ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಪ್ರಮುಖ ‌ಶಂಕಿತರಿಬ್ಬರ ಬಂಧನ

Friday, April 12th, 2024
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಪ್ರಮುಖ ‌ಶಂಕಿತರಿಬ್ಬರ ಬಂಧನ

ಬೆಂಗಳೂರು: ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಪ್ರಮುಖ ‌ಶಂಕಿತರಾದ ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮಥೀನ್ ತಾಹಾನನ್ನು ಪಶ್ಚಿಮ ಬಂಗಾಳದಲ್ಲಿ ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಬಿಜೆಪಿ ನಾಯಕ ಅರವಿಂದ್ ಬೆಲ್ಲದ್ ತಮ್ಮ ಎಕ್ಸ್ ಖಾತೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೊನೆಗೂ ಸಿಕ್ಕಿಬಿದ್ದ ಖಾನ್‌ಗ್ರೆಸ್ ಬ್ರದರ್ಸ್ ಎಂದು ಬರೆದುಕೊಂಡಿದ್ದಾರೆ. ಸುಖಾಸುಮ್ಮನೆ ಬಿಜೆಪಿ ಕರ್ಯಕರ್ತನ ಮೇಲೆ ಆರೋಪ ಹೊರಿಸಿದ್ದ @ದಿನೇಶ್ ಗುಂಡೂರಾವ್ ಅವರೇ ಎಲ್ಲಿ ಹೋದಿರಿ? ನೀವು ಕ್ಷಮೆ ಕೇಳಲೇಬೇಕು! […]

ಉಡುಪಿ ಉದ್ಯಾವರ ಫಿಶ್ ಕಟಿಂಗ್ ಯೂನಿಟ್ ನಲ್ಲಿ ದೆವ್ವದ ಕಾಟ, ಕೆಲಸ ಬಿಟ್ಟು ಓಡಿ ಹೋದ ಕಾರ್ಮಿಕರು

Thursday, November 23rd, 2023
ssf-fish

ಉಡುಪಿ: ಎಸ್ ಎಸ್ ಫಿಶ್ ಕಟಿಂಗ್ ಯೂನಿಟ್ ನಲ್ಲಿ ಅಸ್ಸಾಂ ಯುವಕನೊಬ್ಬನಿಗೆ ದೆವ್ವದ ಆವೇಶ ಆಗಿ ಜೊತೆಯಲ್ಲಿದ್ದ ಕಾರ್ಮಿಕರ ತಂಡ ಓಡಿ ಹೋಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉಡುಪಿ ಜಿಲ್ಲೆ ಕಾಪುವಿನ ಉದ್ಯಾವರ ಪಿತ್ರೋಡಿಯಲ್ಲಿ ಈ ಘಟನೆ ನಡೆದಿದ್ದು ಕೊಠಡಿಯಲ್ಲಿದ್ದ ಎಲ್ಲಾ ಕಾರ್ಮಿಕರು ದೆವ್ವ ಇದೆಯೆಂದು ಆತಂಕಪಟ್ಟಿದ್ದಾರೆ. ಅಸ್ಸಾಂ ಬಿಹಾರ ಪಶ್ಚಿಮ ಬಂಗಾಳದ ಕಾರ್ಮಿಕರು ಭಯ ಬಿದ್ದು ಓಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಲ್ಲಿನ ಸ್ಥಳೀಯರು ಕೊಡುವ ಮಾಹಿತಿ ಪ್ರಕಾರ, ಫಿಶ್ ಕಟ್ಟಿಂಗ್ ಯೂನಿಟ್ […]

ಮಂಗಳೂರು ಬೋಟ್ ದುರಂತ : ಮೂವರು ಸಾವು, ಒಂಬತ್ತು ಮಂದಿ ನಾಪತ್ತೆ

Tuesday, April 13th, 2021
ship

ಮಂಗಳೂರು: ಸೋಮವಾರ ತಡರಾತ್ರಿ ಸಂಭವಿಸಿದ ಬೋಟ್ ದುರಂತದಲ್ಲಿ ಮೃತಪಟ್ಟ ಮೂವರು ಮೀನುಗಾರರ ಮೃತದೇಹವನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ವರ್ಗ ಮಂಗಳವಾರ ಪತ್ತೆ ಹಚ್ಚಿದ್ದು,  ಮಾಣಕ್ಯದಾಸ್ ಮತ್ತು ಅಲೆಗ್ಸಾಂಡರ್ ಎಂಬವರ ಗುರುತು ಹಿಡಿಯಲಾಗಿದ್ದು, ಇನ್ನೊಬ್ಬರ ಹೆಸರು ತಿಳಿದು ಬಂದಿಲ್ಲ. ಸುರತ್ಕಲ್ ಲೈಟ್ ಹೌಸ್‌ನಿಂದ 42 ನಾಟಿಕಲ್ ಮೈಲ್ ದೂರದ ಸಮುದ್ರದಲ್ಲಿ ಈ ದುರ್ಘಟನೆಯಲ್ಲಿ ಇಬ್ಬರನ್ನು ರಕ್ಷಿಸಲಾಗಿದ್ದು, ಇತರ ಒಂಭತ್ತು ಮಂದಿ ಕಾಣೆಯಾಗಿದ್ದಾರೆ. ಅವರಿಗಾಗಿ ಕೋಸ್ಟ್‌ಗಾರ್ಡ್‌ನವರು ಶೋಧಕಾರ್ಯ ಮುಂದುವರಿಸಿದ್ದಾರೆ. ರಕ್ಷಿಸಲ್ಪಟ್ಟ ಇಬ್ಬರು ಮತ್ತು ಮೂವರ ಮೃತದೇಹವನ್ನು ಕಡಲ ಕಿನಾರೆಗೆ ತಂದು […]

ಪಶ್ಚಿಮ ಬಂಗಾಳದ ಬಿಜೆಪಿ ಸಂಸದರ ಜತೆ ಮುಖಾಮುಖಿ ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ನಿರ್ಧಾರ

Tuesday, March 10th, 2020
modi

ಕೊಲ್ಕತ್ತಾ : ಪಶ್ಚಿಮ ಬಂಗಾಳದ ಬಿಜೆಪಿ ಸಂಸದರ ಜತೆ ಮುಖಾಮುಖಿ ಚರ್ಚೆ ನಡೆಸಿ ರಾಜ್ಯದ ರಾಜಕೀಯ ಚಿತ್ರಣದ ಬಗ್ಗೆ ಮಾಹಿತಿ ಪಡೆಯಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ. ಮುಂದಿನ ವರ್ಷದ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ರಾಜ್ಯದಲ್ಲಿ ಈಗಿನಿಂದಲೇ ಸಿದ್ದತೆ ಆರಂಭಿಸುವುದು ಮೋದಿ ಅವರ ಉದ್ದೇಶ. ಅದಕ್ಕಾಗಿ ಸಂಸತ್‌ನ ಬಜೆಟ್‌ ಅಧಿವೇಶನದ ಸಂದರ್ಭದಲ್ಲಿಯೇ ರಾಜ್ಯದಿಂದ ಆಯ್ಕೆಯಾಗಿರುವ ಪಕ್ಷದ ಸಂಸದರ ಜತೆ ಚರ್ಚೆ ನಡೆಸಲು ಪ್ರಧಾನಿ ನಿರ್ಧರಿಸಿದ್ದಾರೆ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಆಡಳಿತ […]

ಬಿಜೆಪಿ ರಥಯಾತ್ರೆಗೆ ವಿರೋಧ: ಕೋರ್ಟ್ ಮೆಟ್ಟಿಲೇರಿದ ಪಶ್ಚಿಮ ಬಂಗಾಳ ಸರ್ಕಾರ

Friday, December 21st, 2018
amit-shah

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ರಥಯಾತ್ರೆ ಆಯೋಜಿಸುವ ಕುರಿತಾಗಿ ಬಿಜೆಪಿ ಹಾಗೂ ರಾಜ್ಯ ಸರ್ಕಾರದ ಹಗ್ಗಜಗ್ಗಾಟ ಮುಂದುವರೆದಿದೆ. ಬಿಜೆಪಿ ರಥಯಾತ್ರೆ ಆಯೋಜನೆಗೆ ಅವಕಾಶ ನೀಡಿರುವ ತೀರ್ಪಿನ್ನು ಪ್ರಶ್ನಿಸಿ ಬಂಗಾಳ ಸರ್ಕಾರ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ. ನಿನ್ನೆ ಕೋಲ್ಕತ್ತಾ ಹೈಕೋರ್ಟಿನ ಏಕಸದಸ್ಯ ಪೀಠವು ಬಿಜೆಪಿ ರಥಯಾತ್ರೆಗೆ ಅವಕಾಶ ನೀಡಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್ನ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದೆ. ಮುಖ್ಯನಾಯಮೂರ್ತಿ ದೆಬಸಿಶ್ ಕರ್ಗುಪ್ತ ಹಾಗೂ ನ್ಯಾ. ಶಂಪ ಸರ್ಕಾರ ಅವರ ಪೀಠದ ಎದುರು ಮೇಲ್ಮನವಿ […]

ಪಶ್ಚಿಮ ಬಂಗಾಳದಲ್ಲಿ 2 ವಿದ್ಯಾರ್ಥಿಗಳ ಹತ್ಯೆ: ಎಬಿವಿಪಿ ವತಿಯಿಂದ ಪ್ರತಿಭಟನೆ

Friday, September 28th, 2018
protst

ಮಂಗಳೂರು: ಪಶ್ಚಿಮ ಬಂಗಾಳ ಸರಕಾರದ ಮುಸ್ಲಿಂ ಪುಷ್ಠೀಕರಣದ ನೀತಿಯಿಂದಾಗಿ ಪೊಲೀಸ್ ಗೋಲಿಬಾರ್‌ಗೆ ವಿದ್ಯಾರ್ಥಿಗಳಿಬ್ಬರು ಬಲಿಯಾದ ಘಟನೆಯನ್ನು ಖಂಡಿಸಿ ಎಬಿವಿಪಿ ಮಂಗಳೂರು ಮಹಾನಗರ ದಿನಾಂಕ 27-09-2108 ರಂದು ಸಂಜೆ 7.00 ಗಂಟೆಗೆ ಬೆಸೆಂಟ್ ಸರ್ಕಲ್‌ನಲ್ಲಿ ದೀಪವನ್ನಿಟ್ಟು ಪ್ರತಿಭಟನೆ ಮಾಡಲಾಯಿತು. ಈ ಪ್ರತಿಭಟನೆಯಲ್ಲಿ ನಗರ ಸಹಕಾರ್ಯದರ್ಶಿ ಮಣಿಕಂಠ ಗೌಡರವರು ಮಾತನಾಡಿ ಮಮತಾ ಬ್ಯಾನರ್ಜಿಯವರ ಸರಕಾರ ಅಮಾಯಕ ಇಬ್ಬರು ವಿದ್ಯಾರ್ಥಿಗಳನ್ನು ಬಲಿ ತೆಗೆದುಕೊಂಡಿದೆ. ಇದೇ ರೀತಿ ಮುಂದುವರೆದರೆ ಅಖಿಲ ಭಾರತಿ ವಿದ್ಯಾರ್ಥಿ ವತಿಯಿಂದ ಉಗ್ರವಾದ ಹೋರಾಡ ನಡೆಸಲಾಗುವುದು ಎಂದು ಪಶ್ಚಿಮ ಬಂಗಾಳ ಸರಕಾರಕ್ಕೆ ಎಚ್ಚರ […]

ಮಮತಾ ಬ್ಯಾನರ್ಜಿ ತಮ್ಮ ರಾಜ್ಯದ ಹೆಸರು ಬದಲಾವಣೆ..ಪಶ್ಚಿಮ ಬಂಗಾಳ ಬದಲಿಗೆ ಬಾಂಗ್ಲಾ..!

Thursday, July 26th, 2018
mamatha-benarji

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ರಾಜ್ಯದ ಹೆಸರು ಬದಲಾವಣೆ ಮಾಡಿ ವಿಧಾನಸಭೆಯಲ್ಲಿ ಮಸೂದೆ ಮಂಡನೆ ಮಾಡಿದ್ದಾರೆ. ಹೀಗಾಗಿ ಇನ್ಮುಂದೆ ಪಶ್ಚಿಮ ಬಂಗಾಳ ಬದಲಿಗೆ ರಾಜ್ಯದ ಹೆಸರು ;ಬಾಂಗ್ಲಾ’ ಎಂದು ಮರು ನಾಮಕರಣಗೊಳ್ಳಲಿದೆ. ಮಮತಾ ಬ್ಯಾನರ್ಜಿ ಸರ್ಕಾರದ ಈ ಮಸೂದೆಗೆ ಬಿಜೆಪಿ ಹಾಗೂ ಸಿಪಿಐಎಂ ಪಕ್ಷಗಳು ಬೆಂಬಲಿಸಿದ್ದು, ಸರ್ವಾನುಮತದಿಂದ ವಿಧೇಯಕವನ್ನ ಅಲ್ಲಿನ ವಿಧಾನಸಭೆಯಲ್ಲಿ ಪಾಸ್ ಮಾಡಲಾಗಿದೆ. ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮಂಡಿಸಿ, ಅನುಮೋದನೆ ಪಡೆದಿರುವ ಈ ಮಸೂದೆಯನ್ನ , ಕೇಂದ್ರದ ಅನುಮೋದನೆಗೆ […]