ನದಿಯಲ್ಲಿ ಈಜಲು ಹೋದ ಒಂದೇ ಕುಟುಂಬದ ಇಬ್ಬರು ವಿದ್ಯಾರ್ಥಿಗಳು ಮೃತ್ಯು

Wednesday, April 14th, 2021
Reji

ಕಾಸರಗೋಡು : ನದಿಯಲ್ಲಿ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಎಪ್ರಿಲ್‌ 14ರ ಬುಧವಾರ ಮಧ್ಯಾಹ್ನ ವೆಸ್ಟ್ ಎಳೇರಿ ಸಮೀಪದ ಪರಪ್ಪಚ್ಚಾಲ್ ಎಂಬಲ್ಲಿ ನಡೆದಿದೆ. ಕಾವುಂದಳ ದ ರೆಜಿ ಅವರ ಪುತ್ರ ಆಲ್ಬಿನ್ (15) ಹಾಗೂ ಸಹೋದರ ಥಾಮಸ್ ಅವರ ಪುತ್ರ ಬ್ಲಾಸನ್ ಥಾಮಸ್ (20) ಮೃತಪಟ್ಟವರು. ಮೃತಪಟ್ಟವರು ಒಂದೇ ಕುಟುಂಬದವರಾಗಿದ್ದು ಆಲ್ಬಿನ್ ವಾರಕ್ಕೋಡ್ ಶಾಲೆಯ 10ನೇ ತರಗತಿ ಹಾಗೂ ಥಾಮಸ್ ಮಂಗಳೂರಿನ ಡಾ.ಎಂ.ವಿ.ಶೆಟ್ಟಿ ನರ್ಸಿಂಗ್ ಕಾಲೇಜಿನ ಬಿಎಸ್‌ಸಿ ನರ್ಸಿಂಗ್ ವಿದ್ಯಾರ್ಥಿಯಾಗಿದ್ದನು. ಇಬ್ಬರು ಸಮೀಪದ ಚೈತ್ರ ವಾಹಿನಿ ಹೊಳೆಗೆ […]

ಉಪ್ಪಿನಂಗಡಿ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಮಹಿಳೆಯ ಮೃತದೇಹ

Friday, August 7th, 2020
wonman-deadbody

ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬಜತ್ತೂರು ಗ್ರಾಮದ ನೀರಕಟ್ಟೆ ಡ್ಯಾಮ್ ಬಳಿಯ ನೇತ್ರಾವತಿ ನದಿಯಲ್ಲಿ ಆ. 6ರಂದು ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿದೆ. ದೇಹವೂ ನದಿ ನೀರಿನಲ್ಲಿ ತೇಲಿಕೊಂಡು ಬಂದು ನೀರಕಟ್ಟೆ ವಿದ್ಯುತ್ ಸ್ಥಾವರದ ಆಣೆಕಟ್ಟಿನ ಕಸದ ರಾಶಿ ಜೊತೆ ಸೇರಿತ್ತು.ಈ ಬಗ್ಗೆ ವಿದ್ಯುತ್ ಸ್ಥಾವರದ ಕೆಲಸಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದು, ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಮಾಹಿತಿ ಪಡೆದು ತನಿಖೆ ಮುಂದುವರೆಸಿದ್ದಾರೆ. ಸುಮಾರು 40 ರಿಂದ 50 ವರ್ಷ ವಯಸ್ಸಿನ ಮಹಿಳೆಯ ಮೃತದೇಹ ಇದಾಗಿದ್ದು, ಮೃತ […]

ಪಾಕೃತಿಕ ಸೌಂದರ್ಯ, ನದಿಯನ್ನು ನಾಶಮಾಡುತ್ತಿರುವುದು ವಿಷಾದನೀಯ : ಉಮಾನಾಥ್ ಕೋಟೆಕಾರ್

Wednesday, December 4th, 2019
Ullal

ಮಂಗಳೂರು : ನಾಶವಾಗುತ್ತಿರುವ ನದಿ ಸಂಪನ್ಮೂಲಗಳನ್ನು ಸಂರಕ್ಷಿಸಿ ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಉಳ್ಳಾಲ ಉಳಿಯ ನದಿ ತೀರದಲ್ಲಿ ಪರಿಸರದ ನಿವಾಸಿಗಳು ನದಿ ಸಂರಕ್ಷಣೆ ಅಭಿಯಾನದ ಭಾಗವಾಗಿ ಜನ ಜಾಗೃತಿಗಾಗಿ ನದಿ ಪರಿಸರದ ಸ್ವಚ್ಚತಾ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳು ಸೇರಿ ಉಳ್ಳಾಲ ಉಳಿಯ ನದಿ ತೀರದಲ್ಲಿ ಸ್ವಚ್ಚತಾ ಕಾರ್ಯ ನಡೆಸುವ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ರಾಮಕೃಷ್ಣ ಮಠ ಸ್ವಚ್ಛ ಮಂಗಳೂರು ವಿಭಾಗದ ಸಂಯೋಜಕರಾದ ಶ್ರೀ ಉಮಾನಾಥ್ ಕೋಟೆಕಾರ್ ಮಾತನಾಡಿ, […]

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಂದಿಗೆ ಹೃದಯಾಘಾತ

Friday, May 31st, 2019
puttur-Nandi

ಪುತ್ತೂರು : ತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಂದಿ ಹೆಸರಿನ ಬಸವ ಹೃದಯಾಘಾತಕ್ಕೆ ಒಳಗಾಗಿ ಮೇ.30ರ ರಾತ್ರಿ ಮೃತಪಟ್ಟಿದೆ . ನಂದಿ ದಿನ ನಿತ್ಯದಂತೆ ಮೇ30ರ ಮಧ್ಯಾಹ್ನ ಪೂಜೆ ವೇಳೆ ದೇವಸ್ಥಾನದ ಮುಂಭಾಗ ಬಂದು ದೇವರ ಪೂಜೆ ವೀಕ್ಷಿಸಿತ್ತು. ಆದರೆ ರಾತ್ರಿ 7.45 ರ ವೇಳೆಗೆ ನಂದಿ ಇದ್ದಕ್ಕಿದ್ದಂತೆ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. ಎಲ್ಲರಿಗೂ ಪ್ರೀತಿ ಪಾತ್ರವಾಗಿದ್ದ ಬಸವನ ಸಾವಿಗೆ ಭಕ್ತರು ಕಂಬನಿ ಮಿಡಿದಿದ್ದಾರೆ.

ಸತತ ಎರಡನೇ ದಿನವೂ ಮುಂದುವರಿದ ಧಾರಾಕಾರ ಮಳೆ..!

Wednesday, June 20th, 2018
heavy-rain

ಮಂಗಳೂರು: ಮಂಗಳೂರಿನಲ್ಲಿ ಸತತ ಎರಡನೇ ದಿನವೂ ಧಾರಾಕಾರ ಮಳೆ ಸುರಿಯುತ್ತಿದೆ. ವರುಣನ ಆರ್ಭಟಕ್ಕೆ ಕರಾವಳಿ ತತ್ತರಿಸಿ ಹೋಗಿದೆ. ನದಿಗಳು ತುಂಬಿ ಹರಿಯುತ್ತಿದ್ದು, ಮತ್ತೆ ಪ್ರವಾಹದ ಸಾಧ್ಯತೆಯಿದೆ ಎನ್ನಲಾಗುತ್ತಿದೆ.