Blog Archive

ಜಿಲ್ಲಾಮಟ್ಟದ ಕ್ರೀಡಾಕೂಟ: ಆಳ್ವಾಸ್ ಶಾಲೆಗೆ 70 ಪದಕ

Friday, October 26th, 2018
alwas-clg

ಮೂಡುಬಿದಿರೆ: ಉಜಿರೆಯ ರತ್ನವರ್ಮ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಆಳ್ವಾಸ್ ಶಾಲೆ ಮೂಡುಬಿದಿರೆ 32 ಚಿನ್ನ, 26 ಬೆಳ್ಳಿ ಪದಕಗಳನ್ನು, 12 ಕಂಚಿನ ಪದಕ ಒಟ್ಟು 70 ಪದಕಗಳನ್ನು ಪಡೆದು 8 ನೂತನ ಕೂಟ ದಾಖಲೆಯೊಂದಿಗೆ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ವೈಯಕ್ತಿಕ ಪ್ರಶಸ್ತಿ: 17 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ರಿನ್ಸ್ ಜೋಸೆಫ್, 17 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ದೀಪಶ್ರೀ ಪ್ರಶಸ್ತಿ, ಪ್ರೌಢಶಾಲಾ 14 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ರಿಯೋನ್, […]

ಚಿಂತನೆಗಳು ಬದಲಾದಾಗ ಮಾತ್ರ ವ್ಯಕ್ತಿತ್ವ ವಿಕಸನ ಸಾಧ್ಯ

Tuesday, October 2nd, 2018
alwas-clg

ಮೂಡುಬಿದಿರೆ: ಪ್ರತಿಯೊಬ್ಬರು ತಮ್ಮ ಚಿಂತನೆಗಳಿಗೆ ಒಂದು ಚೌಕಟ್ಟನ್ನು ಹಾಕಿಕೊಂಡು, ಅದರೊಳಗೆ ಬಂಧಿಯಾಗಿರುತ್ತಾರೆ. ಆ ಚೌಕಟ್ಟಿನಿಂದ ಹೊರಬಂದು ವಿಭಿನ್ನವಾಗಿ ಚಿಂತಿಸಿದಾಗ ಮಾತ್ರ ವ್ಯಕ್ತಿ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಡಾ. ಶ್ರೀನಿವಾಸ್ ನಂದಗೋಪಾಲ್ ಹೇಳಿದರು. ಇವರು ಆಳ್ವಾಸ್ ಕಾಲೇಜಿನಲ್ಲಿ ಮಾನವ ಸಂಪನ್ಮೂಲ ಮತ್ತು ನಿರ್ವಹಣೆ ವಿಭಾಗದ ವತಿಯಿಂದ ನಡೆದ “ವ್ಯಕ್ತಿತ್ವ ವಿಕಸನ”ದ ಒಂದು ದಿನದ ತರಬೇತಿ ಕಾರ‍್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ದೇಶದ ಸಮಸ್ಯೆಗಳಿಗೆ ಭ್ರಷ್ಟಚಾರವಾಗಲೀ, ಅನಕ್ಷರತೆಯಾಗಲಿ ಮುಖ್ಯ ಕಾರಣವಲ್ಲ. ಬದಲಾಗಿ ನಮ್ಮಲ್ಲಿರುವ ಕುಂಠಿತ ಚಿಂತನೆಗಳೆ ನಮ್ಮನ್ನು […]

‘ಹೆಚ್ ಆರ್ ಬಜೆಟಿಂಗ್’ ಅತಿಥಿ ಉಪನ್ಯಾಸ

Wednesday, September 19th, 2018
moodbidri

ಮೂಡುಬಿದಿರೆ: ಇತ್ತೀಚಿನ ದಿನಗಳಲ್ಲಿ ಹೆಚ್ ಆರ್ ವಿಭಾಗಕ್ಕೆ ಹೆಚ್ಚು ಬೇಡಿಕೆಯಿದ್ದು ವಿದ್ಯಾರ್ಥಿಗಳು ಈ ಅವಕಾಶಗಳತ್ತ ಗಮನ ಹರಿಸಬೇಕು. ಅದರ ಜೊತೆಗೆ ಸಂವಹನ ಕಲೆ, ಟೀಂ ವರ್ಕ್, ಆತ್ಮವಿಶ್ವಾಸ, ಆರ್ಥಿಕ ನಿರ್ವಹಣೆ ಕ್ಷೇತ್ರಗಳ ಕೌಶಲ್ಯವನ್ನು ಬೆಳಸಿಕೊಳ್ಳುವುದರಿಂದ ಉದ್ಯೋಗಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು ಎಂದು ಮಂಗಳೂರು ಕೆಮಿಕಲ್ ಫರ್‌ಟಿಲೈಸರ್ ಲಿಮಿಟಿಡ್ ಕಂಪನಿಯ ಹೆಚ್ ಆರ್ ಜನರಲ್ ಮ್ಯಾನೆಜರ್ ಸುರೇಶ್ ತಿಳಿಸಿದರು. ಆಳ್ವಾಸ್ ಕಾಲೇಜಿನ ಸ್ನಾತಕೊತ್ತರ ಎಮ್ ಕಾಂ ಹೆಚ್ ಆರ್ ಡಿ ವಿಭಾಗದಿಂದ ಆಯೋಜಿಸಲಾಗಿದ್ದ ’ಹೆಚ್ ಆರ್ ಬಜೆಟಿಂಗ್’ ಅತಿಥಿ ಉಪನ್ಯಾಸ […]

ಆಳ್ವಾಸ್ ಪ್ರೌಢಶಾಲೆಯಲ್ಲಿ ಪರಿಸರ ಜಾಗೃತಿ ಚಿತ್ರಕಲಾ ಸ್ಪರ್ಧೆ

Wednesday, June 6th, 2018
alwas-college-2

ಮೂಡುಬಿದಿರೆ: ಪರಿಸರ ನಮ್ಮ ಬದುಕಿಗೆ ಬೇಕಾದ ಎಲ್ಲವನ್ನೂ ಕೊಟ್ಟಿದೆ. ಆದರೆ ಪರಿಸರದ ಕೊಡುಗೆಯನ್ನು ನಾವು ಹಾಳು ಮಾಡುತ್ತಿದ್ದೇವೆ. ಪರಿಸರಕ್ಕೆ ನಾವೇನು ಕೊಟ್ಟಿದ್ದೇವೆ ಎಂದು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಪರಿಸರ ಜಾಗೃತಿ ಎಳವೆಯ ಹಂತದಲ್ಲಿ ಮನೆಯಲ್ಲಿಯೇ ಮೂಡಬೇಕು. ಮತ್ತು ಅದು ನಿತ್ಯದ ದಿನಚರಿಯಾಗಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶಿವಾನಂದ ಕಾಯ್ಕಿಣಿ ಹೇಳಿದರು. ಆಳ್ವಾಸ್ ಪ್ರೌಢಶಾಲೆಯಲ್ಲಿ `ಪ್ಲಾಸ್ಟಿಕ್ ಮುಕ್ತ ಪರಿಸರ’ ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಆಳ್ವಾಸ್ ಶಿಕ್ಷಣ […]

ಮೂಡುಬಿದಿರೆ ಬಿಜೆಪಿ ಅಭ್ಯರ್ಥಿ ಉಮಾನಾಥ್ ಕೋಟ್ಯಾನ್ 25 ಸಾವಿರ ಮತಗಳಿಂದ ಜಯಭೇರಿ..!

Tuesday, May 15th, 2018
umanath-kotian

ಮೂಡುಬಿದಿರೆ: ರಾಜ್ಯದಲ್ಲಿ ಬಿಜೆಪಿಗೆ ಮೊದಲ ಜಯ ಲಭಿಸಿದೆ. ಮೂಡುಬಿದಿರೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಉಮಾನಾಥ್ ಕೋಟ್ಯಾನ್ ಜಯಭೇರಿ ಬಾರಿಸಿದ್ದಾರೆ. ತನ್ನ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಅಭಯಚಂದ್ರ ಜೈನ್ ಅವರ ವಿರುದ್ಧ 25 ಸಾವಿರಕ್ಕೂ ಅಧಿಕ ಮತಗಳಿಂದ ಉಮಾನಾಥ್ ಕೋಟ್ಯಾನ್ ಜಯಗಳಿಸಿದ್ದಾರೆ.

ಎಸೆಸೆಲ್ಸಿಯಲ್ಲಿ ಮೂಡುಬಿದಿರೆಯ ಪ್ರಾಂಶುಲಾ ಪ್ರಶಾಂತ್ ರಾಜ್ಯಕ್ಕೆ ದ್ವಿತೀಯ..!

Monday, May 7th, 2018
pranshul-prashanth

ಮೂಡುಬಿದಿರೆ: ಮಾರ್ಚ್-ಎಪ್ರಿಲ್‌ನಲ್ಲಿ ನಡೆದ 2017-18ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಾಂಶುಲಾ ಪ್ರಶಾಂತ್ 624(99.84 ಶೇ.) ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 8 ಮಂದಿ 624 ಅಂಕಗಳನ್ನು ಗಳಿಸಿದ್ದಾರೆ. ಪ್ರಾಂಶುಲಾ ಪ್ರಶಾಂತ್ ಮೂಲತಃ ಮೂಡುಬಿದಿರೆ ಕೀರ್ತಿ ನಗರದ ನಿವಾಸಿಯಾಗಿರುವ ಪ್ರಶಾಂತ್ ಕುಮಾರ್ ಮತ್ತು ಚೇತನಾ ದಂಪತಿಯ ಪುತ್ರಿ.

ಮುಲ್ಕಿ-ಮೂಡುಬಿದಿರೆ ಕ್ಷೇತ್ರ ಚುನಾವಣಾ ಪ್ರಚಾರ ವಾಹನಕ್ಕೆ ಚಾಲನೆ

Thursday, May 3rd, 2018
JDS-election

ಮುಲ್ಕಿ: ಜಾತ್ಯತೀತ ಜನತಾದಳ ಮುಲ್ಕಿ-ಮೂಡುಬಿದಿರೆ ಕ್ಷೇತ್ರದ ಚುನಾವಣಾ ಪ್ರಚಾರ ವಾಹನಕ್ಕೆ ಕಾರ್ನಾಡಿನಲ್ಲಿ ಹಸಿರು ನಿಶಾನೆ ತೋರಿಸಲಾಯಿತು. ಜೆಡಿಎಸ್ ರಾಜ್ಯ ಆ.ಸ.ಘಟಕದ ಉಪಾಧ್ಯಕ್ಷ ಎಂ.ಕೆ.ಅಬ್ದುಲ್ ಖಾದರ್ ಹಾಗು ರಾಜ್ಯ ಪ್ರ.ಕಾರ್ಯದರ್ಶಿ ಇಕ್ಬಾಲ್ ಅಹ್ಮದ್ ಮುಲ್ಕಿ ಜೆಡಿಎಸ್ ಬಾವುಟವನ್ನು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜೀವನ್ ಕೆ.ಶೆಟ್ಟಿ ಹಾಗು ದ.ಕ.ಜಿಲ್ಲಾ ಉಪಾಧ್ಯಕ್ಷ ರಿಯಾಝ್ ಎಚ್.ಕಾರ್ನಾಡ್ ಅವರಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ನಿಸಾರ್ ಅಹ್ಮದ್, ನವೀನ್ ಪುತ್ರನ್, ನೂತನ್ ಶೆಟ್ಟಿ, ನೂರುಲ್ಲಾ ಶೇಕ್, ಚಂದ್ರಹಾಸ ಶೆಟ್ಟಿ, ರಕ್ಷಿತ್ ಮತ್ತಿತರರು ಉಪಸ್ಥಿತರಿದ್ದರು.

ಆಳ್ವಾಸ್ ಬಿ.ಎಡ್ ಕಾಲೇಜಿನಲ್ಲಿ ಆರಂಭೋತ್ಸವ-ಪ್ರತಿಭಾ ಪ್ರದರ್ಶನ

Wednesday, May 2nd, 2018
talents-day

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮೊದಲ ವರ್ಷದ ಬಿ.ಎಡ್. ಕೋರ್ಸ್‍ನ ಆರಂಭೋತ್ಸವ ಹಾಗೂವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಹ ಆಡಳಿತಾಧಿಕಾರಿಅಭಿನಂದನ್ ಶೆಟ್ಟಿ ಸಮಾಜದಲ್ಲಿ ಶಿಕ್ಷಕರ ಪಾತ್ರ, ಗುಣ, ಅರ್ಹತೆಗಳು ಮತ್ತು ಪ್ರಸ್ತುತ ಸಮಾಜದಲ್ಲಿ ಶಿಕ್ಷಕರಿಗೆ ಎದುರಾಗುವ ಸವಾಲುಗಳ ಬಗ್ಗೆ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಬಿ.ಎಡ್. ಕಾಲೇಜಿನ ಪ್ರಾಂಶುಪಾಲ ಶಂಕರ್ ಮೂರ್ತಿ ಹೆಚ್.ಕೆ ಶಿಕ್ಷಕರಿಗೆ ಎರಡು ವರ್ಷದ ತರಬೇತಿಯ ಅವಶ್ಯಕತೆ ಮತ್ತು ವೃತ್ತಿ ಸಾಮರ್ಥ್ಯಗಳ ಬಗ್ಗೆ ಮಾತನಾಡಿದರು. ಅಕ್ಷತಾ ಸ್ವಾಗತಿಸಿದರು. ಸುಪ್ರೀತಾ ವಂದಿಸಿದರು. ಕಾರ್ಯಕ್ರಮವನ್ನು […]

ಆಳ್ವಾಸ್ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ

Thursday, March 15th, 2018
alwas-college

ಮೂಡುಬಿದಿರೆ: ಕಠಿಣ ಪರಿಶ್ರಮದಿಂದ ಸಾಧನೆ ಸಾಧ್ಯ. ಸಾಧನೆಗೆ ತಕ್ಕುದಾದ ಮನಸ್ಥಿತಿಯು ಮುಖ್ಯ. ವಿದ್ಯಾರ್ಥಿಗಳ ಸಾಧನೆ, ವ್ಯಕ್ತಿತ್ವ ಬೆಳವಣಿಗೆಗೆ ಅವರ ಪೋಷಕರು ಹಾಗೂ ಶಿಕ್ಷಕರು ಕೂಡ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡುತ್ತಾರೆ ಎಂದು ಉಡುಪಿ ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ಆರ್ ನಂಬಿಯಾರ್ ಹೇಳಿದರು. ಆಳ್ವಾಸ್ ಕಾಲೇಜಿನ ಪದವಿ ಮತ್ತು ಸ್ನಾತಕೋತ್ತರ ವಿಭಾಗದ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು. ಆಳ್ವಾಸ್ ವಿದ್ಯಾಸಂಸ್ಥೆ ವಿದಾರ್ಥಿಗಳಿಗೆ ಕಲಿಕೆಯ ಜೊತೆಗೆ ಸಾಂಸ್ಕøತಿಕ ಮತ್ತು ಕ್ರೀಡೆ ಇನ್ನಿತರ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಸಾಧನೆ ಮಾಡಲು […]

ಬಡ ಯುವತಿಗೆ ಕಿಡ್ನಿ ವೈಫಲ್ಯ : ನೆರವಿಗೆ ಮನವ

Wednesday, February 7th, 2018
hospital

ಮೂಡುಬಿದಿರೆ: ತಾಯಿಯಿಲ್ಲದ, ತಂದೆಯ ಆಸರೆಯಿಲ್ಲದೆ, ಕೂಲಿ ಮಾಡಿಕೊಂಡು ಬದುಕುವ ಅತ್ತೆಯ ಆಶ್ರಯದಲ್ಲಿ ಬೆಳೆದಿರುವ ಯುವತಿಯೊಬ್ಬಳು ಇದೀಗ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಆಕೆಗೆ ಸಹೃದಯರ ನೆರವಿನ ಅಗತ್ಯವಿದೆ. ಮಂಗಳೂರು ತಾಲೂಕು ದರೆಗುಡ್ಡೆ ಕೆಲ್ಲಪುತ್ತಿಗೆಯ ಮೇಲಿನ ಮನೆಯ ಡೊಂಬಯ್ಯ ಪೂಜಾರಿ ಎಂಬವರ ಪುತ್ರಿ ಪೂಜಾ ಪೂಜಾರಿ (23) ಕಿಡ್ನಿ ವೈಫಲ್ಯ ಹೊಂದಿರುವ ಯುವತಿ. ಈಕೆ 2 ವರ್ಷವಿರುವಾಗಲೇ ತಾಯಿಯನ್ನು ಕಳೆದುಕೊಂಡು ತಂದೆಯೂ ಬಿಟ್ಟುಹೋಗಿದ್ದು, ಅನಾಥವಾಗಿದ್ದ ಈಕೆ ಆಶ್ರಯ ಪಡೆದದ್ದು ಬಡ ವಿಧವೆಯಾಗಿರುವ ಅತ್ತೆಯ ಮನೆಯಲ್ಲಿ. ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ […]