ಪ್ರತಿಯೊಬ್ಬ ವ್ಯಕ್ತಿಯೂ ಮಾನವ ಹಕ್ಕು ಮತ್ತು ಅದರ ಅನುಷ್ಠಾನ ಕ್ಕೆ ಕಾರ್ಯಪ್ರವೃತ್ತರಾಗಬೇಕು : ಪ್ರತಾಪ್ ರೆಡ್ಡಿ

5:25 PM, Wednesday, March 20th, 2013
Share
1 Star2 Stars3 Stars4 Stars5 Stars
(No Ratings Yet)
Loading...

Human rights protectionಮಂಗಳೂರು : ಮಾನವ ಹಕ್ಕುಗಳನ್ನು ರಕ್ಷಿಸುವ ಕಾರ್ಯವು  ಕೇವಲ ಕಾನೂನಿಗೆ ಮಾತ್ರ ಸಂಬಂಧಿಸಿರದೆ ಸಮಾಜದಲ್ಲಿನ ಪ್ರತಿಯೊಬ್ಬ ವ್ಯಕ್ತಿಯೂ ಮಾನವ ಹಕ್ಕು ಮತ್ತು ಅದರ ಅನುಷ್ಠಾನ ಕ್ಕೆ ಕಾರ್ಯಪ್ರವೃತ್ತರಾಗಬೇಕು. ಎಂದು ಪ್ರತಿಯೊಬ್ಬ ವ್ಯಕ್ತಿಯು ಈ ಹಕ್ಕುಗಳ ಬಗೆಗೆ ಜಾಗೃತಿಯನ್ನು ಹೊಂದುತ್ತಾನೋ ಅಂದು ಮಾನವ ಹಕ್ಕುಗಳ ಉಲ್ಲಂಘನೆ ಕಡಿಮೆಯಾಗುತ್ತದೆ ಎಂದು  ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ ಅಭಿಪ್ರಾಯಪಟ್ಟರು.

ಅವರು ಸಂತ ಅಲೋಶಿಯಸ್ ಕಾಲೇಜಿನ ರಾಜ್ಯ ಶಾಸ್ತ್ರ ವಿಭಾಗದ ವತಿಯಿಂದ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಮಾನವ ಹಕ್ಕುಗಳ ಪ್ರತಿಪಾದನೆ  ವಿಷಯವಾಗಿ ಏರ್ಪಡಿಸಲಾದ  ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಭಾರತೀಯ ಪೊಲೀಸ್ ವ್ಯವಸ್ಥೆಯಲ್ಲಿನ  ಕಾಯ್ದೆಗಳು
ಬಹು ಹಿಂದೆ ಜಾರಿಗೆ ಬಂದತವುಗಳಾಗಿದ್ದು ಆ ಕಾಯ್ದೆಗಳು ಇಂದಿನ ದಿನಗಳಲ್ಲಿ ಅರ್ಥವಿಲ್ಲದಂತಾಗಿದ್ದು ಅವುಗಳಲ್ಲಿ ಸುಧಾರಣೆ ತರುವ ಅಗತ್ಯತೆ ಇದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಫಾ.ಸ್ವೀಬರ್ಟ್ ಡಿಸಿಲ್ವ ಮಾತನಾಡಿ,  ಜಗತ್ತಿನಲ್ಲಿರುವ ಎಲ್ಲ ಮಾನವ ಜನಂಗಕ್ಕೂ ಹಕ್ಕು ಎಂಬುದು ಒಂದೇ ತೆರನಾಗಿ ಅನ್ವಯಿಸುತ್ತವೆ, ಅದರಲ್ಲಿ ಮೇಲು ಕೀಳು ಎಂಬುದಿಲ್ಲ  ಆದ್ದರಿಂದ ಕೇವಲ  ಹಕ್ಕುಗಳ ಬಗೆಗೆ ಮಾತನಾಡಿ ಅವುಗಳನ್ನು ಪ್ರತಿಪಾದಿಸಿದರೆ ಸಾಲದು ಅವುಗಳನ್ನು ರಕ್ಷಿಸುವ ಕೆಲಸವನ್ನೂ ಮಾಡಬೇಕು ಆಗ ಮಾತ್ರ ಮಾನವ ಹಕ್ಕುಗಳ ಉಲ್ಲಂಘನೆಯಂತಹ ಘಟನೆಗಳು ತನ್ನಷ್ಟಕ್ಕೆ ಕಡಿಮೆಯಾಗುತ್ತದೆ ಎಂದರು.

ನಾರ್ತ್ ಕ್ಯಾರೊಲಿನ ವಿಶ್ವದ್ಯಾನಿಲಯದ ಪ್ರಾಧ್ಯಾಪಕಿ ಡಾ.ವಿವಿಯನ್ ಲಾರ್ಡ್ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English