Blog Archive

ಗಾಂಜಾ ಸೇವಿಸಿದ ನಾಲ್ವರು ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ

Saturday, September 22nd, 2018
Manipal-police

ಮಣಿಪಾಲ : ಗಾಂಜಾ ಸೇವಿಸಿದ್ದ ಮಣಿಪಾಲದ ನಾಲ್ವರು ವಿದ್ಯಾರ್ಥಿಗಳನ್ನು ಮಣಿಪಾಲ ಪೊಲೀಸರು ಸೆ.19ರಂದು ಸಂಜೆ ವೇಳೆ ಹೆರ್ಗಾ ಗ್ರಾಮದ ಸರಳಬೆಟ್ಟು ಸಮೀಪ ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳಾದ ರಿಷಿವೀರ್(20), ಪ್ರೀತಂ ಗುಪ್ತ(19), ಜಿ.ಪ್ರತೀಕಣ (20) ಹಾಗೂ ಸಾಯಿ ಚರಣ್(20) ಎಂಬವರನ್ನು ವಶಕ್ಕೆ ಪಡೆದ ಪೊಲೀಸರು ಮಣಿಪಾಲ ಕೆಎಂಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ಮುಂದೆ ಹಾಜರು ಪಡಿಸಿದರು. ಇವರನ್ನು ಪರೀಕ್ಷಿಸಿದ ವೈದ್ಯರು ಈ ನಾಲ್ವರು ಕೂಡ ಗಾಂಜಾ ಸೇವಿಸಿರುವುದಾಗಿ ದೃಢ ಪತ್ರ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೆರುವಾಜೆ ಡಾ. ಶಿವರಾಮ ಕಾರಂತ ಕಾಲೇಜಿನಲ್ಲಿ ಸ್ಕಾರ್ಫ್ ವಿವಾದ

Thursday, September 1st, 2016
saffron-shawls

ಪುತ್ತೂರು: ಸುಳ್ಯ ತಾಲೂಕು ಬೆಳ್ಳಾರೆ ಬಳಿಯ ಪೆರುವಾಜೆ ಡಾ. ಶಿವರಾಮ ಕಾರಂತ ಕಾಲೇಜಿನಲ್ಲಿ ಕಳೆದ 2 ದಿನಗಳಿಂದ ಮತ್ತೆ ಸ್ಕಾರ್ಫ್ ವಿವಾದ ಶುರುವಾಗಿದೆ. ಡಾ. ಶಿವರಾಮ ಕಾರಂತ ಕಾಲೇಜಿನ ಸುಮಾರು 15 ಮುಸ್ಲಿಂ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ತರಗತಿಗೆ ಬರುತ್ತಿದ್ದರು. ಇಲ್ಲಿ ಯಾವುದೇ ಧರ್ಮ ಬೇಡ, ಎಲ್ಲರೂ ಒಂದೇ. ಅವರು ಸ್ಕಾರ್ಫ್ ತೆಗೆಯದೇ ಇದ್ದಲ್ಲಿ ನಾವು ಕೇಸರಿ ಶಾಲು ಧರಿಸುತ್ತೇವೆ ಎಂದು ವಿದ್ಯಾರ್ಥಿಗಳು ಹೇಳಿದ್ದರು. ಅಲ್ಲದೆ, ಸ್ಕಾರ್ಫ್ ಗೆ ಅವಕಾಶ ನೀಡದಂತೆ ಮನವಿ ಮಾಡಲಾಗಿತ್ತಾದರೂ ಯಾವುದೇ ಪ್ರತಿಕ್ರಿಯೆ […]

ನೂತನ ಶಾಲಾ ಕಟ್ಟಡದ ಉದ್ಘಾಟನೆ

Monday, July 25th, 2016
School-Building

ಕುಂಬಳೆ: ಕಾಸರಗೋಡು ಜಿಲ್ಲಾ ಅಭಿವೃದ್ದಿ ಪ್ಯಾಕೇಜಿನಲ್ಲಿ ಒಳಪಟ್ಟ ಅಂಗಡಿಮೊಗರು ಹಯರ್ ಸೆಕಂಡರಿಶಾಲೆಯ ಹೊಸಕಟ್ಟಡವನ್ನು ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಸಕಲ ಸೌಲಭ್ಯಗಳಿರುವ ಶಾಲೆಯಿಂದ ವಿದ್ಯಾರ್ಥಿಗಳ ಕಲಿಕೆಗೆ ಸಹಕಾರಿಯಾಗಲಿದೆ. ಜಿಲ್ಲೆಯ ಅಭಿವೃದ್ದಿ ಯೋಜನೆಯಡಿ ಸುಮಾರು 54 ಲಕ್ಷರೂ.ವಿನಿಯೋಗಿಸಿ ಸ್ಥಾಪಿಸಲಾದ ಹೊಸಕಟ್ಟಡವು ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸಲಿ ಎಂದು ಹಾರೈಸಿದರು. ಮಂಜೇಶ್ವರ ಶಾಸಕ ಪಿ.ಬಿ ಅಬ್ದುಲ್ ರಜಾಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯೆ ಪುಷ್ಪಾ ಅಮೆಕ್ಕಳ, ಪುತ್ತಿಗೆ ಗ್ರಾ.ಪಂ ಅಧ್ಯಕ್ಷ ಜೆ.ಅರುಣಾ, ಗ್ರಾ.ಪಂ ಸದಸ್ಯ […]

ಕಾಸರಗೋಡು: ಎಸ್.ಎಸ್.ಎಲ್.ಸಿ ಪರೀಕ್ಷೆ ಬುಧವಾರ ಆರಂಭ

Tuesday, March 8th, 2016
kasagod SSLC

ಕಾಸರಗೋಡು: ರಾಜ್ಯದಲ್ಲಿ ಹತ್ತನೇ ತರಗತಿಯ ಪರೀಕ್ಷೆ ಬುಧವಾರ (ಇಂದು) ಆರಂಭಗೊಳ್ಳುತ್ತಿದೆ. ರಾಜ್ಯದ 4,76,857 ಮಂದಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತೆರಳಿ ಭವಿಷ್ಯ ನಿರ್ಧರಿಸುವರು. ಪರೀಕ್ಷೆಗೆ 2903 ಪರೀಕ್ಷಾ ಕೇಂದ್ರಗಳನ್ನು ಸಿದ್ದಗೊಳಿಸಲಾಗಿದೆ. ಮಲೆಯಾಳ ವಿಭಾಗದಲ್ಲಿ 3,20,854 ವಿದ್ಯಾರ್ಥಿಗಳು,ಕನ್ನಡ ವಿಭಾಗದಲ್ಲಿ 3135 ಮಂದಿ ವಿದ್ಯಾರ್ಥಿಗಳು,ತಮಿಳಿನಲ್ಲಿ 2163 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮೌಲ್ಯ ಮಾಪನ ಏಪ್ರಿಲ್ 1 ರಿಂದ 12ರ ವರೆಗೆ ನಡೆಯಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ 50 ಕೇಂದ್ರಗಳಲ್ಲಿ ಏಕ ಕಾಲದಲ್ಲಿ ಯೋಗ ಕಾರ್ಯಕ್ರಮ

Friday, December 13th, 2013
yoga

ಮಂಗಳೂರು : ಧರ್ಮಸ್ಥಳದ ಶಾಂತಿವನ ಟ್ರಸ್ಟ್ ನ ಯೋಗ ಮತ್ತು ನೈತಿಕ ಶಿಕ್ಷಣ ಇಲಾಖೆ ಹಾಗೂ ಸರ್ಕಾರವು ಜಂಟಿಯಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 50 ಕೇಂದ್ರಗಳಲ್ಲಿ ಯೋಗ ಕಾರ್ಯಕ್ರಮವನ್ನು ಹಮ್ಮಿಕೊಂಡು ಒಂದೇ ಬಾರಿ 70000 ಕ್ಕೂ ಅಧಿಕ ವಿದ್ಯಾರ್ಥಿಗಳು ಯೋಗದ ವಿವಿಧ ಅಭ್ಯಾಸಗಳನ್ನು ಪ್ರದರ್ಶಿಸಿದರು. ನಗರದ ಶಾರದಾ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಭವಿಷ್ಯತ್ತಿಗಾಗಿ ಯೋಗ ಕಾರ್ಯಕ್ರಮದಲ್ಲಿ ಮಾತನಾಡಿದ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಯೋಗ ಸಚಿವ ಯು.ಟಿ.ಖಾದರ್ ಇಂದಿನ ಯುವಜನಾಂಗ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಲಿಷ್ಟರಾಗ […]

ವಿದ್ಯಾರ್ಥಿಗಳ ಬಸ್ಸು ಸಂಚಾರದ ಅವ್ಯವಸ್ಥೆ ವಿರುದ್ದ ಎಸ್.ಐ.ಓ ಪ್ರತಿಭಟನೆ

Saturday, September 28th, 2013
sio

ಮಂಗಳೂರು : ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ ವತಿಯಿಂದ ವಿದ್ಯಾರ್ಥಿಗಳ ಬಸ್ಸು ಸಂಚಾರದ ಅವ್ಯವಸ್ಥೆ ವಿರುದ್ದ ಜಿಲ್ಲಾಧಿಕಾರಿ ಕಛೇರಿ ಎದುರು ಶನಿವಾರ ಪ್ರತಿಭಟನೆ ನಡೆಯಿತು. ನಮ್ಮ ಜಿಲ್ಲೆಯ ಬಡ ವಿದ್ಯಾರ್ಥಿಗಳಿಗೆ ಇಂದಿನ ದಿನಗಳಲ್ಲಿ ಬಸ್ಸು ಸಂಚಾರವು ತುಂಬಾ ಕಷ್ಟಕರವಾಗಿ ಪರಿಣಮಿಸುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಶಾಲೆಯ ಹಾದಿಯು ದುಸ್ತರವಾಗಿದೆ ಎಂದು ಅಬ್ದುಲ್ ಲತೀಫ್ ಹೇಳಿದರು. ಶಾಲೆಗೆ ಹೋಗುವಾಗ ವಿದ್ಯಾರ್ಥಿಗಳ ಬಸ್ಸು ಶುಲ್ಕವು ಕೆಲವೊಮ್ಮೆ 4 ರೂಪಾಯಿ, ಇನ್ನು ಕೆಲವೊಮ್ಮೆ 5 ರೂಪಾಯಿಯಂತೆ ವಸೂಲಿ ಮಾಡಲಾಗುತ್ತಿದೆ. ಈ ದರವನ್ನು […]

ಜಿಲ್ಲೆಯಲ್ಲಿ ಡ್ರಗ್ಸ್ ಮಾಫಿಯಾ, ಶೀಘ್ರ ಕಾನೂನು ಕ್ರಮಕ್ಕೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

Monday, February 4th, 2013
Drugs mafia DK

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಿದ್ದು,  ಇಡೀ ರಾಜ್ಯದಲ್ಲಿಯೇ ಜಿಲ್ಲೆ  ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ದೆ. ಇಲ್ಲಿ  ಹೊರದೇಶ ಹಾಗೂ ಹೊರರಾಜ್ಯಗಳಿಂದ ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಆಗಮಿಸುತ್ತಿದ್ದು ಇವರನ್ನು ಕೇಂದ್ರವಾಗಿರಿಸಿಕೊಂಡು ಡ್ರಗ್ ಮಾಫಿಯಾಗಳು ಕಾರ್ಯಾಚರಿಸುತ್ತಿದ್ದು ಅಮಾಯಕ ವಿದ್ಯಾರ್ಥಿಗಳು ಇದಕ್ಕೆ ಬಲಿಯಾಗುತ್ತಿದ್ದಾರೆ. ಶೀಘ್ರವೇ ಡ್ರಗ್ಸ್ ಮಾಫಿಯಾವನ್ನು ನಮ್ಮ ಜಿಲ್ಲಾಡಳಿತ ಹಾಗೂ ಸರಕಾರಗಳು ನಿಯಂತ್ರಿಸದೇ ಹೋದಲ್ಲಿ ಯುವಜನತೆ ಅಡ್ಡದಾರಿ ಹಿಡಿಯುವ ಸಾಧ್ಯತೆ ಇದೆ ಎಂದು  ಎಬಿವಿಪಿ ರಾಜ್ಯ ಕಾರ್ಯದರ್ಶಿ ರಮೇಶ್ ಕೆ. ಹೇಳಿದರು. ಡ್ರಗ್ಸ್ […]

ಪಿಯುಸಿ ಫಲಿತಾಂಶಃ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಉಡುಪಿ ದ್ವಿತೀಯ

Thursday, May 24th, 2012
PUC Result

ಮಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದ್ದು,ಶೇ. 86.1 ಫಲಿತಾಂಶ ಲಭಿಸಿದೆ. ಉಡುಪಿ ದ್ವಿತೀಯ (ಶೇ.85.32) ಸ್ಥಾನ ಹಾಗೂ ಕೊಡಗು ತೃತೀಯ ಸ್ಥಾನ ಪಡೆದಿದ್ದು, ಯಾದಗಿರಿ ಶೇ.32.21ಫಲಿತಾಂಶ ಪಡೆದು ಕೊನೆಯ ಸ್ಥಾನ ಪಡೆದಿದೆ. ರಾಜ್ಯದಲ್ಲಿ ಈ ಬಾರಿ ಪಿಯುಸಿಯಲ್ಲಿ ಒಟ್ಟು ಶೇ.57.03ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಇದು ಕಳೆದ ವರ್ಷಕ್ಕಿಂತ ಶೇ.8.01ರಷ್ಟು ಹೆಚ್ಚಳವಾಗಿದೆ. ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂದರೆ ಎಂ.ದೀಪಾ ಮಲ್ಲೇಶ್ವರದ ಎಂಇಎಸ್ ಕಿಶೋರ ವಿದ್ಯಾಲಯದ ವಿದ್ಯಾರ್ಥಿನಿ 593 […]

ಬೀಳ್ಕೊಡುಗೆ ಸಮಾರಂಭಲ್ಲಿ ಆಹಾರ ಸೇವಿಸಿದ 160 ವಿದ್ಯಾರ್ಥಿಗಳು ಅಸ್ವಸ್ಥ

Friday, October 21st, 2011
Food poision

ಮಂಗಳೂರು: ಕಾಲೇಜೊಂದರ ವಿದ್ಯಾರ್ಥಿಗಳು ಬುಧವಾರ ರಾತ್ರಿ ಬೀಳ್ಕೊಡುಗೆ ಸಮಾರಂಭಲ್ಲಿ ಭಾಗವಹಿಸಿ ಆಹಾರ ಸೇವಿಸಿದ ಬಳಿಕ ಆಸ್ವಸ್ಥರಾದ ಘಟನೆ ಮಂಗಳೂರಿನ ಅಶೋಕನಗರದ ಬಳಿ ನಡೆದಿದೆ. ಅಶೋಕನಗರದ ನರ್ಸಿಂಗ್ ಕಾಲೇಜೊಂದರ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭಲ್ಲಿ ಸುಮಾರು 300 ಮಂದಿ ಆಹಾರ ಸೇವಿಸಿದ್ದು, ಅವರಲ್ಲಿ 160 ಮಂದಿಗೆ ಅಸ್ವಸ್ಥತೆ ಕಂಡು ಬಂತು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಈ ಪೈಕಿ 120 ಮಂದಿ ಪ್ರಥಮ ಜಿಕಿತ್ಸೆ ಪಡೆದು ಬಿಡುಗಡೆ ಹೊಂದಿದ್ದಾರೆ. ಉಳಿದ 40 ಮಂದಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ […]