Blog Archive

ವೇಣೂರು ಪಂಚಾಯತ್ ನ ಮಾಜಿ ಅಧ್ಯಕ್ಷ ಎರ್ಮೋಡಿ ಗುಣಪಾಲ್ ಜೈನ್ ನಿಧನ

Wednesday, July 31st, 2013
Yermodi Gunapal Jain

ಬೆಳ್ತಂಗಡಿ  :  ಮಂಗಳವಾರ ಮಧ್ಯಾಹ್ನ ಮೂಡುಬಿದಿರೆ -ಬೆಳ್ತಂಗಡಿ ದಾರಿಯಲ್ಲಿ ಪೆರಿಂಜೆಯ ಹೊಸಂಗಡಿ ಗ್ರಾಪಂ ಕಚೇರಿಯ ಬಳಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಜೈನ ಸಮಾಜದ ಮುಖಂಡ ಎರ್ಮೋಡಿ ಗುಣಪಾಲ್ ಜೈನ್(64) ಮೃತ ಪಟ್ಟಿದ್ದಾರೆ. ಮೂಡುಬಿದಿರೆಯ ಮನೆಯಿಂದ ವೇಣೂರಿಗೆ ಬರುತ್ತಿದ್ದ ಗುಣಪಾಲ್ ಜೈನ್‌ರ ಇನ್ನೋವಾ ಕಾರಿಗೆ ಹೊಸಂಗಡಿ ಪಂಚಾಯತ್ ಬಳಿ ಬೆಳ್ತಂಗಡಿಯಿಂದ ಮೂಡುಬಿದಿರೆಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ  ಕಾರು ಸುಮಾರು 50 ಮೀಟರ್‌ಗಳಷ್ಟು ತಳ್ಳಲ್ಪಟ್ಟ ಸಂಪೂರ್ಣ ನಜ್ಜುಗುಜ್ಜಾಗಿದೆ. ತಲೆಗೆ ಗಂಭೀರ ಗಾಯಗೊಂಡಿದ್ದ ಗುಣಪಾಲ್ ಜೈನ್‌ರನ್ನು ಕೂಡಲೇ ಆಸ್ಪತ್ರೆಗೆ […]

ಮೂಡುಬಿದಿರೆ ಸಿದ್ದಾಂತ ಬಸದಿಗೆ ನುಗ್ಗಿ 13 ಕೋಟಿ ಬೆಲೆಬಾಳುವ ಪಂಚಲೋಹ ವಿಗ್ರಹಗಳ ಕಳವು

Saturday, July 6th, 2013
Siddantha Basadi Mudbidre

ಮೂಡುಬಿದಿರೆ:  ಇಲ್ಲಿನ ಹದಿನೆಂಟು ಬಸದಿಗಳಲ್ಲಿ ಒಂದಾದ ಸಿದ್ದಾಂತ ಬಸದಿಗೆ ಶನಿವಾರ ಇಳಿ ಮುಂಜಾನೆ ಕಳ್ಳರು ನುಗ್ಗಿ  13 ಕೋಟಿ ಬೆಲೆಬಾಳುವ 16ವಿಗ್ರಹಗಳನ್ನು ಕಳವುಗೈದ ಘಟನೆ ಬೆಳಕಿಗೆ ಬಂದಿದೆ. ಶನಿವಾರ ಮುಂಜಾನೆ ಮಠದ ಮ್ಯಾನೇಜರ್ ಬಸದಿಯ ಬಾಗಿಲು ತೆರೆದಾಗ ಕಳ್ಳತನ ನಡೆದಿರುವುದು ತಿಳಿದು ಬಂತು. ಮೂಡಬಿದಿರೆಯು ಐತಿಹಾಸಿಕ ಸ್ಥಳವಾಗಿದ್ದು, ಇಲ್ಲಿಗೆ ಪ್ರತಿನಿತ್ಯ ಯಾತ್ರಾರ್ಥಿಗಳು ಬಂದು ಹೋಗುತ್ತಾರೆ. ಸಿದ್ದಾಂತ ಮಂದಿರವು ಗುರುಬಸದಿಯ ಹಿಂದುಗಡೆಯಿರುವ ಮಂದಿರ. ಸುಮಾರು 1.10ರ ವೇಳೆಗೆ ಕಳ್ಳತನ ನಡೆದಿರುವುದು ಸಿ.ಸಿ. ಟಿ.ವಿಯಲ್ಲಿ ದಾಖಲಾಗಿದೆ. ಕಳ್ಳರು ಮಂದಿರದ ಬಲಬದಿಯ […]

ನಿಡ್ಡೋಡಿಗೆ ವಿವಿಧ ಇಲಾಖೆಗಳ ಅಧಿಕಾರಿಗಳ ಭೇಟಿ, ಗ್ರಾಮಸ್ಥರ ವಿರೋಧ

Friday, May 17th, 2013
Niddodi power project

ಮೂಡುಬಿದಿರೆ : ಯುಪಿಸಿಎಲ್‌ಗಿಂತ ಮೂರೂವರೆ ಪಟ್ಟು ದೊಡ್ಡದಾದ ನಿಡ್ಡೋಡಿಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಉಷ್ಣವಿದ್ಯುತ್‌ ಸ್ಥಾವರ ಸ್ಥಾಪನೆಗೆ ಸಂಬಂಧಪಟ್ಟಂತೆ  ವಿವಿಧ ಇಲಾಖೆಗಳ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಆಗಮಿಸಿದ್ದರು. ವಿಷಯ ತಿಳಿದ ನಿಡ್ಡೋಡಿ ಪ್ರದೇಶದ ಸುತ್ತಮುತ್ತಲಿನ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಘಟನೆ ಗುರುವಾರ ನಡೆಯಿತು. ಗುರುವಾರ ಸುಮಾರು 11ಗಂಟೆಗೆ ಸೆಂಟ್ರಲ್‌ ಎಲೆಕ್ಟ್ರಿಕಲ್‌ ಅಥಾರಿಟಿಯ ಅಧಿಕಾರಿ ಎಂ.ಎಸ್‌. ಪುರಿ ಅವರ ನೇತೃತ್ವದಲ್ಲಿ  ಆಗಮಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಗ್ರಾಮಸ್ಥರಿಗೆ ನೀಡಿರಲಿಲ್ಲ. ಆದರೆ ಗ್ರಾಮ ಕರಣಿಕರು ಊರಲ್ಲಿ […]

ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ ವಿರುದ್ಧ ದ ಹೋರಾಟಕ್ಕೆ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಬೆಂಬಲ

Saturday, March 2nd, 2013
Sri Vishwesha Theertha Swamiji

ಉಡುಪಿ : ಮೂಡುಬಿದಿರೆ ಸಮೀಪದ ನಿಡ್ಡೋಡಿಯಲ್ಲಿ ಸರ್ಕಾರ ಸ್ಥಾಪಿಸಲುದ್ದೇಶಿಸಿರುವ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿಯೇ ಶುಕ್ರವಾರ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ  ಸ್ಥಳೀಯ ಜನರ ಹೋರಾಟಕ್ಕೆ ತಾವು  ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು. ಶುಕ್ರವಾರ ಪೇಜಾವರ ಮಠದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಸ್ಥಾಪನೆಯಾದ ವಿಶೇಷ ಆರ್ಥಿಕ ವಲಯದ ವಿರುದ್ಧ ಕೂಡ ನಾನು ದನಿಯೆತ್ತಿದ್ದೆ ಇದಕ್ಕೆ ಪ್ರತಿಯಾಗಿ ಕೆಲವು ರಾಜಕೀಯ ನಾಯಕರು ನನ್ನನ್ನು ಟೀಕಿಸಿದ್ದರು ಆದರೆ ನಾನು ಇವು ಯಾವುದರ […]

ಚಿಕ್ಕಮಗಳೂರಿನ ಕಡೂರು ಬಳಿ ರಸ್ತೆ ಅಪಘಾತ ಯುವ ವರದಿಗಾರ ಮೃತ್ಯು

Friday, February 22nd, 2013
Sanath Rao

ಮೂಡುಬಿದಿರೆ : ಚಿಕ್ಕಮಗಳೂರಿನ ಕಡೂರು ರಸ್ತೆಯಲ್ಲಿ ಗುರುವಾರ ಸಂಜೆ ನಡೆದ ಅಪಘಾತವೊಂದರಲ್ಲಿ ಮೂಡುಬಿದಿರೆ ಅಲಂಗಾರು ನಿವಾಸಿ, ದಾವಣಗೆರೆ ಟಿವಿ9 ಸುದ್ದಿವಾಹಿನಿಯ ವರದಿಗಾರ ರಾದ ಸನತ್ ರಾವ್(23) ಮೃತಪಟ್ಟಿದ್ದಾರೆ ಸನತ್ ದಾವಣಗೆರೆಯಿಂದ ಮೂಡುಬಿದಿರೆಗೆ ತನ್ನ ಬೈಕ್‌ನಲ್ಲಿ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಆಲ್ಟೋ ಕಾರಿಗೆ ಢಿಕ್ಕಿಯಾಗಿ ತೀವ್ರ ಗಾಯಗೊಂಡ ಇವರನ್ನು ಸ್ಥಳೀಯರು ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸನತ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮೂಡುಬಿದಿರೆ ಕಡಲಕೆರೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯ ಜಯರಾಮ ರಾವ್ ಹಾಗೂ ಕಲ್ಲಮುಂಡ್ಕೂರ್ ನ ಸಿ.ಆರ್.ಪಿ […]

ಆಳ್ವಾಸ್ ಪ್ರಶಸ್ತಿ ಪ್ರಕಟ : ಹತ್ತು ಮಂದಿ ಗಣ್ಯರಿಗೆ ನುಡಿಸಿರಿ ಪ್ರಶಸ್ತಿ

Tuesday, October 19th, 2010
ಆಳ್ವಾಸ್ ನುಡಿಸಿರಿ ಪ್ರಶಸ್ತಿ

ಮೂಡುಬಿದಿರೆ: ಡಾ.ಜಿ.ಎಸ್.ಅಮೂರ, ಡಾ.ಎಂ.ವೀರಪ್ಪ ಮೊಯಿಲಿ ಸೇರಿದಂತೆ ಹತ್ತುಮಂದಿ ಗಣ್ಯರನ್ನು 7ನೇ ವರ್ಷದ ಆಳ್ವಾಸ್ ನುಡಿಸಿರಿ ಪ್ರಶಸ್ತಿಗೆ ಆಯ್ಕೆಗೊಳಿಸಲಾಗಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ಕನ್ನಡ ನಾಡುನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ 2010 ಅಕ್ಟೋಬರ ತಿಂಗಳ 29,30 ಮತ್ತು 31ರಂದು ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯಲಿದ್ದು ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಇಂದು ಪತ್ರಿಕಾಭವನದಲ್ಲಿ ಡಾ| ಮೋಹನ್ ಆಳ್ವಾ ಪತ್ರಕರ್ತರಿಗೆ ತಿಳಿಸಿದರು. ಡಾ.ಜಿ.ಎಸ್ ಅಮೂರ (ಸಾಹಿತ್ಯ), ಡಾ.ಎಂ.ವೀರಪ್ಪ ಮೊಯಿಲಿ (ಸಾಮಾಜಿಕ), ಡಾ.ಎಂ.ಎಂ.ಕಲಬುರ್ಗಿ (ಸಂಶೋಧನೆ),  ಸಂತೋಷ ಕುಮಾರ್ […]