- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಐದು ಸಾವಿರ ವರ್ಷಗಳ ಭವ್ಯ ಪರಂಪರೆಯ ಆಯುಧಪೂಜೆ ಆಚರಣೆ .

ಆಯುಧಪೂಜೆ. [1]ಮಂಗಳೂರು: ನಾಗರೀಕ ಸಂಸ್ಕೃತಿ ಆರಂಭವಾದಂದಿನಿಂದ ಜನರು ತಾವು ಉಪಯೋಗಿಸುತ್ತಿದ್ದ ಆಯುಧಗಳಿಗೆ ಪೂಜೆ ಮಾಡುತ್ತಿದ್ದರು ಎಂದು ಅನೇಕ ಮೂಲಗಳಿಂದ ನಾವು ಈಗ ತಿಳಿಯಬಹುದಾಗಿದೆ.
ಸುಮಾರು 5000 ವರ್ಷಗಳ ಹಿಂದೆ ಪಾಂಡವರು 12 ವರ್ಷಗಳ ವನವಾಸವನ್ನು ಮುಗಿಸಿ, ಅಜ್ಞಾತವಾಸದ ಕೊನೆಯ ದಿನದಲ್ಲಿ ಉತ್ತರ ಗೋಗ್ರಹಣದ ಕದನದಲ್ಲಿ ಆಯುಧಗಳನ್ನು ಪೂಜಿಸಿ ಕೌರವರೊಂದಿಗೆ ಯುದ್ಧ ನಡೆಸಿದರು ಎನ್ನುವ ದಾಖಲೆಗಳು ಮಹಾಭಾರತದ ಪುಟಗಳಲ್ಲಿ ಕಾಣಸಿಗುತ್ತದೆ.

ಆಯುಧಪೂಜೆ. [2]
ಬ್ರಹನ್ನಳೆಯಾದ ಅರ್ಜುನ ವಿರಾಟ ನಗರದ ರಾಜಕುಮಾರ ಉತ್ತರ ಕುಮಾರನೊಂದಿಗೆ ಬನ್ನಿ ಮಂಟಪದಿಂದ ಆಯುಧಗಳನ್ನು ಪೂಜಿಸಿ ಯುದ್ಧಕ್ಕೆ ಹೊರಟು ಕೌರವರನ್ನು ಸೋಲಿಸಿದ ಎಂಬ ಕಥೆಯ ಸಾಲುಗಳು ಪುರಾಣ ಕಾಲದಿಂದಲೇ ಆಯುಧ ಪೂಜೆಯ ಮಹತ್ವವನ್ನು ತಿಳಿಸುತ್ತದೆ.

ಆಯುಧಪೂಜೆ. [3]
ರಾಜ್ಯದ ಪರಂಪರೆಯನ್ನು ಗಮನಿಸಿದಾಗ ಮೈಸೂರಿನಲ್ಲಿ ಚಾಮುಂಡೇಶ್ವರಿಯು ರಾಕ್ಷಸರಾಜ ಮಹಿಸಾಸುರನ್ನು ತನ್ನ ತ್ರಿಶೂಲವನ್ನು ಪಯೋಗಿಸಿ ಕೊಲ್ಲುವ ಮೊದಲು ಆಯುಧವನ್ನು ಪೂಜಿಸಲಾಗಿದೆ ಎಂದು ಚರಿತ್ರೆ ಯಿಂದ ತಿಳಿದು ಬಂದಿದೆ.

ಆಯುಧಪೂಜೆ. [4]

ಕರ್ನಾಟಕದ ನೆರೆಯ ರಾಜ್ಯಗಳಾದ ತಮಿಳುನಾಡು, ಆಂದ್ರ ಹಾಗೂ ಕೇರಳಗಳಲ್ಲೂ ಆಯುಧ ಪೂಜೆಗಳನ್ನು ವಿಶಿಷ್ಟ ರೀತಿಯಿಂದ ಆಚರಿಸಲಾಗುತ್ತದೆ. ಆಯುಧ ಪೂಜೆಯ ಸಂದರ್ಭದಲ್ಲಿ ಶಕ್ತಿ ದೇವತೆಗಳಾದ ಆದಿಮಾಯೆ, ಸರಸ್ವತಿ, ಲಕ್ಷ್ಮಿ ಹಾಗೂ ಶಿವೆಯನ್ನು ಪೂಜಿಸುವುದು ಕಂಡುಬರುತ್ತದೆ.

ಆಯುಧಪೂಜೆ. [5]
ಈಗ ಆಯುಧ ಪೂಜೆಗೆ ವಿಶೇಷ ಪ್ರಾಶಸ್ತ್ಯ ಬಂದಿದೆ. ವರ್ಷವಿಡೀ ಕೆಲಸ ನಿರ್ವಹಿಸುವ ಯಂತ್ರಗಳು, ವಾಹನಗಳು ಒಂದುದಿನದ ಮಟ್ಟಿಗಾದರೂ ವಿಶ್ರಾಂತಿ ಪಡೆದು ಗೌರವಿಸಲ್ಪಡುತ್ತದೆ. ಇತ್ತೀಚೆಗೆ ಆಯುಧಪೂಜೆಗಳು ಆಡಂಬರ, ಸಂಬ್ರಮದಿಂದ ಎಲ್ಲೆಂದರಲ್ಲಿ ಆಚರಿಸಲ್ಪಡುತ್ತದೆ. ಸರಕಾರಿ, ಖಾಸಗಿ ಕಛೇರಿಗಳಲ್ಲಿ ನಿತ್ಯ ಉಪಯೋಗದ ಉಪಕರಣಗಳನ್ನು ಪೂಜಿಸುವುದು ಕಾಣ ಸಿಗುತ್ತದೆ.   ಗ್ಯಾರೇಜು, ವ್ಯಾಯಾಮ ಶಾಲೆ, ದೇವಸ್ಥಾನಗಳಲ್ಲಿ ಆಯುಧ ಪೂಜೆಯ ಸಂಭ್ರಮ ಕಂಡುಬರುತ್ತದೆ. ಜನರು ತಮ್ಮ ವಾಹನಗಳನ್ನು ಶೃಂಗರಿಸಿ ಪೂಜಿಸುತ್ತಾರೆ.

ಆಯುಧಪೂಜೆ ಹುಲಿ ವೇಷ [6]
ಆಯುಧ ಪೂಜೆಯ ಮಾರನೆ ದಿನ ವಿಜಯದಶವಿ. ಅಂದಿಗೆ ಹೆಚ್ಚು ಕಡಿಮೆ 9 ದಿನಗಳ ನವರಾತ್ರಿ ಮುಗಿದು ಕೊನೆಯ ಹಂತ ತಲುಪಿರುತ್ತದೆ. ಜನರು ನವರಾತ್ರಿಯ ಸಂಭ್ರಮದಿಂದ ಹೊರ ಬಂದು ದೀಪಾವಳಿಯ ತಯಾರಿಗೆ ಸಿದ್ಧರಾಗುತ್ತರೆ. ಒಟ್ಟಿನಲ್ಲಿ ದಸರಾ ನಂತರ ಹಬ್ಬಗಳ ಸರಮಾಲೆಯೇ ಬಂದುಬಿಡುತ್ತದೆ.

ಆಯುಧಪೂಜೆ [7]