ನಾಲ್ಕನೇ ದಿನವೂ ಪತ್ತೆಯಾಗದ ಓರ್ವ ಮೀನುಗಾರನ ಮೃತದೇಹ

Friday, December 4th, 2020
Boat Tragedy

ಮಂಗಳೂರು: ಪರ್ಸಿನ್ ಬೋಟ್ ದುರಂತದಲ್ಲಿ ಸಾವಿಗೀಡಾದ ಆರು ಜನರ ಪೈಕಿ ಇನ್ನೋರ್ವನ  ಓರ್ವನ ಮೃತದೇಹ ಪತ್ತೆಗೆ ನಾಲ್ಕನೇ ದಿನ ಕೂಡಾ ಹುಡುಕಾಟ ಮುಂದುವರೆದಿದೆ. ಶ್ರೀರಕ್ಷಾ ಎಂಬ ಬೋಟ್ ಮೀನುಗಳನ್ನು ತುಂಬಿಸಿಕೊಂಡು ವಾಪಸ್ ಬರುವ ವೇಳೆ ಇತ್ತೀಚೆಗೆ ಅಳಿವೆ ಬಾಗಿಲಿನಲ್ಲಿ ದುರಂತಕ್ಕೀಡಾಗಿತ್ತು. ಪರಿಣಾಮ, ಆರು ಮಂದಿ ಮೀನುಗಾರರು ಮೃತಪಟ್ಟಿದ್ದರು. ಈ ಪೈಕಿ ಐವರ ಮೃತದೇಹ ಪತ್ತೆಯಾಗಿತ್ತು. ಅನ್ಸಾರ್ ಮೃತದೇಹ ಸಿಕ್ಕಿತಾದರೂ ಸಮುದ್ರದಾಳದಿಂದ ಮೇಲಕ್ಕೆ ತರುವಾಗ ಮುಳುಗು ತಜ್ಞರ ಕೈಜಾರಿ ಮತ್ತೆ ಸಮುದ್ರದಾಳ ಸೇರಿತ್ತು. ಇದಾಗಿ ಎರಡು ದಿನವಾದರೂ ಮೃತದೇಹ ಸಿಕ್ಕಿರಲಿಲ್ಲ. […]

ಪರ್ಷಿಯನ್ ಬೋಟ್ ಮುಳುಗಡೆ ಇಬ್ಬರ ಮೃತದೇಹ ಪತ್ತೆ, ನಾಲ್ವರಿಗೆ ಶೋಧ

Tuesday, December 1st, 2020
Sri Raksha

ಮಂಗಳೂರು : ಶ್ರೀ ರಕ್ಷಾ ಹೆಸರಿನ ಪರ್ಷಿಯನ್ ಬೋಟ್ ಮುಳುಗಡೆಯಾಗಿ ನಾಪತ್ತೆಯಾದ ಆರು ಮೀನುಗಾರರ ಪೈಕಿ ಇಬ್ಬರ ಮೃತದೇಹ ಮಂಗಳವಾರ ಮಧ್ಯಾಹ್ನ ಪತ್ತೆಯಾಗಿವೆ. ಮಂಗಳೂರಿನ ಬೊಕ್ಕಪಟ್ಣದ ಪಾಂಡುರಂಗ ಸುವರ್ಣ, ಪ್ರೀತಂ ಎಂಬುವರ ಮೃತದೇಹ ಪತ್ತೆಯಾಗಿದ್ದು, ಉಳಿದ ನಾಲ್ವರಿಗಾಗಿ ಶೋಧ ನಡೆಯುತ್ತಿದೆ. ಘಟನೆ ನಡೆದ ಸುತ್ತಲ ಪ್ರದೇಶದಲ್ಲಿ ಮುಳುಗು ತಜ್ಞರು, ಸ್ಥಳೀಯ ಮೀನುಗಾರರು ಮತ್ತು ಕೋಸ್ಟ್ ಗಾರ್ಡ್ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಈಗ ಇಬ್ಬರ ಮೃತದೇಹವನ್ನು ಮುಳುಗು ತಜ್ಞರು ಮೇಲಕ್ಕೆತ್ತಿದ್ದಾರೆ. ಸೋಮವಾರ ಸಂಜೆ  ಮೀನುಗಾರಿಕೆಗೆ ತೆರಳಿ ಮೀನು ತುಂಬಿಸಿಕೊಂಡು ವಾಪಸ್ […]

ಕಿನ್ನಿಗೋಳಿಯ ಯುವಕ ಕುವೈಟ್‌ನ ಸಾಲ್ಮಿಯಾ ಬೀಚ್‌ನಲ್ಲಿ ನೀರು ಪಾಲು

Sunday, July 19th, 2020
Mohammed Anish

ಮಂಗಳೂರು : ಕಿನ್ನಿಗೋಳಿಯ ಯುವಕನೊಬ್ಬ ಕುವೈಟ್‌ನ ಸಾಲ್ಮಿಯಾ ಬೀಚ್‌ನಲ್ಲಿ ಮುಳುಗುತ್ತಿದ್ದ ಅಪರಿಚಿತ ವ್ಯಕ್ತಿಯೋರ್ವನ ರಕ್ಷಣೆ ಮಾಡಲು ಮುಂದಾದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಶನಿವಾರ ಸಂಜೆ  ನಡೆದಿದೆ. ಮೃತ ವ್ಯಕ್ತಿಯನ್ನು ಮಂಗಳೂರು ಹೊರವಲಯದ ಕಿನ್ನಿಗೋಳಿ ನಿವಾಸಿ ಮೊಹಮ್ಮದ್ ಅನೀಸ್ (28) ಎಂದು ಗುರುತಿಸಲಾಗಿದೆ. ಭಾರತೀಯ ಕಾಲಮಾನ 8.30 ಕ್ಕೆ ಕುವೈಟ್ ರಾಷ್ಟ್ರದ ಸಾಲ್ಮಿಯಾ ಬೀಚ್‌ನಲ್ಲಿ ಅನೀಸ್ ತನ್ನ ಸ್ನೇಹಿತರ ಜೊತೆಗೂಡಿ ಈಜಲು‌ ತೆರಳಿದ್ದು ಸಮುದ್ರ ಪಾಲಾಗುತ್ತಿದ್ದ ಈಜಿಪ್ಟ್‌ನ ಅಪರಿಚಿತ ಯುವಕನ ರಕ್ಷಣೆಗೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಅನೀಸ್‌ ನೀರಿನಲ್ಲಿ ಮುಳುಗಿದ್ದು […]

ಪಣಂಬೂರ್ ಬೀಚ್‌‌ನಲ್ಲಿ ಬೋಟ್ ಪಲ್ಟಿ: ಎರಡೂವರೆ ವರ್ಷದ ಮಗು ನೀರುಪಾಲು

Thursday, October 6th, 2016
panamburu-beach

ಮಂಗಳೂರು: ಪಣಂಬೂರ್ ಬೀಚ್‌‌ನಲ್ಲಿ ಸಮುದ್ರದ ಅಲೆಗಳಿಗೆ ಸಿಲುಕಿ ಪ್ರಯಾಣಿಕ ಬೋಟ್ ಪಲ್ಟಿಯಾದ ಪರಿಣಾಮ ಎರಡೂವರೆ ವರ್ಷದ ಮಗು ನೀರುಪಾಲಾಗಿದ್ದಾನೆ ಎನ್ನಲಾಗಿದೆ. ಮೊಹಮ್ಮದ್ ಸದಾನ್ ನೀರುಪಾಲಾದ ಮಗು ಎಂದು ತಿಳಿದುಬಂದಿದೆ. ಬೋಟಿನಲ್ಲಿದ್ದ ಆರು ಮಂದಿಯನ್ನು ರಕ್ಷಣೆ ಮಾಡಲಾಗಿದೆ. ದುಬೈ ಉದ್ಯಮಿ ಶಮಿತ್ ಕುಟುಂಬ ಬೋಟಿನಲ್ಲಿತ್ತು. ಶಮಿತ್ ಕೊಣಾಜೆಯ ನಾಟೆಕಲ್ ನಿವಾಸಿಯಾಗಿದ್ದಾರೆ. ಶಮಿತ್ ಪುತ್ರ ಮೊಹಮ್ಮದ್ ಸಮುದ್ರಪಾಲಾಗಿದ್ದಾನೆ. ಉಳಿದವರನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ ಎನ್ನಲಾಗಿದೆ. ಮಂಗಳೂರಿನ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೀಚ್ ಪ್ರವಾಸಿಗರ ಮೋಜಿಗಾಗಿ […]

ತಣ್ಣೀರು ಬಾವಿ ಬೀಚ್ ನಲ್ಲಿ ‘ಅಂತರರಾಷ್ಟ್ರೀಯ ಬೀಚ್ ಕ್ಲೀನ್ ಡೇ’

Saturday, September 25th, 2010
ಅಂತರರಾಷ್ಟ್ರೀಯ ಬೀಚ್ ಕ್ಲೀನ್ ಡೇ

ಮಂಗಳೂರು : ಕರಾವಳಿ ಕಾವಲು ಪೊಲೀಸ್ ಠಾಣೆ ಮತ್ತು ಕೋಸ್ಟ್ ಗಾರ್ಡ್ ಮಂಗಳೂರುರವರು ಜಂಟಿಯಾಗಿ ತಣ್ಣೀರು ಬಾವಿ ಬೀಚ್ ನಲ್ಲಿ ‘ಅಂತರರಾಷ್ಟ್ರೀಯ ಬೀಚ್ ಕ್ಲೀನ್ ಡೇ’ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸದರಿ ಕಾರ್ಯಕ್ರಮದ ಅದ್ಯಕ್ಷತೆಯನ್ನು ಶ್ರೀ. ಎಸ್.ಸಿ ಪಟ್ನಾಯಕ್, ಕಮಾಂಡೆಂಟ್, ಕೋಸ್ಟ್ ಗಾರ್ಡ್ ರವರು ವಹಿಸಿದ್ದು, ಹಾಗೂ ಶ್ರೀ ಅರುಣ್ ಕುಮಾರ್, ಕಮಾಂಡೆಂಟ್, ಕೋಸ್ಟ್ ಗಾರ್ಡ್, ಶ್ರೀ ಅಮಾನುಲ್ಲಾ. ಎ, ಪೊಲೀಸ್ ಉಪನಿರೀಕ್ಷಕರು, ಶ್ರೀ ಶ್ರೀಧರ್.ಎಸ್.ಆರ್, ಪೊಲೀಸ್ ಉಪನಿರೀಕ್ಷಕರು, ಹಾಗೂ ಠಾಣೆಯ ಎಲ್ಲಾ ಸಿಬ್ಬಂದಿಗಳು ಮತ್ತು ಕೋಸ್ಟ್ ಗಾರ್ಡ್ […]