Blog Archive

ಬೆಳ್ತಂಗಡಿ : ಮನೆ ಕಟ್ಟಲು ಐದು ಲಕ್ಷ, ಮನೆಯಿಲ್ಲದವರಿಗೆ ಐದು ಸಾವಿರ ಬಾಡಿಗೆ , ತಕ್ಷಣದ ಪರಿಹಾರ ಹತ್ತು ಸಾವಿರ ಘೋಷಿಸಿದ ಸಿಎಂ

Monday, August 12th, 2019
Kakkavu bridge

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದ ಉಂಟಾದ ನಷ್ಟಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸಮರೋಪಾದಿ ಯಲ್ಲಿ ಪರಿಹಾರ ಘೋಷಿಸಿದ್ದಾರೆ. ವಿಮಾನದ ಮೂಲಕ ಮಂಗಳೂರಿಗೆ 11.20 ಕ್ಕೆ ಬಂದಿಳಿದ ಸಿಎಂ ಬೆಳ್ತಂಗಡಿ ಗೆ ತೆರಳಿ ನೆರೆಯಿಂದ ಕೊಚ್ಚಿ ಹೋದ ಕುಕ್ಕಾವು ಸೇತುವೆಗೆ ಭೇಟಿ ನೀಡಿದ ಬಳಿಕ ಕುಕ್ಕಾವು ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸಿದರು. ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು ಮಳೆಯಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮನೆ ನಿರ್ಮಾಣದ ತನಕ 5 ಸಾವಿರ ತಿಂಗಳಿಗೆ ಬಾಡಿಗೆ ಹಣ ಮತ್ತು 5 ಲಕ್ಷ ಪರಿಹಾರ ನೀಡಲಾಗುವುದು […]

ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್ ರಸ್ತೆ ಸಂಚಾರ ಆರಂಭ

Monday, August 12th, 2019
ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್ ರಸ್ತೆ ಸಂಚಾರ ಆರಂಭ

ಬೆಳ್ತಂಗಡಿ : ಕಳೆದೊಂದು ವಾರದಿಂದ ಭಾರೀ ಮಳೆಗೆ ಗುಡ್ಡ ಕುಸಿತಕ್ಕೊಳಗಾಗಿ ಸಂಚಾರಕ್ಕೆ ಆಡಚಣೆಯಾಗಿ ಬಂದ್ ಮಾಡಲಾಗಿದ್ದ ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್ (ಹಾಸನ–ಮಂಗಳೂರು) ರಸ್ತೆಯಲ್ಲಿ ಹಗಲು ಹೊತ್ತು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಭಾನುವಾರದಂದು ಮಳೆ ತನ್ನ ಆರ್ಭಟವನ್ನು ಕೊಂಚ ಕಡಿಮೆ ಮಾಡಿದ್ದರಿಂದ ಅಂದೇ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಆದರೆ ವಾಹನ ಚಾಲಕರು ಆತಂಕದಿಂದಲೇ ಘಾಟ್ ನಲ್ಲಿ ವಾಹನ ಚಾಲನೆ ಮಾಡಿದ್ರು. ಬೆಳಗ್ಗೆ ಹತ್ತರಿಂದ ಸಂಜೆ ಆರರವರೆಗೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು ಆ ಬಳಿಕ ಸಂಜೆಯಾಗುತ್ತಲೇ ಸೋಮವಾರವೂ ವಾಹನ […]

ದಕ್ಷಿಣ ಕನ್ನಡ ನೆರೆ ಪೀಡಿತ ಪ್ರದೇಶಗಳಿಗೆ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ, ಧರ್ಮಸ್ಥಳದಲ್ಲಿ ಸಭೆ

Monday, August 12th, 2019
Yedyurappa

ಮಂಗಳೂರು  : ಮುಖ್ಯಮಂತ್ರಿ ಆದ ಬಳಿಕ ಪ್ರಥಮ ಬಾರಿಗೆ  ಮಂಗಳೂರಿಗೆ ಆಗಮಿಸಿದ ಬಿ.ಎಸ್. ಯಡಿಯೂರಪ್ಪ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬೆಳ್ತಂಗಡಿ ಗೆ ತೆರಳುವ ಮುನ್ನ ಪತ್ರಕರ್ತರೊಂದಿಗೆ ಮಾತನಾಡಿದರು. ಪ್ರಾಕೃತಿಕ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಬಂಟ್ವಾಳ ಹಾಗೂ ಬೆಳ್ತಂಗಡಿಯ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಲಿದ್ದೇನೆ. ಮೊದಲು ಸಂತ್ರಸ್ತರ ಕಷ್ಟಗಳಿಗೆ ಸ್ಪಂದಿಸುವ ಹಾಗೂ ಮನೆ ಮಠ ಕಳೆದುಕೊಂಡವರ ಪುನರ್ವಸತಿ ಕಡೆಗೆ ಪ್ರಮುಖ ಆದ್ಯತೆ ನೀಡಬೇಕು. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಆ.16 ರ ಬಳಿಕ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ […]

ಡಾ|ಡಿ. ವೀರೇಂದ್ರ ಹೆಗ್ಗಡೆ : ನೆರೆ ಸಂತ್ರಸ್ತರಿಗೆ ಧೈರ್ಯ ಹೇಳಿಕೆ

Monday, August 12th, 2019
veerendra-hegde

ಬೆಳ್ತಂಗಡಿ : ತಾಲೂಕಿನಲ್ಲಿ ಪ್ರಕೃತಿ ವಿಕೋಪದಿಂದ ಭಾರೀ ಅನಾಹುತವಾಗಿದ್ದು, ಅಪಾರ ಕಷ್ಟನಷ್ಟಗಳಾಗಿವೆ. ತಾಲೂಕಿನ ಮಿತ್ತಬಾಗಿಲು, ಮಲವಂತಿಗೆ, ಚಾರ್ಮಾಡಿ, ಮುಂಡಾಜೆ ಮೊದಲಾದ ಗ್ರಾ.ಪಂ. ವ್ಯಾಪ್ತಿ ನೆರೆಯಿಂದ ತತ್ತರಿಸಿದೆ. ಸಂತ್ರಸ್ತರು ಆತಂಕ ಪಡಬೇಕಾಗಿಲ್ಲ. ಮಂಜುನಾಥಸ್ವಾಮಿ ನಮ್ಮನ್ನು ರಕ್ಷಿಸಿದ್ದಾನೆ. ಆಪತ್ತು ಸಹಜ, ಮುಂದಿನ ಭವಿಷ್ಯ ರೂಪಿಸಲು ಸನ್ನದ್ಧರಾಗಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ನೆರೆ ಸಂತ್ರಸ್ತರಿಗೆ ಧೈರ್ಯ ಹೇಳಿದರು. ಬೆಳ್ತಂಗಡಿ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಚಾರ್ಮಾಡಿ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ […]

ಬೆಳ್ತಂಗಡಿ : 15ಕ್ಕೂ ಹೆಚ್ಚು ಗ್ರಾಮಗಳು ಮತ್ತು ನೂರಾರು ಮನೆಗಳು ಜಲಾವೃತ

Saturday, August 10th, 2019
netravati

ಬೆಳ್ತಂಗಡಿ : ಪಶ್ಚಿಮ ಘಟ್ಟ ಪ್ರದೇಶದಲ್ಲಿ ವ್ಯಾಪಕ ಮಳೆಯಾದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಹರಿಯುತ್ತಿರುವ ನದಿ ಮತ್ತು ಉಪನದಿಗಳಲ್ಲಿ ಶುಕ್ರವಾರ ನಿರೀಕ್ಷೆ ಮೀರಿದ ಪ್ರವಾಹ ಉಂಟಾಗಿ ತಾಲೂಕಿನ ಸುಮಾರು 15ಕ್ಕೂ ಅಧಿಕ ಗ್ರಾಮಗಳ ನೂರಾರು ಮನೆಗಳು ಜಲಾವೃಗೊಂಡು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಾಲೂಕಿನ ನೇತ್ರಾವತಿ, ಕಪಿಲ, ಮೃತ್ಯುಂಜಯ, ಸೋಮಾವತಿ ನದಿಗಳು, ನೆರಿಯ ಮತ್ತು ಅಣಿಯೂರು ಹೊಳೆಯಲ್ಲಿ ಪ್ರವಾಹದ ನೀರು ಉಕ್ಕಿಹರಿದಿತ್ತು. ಶುಕ್ರವಾರ ಮುಂಜಾನೆಯೇ ಪ್ರವಾಹ ಹರಿದು ಬಂದಿದ್ದು, ಬೆಳಗ್ಗೆಜನರು ಏಳುವ ಹೊತ್ತಿಗೆ ಮನೆಯಂಗಳದಲ್ಲಿ ನೆರೆ ಕಂಡು ಬೆಚ್ಚಿದರು. ಲಾೖಲ, […]

ನೆರೆಯಲ್ಲಿ ಕೊಚ್ಚಿಹೋದ ಬೆಳ್ತಂಗಡಿ ಕಡಿರುದ್ಯಾವರ ಕುಕ್ಕಾವು ಸೇತುವೆ

Friday, August 9th, 2019
Kukkavu-bridge

ಮಂಗಳೂರು : ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆ ಪರಿಣಾಮ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕುಕ್ಕಾವು ಸೇತುವೆ ಕೊಚ್ಚಿ ಹೋಗಿದೆ. ಪರಿಣಾಮವಾಗಿ ಸೋಮಂತಡ್ಕ- ಕಾಜೂರು ಸಂಪರ್ಕ ರಸ್ತೆ ಕಡಿತಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ 7 ಮನೆಗಳು ಕುಸಿದಿದೆ. ಬೆಳ್ತಂಗಡಿ ತಾಲೂಕಿನ ಕಾಜೂರು- ಕೊಲ್ಲಿ, ಮಲವಂತಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಪಾಯದಲ್ಲಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ರವಾನೆ ಮಾಡಿದ್ದಾರೆ. ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ […]

ಬರೋಡದ ನಿರಾಶ್ರಿತರಿಗೆ ಅಭಯಾಸ್ತ ಚಾಚಿದ ಶಶಿಧರ ಬಿ.ಶೆಟ್ಟಿ ಬೆಳ್ತಂಗಡಿ

Monday, August 5th, 2019
Baroda-Food

ಬೆಳ್ತಂಗಡಿ : ಗುಜರಾತ್ ರಾಜ್ಯದ ಬರೋಡಾ ನಿವಾಸಿ, ಶಶಿ ಕೇಟರಿಂಗ್ ಸರ್ವಿಸ್‌ನ ಮಾಲಿಕ, ಗುಜರಾತ್ ತುಳು ಸಂಘ ಬರೋಡ ಅಧ್ಯಕ್ಷ, ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಇದರ ಗುಜರಾತ್ ರಾಜ್ಯ ಘಟಕದ ಪ್ರಧಾನ ಸಂಘಟಕ ಶಶಿಧರ ಬಿ.ಶೆಟ್ಟಿ ಇವರು ಅತಿವೃಷ್ಟಿಯಿಂದ ಬರೋಡಾದ ಸುಮಾರು 30-40 ಸಾವಿರ ಜನರ ವಾಸ್ತವ್ಯದ ಜಾಲಾವೃತ ಪ್ರದೇಶಗಳಿಗೆ ತೆರಳಿ ಅಲ್ಲಿನ ನಿರಾಶ್ರಿತರಿಗೆ ಆಹಾರಪೊಟ್ಟಣ, ಲಕ್ಷಾಂತರ ಲೀಟರ್ ನೀರು ಬಾಟಲಿಗಳನ್ನು ನೀಡಿ ಅಭಯಸ್ತ ಚಾಚಿ ಮಾನವತೆ ಮೆರೆದರು. ಬರೋಡಾದ ಹೆಸರಾಂತ ಪ್ರತಿಷ್ಠಿತ ಯುವೋದ್ಯಮಿ, ಕೊಡುಗೈದಾನಿ, ಬೆಳ್ತಂಗಡಿ […]

ಬೆಳ್ತಂಗಡಿ ಹಿಂಸಾತ್ಮಕ ಗೋ ಸಾಗಣೆ – ಕಾರು ಮಾಲೀಕನ ಜೊತೆ ಮತ್ತೋರ್ವನ ಬಂಧನ

Wednesday, June 12th, 2019
Cow thives

ಬೆಳ್ತಂಗಡಿ: ಅಕ್ರಮವಾಗಿ ಐಶಾರಾಮಿ ಕಾರೊಂದರಲ್ಲಿ ಹಿಂಸಾತ್ಮಕ ರೀತಿಯಲ್ಲಿ ಗೋ ಸಾಗಣೆ ನಡೆಸುತ್ತಿದ್ದಾಗ ಉಜಿರೆಯ ಮುಂಡಾಜೆ ಸಮೀಪ ಕಾರು ಪಲ್ಟಿಯಾಗಿ 5 ಗೋವುಗಳ ಮೃತ್ಯು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉಜಿರೆಯ ಮುಂಡಾಜೆ ಸಮೀಪ ಕಾರು ಪಲ್ಟಿಯಾಗಿ 5 ಗೋವುಗಳ ಮೃತ್ಯುಮೂಡುಬಿದಿರೆ ತೋಡಾರ್ ಇದಾಯತ್ ನಗರ ನಿವಾಸಿ ಕಾರು ಮಾಲೀಕ ಅನ್ಸಾರ್ (27) ಹಾಗೂ ಜುಬೇರ್ (26) ಎಂಬವವರನ್ನ ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಶಾಮೀಲಾಗಿರುವ ಶಂಕೆ ಇದ್ದು, ಅವರ ಬಂಧನಕ್ಕಾಗಿ […]

ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ರಂಜನ್ ಗೌಡ ಕಾಂಗ್ರೆಸಿಗೆ

Tuesday, April 2nd, 2019
Ranjan Gowda

ಬೆಳ್ತಂಗಡಿ : ಬಿಜೆಪಿ ಮಂಡಲ ಅಧ್ಯಕ್ಷರಾಗಿದ್ದ ರಂಜನ್ ಗೌಡ ಕಾಂಗ್ರೆಸ್ ಸೇರಿದ್ದಾರೆ. ಈ ಬೆಳವಣಿಗೆ ಬಿಜೆಪಿ ಪಾಳಯದಲ್ಲಿ ಗೊಂದಲ ಮೂಡಿಸಿದೆ. ಬೆಳ್ತಂಗಡಿಯಲ್ಲಿ ಆಪರೇಷನ್ ಹಸ್ತ ಯಶಸ್ವಿಯಾಗಿದೆ. ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ‌ ಹೊಂದಿದ್ದ ರಂಜನ್ ಗೌಡ ಕಾಂಗ್ರೆಸ್‌ಗೆ ಹಾರಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೆಳ್ತಂಗಡಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ರಂಜನ್ ಗೌಡ ಅವರಿಗೆ ಕೊನೆಯ ಹಂತದಲ್ಲಿ ಟಿಕೆಟ್ ಕೈ ತಪ್ಪಿತ್ತು. ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಹರೀಶ್ ಪೂಂಜಾ ಅವರಿಗೆ ಟಿಕೆಟ್ ನೀಡಲಾಗಿತ್ತು . ಇದರಿಂದ […]

ಅವಳಿ ಮಕ್ಕಳನ್ನು ನೇಣಿಗೆ ಹಾಕಿ, ಮಹಿಳೆ ಆತ್ಮಹತ್ಯೆಗೆ ಶರಣು

Tuesday, February 5th, 2019
Baby

ಮಂಗಳೂರು :  ಅವಳಿ ಮಕ್ಕಳನ್ನು ನೇಣಿಗೆ ಹಾಕಿ ಮಹಿಳೆಯೊಬ್ಬಳು ತಾನೂ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ನಗರದಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ-ಬೆಳಾಲು ರಸ್ತೆಯ ಓಡಲದ ಬಾಡಿಗೆ ಮನೆಯಲ್ಲಿ ವಾಸವಿದ್ದ ಶಿವಮೊಗ್ಗ ಮೂಲದ ಮಹಿಳೆ ಬೇಬಿ (23) ಸಾವನ್ನಪ್ಪಿದ್ದವರು. ಇನ್ನು ಅಸ್ವಸ್ಥರಾಗಿದ್ದ ಎರಡು ವರ್ಷ ಪ್ರಾಯದ ಅವಳಿ ಮಕ್ಕಳಾದ ಅಕ್ಷರ ಹಾಗೂ ಅಪ್ಪರಾ ಅವರನ್ನು ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೇಬಿ ಅವರ ಗಂಡ ಪ್ರವೀಣ್ ಉಜಿರೆಯ ಸಲೂನ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. […]