Blog Archive

ಎಳನೀರು ಗ್ರಾಮದ ಅಭಿವೃದ್ಧಿಗೆ ನಾನು ಪ್ರಥಮ ಆದ್ಯತೆ ನೀಡುತ್ತೇನೆ: ಶಾಸಕ ಹರೀಶ್​ ಪೂಂಜಾ

Saturday, December 8th, 2018
harish-poonja

ಬೆಳ್ತಂಗಡಿ: ಎಳನೀರು ಬೆಳ್ತಂಗಡಿ ತಾಲೂಕಿನ ಕಾಶ್ಮೀರವಿದ್ದಂತೆ, ಈ ಭಾಗದ ಅಭಿವೃದ್ಧಿಗೆ ನಾನು ಪ್ರಥಮ ಆದ್ಯತೆ ನೀಡುತ್ತೇನೆ. ಎಲ್ಲಾ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಹರೀಶ್ ಪೂಂಜಾ ಹೇಳಿದ್ದಾರೆ. ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪೋಡಿ ಮುಕ್ತ ಗ್ರಾಮವನ್ನಾಗಿ ಮಾಡಲಾಗುವುದು. ಎಲ್ಲಾ ಅಧಿಕಾರಿಗಳು ಈ ಭಾಗದ ನಾಗರಿಕರಿಗೆ ಸೂಕ್ತ ರೀತಿಯಲ್ಲಿ ಸ್ಪಂದನೆಯನ್ನು ನೀಡಬೇಕು. ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ವಿದ್ಯುತ್ ಯೋಜನೆ ಕಲ್ಪಿಸುವ ನಿಟ್ಟಿನಲ್ಲಿ ನಾನು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿ […]

ಬೆಳ್ತಂಗಡಿಯಲ್ಲಿ ಮಧ್ಯರಾತ್ರಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

Thursday, November 22nd, 2018
attacked

ಬೆಳ್ತಂಗಡಿ: ಮಧ್ಯರಾತ್ರಿ ಯುವಕನೊಬ್ಬನ ಮೇಲೆ ಅಪರಿಚಿತರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಗುಳಿಗಕಟ್ಟೆ ಮುಂದೆ ನಡೆದಿದೆ. ಗದಗ ಜಿಲ್ಲೆಯ ಸುರೇಶ್ (27) ಹಲ್ಲೆಗೊಳಗಾದ ವ್ಯಕ್ತಿ. ಇವರು ಉಜಿರೆಯಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದರು. ಇವರ ಕೈ ಕಾಲಿಗೆ ಗಂಭೀರ ಹಲ್ಲೆ ಮಾಡಲಾಗಿದ್ದು, ಗಾಯಗೊಂಡ ಇವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಗೆ ಕಾರಣ ಏನು ಮತ್ತು ಹಲ್ಲೆ ಮಾಡಿದವರು ಯಾರು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಬೆಳ್ತಂಗಡಿ ಪೊಲೀಸ್ […]

ದ.ಕ. ಜಿಲ್ಲೆಯ ಮೂರು ತಾಲೂಕು ಒಟ್ಟುಗೂಡಿ ಪುತ್ತೂರು ಜಿಲ್ಲೆ ರಚನೆಯಾಗಬೇಕು: ಹೋರಾಟ ಸಮಿತಿ ಒತ್ತಾಯ

Friday, November 16th, 2018
puttur

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂರು ತಾಲೂಕುಗಳು ಒಟ್ಟುಗೂಡಿ ಪ್ರತ್ಯೇಕ ಪುತ್ತೂರು ಜಿಲ್ಲೆ ರಚನೆಯಾಗಬೇಕು ಎಂಬ ಒತ್ತಾಯ ಕೇಳಿಬಂದಿದೆ. ಈಗಾಗಲೇ ಈ ಕುರಿತು ಹೋರಾಟ ಸಮಿತಿಯನ್ನೂ ರಚಿಸಲಾಗಿದೆ ಎನ್ನಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದ ಉಡುಪಿ ಜಿಲ್ಲೆಯನ್ನು ಸರ್ಕಾರ ಪ್ರತ್ಯೇಕ ಜಿಲ್ಲೆಯಾಗಿ‌ ಘೋಷಿಸಿದ ಬಳಿಕ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ತಾಲೂಕುಗಳಿವೆ. ಇದರಲ್ಲಿ ಪುತ್ತೂರು, ಬೆಳ್ತಂಗಡಿ, ಸುಳ್ಯ ತಾಲೂಕುಗಳನ್ನು ಸೇರಿಸಿ ಪ್ರತ್ಯೇಕ ಪುತ್ತೂರು ಜಿಲ್ಲೆ ಮಾಡಬೇಕೆಂಬ ಕೂಗು ಕೇಳಿಬಂದಿದೆ. ಇದಕ್ಕಾಗಿ ಈ ಭಾಗದ ಪ್ರಮುಖರು ಒಂದು ಹಂತದ ಸಭೆಯನ್ನು […]

ಬೆಳ್ತಂಗಡಿಯಲ್ಲಿ ತೋಟಕ್ಕೆ‌ ಬಂದ ಕಾಡಾನೆ: ಭೀತಿಯಲ್ಲಿ ಗ್ರಾಮಸ್ಥರು

Friday, November 2nd, 2018
elephant

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟುವಿನಲ್ಲಿ ಕಾಡಾನೆಯೊಂದು ತೋಟಕ್ಕೆ ಬಂದು ಭೀತಿ ಹುಟ್ಟಿಸಿದ ಘಟನೆ ನಡೆದಿದೆ. ಭಾರಿ ಗಾತ್ರದ ಒಂಟಿ ಸಲಗವು ಇಂದಬೆಟ್ಟು ಚರ್ಚ್ನ ಹಿಂಬದಿ ಹನಿಬೆಟ್ಟು ಭರತ್ ಕುಮಾರ್ ಎಂಬುವವರ ತೋಟಕ್ಕೆ ನುಗ್ಗಿತ್ತು. ಇದರಿಂದ ಭಯಗೊಂಡ ಅಕ್ಕಪಕ್ಕದ ಮನೆಯ ನಾಯಿಗಳ ಬೊಗಳುವಿಕೆಯನ್ನು ಕೇಳಿದ ಸ್ಥಳೀಯರು ತೋಟಕ್ಕೆ ಬಂದು ನೋಡಿದಾಗ ಕಾಡಾನೆ ತೋಟದುದ್ದಕ್ಕೂ ನಡೆದುಕೊಂಡು ಹೋಗಿತ್ತು. ಆದರೆ ಆನೆಯು ತೋಟಕ್ಕೆ ಯಾವುದೇ ರೀತಿ ಹಾನಿ ಉಂಟು ಮಾಡದೆ ಕಾಡಿಗೆ ತೆರಳಿದೆ ಎಂದು ತಿಳಿದು ಬಂದಿದೆ. […]

ಅಪ್ರಾಪ್ತೆ ಜತೆ ಒತ್ತಾಯಪೂರ್ವಕವಾಗಿ ದೈಹಿಕ ಸಂಪರ್ಕ ಬೆಳೆಸಿದ ಆರೋಪಿಯ ಬಂಧನ!

Thursday, November 1st, 2018
police-arrested

ಮಂಗಳೂರು: ಅಪ್ರಾಪ್ತೆ ಜತೆ ಒತ್ತಾಯಪೂರ್ವಕವಾಗಿ ದೈಹಿಕ ಸಂಪರ್ಕ ಬೆಳೆಸಿ ಆಕೆ ಗರ್ಭವತಿಯಾಗಿರಿಸಿರುವ ಆರೋಪದ ಮೇರೆಗೆ ಪೊಕ್ಸೊ ಪ್ರಕರಣ ದಾಖಲಿಸಿ ಓರ್ವನನ್ನು ಧರ್ಮಸ್ಥಳ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ನಿವಾಸಿ ಸುರೇಂದ್ರ(18) ಬಂಧಿತ ಆರೋಪಿ. ಆರೋಪಿ ಸುರೇಂದ್ರ ಸುಮಾರು ಒಂದು ವರ್ಷಗಳ ಹಿಂದೆ ಪರಿಚಯವಾದ 14 ವರ್ಷದ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ, ಒತ್ತಾಯಪೂರ್ವಕವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಪರಿಣಾಮ ಬಾಲಕಿ ಮೂರು ತಿಂಗಳ ಗರ್ಭಿಣಿಯಾಗಿದ್ದಳು. ಈ ಸಂದರ್ಭ ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಹೆತ್ತವರು ಧರ್ಮಸ್ಥಳದ […]

ಬೆಳ್ತಂಗಡಿಯಲ್ಲಿ ಬಿಳಿ ಹಾಗೂ ಕಪ್ಪು ಮೈಬಣ್ಣದ ಅಪರೂಪದ ಹಾವೊಂದು ಪತ್ತೆ..!

Monday, October 29th, 2018
snake

ಮಂಗಳೂರು: ಭೂಮಿಯಲ್ಲಿ ವೈವಿಧ್ಯಮಯ ಜೀವರಾಶಿಗಳಿದ್ದರೂ ಎಲ್ಲ ತರದ ಜೀವರಾಶಿಗಳು‌ ಮನುಷ್ಯನ ಕಣ್ಣಿಗೆ ಬೀಳಲ್ಲ. ಅಪರೂಪವಾಗಿರುವ ಹಲವು ಜೀವರಾಶಿಗಳಲ್ಲಿ ವಿಭಿನ್ನ ರೀತಿಯ ಹಾವುಗಳು ಕೂಡ‌ ಸೇರಿವೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಬೆದ್ರಕಾಡು ಪ್ರದೇಶದಲ್ಲಿ ಅಪರೂಪದ ಹಾವೊಂದು ಕಾಣ ಸಿಕ್ಕಿದೆ. ಇಲ್ಲಿನ ಓಡಿಯಪ್ಪ ಗೌಡರ ಮನೆಯಲ್ಲಿ ಅಪರೂಪದ ಆರು ಅಡಿ ಉದ್ದದ ಹಾವೊಂದು ಕಂಡು ಬಂದಿದೆ. ನೋಡುವುದಕ್ಕೆ ಈ ಹಾವು ಜಿಬ್ರಾದಂತೆ ಬಿಳಿ ಹಾಗೂ ಕಪ್ಪು ಮೈಬಣ್ಣವನ್ನು ಹೊಂದಿತ್ತು. ಈ ವಿಶೇಷ ಹಾವನ್ನು ನೋಡಲು […]

ಬೆಕ್ಕಿಗೆ ಅನ್ನ ಹಾಕುವ ವಿಚಾರಕ್ಕೆ ಜಗಳ: ವ್ಯಕ್ತಿಯನ್ನ ಕೊಂದಿದ್ದ ವಿದ್ಯಾರ್ಥಿಗೆ ಜೀವಾವಧಿ ಶಿಕ್ಷೆ

Thursday, October 25th, 2018
building

ಮಂಗಳೂರು: ಬೆಕ್ಕಿಗೆ ಅನ್ನ ಹಾಕುವ ವಿಚಾರ ಮತ್ತು ನಲ್ಲಿ ನೀರು ಬಿಡುವ ವಿಚಾರದಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ ಕಸಬಾ ಗ್ರಾಮದ ಚಾಮುಂಡಿ ಸಂತೆಕಟ್ಟೆ ನಿವಾಸಿ, ವಿದ್ಯಾರ್ಥಿ ಚಂದ್ರಶೇಖರ (22) ಜೀವಾವಧಿ ಶಿಕ್ಷೆಗೊಳಗಾದ ಆರೋಪಿ. 2017ರ ಜೂನ್ 2ರಂದು ಈ ಕೊಲೆ ನಡೆದಿತ್ತು. ಆರೋಪಿ ಚಂದ್ರಶೇಖರ್ ಹಾಗೂ ಆತನ ಪಕ್ಕದ ಮನೆಯಲ್ಲಿ ವಾಸವಿದ್ದ ತಿಮ್ಮಪ್ಪ ಪೂಜಾರಿಯವರಿಗೂ ಬೆಕ್ಕಿಗೆ ಅನ್ನ ಹಾಕುವ ವಿಚಾರ ಮತ್ತು ನಲ್ಲಿ ನೀರು ಬಿಡುವ […]

ಬೆಳ್ತಂಗಡಿಯಲ್ಲಿ ನಾಪತ್ತೆಯಾದ ವಿದ್ಯಾರ್ಥಿಯ ಶವ ಪತ್ತೆ

Saturday, October 20th, 2018
prateek

ಬೆಳ್ತಂಗಡಿ: ಇಂದುಬೆಟ್ಟು ಗ್ರಾಮದ ಪುತ್ರಬೆಟ್ಟು ನಿವಾಸಿ ಸಂಜೀವ ಗೌಡ ಅವರ ಪುತ್ರ ಪ್ರತೀಕ್(19) ಶುಕ್ರವಾರ ಮಧ್ಯಾಹ್ನ ಮನೆಯಲ್ಲಿ ಊಟ ಮುಗಿಸಿಕೊಂಡು ಬಳಿಕ ಸ್ನೇಹಿತರ ಜತೆ ತೋಟದ ಕಡೆಗೆ ತಿರುಗಾಡಿ ಕೊಂಡು ಹೋಗಿ ನಾಪತ್ತೆಯಾಗಿದ್ದರು. ಸ್ನೇಹಿತರ ಜೊತೆ ತೆರಳಿದ ಪ್ರತೀಕ್ ಅವರು ನಾಪತ್ತೆ ಯಾಗಿರುವುದು ಸಂಶಯಕ್ಕೆ ಕಾರಣವಾಗಿದ್ದು ಜೊತಗಿದ್ದ ಸ್ನೇಹಿತರು ಪೊಲೀಸರಿಗೆ ಯಾವುದೇ ಮಾಹಿತಿ ನೀಡಲಿಲ್ಲ. ಶುಕ್ರವಾರ ಅಗ್ನಿಶಾಮಕ ದಳ ಮತ್ತು ಈಜು ತಜ್ಞರು ನದಿಯಲ್ಲಿ ಹುಡುಕಾಟ ಮಾಡಿದರು ಪ್ರತೀಕ್ ಶವ ಪತ್ತೆ ಯಾಗಿರಲಿಲ್ಲ. ಶನಿವಾರ ಬೆಳಿಗ್ಗೆ ಪ್ರತೀಕ್ ಮೃತ ಶರೀರ […]

ಕಾರ್ಯಕ್ರಮಕ್ಕೆ ಶಾಸಕರಿಗೆ ಆಹ್ವಾನ: ಆಸ್ಪತ್ರೆಯಲ್ಲಿ ತಿಮರೋಡಿ ತರಾಟೆ

Wednesday, October 3rd, 2018
harish-poonja

ಬೆಳ್ತಂಗಡಿ: ತಮಗೆ ಗೊತ್ತಿಲ್ಲದೆ ತಮ್ಮದೆ ಕಾರ್ಯಕ್ರಮಕ್ಕೆ ಶಾಸಕರನ್ನು ಆಹ್ವಾನಿಸಿದ್ದನ್ನು ತಿಳಿದ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಅವರು ಆಸ್ಪತ್ರೆಯಲ್ಲಿ ವೈದ್ಯರನ್ನು ಎಲ್ಲರ ಎದುರೇ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಗಾಂಧೀ ಜಯಂತಿ ದಿನದಂದು ತಿಮರೋಡಿ ಬೆಂಬಲಿಗರ ರಾಜ ಕೇಸರಿ ಸಂಘಟನೆಯಿಂದ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆ ಸ್ವಚ್ಛಗೊಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಶಾಸಕ ಹರೀಶ್ ಪೂಂಜ ಅವರನ್ನು ಆಸ್ಪತ್ರೆಯಿಂದ ಆಹ್ವಾನಿಸಲಾಗಿತ್ತು. ಈ ವಿಚಾರ ಆಸ್ಪತ್ರೆಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ಸಂಘಟನೆಯವರಿಗೆ ತಿಳಿದಿರಲಿಲ್ಲ. ವಾಸ್ತವವಾಗಿ […]

ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಲಾರಿ ಪಲ್ಟಿ: ಸಂಚಾರಕ್ಕೆ ಅಡಚಣೆ

Wednesday, September 26th, 2018
belthangady

ಬೆಳ್ತಂಗಡಿ: ಚಾರ್ಮಾಡಿ ಘಾಟಿಯ 3ನೇ ತಿರುವಿನಲ್ಲಿ ಬುಧವಾರ ಬೆಳಗಿನ ಜಾವ ಬಾಳೆಕಾಯಿ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಮಗುಚಿ ಬಿದ್ದ ಪರಿಣಾಮ ರಸ್ತೆ ಸಂಚಾರಕ್ಕೆ ಅಡಚಣೆಯುಂಟಾದ ಘಟನೆ ನಡೆದಿದೆ. ಲಾರಿ ತೆರವುಗೊಳಿಸಲು ಚಾರ್ಮಾಡಿ ಹಸನಬ್ಬ ತಂಡ ಸಹಕರಿಸಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ. ಶಿರಾಡಿ ಘಾಟಿ ಸಂಚಾರಕ್ಕೆ ತೆರವು ಆಗುವವರೆಗೆ ಇಲ್ಲಿ ಕ್ರೇನ್ ಒಂದರ ವ್ಯವಸ್ಥೆ ಮಾಡಿ ಕೊಡಬೇಕೆಂದು ಹಸನಬ್ಬ ಅವರು ಬೇಡಿಕೆ ಇಟ್ಟಿರುವ ಕುರಿತು ಉದಯವಾಣಿಯಲ್ಲಿ ಪ್ರಕಟಿಸಲಾಗಿತ್ತು. ಆದರೆ ಇನ್ನೂ […]