- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪುತ್ತೂರು : ಗಾಂಜಾ ಸಾಗಾಟ ಇಬ್ಬರು ಆರೋಪಿಗಳ ಸೆರೆ

2 drug peddlers at puttur [1]ಪುತ್ತೂರು : ಅಕ್ರಮ ಗಾಂಜಾ ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪುತ್ತೂರು ಪೊಲೀಸರು ಸೋಮವಾರ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಚಿಕ್ಕಮಗಳೂರಿನ ರಾಘವೇಂದ್ರ ಹಾಗೂ ಪುತ್ತೂರಿನ ರಿಜ್ವಾನ್ ಬಂಧಿತ ಆರೋಪಿಗಳಾಗಿದ್ದಾರೆ.

ಆರೋಪಿಗಳು ನ್ಯಾನೋ ಕಾರೊಂದರಲ್ಲಿ ಉಪ್ಪಿನಂಗಡಿ ಕಡೆಯಿಂದ ಪುತ್ತೂರು ಕಡೆಗೆ ಗಾಂಜಾ ಸಾಗಾಟ ಮಾಡುತ್ತಿರುವ ಕುರಿತು ಪುತ್ತೂರು ನಗರ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ರಫೀಕ್ ಅವರಿಗೆ ಮಾಹಿತಿ ಲಭಿಸಿತ್ತು. ಈ ಮಾಹಿತಿಯ ಹಿನ್ನೆಲೆ ಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪೊಲೀಸರು ರೂಪಾಯಿ ೧೦ ಸಾವಿರ ಮೌಲ್ಯದ ೧೮೦ ಗ್ರಾಂ ಗಾಂಜಾ, ಆರೋ ಪಿಗಳಲ್ಲಿದ್ದ ಎರಡು ಮೊಬೈಲ್‌, ನ್ಯಾನೋ ಕಾರು ಸಮೇತ ವಶಪಡಿಸಿಕೊಂಡ ಒಟ್ಟು  ಸ್ವತ್ತುಗಳ ಮೌಲ್ಯ ೧.೬೪ ಲಕ್ಷ ರೂಪಾಯಿ ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.