ಅರ್ಹತೆ ಇಲ್ಲದವರು ‘ಲೈಂಗಿಕ ಸಮಸ್ಯೆಗಳಿಗೆ ಪರಿಹಾರ’ ಕ್ಲಿನಿಕ್ ನಡೆಸುವಂತಿಲ್ಲ

Wednesday, November 29th, 2023
sex-problem

ಮಂಗಳೂರು : ವೈದ್ಯಕೀಯ ವ್ಯವಸ್ಥೆಗೆ ಸಂಬಂಧಿಸಿದ ಯಾವುದೇ ಸೇವೆಗಳನ್ನು ನೀಡುವ ವ್ಯಕ್ತಿ ಮತ್ತು ಸಂಸ್ಥೆಗಳು ಆರೋಗ್ಯ ಇಲಾಖೆಯಲ್ಲಿ ನೋಂದಣಿಗೊಳುವುದು ಕಡ್ಡಾಯವಾಗಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ದೀಪಾ ಪ್ರಭು ತಿಳಿಸಿದ್ದಾರೆ. ಅವರು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ನಡೆದ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದರು. ಡೆಂಟಲ್, ಆಯುಷ್, ಹೋಮಿಯೋಪಥಿ, ಫಿಸಿಯೋಥೆರಿಪಿ, ನ್ಯಾಚುರೋಪತಿ ಸೇರಿದಂತೆ ವ್ಯೆದ್ಯಕೀಯ ಸೇವೆ ನೀಡುವ ಪ್ರತಿಯೊಂದು ಕ್ಲಿನಿಕ್, ಆಸ್ಪತ್ರೆ ಮತ್ತು ವ್ಯಕ್ತಿಗಳು, ಪ್ರಯೋಗಾಲಯ, ಪರೀಕ್ಷಾ ಕೇಂದ್ರಗಳು, ಅಲ್ಟ್ರಾಸೌಂಡ್ ಸಂಸ್ಥೆಗಳು […]

10 ರಿಂದ ಮನೆ ಮನೆಗೆ ಲಸಿಕಾಮಿತ್ರ: ನೂತನ ಲಸಿಕಾ ಅಭಿಯಾನ

Monday, November 8th, 2021
Vacination

ಮಂಗಳೂರು : ಈಗಾಗಲೇ ಪ್ರಥಮ ಡೋಸ್ ಪಡೆದು, ಎರಡನೇ ಡೋಸ್‌ಗೆ ಬಾಕಿ ಉಳಿದಿರುವ ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ಕೋವಿಡ್ ಲಸಿಕೆ ನೀಡುವ ಮನೆಮನೆಗೆ ಲಸಿಕಾ ಮಿತ್ರ ವಿನೂತನ ಅಭಿಯಾನಕ್ಕೆ ಇದೇ ನವೆಂಬರ್  10 ರಂದು ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದರು. ಅವರು ಮಂಗಳೂರು ಮಹಾನಗರ ಪಾಲಿಕೆಯ ಕೋವಿಡ್ ವಾರ್ ರೂಂನಲ್ಲಿ ನ.8ರ ಸೋಮವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಮನೆ ಮನೆಗೆ ಲಸಿಕಾ ಅಭಿಯಾನದ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ […]

ಮಾನಸಿಕ ಆರೋಗ್ಯದ ಅರಿವು ಮತ್ತು ನೇತ್ರದಾನದ ಮಾಹಿತಿ ಕಾರ್ಯಕ್ರಮ

Friday, November 24th, 2017
eye donation

ಮಂಗಳೂರು :  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರಾದ ಡಾ.ರಾಮಕೃಷ್ಣ ರಾವ್ ಇವರ ಅಧ್ಯಕ್ಷತೆಯಲ್ಲಿ  ದಿನಾಂಕ 24-11-2017ರಂದು ಬೆಳಗ್ಗೆ 11.30 ಗಂಟೆಗೆ ಪತ್ರಿಕಾ ಸಂಭಾಗಣದಲ್ಲಿ  ಮಾನಸಿಕ ಆರೋಗ್ಯದ ಅರಿವು ಮತ್ತು ನೇತ್ರದಾನದ ಮಾಹಿತಿ ಕಾರ್ಯಕ್ರಮ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಎಂ.ಆರ್ ರವಿಯವರು ನೇತ್ರದಾನ ನೋಂದಾವಣಿ ಪ್ರತಿಯನ್ನು ಸ್ವೀಕರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಈಗಾಗಲೇ 7670 ನೇತ್ರದಾನಿಗಳನ್ನು ಗುರುತಿಸಿದ್ದು,ಡಿಸೆಂಬರ್ ಒಳಗಡೆ 10,000 ನೇತ್ರದಾನಿಗಳನ್ನು ಗುರುತಿಸುವ ಗುರಿಯನ್ನು ಹೊಂದಿದೆ ಎಂದರು ಮತ್ತು ತಾಳ್ಮೆ,ಸಹಿಷ್ಣುತೆಯ […]

ದ.ಕ ಜಿಲ್ಲೆಯಲ್ಲಿ 36 ಡೆಂಗ್ಯೂ ಪ್ರಕರಣ ಪತ್ತೆ

Friday, July 15th, 2011
DHO-Rangappa/ಡಾ.ಶ್ರೀರಂಗಪ್ಪ

ಮಂಗಳೂರು ಜುಲೈ: ಇತ್ತೀಚಿನ ದಿನಗಳಲ್ಲಿ ಮಲೇರಿಯಾ ಜೊತೆಗೆ ಡೆಂಗ್ಯೂ ಕಾಯಿಲೆಯೂ ಸೇರ್ಪಡೆಗೊಂಡಿದ್ದು, 2011ರ ಜೂನ್ ಅಂತ್ಯದ ವರೆಗೆ    ಜಿಲ್ಲೆಯಲ್ಲಿ 36 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದೆಯೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ  ಡಾ.ಓ.ಶ್ರೀರಂಗಪ್ಪ ಅವರು ತಿಳಿಸಿದ್ದಾರೆ. ಈ ವರ್ಷ 36 ಪ್ರಕರಣಗಳು ಪತ್ತೆಯಾದುದರಲ್ಲಿ.  ಮಂಗಳೂರು ನಗರದ ಬಿಜಾಪುರ ಕಾಲೊನಿ (ಲಿಂಗಪ್ಪಯ್ಯಕಾಡು) ನಲ್ಲಿ 3 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಇದನ್ನು ಹೊರತುಪಡಿಸಿ ಮತ್ಯಾವುದೇ ಸಾವುಗಳು ಡೆಂಗ್ಯು ಜ್ವರದಿಂದ ಜೂನ್ ಅಂತ್ಯದ ತನಕ ದಾಖಲಾಗಿಲ್ಲ ಎಂದು ಡಾ.ಶ್ರೀರಂಗಪ್ಪ ತಿಳಿಸಿದ್ದಾರೆ. ಕಳೆದ […]

ಪೋಲಿಯೋ ಮುಕ್ತ ಸಮಾಜಕ್ಕೆ ಪೋಲಿಯೋ ಹನಿ

Wednesday, January 5th, 2011
ಪೋಲಿಯೋ ಮುಕ್ತ ಸಮಾಜ

ಮಂಗಳೂರು ಜ.5 : ಪೋಲಿಯೋದಂತಹ ಮಾರಕ ರೋಗ ನಿರ್ಮೂಲನೆಗೆ ಅವಿರತ ಪರಿಶ್ರಮದ ಅಗತ್ಯವಿದೆ. 2007ರಲ್ಲಿ ಬೆಂಗಳೂರಿನಲ್ಲಿ ಪೋಲಿಯೋ ಪತ್ತೆಯಾಗಿತ್ತು. ಬಳಿಕ ಇದುವರೆಗೆ ರಾಜ್ಯದಲ್ಲಿ ಪೋಲಿಯೋ ಪ್ರಕರಣ ವರದಿಯಾಗಿಲ್ಲ ಎಂದು ಡಾ ಸತೀಶ್ ಚಂದ್ರ ವಿವರಿಸಿದರು. ಇಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಮಾಹಿತಿ ನೀಡಿದ ಪಲ್ಸ್ ಪೋಲಿಯೋ ಕಾರ್ಯಕ್ರಮದ ಉಸ್ತುವಾರಿ ಡಾಕ್ಟರ್ ಸತೀಶ್ ಚಂದ್ರ ಅವರು ಇದುವರೆಗಿನ ಅಂಕಿ ಅಂಶ ಹಾಗೂ ಮಾಹಿತಿ ನೀಡಿದರು. 2011 ಜನವರಿ ದ್ವಿತೀಯ ಸುತ್ತಿನ ಪಲ್ಸ್ ಪೋಲಿಯೋ […]