- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಗ್ರಾಮೀಣ ಪ್ರದೇಶದಲ್ಲಿ ಗ್ರಾಹಕ ಜಾಗೃತಿ ನಡೆಯಬೇಕು : ಜಿಲ್ಲಾಧಿಕಾರಿ

Consumer Day [1]ಮಂಗಳೂರು : ದ.ಕ ಜಿಲ್ಲಾಡಳಿತ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಮಂಗಳೂರು, ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟ (ರಿ) ದ.ಕ ಜಿಲ್ಲೆ ಹಾಗೂ ಗ್ರಾಹಕ ಸಂಘ ಮತ್ತು ಯೋಜನಾ ವೇದಿಕೆ ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ. ವಿಶ್ವ ಗ್ರಾಹಕ ದಿನಾಚರಣೆ ಮತ್ತು ಗ್ರಾಹಕ ಶಿಕ್ಷಣ ಸರ್ಟಿಪಿಕೇಟ್ ಪ್ರದಾನ ಸಮಾರಂಭವನ್ನು ಮಾರ್ಚ್ 15 ಶುಕ್ರವಾರ ಬೆಳಿಗ್ಗೆ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ದ.ಕ ಜಿಲ್ಲಾಧಿಕಾರಿ ಎನ್. ಪ್ರಕಾಶ್ ಉದ್ಘಾಟಿಸಿದರು.

Consumer Day [2]ಉದ್ಘಾಟನೆ ಬಳಿಕ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಗ್ರಾಹಕರಿಗೆ ಜಾಗೃತಿ ಮೂಡಿಸಬೇಕು. ಗ್ರಾಹಕರು ಪ್ರತಿ ಹಂತದಲ್ಲೂ ವ್ಯಾಜ್ಯಗಳನ್ನು ಕೂಡಲೇ ಬಗೆಹರಿಸಿಕೊಳ್ಳಬೇಕು ಎಂದು ನುಡಿದರು.

ಸಮಾರಂಭ ಅಧ್ಯಕ್ಷತೆಯನ್ನು ಡಾ.ಲಕ್ಷ್ಮೀನಾರಾಯಣ ಭಟ್ಟ ಹೆಚ್. ಆರ್ ಪ್ರಾಂಶುಪಾಲರು, ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇವರು ವಹಿಸಿದ್ದರು.

ಸಮಾರಂಭದಲ್ಲಿ ಗ್ರಾಹಕ ಶಿಕ್ಷಣ ಸರ್ಟಿಪೀಕೇಟುಗಳನ್ನು ಪ್ರದಾನ ಮಾಡಲಾಯಿತು ಗೋವಿಂದದಾಸ ಕಾಲೇಜು ಸುರತ್ಕಲ್, ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಪು, ಕೆನರಾ ಪ್ರಥಮ ದರ್ಜೆ ಕಾಲೇಜು ಮಂಗಳೂರು ಸಂತ ಪಿಲೋಮಿನ ಪ್ರಥಮ ದರ್ಜೆ ಕಾಲೇಜು ಪುತ್ತೂರು. ಈ ಸಂಸ್ಥೆಗಳಿಗೆ ಗ್ರಾಹಕ ಶಿಕ್ಷಣ ಸರ್ಟಿಪಿಕೇಟು ಪ್ರದಾನ ಮಾಡಲಾಯಿತು.

Consumer Day [3]ಶ್ರೀಮತಿ ಯಶೋದ ಅಲ್ ಬದ್ರಿಯಾ ಸಂಯುಕ್ತ ಪದವಿ ಪೂರ್ವ ಶಾಲೆ, ಕೃಷ್ಣಾಪುರ ಇದರ ಗ್ರಾಹಕ ಸಂಘದ ಸಂಯೋಜಕಿ ಉತ್ತಮ ಸಂಯೋಜಕ ಪ್ರಶಸ್ತಿ ಪಡೆದರು.

ಉತ್ತಮ ಸಂಘಟನೆಯ ಪ್ರಶಸ್ತಿಯನ್ನು ಅಲ್ ಬದ್ರಿಯಾ ಕಾಲೇಜು ಕೃಷ್ಣಾಪುರ, ಸುರತ್ಕಲ್ ಇವರು ಪಡೆದರು.

ಮುಖ್ಯ ಅತಿಧಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಪ್ರೊ.ಡಿ.ಎನ್ ಶ್ರೀಧರ, ಮಂಗಳೂರು ಪ್ರಾದೇಶಿಕ ಅಧಿಕಾರಿ ಸಿ. ಮಲ್ಲಿಕಾರ್ಜುನ ಕಾನೂನು ಮಾಪನ ಇಲಾಖೆಯ ಎಂ.ಪಿ. ಗಣೇಶ್ ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟದ ಎಂ.ಜಿ. ಸಾಲಿಯಾನ್, ವಿಶ್ವವಿದ್ಯಾನಿಲಯ ಗ್ರಾಹಕ ಸಂಘದ ಡಾ. ರಾಮಕೃಷ್ಣ ಬಿ. ಎಂ. ಉಪಸ್ಥಿತರಿದ್ದರು. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಶರಣಬಸಪ್ಪ ಸ್ವಾಗತಿಸಿದರು

Consumer Day [4]

Consumer Day [5]

Consumer Day [6]