Blog Archive

ಜಿಲ್ಲಾಡಳಿತ ಸೂಚನೆಯ ಮೇರೆಗೆ ಮಾ.31ರವರೆಗೆ ಖಾಸಗಿ ಬಸ್ಸುಗಳ ಸೇವೆ ಸ್ಥಗಿತ

Sunday, March 22nd, 2020
Bus

ಮಂಗಳೂರು : ಸರ್ಕಾರದ ಆದೇಶದಂತೆ ಕೊರೊನಾ ವೈರಸ್ ಎದುರಿಸುವ ನಿಟ್ಟಿನಲ್ಲಿ ಮಾ.31ರವರೆಗೆ ದ.ಕ.ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳ ಸೇವೆ ಇರುವುದಿಲ್ಲ ಎಂದು ಬಸ್ಸು ಮಾಲಕರ ಸಂಘದ ಪ್ರಕಟಣೆ ತಿಳಿಸಿದೆ. ಈ ಕ್ರಮ ಜಿಲ್ಲಾಡಳಿತ ಸೂಚನೆಯ ಮೇರೆಗೆ ಜರುಗಿಸಲಾಗಿದೆ. ಬಸ್‌ ಸಂಚಾರದ ಬಗ್ಗೆ ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು  ಪ್ರಕಟಣೆ  ಹೇಳಿದೆ.

ಕಡಲ್ಕೊರೆತಕ್ಕೆ ಸಿಗದ ಶಾಶ್ವತ ಪರಿಹಾರ…ಕಡಲಿನ ಒಡಲು ಸೇರುತ್ತಿರುವ ಭೂಭಾಗಗಳು!

Saturday, July 7th, 2018
parmanent

ಉಡುಪಿ: ಮಳೆಗಾಲ ಬಂತಂದ್ರೆ ಸಾಕು ಕಡಲತಡಿಯ ನಿವಾಸಿಗಳಲ್ಲಿ ಆತಂಕ ಮನೆ ಮಾಡುತ್ತವೆ.. ಕಡಲ್ಕೊರೆತಕ್ಕೆ ಸಿಕ್ಕಿ ತಡಿಯ ಭೂಭಾಗವು ಕಡಲಿನ ಒಡಲನ್ನು ಸೇರುತ್ತವೆ. ಈ ಬಾರಿಯೂ ಆ ಆತಂಕ ಮತ್ತೆ ಮುಂದುವರೆದಿದ್ದು, ಮನೆ-ಮಠಗಳು ಕಡಲಗರ್ಭ ಸೇರಿದರೆ ಅಚ್ಚರಿಯಿಲ್ಲ. ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಒದಗಿಸದ ಹೊರತು, ಕಾಟಾಚಾರದ ಪರಿಹಾರ ನೀರಲ್ಲಿಟ್ಟ ಹೋಮದಂತಾಗಿದೆ.. ಈಗ ಉಡುಪಿಯ ಪಡುಕೆರೆ ಪ್ರದೇಶದ ಕಡಲತೀರದಲ್ಲಿ ಕಡಲ್ಕೊರೆತ ಸಂಭವಿಸಿ ಬಹುಭಾಗ ಕಡಲಿನ ಒಡಲು ಸೇರಿದ್ದು ಇದಕ್ಕೊಂದು ಉದಾಹರಣೆ. ಮಳೆಗಾಲದಲ್ಲಿ ಪ್ರತಿ ವರ್ಷ ಸಮುದ್ರ ತೀರದಲ್ಲಿ ಕಡಲ್ಕೊರೆತ ಸಂಭವಿಸುತ್ತದೆ. […]

ಜಿಲ್ಲಾಡಳಿತದ, ನಗರಪಾಲಿಕೆಯ ದೂರದೃಷ್ಟಿಯ ಕೊರತೆಯೆ ಈ ಸ್ಥಿತಿಗೆ ಕಾರಣ: ದಯಾನಂದ ಶೆಟ್ಟಿ

Tuesday, June 12th, 2018
federation

ಮಂಗಳೂರು: ಮೊನ್ನೆ ಮುಂಗಾರು ಮಳೆ ಆರಂಭಗೊಂಡ ಗಂಟೆಯೊಳಗಡೆ ಮಂಗಳೂರಿನಲ್ಲಿ ಪ್ರವಾಹ ಬಂದು ನೂರಾರು ಮನೆಗಳು ಮುಳುಗಿರುವುದು, ರಸ್ತೆಗಳು ಜಲಾವೃತಗೊಂಡು ಅಪಾಯಕಾರಿ ಸ್ಥಿತಿ ನಿರ್ಮಾಣಗೊಂಡಿರುವುದು ಆತಂಕದ ಸಂಗತಿ. ನೀರು ಹರಿಯುವ ಕಾಲುವೆ, ತೋಡುಗಳ ಅತಿಕ್ರಮಣ, ರಸ್ತೆ , ಲೇಔಟ್, ಕಟ್ಟಡಗಳ ನಿರ್ಮಾಣ ಸಹಿತ ಅಭಿವೃದ್ದಿ ಕಾಮಗಾರಿಗಳ ಸಂದರ್ಭದ ದೂರದೃಷ್ಟಿಯ ಕೊರತೆ, ಮಳೆಗಾಲವನ್ನು ಎದುರಿಸುವ ಸಿದ್ಧತೆಯನ್ನು ನಗರ ಪಾಲಿಕೆ ಕೇವಲ ಮಾತಿಗಷ್ಟೆ ಸೀಮಿತಗೊಳಿಸಿರುವುದು ಮಂಗಳೂರಿನ ಇಂದಿನ ದಯನೀಯ ಸ್ಥಿತಿಗೆ ಕಾರಣ ಎಂದು ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ದಯಾನಂದ ಶೆಟ್ಟಿ […]

ಮಳೆಯಿಂದಾಗಿ ನಷ್ಟ ಅನುಭವಿಸುತ್ತಿರುವ ಜನರಿಗೂ ನೆರವಾಗುವುದು ಸರಕಾರದ ಕರ್ತವ್ಯ: ವೇದವ್ಯಾಸ ಕಾಮತ್

Saturday, June 2nd, 2018
vedavyas-kamath

ಮಂಗಳೂರು: ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜುಗಳ ಆಭಿವೃದ್ದಿ ಹಾಗೂ ಅದಕ್ಕೆ ಪೂರಕವಾಗುವಂತೆ ಸ್ಟಾಫ್ ಕೌನ್ಸಿಲ್ ಸಮಿತಿಗಳನ್ನು ರಚಿಸುವ ಬಗ್ಗೆ ಗಮನ ನೀಡುವುದಾಗಿ ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕ ಡಿ.ವೇದವ್ಯಾಸ ಕಾಮತ್ ಭರವಸೆ ನೀಡಿದ್ದಾರೆ. ನಗರದ ಕೊಡಿಯಾಲ್‌ಬೈಲ್‌ನಲ್ಲಿರುವ ಅಟಲ್ ಸೇವಾ ಕೇಂದ್ರದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಸಂದರ್ಭದಲ್ಲಿ ತಮ್ಮನ್ನು ಭೇಟಿ ಮಾಡಿದ ಕಾಲೇಜು ಮುಖ್ಯಸ್ಥರು, ಶಿಕ್ಷಣಾಧಿಕಾರಿಗಳಿಗೆ ಈ ಬಗ್ಗೆ ಭರವಸೆ ನೀಡಿದರು. ನಗರದಲ್ಲಿರುವ ಸರಕಾರಿ ಪದವಿ ಕಾಲೇಜು ಹಾಗೂ ಪದವಿ ಕಾಲೇಜುಗಳನ್ನು ಮಾದರಿ ಶಿಕ್ಷಣ […]

ಮೀನಿನ ಪದಾರ್ಥ ತಿಂದು ಅಸ್ವಸ್ಥರಾದ ಪ್ರಕರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ: ಖಾದರ್‌

Tuesday, October 4th, 2016
u-t-khader

ಉಳ್ಳಾಲ: ಉಳ್ಳಾಲ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚೆಂಬೇರಿ ಮೀನಿನ ತಲೆಭಾಗವನ್ನು ಪದಾರ್ಥ ಮತ್ತು ಫ್ತೈ ಮಾಡಿ ತಿಂದು ಸುಮಾರು 150ಕ್ಕೂ ಹೆಚ್ಚು ಅಸ್ವಸ್ಥರಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್‌ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಚೆಂಬರಿಕ ಮೀನಿನ ತಲೆ ಭಾಗದ ಪದಾರ್ಥ ತಿಂದು ಉಳ್ಳಾಲ, ಅಂಬ್ಲಿಮೊಗರು, ಹರೇಕಳ, ಬಂಟ್ವಾಳ, ನಾಟೆಕಲ್‌ನ ಹಲವು ಕುಟುಂಬಗಳು ಸೇರಿದಂತೆ, ಉಳ್ಳಾಲದ ಫಿಶಮಿಲ್‌ವೊಂದರ ಕಾರ್ಮಿಕರು ಅಸ್ವಸ್ಥರಾಗಿದ್ದರು. ಅಸ್ವಸ್ಥರನ್ನು ಉಳ್ಳಾಲ […]

ನೆಹರೂ ಮೈದಾನದಲ್ಲಿ ಮಾಜಿ ಪ್ರಧಾನಿ ದಿ| ಜವಾಹರಲಾಲ್‌ ನೆಹರೂ ಅವರ ಪ್ರತಿಮೆ ಸ್ಥಾಪನೆ

Friday, October 30th, 2015
Neharu Maidan

ಮಂಗಳೂರು: ಮಂಗಳೂರಿನ ಹೃದಯಭಾಗದ ನೆಹರೂ ಮೈದಾನದ ಧ್ವಜ ಸ್ತಂಭದ ಬಳಿ ಜವಾಹರಲಾಲ್‌ ನೆಹರೂ ಅವರ ಪ್ರತಿಮೆ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ. ನೆಹರೂ ಅವರ ಪ್ರತಿಮೆ ನಿರ್ಮಾಣದ ಕುರಿತು ಮಂಗಳವಾರ ಮೈದಾನದಲ್ಲಿ ಸ್ಥಳ ಪರಿಶೀಲನೆ ನಡೆಸಿದ ಸಚಿವರು ಅಧಿಕಾರಿಗಳ ಜತೆ ವಿಸ್ತೃತವಾಗಿ ಚರ್ಚೆ ನಡೆಸಿದರು. ನೆಹರೂ ಅವರ 125ನೇ ಜನ್ಮ ದಿನಾಚರಣೆ ಅಂಗವಾಗಿ ಮೈದಾನದ ನೆಹರೂ ಮೈದಾನದಲ್ಲಿ ಪ್ರತಿಮೆ ಸ್ಥಾಪಿಸಲಾಗುತ್ತದೆ. ಇಲ್ಲಿ ನಡೆಯುವ ಕ್ರೀಡಾ ಚಟುವಟಿಕೆ ಹಾಗೂ […]

ನೀತಿ ಸಂಹಿತೆಯ ನೆಪದಲ್ಲಿ ಜಿಲ್ಲೆಯ ಗಂಭೀರ ಸಮಸ್ಯೆಗಳಿಗೆ ಕುತ್ತು

Thursday, April 24th, 2014
Pratapa simha nayaka

ಮಂಗಳೂರು : ನೀತಿ ಸಂಹಿತೆಯ ನೆಪದಲ್ಲಿ ಜಿಲ್ಲೆಯ ಗಂಭೀರ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ 42 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಕಾಡುತ್ತಿದ್ದು ಸರಕಾರ ತಕ್ಷಣ ಸಮಸ್ಯೆಗೆ ಸ್ಪಂದಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪ್ ಸಿಂಹ ನಾಯಕ್ ಒತ್ತಾಯಿಸಿದ್ದಾರೆ. ಜಿಲ್ಲಾಡಳಿತ ಮತ್ತು ಸರಕಾರ ನೀರಿನ ಸಮಸ್ಯೆಗೆ ಯಾವುದೇ ಪರಿಹಾರ ಯೋಜನೆಗಳನ್ನು ಹಾಕಿಕೊಂಡಿಲ್ಲ. ಉಳ್ಳಾಲ, ಕೊಣಾಜೆ, ಪುದು ಮುಂತಾದೆಡೆ ನೀರಿನ ಗಂಭೀರ ಸಮಸ್ಯೆಗಳಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 26 […]

ಸರಕಾರದ `ಕ್ಷೀರ ಭಾಗ್ಯ ಯೋಜನೆಗೆ’ ಮಂಗಳೂರಿನಲ್ಲಿ ಬಿ.ರಮಾನಾಥ ರೈಯವರಿಂದ ಚಾಲನೆ

Thursday, August 1st, 2013
Ramanath Rai ksheera Bhagya

ಮಂಗಳೂರು :  ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್  ದಕ್ಷಿಣ ಕನ್ನಡ ಜಿಲ್ಲೆ, ಸಾರ್ವಜನಿಕ ಶಿಕ್ಷಣಾ ಇಲಾಖೆ, ಅಕ್ಷರ ದಾಸೋಹ, ಮಹಿಳಾ ಮತ್ತು ಅಭಿವೃದ್ದಿ ಇಲಾಖೆ ಮತ್ತು ದಕ್ಷಿಣ ಕನ್ನಡ  ಹಾಲು ಉತ್ಪಾದಕರ ಒಕ್ಕೂಟ ಇದರ ಸಹಯೋಗದಲ್ಲಿ ಆಗಸ್ಟ್ 1 ರಂದು ಸರಕಾರಿ ಮಾದರಿ ಹಿರಿಯ ಪ್ರಾಥವಿಕ ಶಾಲೆ ಉರ್ವ ಮಂಗಳೂರು ಇಲ್ಲಿ ಅಂಗನವಾಡಿ ಮತ್ತು ಶಾಲಾ ಮಕ್ಕಳಿಗೆ ಉಚಿತ ಹಾಲು ವಿತರಿಸುವ `ಕ್ಷೀರ ಭಾಗ್ಯ’ ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರು ಚಾಲನೆ ನೀಡಿದರು. ಈ ಕಾರ್ಯಕ್ರಮದ  […]

ಬಸ್ ನೌಕರರ ಬೇಡಿಕೆ ಈಡೇರಿಸಲು ಜಿಲ್ಲಾಡಳಿತ ಒಪ್ಪಿಕೊಂಡಿದೆ : ಐವನ್

Thursday, July 18th, 2013
Bus owners and workers

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಮಿಕ ಪರಿಷತ್ ಬಸ್ ನೌಕರರ ಸಂಘದ ಅಧ್ಯಕ್ಷ ಐವನ್ ಡಿಸೋಜಾ ಅವರು ಬುಧವಾರ ನಗರದ ವುಡ್ ಲ್ಯಾಂಡ್ಸ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಸಿಟಿ, ಸರ್ವೀಸ್ ಮತ್ತು ಎಕ್ಸ್ ಪ್ರೆಸ್ ಬಸ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಸುಮಾರು 18 ಬೇಡಿಕೆಗಳನ್ನು ಈಡೇರಿಸಲು ಬಸ್ ಮಾಲಕರು ಹಾಗೂ ಜಿಲ್ಲಾಡಳಿತ ಒಪ್ಪಿಕೊಂಡಿದೆ ಎಂದು ತಿಳಿಸಿದರು. ಬಸ್ಸ್ ಕಾರ್ಮಿಕರು ಹಲವು ವರ್ಷಗಳಿಂದ ತಮ್ಮ ಬೇಡಿಕೆ ಈಡೇರಿಸಲು ಸಂಬಂಧ […]

ಮಾದಕ ದ್ರವ್ಯ ವಿರುದ್ಧದ ಕಾರ್ಯಾಚರಣೆಲ್ಲಿ ಪೊಲೀಸ್‌ ಇಲಾಖೆಗೆ ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ :ಡಿಸಿ

Thursday, February 7th, 2013
meeting on drug mafia

ಮಂಗಳೂರು : ಮಾದಕ ದ್ರವ್ಯ ವಿರುದ್ಧದ ಕಾರ್ಯಾಚರಣೆಗೆ ಸಂಬಂಧಿಸಿ ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆಯ ವತಿಯಿಂದ ಬುಧವಾರ ದ.ಕ. ಜಿಲ್ಲಾಧಿಕಾರಿ ಎನ್‌. ಪ್ರಕಾಶ್‌ ರವರ ಅದ್ಯಕ್ಷತೆಯಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಡ್ರಗ್ ಮಾಫಿಯಾದ ಮೂಲವನ್ನು ಪತ್ತೆಹಚ್ಚಿ ನಿರ್ಮೂಲನ ಮಾಡಲು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು. ಜಿಲ್ಲಾಡಳಿತ ಮಾದಕ ದ್ರವ್ಯ ವಿರುದ್ಧದ ಕಾರ್ಯಾಚರಣೆಗೆ ಸಂಬಂಧಿಸಿ ಪೊಲೀಸ್‌ ಇಲಾಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಜೊತೆಗೆ  ಅಬಕಾರಿ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ […]