ನಿರಂತರವಾಗಿ ಸುರಿದ ಮಳೆಗೆ ಪಂಪ್ ವೆಲ್ ಜಲಾವೃತ್ತ

Saturday, May 29th, 2021
pumpwell

ಮಂಗಳೂರು : ನಿರಂತರವಾಗಿ ಸುರಿದ ಮಳೆಗೆ ಪಂಪ್ ವೆಲ್ ಜಲಾವೃತ್ತ ವಾಗಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.  ಪಂಪ್‌ವೆಲ್ ಮೇಲ್ಸೇತುವೆ ಕೆಳಭಾಗದಲ್ಲಿ ಕೃತಕ ನೆರೆ ಸೃಷ್ಟಿಯಾದ ಕಾರಣ ಬೆಳಗ್ಗೆ ಹೊತ್ತು ಮಂಗಳೂರಿಗೆ ವಾಹನದಲ್ಲಿ ಬಂದವರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಶನಿವಾರ ತಡರಾತ್ರಿಯಿಂದ ಬೆಳಗ್ಗೆ ಸುಮಾರು 8 ಗಂಟೆಯವರೆಯೂ ಸುರಿದ ಮಳೆಯಿಂದಾಗಿ ನಗರದ ಹಲವು ರಾಜಕಾಲುವೆಗಳು, ಚರಂಡಿ ತೋಡುಗಳು ತುಂಬಿ ಹರಿದವು. 9 ಗಂಟೆಯ ಬಳಿಕ ಮಳೆ ಪ್ರಮಾಣ  ಕಡಿಮೆಯಾಗಿದೆ. ನಗರದ ಪಂಪ್‌ವೆಲ್ ಸೇತುವೆ ಕೆಳಭಾಗ ಸೇರಿದಂತೆ ಬೆಳಗ್ಗಿನ ಹೊತ್ತು […]

ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು ಪಲ್ಟಿ ಹೊಡೆದ ಹೊಸ ಕಾರು, ಸವಾರ ಗಂಭೀರ ಗಾಯ

Thursday, May 27th, 2021
Pumpwell-Accident

ಮಂಗಳೂರು : ಇನ್ನೂ ನೋಂದಣಿ ಗೊಳ್ಳದ ಹೊಸ ಕಾರೊಂದು  ಚಾಲಕನ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು ರಸ್ತೆಯಲ್ಲಿ ಪಲ್ಟಿ ಹೊಡೆದ ಘಟನೆ ನಗರದ ಪಂಪ್ ವೆಲ್ ನಲ್ಲಿರುವ ಫ್ಲೈಓವರ್ ನಲ್ಲಿ ಗುರುವಾರ  ಬೆಳಗ್ಗೆ 7 ಗಂಟೆ ಸುಮಾರಿಗೆ ಸಂಭವಿಸಿದೆ. ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಗಂಭೀರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರದ ಗೋರಿಗುಡ್ಡ ಕಡೆಯಿಂದ ನಂತೂರು ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನ ಫ್ಲೈಓವರ್ ಮೇಲೆ ಸಂಚರಿಸುತ್ತಿದ್ದ ವೇಳೆ ಕಾರು ಹಿಂದುಗಡೆಯಿಂದ ಬಂದು ಢಿಕ್ಕಿ ಹೊಡೆದಿದೆಯೆನ್ನಲಾಗಿದೆ. ಇದರಿಂದ […]

ಪಂಪ್ ವೆಲ್ ಫ್ಲೈ ಓವರ್ ಸರ್ವೀಸ್ ರಸ್ತೆಯಲ್ಲಿ ಪೂಕಳಂ ಹಾಕಿ ಪ್ರತಿಭಟನೆ ನಡೆಸಿದ ಬೆನ್ನಲ್ಲೇ, ಗುಂಡಿಗಳು ದುರಸ್ತಿ

Wednesday, September 2nd, 2020
pookalam

ಮಂಗಳೂರು : ಮಂಗಳೂರು: ಪಂಪ್ ವೆಲ್ ಫ್ಲೈ ಓವರ್ ಸಮೀಪದ ಸರ್ವೀಸ್ ರಸ್ತೆಯಲ್ಲಿ ಉಂಟಾಗಿರುವ ಗುಂಡಿಯಲ್ಲಿ ಮಹಿಳೆಯೋರ್ವರು ಓಣಂ ಪೂಕಳಂ ಹಾಕಿ ಇಂದು ವಿನೂತನ ಪ್ರತಿಭಟನೆ  ನಡೆಸಿದ ಬೆನ್ನಲ್ಲೇ,  ಇಲಾಖೆಯ ಅಧಿಕಾರಿಗಳು ರಸ್ತೆ ಕೆಲಸ ಮತ್ತು ಗುಂಡಿಗಳನ್ನು ದುರಸ್ತಿ ಮಾಡಿದರು. ಸರ್ವೀಸ್ ರಸ್ತೆಗಳಲ್ಲಿ ಹೊಂಡಗಳು ನಿರ್ಮಾಣವಾಗಿದ್ದು, ವಾಹನ ಸಂಚಾರಕ್ಕೆ ತಡೆ ಉಂಟಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳ‌ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.ಈ ಹಿನ್ನೆಲೆಯಲ್ಲಿ ಮಂಗಳೂರಿನ ರಾಧಿಕಾ ಧೀಮಂತ್ ಸುವರ್ಣ ಎಂಬ ಮಹಿಳೆ ರಸ್ತೆ ಗುಂಡಿಯಲ್ಲಿಯೇ ಓಣಂ ಪೂಕಳಂ ರಚನೆ […]

ಪಂಪ್ ವೆಲ್ ಮೇಲ್ಸೇತುವೆಯಲ್ಲಿ ಕಾರು ಪಲ್ಟಿ, ಚಾಲಕ ಪಾರು

Saturday, August 8th, 2020
pumpwell

ಮಂಗಳೂರು:  ಪಂಪ್ ವೆಲ್ ಮೇಲ್ಸೇತುವೆಯ ಮೇಲೆ ಕಾರೊಂದು ಪಲ್ಟಿಯಾಗಿ, ಕಾರು ಚಾಲಕ ಪ್ರಾಣಾಪಾಯದಿಂದ ಪಾರಾದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ನಗರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಳೆಯ ಕಾರಣದಿಂದ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ ಎನ್ನಲಾಗಿದೆ. ಕಾರು ಸಂಪೂರ್ಣ ತಲೆಕೆಳಗಾಗಿ ಬಿದ್ದಿದ್ದು, ಸ್ಥಳಿಯರು ಚಾಲಕನನ್ನು ಹೊರತೆಗೆದರು. ಪಂಪ್ ವೆಲ್ ಸೇತುವೆಯಲ್ಲಿ ಈ ಹಿಂದೆಯೂ ಇಂತಹ ಘಟನೆಗಳು ನಡೆದಿತ್ತು.  

ಪೌರತ್ವ ಕಾಯಿದೆ ತಿದ್ದುಪಡಿ ಆತಂಕಕಾರಿ : ಐವನ್ ಡಿಸೋಜ

Monday, December 16th, 2019
ivan

ಮಂಗಳೂರು : ದೇಶದಲ್ಲಿ ಪೌರತ್ವ ಕಾಯಿದೆ ತಿದ್ದುಪಡಿ ವಿಚಾರದ ಮೂಲಕ ದೇಶದಾದ್ಯಂತ ನಡೆಯುತ್ತಿರುವ ಹಿಂಸಾಚಾರ ಗುಜರಾತ್ ಮಾದರಿಯಂತೆ ಸಾಗುತ್ತಿರುವುದಕ್ಕೆ ಕೇಂದ್ರ ಸರಕಾರದ ನೀತಿ ಕಾರಣ ವಾಗಿದೆ. ಆದರೆ ಪ್ರಧಾನಿ ಮೋದಿ ಮತ್ತು ಅಮಿತ್ ಷಾ ತಮಗೆ ಇದು ಸಂಬಂಧಿಸಿದಂತೆ ಇಲ್ಲ ಎನ್ನುವ ರೀತಿ ವರ್ತಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. ಪೌರತ್ವ ಕಾಯ್ದೆಯ ತಿದ್ದುಪಡಿ ಬೇಡ ಎಂದು ಯಾರೂ ಹೇಳಿಲ್ಲ. ಅದರೆ ಮುಸ್ಲಿಂ ಸಮಯದಾಯವನ್ನೇ ಗುರಿಯಾಗಿಸಿ ತಿದ್ದುಪಡಿ ಮಾಡಿರುವುದು ಆತಂಕಕಾರಿಯಾಗಿದೆ. ವಿರೋಧಿಸಿ […]

ಗಾಂಜಾ ಮಾರಾಟ ಯತ್ನ, ವ್ಯಕ್ತಿಯ ಬಂಧನ

Tuesday, March 5th, 2013
ಗಾಂಜಾ ಮಾರಾಟ ಯತ್ನ, ವ್ಯಕ್ತಿಯ ಬಂಧನ

ಮಂಗಳೂರು : ಸೋಮವಾರ ರಾತ್ರಿ ನಗರದ ಪಂಪ್ ವೆಲ್ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಮಾಡೂರು ನಜೀರ್  ಬಂಧಿತ ಆರೋಪಿ. ನಗರದಲ್ಲಿ ಗಾಂಜಾ ಹಾಗೂ ಇತರ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಈತ ಸೋಮವಾರ ರಾತ್ರಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರವೀಶ್ ನಾಯ್ಕ್ ಮತ್ತು ಎಸ್.ಐ ಸುಧಾಕರ್ ಕೈಗೆ ಸಿಕ್ಕಿ ಬಿದ್ದಿದಾನೆ. ಈತನಿಂದ 1.1 ಕೆ.ಜಿ. ಗಾಂಜಾ, 12000ರೂ ಹಾಗೂ ಆಲ್ಟೋ ಕಾರನ್ನು […]

ಮಂಗಳೂರಿನಲ್ಲಿ ಮತ್ತೆ ನೈತಿಕ ಪೋಲೀಸ್ ಗಿರಿ, ಮಹಿಳೆಯೊಂದಿಗಿದ್ದ ಅನ್ಯ ಕೋಮಿನ ವ್ಯಕ್ತಿ ಮೇಲೆ ಹಲ್ಲೆ

Friday, February 1st, 2013
Bhajrangdal activists

ಮಂಗಳೂರು : ನಗರದ ಪಂಪ್ ವೆಲ್ ಬಳಿಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ  ಯುವತಿ ಹಾಗು ಅದೇ ಅಂಗಡಿಯ ಮಾಲಕನು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬಜರಂಗದಳದ ಕಾರ್ಯಕರ್ತರು ಹಿಡಿದು ಥಳಿಸಿ  ಪೊಲೀಸರಿಗೆ ಒಪ್ಪಿಸಿದ  ಘಟನೆ ಗುರುವಾರ ಸಂಜೆ ನಡೆದಿದೆ. ಯುವತಿಗೆ 6 ತಿಂಗಳ ಹಿಂದೆ ಮದುವೆಯಾಗಿದ್ದರು ತನ್ನ ಅಂಗಡಿ ಮಾಲಕನ ಜತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಲಾಗಿದೆ. ನಿನ್ನೆ ಸಂಜೆ ಉದ್ಯೋಗ ಮುಗಿಸಿ ಕಾರಿನಲ್ಲಿ ಜತಯಾಗಿ ಪ್ರಯಾಣಿಸುತ್ತಿದ್ದಾಗ ಬಜರಂಗದಳ ಕಾರ್ಯಕರ್ತರು  ಇವರಿಬ್ಬರನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಿದರು […]