[1]ಮಂಗಳೂರು : ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ವೈಮಾನಿಕ ಸರಕು ನಿರ್ವಹಣಾ ಸಂಕೀರ್ಣ ದ ಉದ್ಘಾಟನಾ ಸಮಾರಂಭವು ಮಾರ್ಚ್ 18 ರಂದು ನಡೆಯಲಿರಿರುವುದಾಗಿ ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.
ಉದ್ಘಾಟನೆಯನ್ನು ಕೇಂದ್ರ ವಿಮಾನ ಯಾನ ಸಚಿವ ಅಜಿತ್ ಸಿಂಗ್ ನೆರವೇರಿಸಲಿರುವರು. ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಕೇಂದ್ರ ಸಚಿವರಾದ ಎಂ. ವೀರಪ್ಪ ಮೊಲಿ ಮೊದಲಾದವರು ಆಗಮಿಸಲಿದ್ದಾರೆ.