ಮಾತ್ರ ಅರ್ಜಿ  ಸಲ್ಲಿಸಿದ್ದಾರೆ.

ಪರಿಸರ ಹಾನಿಯಾಗುತ್ತಿದೆ ಎಂಬ ಕಾರಣಕ್ಕೆ ಕ್ರಶರ್ಗಳನ್ನು ಸುರಕ್ಷಿತ ವಲಯಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಒಂದೆಡೆ ಕಲ್ಲಿನ ಕೋರೆ ಇದ್ದರೆ, ಸುರಕ್ಷಿತ ವಲಯದ ಕ್ರಶರ್ ಇನ್ನೊಂದೆಡೆ ಇರಲಿದ್ದು, ಕೋರೆಯಿಂದ ಕಲ್ಲು ಸಾಗಾಟದಿಂದ ಪರಿಸರ ಹಾನಿ ಜತೆಗೆ ಸಾಗಾಟ ವೆಚ್ಚ ಹೆಚ್ಚಲಿದೆ. ಅದರ ಹೊರೆ ನಮ್ಮ ಮೇಲೆ ಬೀಳಲಿದೆ ಎನ್ನುತ್ತಿದ್ದಾರೆ ಸಾರ್ವಜನಿಕರು.

ನಿಯಮಗಳು: ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ (ಕ್ರಶರ್ಗಳ) ನಿಯಂತ್ರಣ ವಿಧೇಯಕ- 2011ಕ್ಕೆ 2012ರ ಜ.3ರಂದು ರಾಜ್ಯಪಾಲರ ಒಪ್ಪಿಗೆ ದೊರೆತಿದೆ. ಇದು 2011ರ ಸೆ.7ರಿಂದ ಜಾರಿಗೆ ಬಂದಿದೆ. ಅದರಂತೆ ಸುರಕ್ಷಿತ ವಲಯದಿಂದ ಕಲ್ಲುಪುಡಿ ಮಾಡುವ ಘಟಕ ಸ್ಥಾಪಿಸುವಂತಿಲ್ಲ. ವಲಯವು ರಾಷ್ಟ್ರೀಯ ಹೆದ್ದಾರಿ, ವಸತಿ ಪ್ರದೇಶ, ದೇವಾಲಯ, ಶಾಲೆ ಮತ್ತು ನದಿಯಿಂದ ಎರಡು ಕಿ.ಮೀ. ದೂರ ಇರಬೇಕು. ರಾಜ್ಯ ಹೆದ್ದಾರಿಯಿಂದ 1.5 ಕಿ.ಮೀ. ದೂರ ಸೇರಿದಂತೆ ಏಳು ನಿಯಮ ವಿಧಿಸಲಾಗಿದೆ.

ಡಿಸಿ ಸಡಿಲಿಕೆ: ಸುರಕ್ಷಿತ ವಲಯದ ಕೆಲವು ಶರತ್ತುಗಳನ್ನು ಜಿಲ್ಲಾಧಿಕಾರಿ ನೇತೃತ್ವದ ಪರವಾನಗಿ ನೀಡುವ ಪ್ರಾಧಿಕಾರವು ಅಧಿಸೂಚನೆಯಂತೆ ಸಡಿಲಿಕೆ ಮಾಡಿತ್ತು. ಇಲ್ಲದಿದ್ದಲ್ಲಿ ಅರಣ್ಯ, ಕೃಷಿ ಭೂಮಿ, ರಾಜ್ಯ ಹೆದ್ದಾರಿ, ಸಂಪರ್ಕ ರಸ್ತೆಗಳು, ಧಾಮಿಗಳ ಕೇಂದ್ರಗಳು, ಚದುರಿದ ವಸತಿ ಪ್ರದೇಶ ಇರುವ ಜಿಲ್ಲೆಯಲ್ಲಿ ಸುರಕ್ಷಿತ ವಲಯ ಸ್ಥಾಪನೆ ಕಷ್ಟವಾಗಿತ್ತು. ಪ್ರಾಧಿಕಾರಕ್ಕೆ ಸಹಾಯ ಮಾಡಲು ಡಿಸಿ ನೇತೃತ್ವದ ಸಮಿತಿ ರಚಿಸಿದ್ದು, ಅದರಲ್ಲಿ ಪದನಿಮಿತ್ತ ಸದಸ್ಯರಾಗಿ ಎಸ್ಪಿ, ಜಿಲ್ಲಾ ಪಂಚಾಯಿತಿ ಸಿಇಒ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಪರಿಸರ ಅಧಿಕಾರಿ, ಅಗ್ನಿಶಾಮಕ ಅಧಿಕಾರಿ, ಕಾರ್ಖಾ ನೆ ಮತ್ತು ಬಾಯ್ಲರ್ ಗಳ ಸಹಾಯಕ ನಿರ್ದೇಶಕರು, ಕಾರ್ಮಿಕ ಅಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿ, ಭೂಗರ್ಭ ಇಲಾಖೆ ಅಧಿಕಾರಿ ಇದ್ದಾರೆ.

ದಕ್ಷಿಣ ಕನ್ನಡ  ಜಿಲ್ಲೆಯಲ್ಲಿ  12 ಸುರಕ್ಷಿತ ವಲಯ ಗುರುತಿಸಿದ್ದು, ಅದರಲ್ಲಿ  ಪ್ರಥಮ ಹಂತದಲ್ಲಿ  22 ಕ್ರಶರ್ ಸ್ಥಾಪನೆಗೆ ಅವಕಾಶವಿದೆ. ವಲಯದಲ್ಲಿ  ಕೆಐಎಡಿಬಿ ಸಮೀಕ್ಷೆ ನಡೆಸಿ, ನೀರು, ರಸ್ತೆ, ವಿದ್ಯುತ್ ಸೌಲಭ್ಯ ಕಲ್ಪಿಸಿ, ಉದ್ಯಮಿಗಳಿಗೆ ಹಸ್ತಾಂತರ ಮಾಡಲಿದೆ. ಮೂರು ತಿಂಗಳಲ್ಲಿ ಕ್ರಶರ್ ಉದ್ಯಮ ಆರಂಭಗೊಳ್ಳುವ ನಿರೀಕ್ಷೆ ಇದೆ. ಎರಡನೇ ಹಂತದಲ್ಲಿ 60 ಕ್ರಶರ್ ಆರಂಭಿಸಲು ಸರಕಾರಿ ಹಾಗೂ ಪಟ್ಟಾ  ಭೂಮಿ ಗುರುತಿಸಲಾಗಿದೆ.