- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಇಟಲಿ ರಾಯಭಾರಿಗೆ ಸುಪ್ರೀಮ್ ಕೋರ್ಟ್ ನಿಂದ ತಡೆ

Daniele Mancini [1]ನವದೆಹಲಿ : ಭಾರತೀಯ ಮೀನುಗಾರರಿಬ್ಬರನ್ನು ಗುಂಡಿಕ್ಕಿ ಕೊಂದ ಆರೋಪ ಎದುರಿಸುತ್ತಿರುವ ಇಟಲಿ ನೌಕಾಪಡೆಯ ಸಿಬ್ಬಂದಿಯಿ
ಬ್ಬರನ್ನು ಮರಳಿ ಒಪ್ಪಿಸುವಂತೆ ಸುಪ್ರೀಮ್ ಕೋರ್ಟ್ ಆದೇಶಿಸಿದೆ.

ತಮ್ಮ ದೇಶದಲ್ಲಿನ ಮತದಾನದಲ್ಲಿ ಪಾಲ್ಗೊಳ್ಳಲು ಅನುಮತಿ ಕೋರಿ ಇಟಲಿಗೆ ತೆರಳಿದ ಇಬ್ಬರು ನೌಕಾ ಸಿಬ್ಬಂದಿಯನ್ನು ವಾಪಾಸು ಕಳುಹಿಸುವ ವಿಷಯಕ್ಕೆ ಸಂಬಂಧಪಟ್ಟಂತೆ ಮಾತು ತಪ್ಪಿರುವ ಇಟಲಿಯ ಧೋರಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಮ್ ಕೋರ್ಟ್ ದೆಹಲಿಯಲ್ಲಿರುವ ಇಟಲಿ ರಾಯಭಾರಿ ಭಾರತ ಬಿಟ್ಟು ತೆರಳುವುದಕ್ಕೆ ಗುರುವಾರ ತಡೆಯಾಜ್ಞೆ ನೀಡಿದೆಯಲ್ಲದೆ, ಈ ಕುರಿತು ಮಾರ್ಚ್ 18  ರೊಳಗೆ ಉತ್ತರಿಸುವಂತೆ ತಿಳಿಸಲಾಗಿದೆ.

ಈ ಕುರಿತು ಇಟಲಿ ಸರ್ಕಾರಕ್ಕೆ, ಅದರ ರಾಯಭಾರಿಗೆ ಹಾಗು ಇಬ್ಬರು ನೌಕಾ ಸಿಬ್ಬಂದಿ ಆರೋಪಿಗಳಿಗೆ ನೋಟೀಸ್ ಜಾರಿ ಮಾಡಿದೆ. ಆರೋಪ ಎದುರಿಸುತ್ತಿರುವ ಇಟಲಿ ನೌಕಾಪಡೆಯ ಇಬ್ಬರು ಸಿಬ್ಬಂದಿಗಳನ್ನು ವಾಪಸ್ ಕರೆಸಿಕೊಳ್ಳುವ ಆಶ್ವಾಸನೆಯನ್ನು ಇಟಲಿ ರಾಯಭಾರಿ ನೀಡಿದ ನಂತರವಷ್ಟೆ ಸುಪ್ರೀಂಕೋರ್ಟ್ ಇಬ್ಬರು ಸಿಬ್ಬಂದಿಗೆ ಜಾಮೀನು ನೀಡಿ ಮತಚಲಾಯಿಸಲು ಸ್ವದೇಶಕ್ಕೆ ತೆರಳಲು ಆಶ್ವಾಸನೆ ನೀಡಿತ್ತು

ಈ ಕುರಿತು ಶೀಘ್ರವಾಗಿ ತೀರ್ಮಾನ ತೆಗೆದುಕೊಳ್ಳಲಾಗುವುದಾಗಿ ಇಟಲಿ ರಾಯಭಾರಿ ಡೇನಿಯಲ್ ಮಾನ್ಸಿನಿ ತಿಳಿಸಿದ್ದಾರೆ.