Blog Archive

ವಂಶ, ಜಾತಿ, ಅವಸರ, ಕಾಂಗ್ರೆಸ್ ಜೀವಾಳ

Wednesday, February 19th, 2014
Narendra-Modi

ಮಂಗಳೂರು/ ದಾವಣಗೆರೆ: ವಂಶವಾದ, ಜಾತಿವಾದ, ಸಂಪ್ರದಾಯವಾದ, ಅವಸರವಾದ. ಈ ನಾಲ್ಕೂ ಅಂಶಗಳು ಕಾಂಗ್ರೆಸ್‌ನಲ್ಲಿ ಮೇಳೈಸಿವೆ. ಇದುವೇ ದೇಶದ ಅಭಿವೃದ್ಧಿಗೆ ತೊಡಕಾಗಿದೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಮಂಗಳವಾರ ದಾವಣಗೆರೆಯ ಹೈಸ್ಕೂಲ್ ಮೈದಾನದ ಹಾಗೂ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಆಯೋಜಿಸಿದ್ದ ‘ಭಾರತ ಗೆಲ್ಲಿಸಿ’ ಪ್ರತ್ಯೇಕ ಸಮಾವೇಶದಲ್ಲಿ ಕಾಂಗ್ರೆಸ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. ವಿಶೇಷವೆಂದರೆ ಇದೇ ಮೊದಲ ಬಾರಿಗೆ ಯಡಿಯೂರಪ್ಪ ಅವರನ್ನು ಗುಣಗಾನ ಮಾಡಿದ್ದು. […]

ತೆರಿಗೆ ವಂಚನೆ, ಪಾಲಿಕೆಗೆ 3 ಪಟ್ಟು ಹೆಚ್ಚು ಬಾಡಿಗೆ!

Tuesday, February 18th, 2014
City-Corporation

ಮಂಗಳೂರು: ದೈತ್ಯ ಕೈಗಾರಿಕೆ ಸಂಸ್ಥೆಗಳಿಂದಲೇ ನೀರಿನ ಕಳವು, ಸುರತ್ಕಲ್‌ನಲ್ಲಿ ಪಾಲಿಕೆ ಕಚೇರಿಯ ಲೆಕ್ಕಕ್ಕಿಂತ ಹೆಚ್ಚಿಗೆ ಬಾಡಿಗೆ ಜಾಲ, ಖಾಸಗಿ ಮಾಲ್‌ಗಳ ತೆರಿಗೆ ವಂಚನೆ ಪುರಾಣ, ಅನಧಿಕೃತ ಪಾರ್ಕಿಂಗ್ ಶುಲ್ಕ… ಒಂದೇ ರಡೇ ಮಹಾನಗರ ಪಾಲಿಕೆಯ ಬಜೆಟ್ ಪೂರ್ವ ಸಿದ್ಧತೆ ಸಭೆಯಲ್ಲಿ ಸಾರ್ವಜನಿಕರು, ಕಾರ್ಪೊರೇಟರ್‌ಗಳು ಒಂದೊಂದೇ ವಂಚನೆಯನ್ನು ಬಟಾ ಬಯಲು ಮಾಡಿದರು. ಪ್ರತಿ ವಿಚಾರಗಳು ಬಂದಾಗ ಸರಿಯಾಗಿ ಮಾಹಿತಿ ಇಲ್ಲದೆ ಪಾಲಿಕೆ ಎಂಜಿನಿಯರ್‌ಗಳು, ಅಧಿಕಾರಿಗಳು ತಡಬಡಾಯಿಸಿದರು. ನೀರಿನ ಬಿಲ್ಲಿನ ಅಕ್ರಮ ತಡೆಗಟ್ಟುವ ಸಲುವಾಗಿ ಕೈಗಾರಿಕೆಗಳಿಗೆ ಡಿಜಿಟಲ್ ಮಾದರಿಯ ಮೀಟರ್ […]

ಮೋದಿ ಸಮಾವೇಶಕ್ಕೆ ಪೊಲೀಸ್ ಸರ್ಪಗಾವಲು

Monday, February 17th, 2014
Narendra-Modi

ಮಂಗಳೂರು: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಫೆ.18ರಂದು ಮಂಗಳೂರಿಗೆ ಆಗಮಿಸಲಿದ್ದು, ಅವರಿಗೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ನೆಹರೂ ಮೈದಾನ ಹಾಗೂ ನಗರದಲ್ಲಿ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸೋಮವಾರ ಸಂಜೆಯಿಂದ ಸಮಾವೇಶ ನಡೆಯುವ ಸ್ಥಳ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ನಿರ್ಬಂಧಿಸಿದ್ದು, ನಗರದೆಲ್ಲೆಡೆ ಪೊಲೀಸ್ ಸರ್ಪಕಾವಲು ಹಾಕಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಆರ್.ಹಿತೇಂದ್ರ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮೈದಾನ ಸುತ್ತ 500 ಮೀಟರ್ ವ್ಯಾಪ್ತಿಯಲ್ಲಿ ವಾಹನ ನಿಲುಗಡೆಗೆ ಅವಕಾಶವಿಲ್ಲ, ಕಾರ್ಯಕ್ರಮದಂದು ವಿಐಪಿ ಮಾರ್ಗ ಮತ್ತು ಕಾರ್ಯಕ್ರಮ ಸ್ಥಳದ ಸುತ್ತ […]

ನೆಹರೂ ಮೈದಾನದಲ್ಲಿ 35 ತಳಿಗಳ 250 ಶ್ವಾನ ಪ್ರದರ್ಶನ

Monday, February 17th, 2014
Swana

ಮಂಗಳೂರುಃ  ಮಂಗಳೂರಿನ ನೆಹರೂ ಮೈದಾನದಲ್ಲಿ ಶ್ವಾನ ಪ್ರದರ್ಶನ ಕಾರ್ಯಕ್ರಮವು ಭಾನುವಾರ ನಡೆಯಿತು. ಈ ಕಾರ್ಯಕ್ರಮವನ್ನು ಬಿಜೆಪಿ ಮುಖಂಡ ಆರ್‌.ಶ್ರೀಕರ ಪ್ರಭು ಉದ್ಘಾಟಿಸಿದರು, ಈ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು  ಮಂಗಳೂರಿನಲ್ಲಿ  ರಾಷ್ಟ್ರಮಟ್ಟದ ಶ್ವಾನ ಪ್ರದರ್ಶನ ನಡೆಯುತ್ತಿರುವುದು ಸಂತೋಷದ ಸಂಗತಿಯಾಗಿದೆ. ಮಂಗಳೂರಿನಲ್ಲಿ  ಕೆನೈನ್‌ ಕ್ಲಬ್‌ ಅಯೋಜಿಸಿದ ಈ  ಶ್ವಾನ ಪ್ರದರ್ಶನ ಕಾರ್ಯಕ್ರಮವು ಮಂಗಳೂರಿನ ಕಡೆಗೆ ದೇಶದ ಗಮನ ಸೆಳೆಯುವಲ್ಲಿ ಸಹಾಯಕವಾಗುತ್ತದೆ. ಈ ಶ್ವಾನ ಪ್ರದರ್ಶನದಲ್ಲಿ ದೇಶದ ವಿವಿದೆಡೆಯ ಸುಮಾರು 35 ತಳಿಗಳ 250 ಶ್ವಾನಗಳನ್ನು ತರಲಾಗಿತ್ತು. ಮುಖ್ಯವಾಗಿ ಮಿನಿ ಯೇಚರ್‌ ಪಿಂಚರ್‌, ಜರ್ಮನ್‌ […]

ಸರ್ಕಾರಿ ನೌಕರರಿಗೆ ಶೀಘ್ರ ಆರೋಗ್ಯ ಕಾರ್ಡ್: ಖಾದರ್

Friday, February 14th, 2014
U-T-Khader

ಮಂಗಳೂರು: ಸರ್ಕಾರಿ ನೌಕರರಿಗೆ ಉಪಯುಕ್ತ ಚಿಕಿತ್ಸೆ ಲಭಿಸುವಂತಾಗಲು ರಾಜ್ಯದಲ್ಲಿ ‘ಆರೋಗ್ಯ ಸಂಜೀವಿನಿ’ ಕಾರ್ಯಕ್ರಮ ಇಷ್ಟರಲ್ಲೇ ಅನುಷ್ಠಾನಗೊಳ್ಳಲಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ. ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಎಲ್ಲ ಇಲಾಖೆಗಳ 72 ಲಕ್ಷ ಸರ್ಕಾರಿ ನೌಕರರು, ಅವರ ಕುಟುಂಬಿಕರು ಈ ಕಾರ್ಯಕ್ರಮದ ಸೌಲಭ್ಯ ಪಡೆಯಬಹುದು. ಇದಕ್ಕಾಗಿ ನೌಕರರಿಗೆ ಆರೋಗ್ಯ ಕಾರ್ಡ್ ವಿತರಿಸಲಾಗುವುದು. ಆರೋಗ್ಯಶ್ರೀ ಯೋಜನೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸಾ ಸೌಲಭ್ಯ ಸಿಗಲಿದೆ. ಇದರಿಂದ ಚಿಕಿತ್ಸೆಗೆ ವೆಚ್ಚ ಮಾಡಿದ ಮೊತ್ತವನ್ನು ವಾಪಾಸ್ ನೀಡುವಲ್ಲಿನ […]

ಮಂಗಳೂರಿಗೆ 2 ಹೊಸ ರೈಲುಗಳ ಭಾಗ್ಯ !

Wednesday, February 12th, 2014
Manglore-Trains

ಹೊಸದಿಲ್ಲಿ: ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆಯಲ್ಲಿಂದು ಮಂಡಿಸಿರುವ 2014-15ರ ಸಾಲಿನ ಮಧ್ಯಾಂತ್ರ ರೈಲ್ವೆ ಬಜೆಟ್‌ನಲ್ಲಿ ಮಂಗಳೂರಿಗೆ ಎರಡು ಹೊಸ ರೈಲುಗಳ ಭಾಗ್ಯ ಒದಗಿ ಬಂದಿದೆ. ಈ ಎರಡು ಹೊಸ ರೈಲುಗಳೆಂದರೆ ಮಂಗಳೂರು – ಮಡಗಾಂವ್‌ ಇಂಟರ್‌ ಸಿಟಿ (ದಿನನಿತ್ಯ) ರೈಲು ಮತ್ತು ಮಂಗಳೂರು – ಕಾಚಿಗುಡ ರೈಲು. ಮಂಗಳೂರು – ಕಾಚಿಗುಡ ರೈಲು ಕೊಯಮುತ್ತೂರು, ರೆಣಿಂತಾ ಮತ್ತು ಗೂಟಿ ಮಾರ್ಗವಾಗಿ ಸಾಗಲಿದೆ. ಈ ಎರಡೂ ಹೊಸ ರೈಲುಗಳಿಗೆ ಸ್ವತಃ ಸಚಿವ ಖರ್ಗೆ ಅವರೇ ಫೆ.23 […]

16 ಲಕ್ಷ ವೆಚ್ಹದಲ್ಲಿ ಮಂಗಳೂರಿನ ರಥಬೀದಿಯನ್ನು ಪುನಃ ಡಾಮರೀಕರಣ ಮಾಡಲು ಹೊರಟಿರುತಾರೆ.ಅನಾವಶ್ಯಕ ದುಡ್ಡು ಪೋಲು

Monday, January 27th, 2014
Carstreet

ಮಂಗಳೂರು: ಮಂಗಳೂರಿನ ರಥಬೀದಿ ರಸ್ತೆಯನ್ನು  ಕೋಟಿಗಟ್ಟಲೆ ವೆಚ್ಹದಲ್ಲಿ ಅಗಲೀಕರಣ ಗೊಳಿಸಿ 2 ವರ್ಷ ಆಗಿದ್ದು ಈ ರಸ್ತೆ ಇನ್ನೂ ಚೆನ್ನಾಗಿಯೇ ಇದೆ. ಆದರೆ ಕೆಲವು ರಾಜಕೀಯ ವ್ಯಕ್ತಿಗಳು ತಮ್ಮ ರಾಜಕೀಯ ಲಾಭ ಪಡಕೊಳ್ಳುವ ದುರುದ್ಹೇಶದಿಂದ ಈಗ 16 ಲಕ್ಷ ವೆಚ್ಹದಲ್ಲಿ ಪುನಃ ಡಾಮರೀಕರಣ ಮಾಡಲು ಹೊರಟಿರುತ್ತಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ಅನಾವಶ್ಯಕ ದುಡ್ಡು ಪೋಲು ಮಾಡಲು ಮುಂದಾಗಿದ್ದಾರೆ, ದಯವಿಟ್ಟು ಪಾಲಿಕೆಯ ಅಧಿಕಾರಿಗಳಲ್ಲಿ ವಿನಂತಿ, ನಗರದ ಹಲವಾರು ರಸ್ತೆಗಳು ಡಾಮರೀಕರಣವಾಗದೆ ಹಲವು ದಶಕ ಗಳಾಗಿವೆ ಅವುಗಳನ್ನು ಮೊದಲು ಸರಿಪಡಿಸಿ ಅನಾವಶ್ಯಕ […]

ನಗರದಲ್ಲೊಂದು ಮಳೆಯಿಂದ ರಕ್ಷಣೆಗೆ ಮೋಡರ್ನ್ ಬೈಕ್

Thursday, July 4th, 2013
Mangalore Modern Bike

ಮಂಗಳೂರು : ನಗರದ ಬಂದರು ಬದ್ರಿಯಾ ಕಾಲೇಜಿನ ಸಮೀಪ ವಿರುವ ಅಶೋಕ ಆಟೊ ವರ್ಕ್ಸ್ ನಲ್ಲಿ  ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುವ ಪೂರ್ಣೇಶ್ ತನ್ನ ಹಿರೋ ಹೊಂಡ ಬೈಕನ್ನು ಮಳೆಯಲ್ಲಿ ರೈನ್ ಕೋಟ್ ರಹಿತವಾಗಿ ಸಂಚರಿಸಲು ಯೋಗ್ಯವಾಗುವಂತೆ ಸಿದ್ದಗೊಳಿಸಿದ್ದಾರೆ. 2001 ಮಾಡೆಲಿನ ಹಿರೋ ಹೊಂಡಾ ಕಂಪನಿಯ ಬೈಕನ್ನು ಸುಮಾರು 4 ಸಾವಿರ ವೆಚ್ಚದಲ್ಲಿ ಕಾರಿನಂತೆ ಬೈಕಿನ ಎದುರಿಗೆ ಗಾಜು, ಮೇಲ್ಚಾವಣಿ ನಿರ್ಮಿಸಿ ಹೊಸ ಮಾದರಿಯ ಪ್ರಯೋಗ ನಡೆಸಿದ್ದಾರೆ. ಕೇವಲ 5 ಬೋಳ್ಟ್ ಗಳನ್ನು ಅಳವಡಿಸಿ ಈ ಹೊಸ ಪ್ರಯೋಗ […]

ಮಂಗಳೂರಿನಲ್ಲಿ ಹೆಚ್ಚುತ್ತಿರುವ ಸಲಿಂಗಕಾಮಿಗಳು !

Saturday, December 29th, 2012
Salinga kama

ಮಂಗಳೂರು : ನನಗೆ ರೂಮಿನಿಂದ ಹೊರಬರಲಾಗುತ್ತಿಲ್ಲ, ಎಲ್ಲಿ ನೋಡಿದರೂ ಚುಡಾಯಿಸುವ ಇಂಥವರೇ ಕಾಣಸಿಗುತ್ತಾರೆ. ಹಗಲುಹೊತ್ತು ಚೆನ್ನಾಗಿಯೇ ಮಾತಾಡುವ ಇವರು ರಾತ್ರಿಯಾದೊಡನೆ ನನ್ನ ಹಿಂದೆ ಬಿದ್ದು ಚಿತ್ರಹಿಂಸೆ ಕೊಡುತ್ತಾರೆ. ಇದರಿಂದ ನನಗೆ ಸಾಯುವ ಯೋಚನೆ ಬರುತ್ತಿದೆ ಆದರೆ ನನ್ನನ್ನು ನಂಬಿದವರ ಸ್ಥಿತಿ ನೆನೆದು ಎಲ್ಲವನ್ನೂ ಅವುಡುಗಚ್ಚಿ ಸಹಿಸಿಕೊಂಡು ಬದುಕುತ್ತಿದ್ದೇನೆ. ನಾನು ಅನುಭವಿಸುವ ಯಾತನೆ, ನೋವು ಇನ್ನಾರೂ ಅನುಭವಿಸದಿರಲಿ ಎಂದು ನನ್ನ ಕಥೆ ನಿಮಗೆ ಹೇಳುತ್ತಿದ್ದೇನೆ ಎಂದು ಬಂಟ್ವಾಳ ಮುಸ್ಲಿಂ ಯುವಕನೊಬ್ಬ ತನ್ನ ಕತೆಯನ್ನು ಬಿಚ್ಚಿಟ್ಟಿದ್ದಾನೆ. ನಾನು ಅವರಿಗೇನೂ ಮಾಡಿಲ್ಲ. […]