ಸಿಎಂ ಪಟ್ಟಕ್ಕಾಗಿ ಕಸರತ್ತು, ಮುಖ್ಯಮಂತ್ರಿ ಸೀಟಲ್ಲಿ ಕೂರಲು ಯಾರೆಲ್ಲ ರೆಡಿಯಾಗಿದ್ದಾರೆ ಎಂದು ನೀವೇ ನೋಡಿ !

Thursday, May 27th, 2021
yedyurappa

ಬೆಂಗಳೂರು :  ಕೊರೋನಾ ಸಂದಿಗ್ಧತೆ ನಡುವೆಯೂ ಬಿಜೆಪಿಯಲ್ಲಿ ರಾಜಕೀಯ ಚಟುವಟಿಗೆ ಬಿರುಸಿನಿಂದ ಕೂಡಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ದಾಟುತ್ತಿದ್ದಂತೆ ಸಿಎಂ ಸ್ಥಾನದ ಆಕಾಂಕ್ಷಿಗಳು ಹೈಕಮಾಂಡ್  ಕದ ತಟ್ಟಲು ಶುರು ಮಾಡಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಡಿಸಿಎಂ ಲಕ್ಷ್ಮಣ ಸವದಿ, ಅರವಿಂದ್ ಬೆಲ್ಲದ, ಬಸವರಾಜ ಬೊಮ್ಮಾಯಿ ಮತ್ತು ಮುರುಗೇಶ್ ನಿರಾಣಿ ಅವರು ಸಿಎಂ ಸ್ಥಾನದ ರೇಸಿನಲ್ಲಿದ್ದಾರೆ ಎನ್ನಲಾಗುತ್ತಿದೆ. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿವೆ. ವಿಜಯೇಂದ್ರ ಆಡಳಿತದಲ್ಲಿ ಮೂಗು […]

ಡಿ.ಕೆ.ಶಿವಕುಮಾರ್ ಅವರ ಆಟ ಕರಾವಳಿಯಲ್ಲಿ ನಡೆಯುದಿಲ್ಲ: ಶೋಭಾ ಕರಂದ್ಲಾಜೆ

Monday, November 30th, 2020
Shobha Karandlaje

ಉಡುಪಿ : ಹಿಂದೂ ಧರ್ಮ ಬಿಜೆಪಿಯ ಆಸ್ತಿ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಉಡುಪಿ-ಚಿಕ್ಕಮಗಳೂರು ಸಂಸದೆ  ಶೋಭಾ ಕರಂದ್ಲಾಜೆ, “ಬಿಜೆಪಿ ಕರಾವಳಿ ಕ್ಷೇತ್ರಗಳನ್ನು ದತ್ತು ಪಡೆದಿರುವುದು ನಿಜ. ಕರಾವಳಿ ಜಿಲ್ಲೆಗಳು ನಮ್ಮವು. ಉಡುಪಿ ಜಿಲ್ಲೆಯ ಎಲ್ಲಾ ಐದು ಶಾಸಕರು ಬಿಜೆಪಿಯವರು. ನಾವು ಈ ಪ್ರದೇಶವನ್ನು ದತ್ತು ಪಡೆದಿದ್ದೇವೆ ಮತ್ತು ಅದನ್ನು ಅಭಿವೃದ್ಧಿಪಡಿಸುತ್ತೇವೆ. ಕರಾವಳಿ ಪ್ರದೇಶದ ಜನರು ತಮ್ಮ ವಿರೋಧಿ ನೀತಿಗಳಿಗಾಗಿ ಸೂಕ್ತವಾದ ಪಾಠವನ್ನು ಕಲಿಸಿದ್ದಾರೆ. ಡಿ.ಕೆ.ಶಿವಕುಮಾರ್ […]

ದಿನ ಭವಿಷ್ಯ : ಸಾಮಾಜಿಕ ಮತ್ತು ರಾಜಕೀಯವಾಗಿ ಹೆಚ್ಚು ಬೆಳವಣಿಗೆ ಕಾಣಬಹುದು

Saturday, September 26th, 2020
Anjaneya-swamy

ಶ್ರೀ ಆಂಜನೇಯಸ್ವಾಮಿ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ಕೌಟುಂಬಿಕ ಸಮಸ್ಯೆಗಳನ್ನು ಇಂದು ನೀವು ಇತ್ಯರ್ಥ ಪಡಿಸಲು ವಿಶೇಷ ಕಾಳಜಿ ವಹಿಸುತ್ತೀರಿ. ಕೆಲವರು ಸಮಸ್ಯೆಗಳನ್ನು ತೆಗೆದುಕೊಂಡು ಪರಿಹಾರಕ್ಕಾಗಿ ನಿಮ್ಮ ಬಳಿ ಬರುವ ಸಾಧ್ಯತೆ ಇದೆ. ಗಣ್ಯ ವ್ಯಕ್ತಿಗಳ ಬೇಟಿ ಮಾಡುವಿರಿ. ಮುಂದಿನ ದಿನಗಳಲ್ಲಿ ನಿಮ್ಮ ಕಾರ್ಯಕ್ರಮಗಳಿಗೆ ಇಂದೇ ರೂಪರೇಷೆ ಮಾಡಿಕೊಳ್ಳುವ ಚಿಂತನೆ ನಿಮ್ಮದು. […]

ಬಿ.ಜನಾರ್ದನ ಪೂಜಾರಿಯವರ ಆಶೀರ್ವಾದ ಪಡೆದ ಡಿ.ಕೆ.ಶಿವಕುಮಾರ್

Friday, July 31st, 2020
dk shivakumar

ಬಂಟ್ವಾಳ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವರು ಶುಕ್ರವಾರ ಸಂಜೆ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯವರನ್ನು ಬಸ್ತಿಪಡ್ಪುವಿನ ಮನೆಯಲ್ಲಿ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು. ಕೆಪಿಸಿಸಿ ಅಧ್ಯಕ್ಷರಾದ ಬಳಿಕದ ದಕ್ಷಿಣಕನ್ನಡದ ಮೊದಲ ಭೇಟಿಯ ಸಂದರ್ಭದಲ್ಲಿ ಪೂಜಾರಿಯವರನ್ನು ಭೇಟಿ‌ಮಾಡಿರುವ ಅವರು, ರಾಜ್ಯದ ರಾಜಕೀಯ ವಿಚಾರಗಳ ಕುರಿತಾಗಿಯೂ ಪೂಜಾರಿಯವರ ಜೊತೆ ಚರ್ಚಿಸಿದರು ಎನ್ನಲಾಗಿದೆ. ಕೆಪಿಸಿಸಿ ಕಾರ್ಯದರ್ಶಿ ಸಲೀಂ ಆಹಮ್ಮದ್ ಮಾಜಿ ಸಂಸದ ವಿನಯಕುಮಾರ್ ಸೊರಕೆ, ಶಾಸಕ ಯು ಟಿ ಖಾದರ್  , ಜನಾರ್ಧನಪೂಜಾರಿಯವರ ಪುತ್ರ ದೀಪಕ್ ಪೂಜಾರಿ ಈ ಸಂದರ್ಭ […]

ಉಡುಪಿ ಜಿಲ್ಲೆ14 ದಿನ ಸಂಪೂರ್ಣ ಲಾಕ್ ಡೌನ್, ಗಡಿಗಳು ಬಂದ್, ಬಸ್ಸು ಸಂಚಾರ ಇಲ್ಲ

Wednesday, July 15th, 2020
udupi DC

ಉಡುಪಿ  : ರಾಜ್ಯ ಸರಕಾರ ಕೋವಿಡ್ 19  ನಿಯಂತ್ರಣಕ್ಕಾಗಿ ಲಾಕ್ ಡೌನ್ ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನೀಡಿ ರುವ ಹಿನ್ನಲೆ . ಉಡುಪಿ ಜಿಲ್ಲೆಯಲ್ಲಿ ಲಾಕ್ ಡೌನ್ ವಿಧಿಸದಿರುವ ತೀರ್ಮಾನವನ್ನು ಮಂಗಳವಾರ ಜಿಲ್ಲಾಧಿಕಾರಿ ಜಿ. ಜಗದೀಶ್ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಜುಲೈ 15ರ ರಾತ್ರಿ 8 ಗಂಟೆಯಿಂದ ಜುಲೈ 29ರವರೆಗೆ ಅಂದರೆ 14 ದಿನಗಳ ಕಾಲ ಜಿಲ್ಲೆಯ ಗಡಿಗಳನ್ನು ಸಂಪೂರ್ಣ ಸೀಲ್ ಡೌನ್ ಮಾಡುವ ನಿರ್ಧಾರಕ್ಕೆ ಸಭೆ ಬಂದಿತ್ತು. ಮತ್ತು ಈ 14 […]

ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು : ನಾಳೆ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿಗೆ ಸೇರ್ಪಡೆ

Wednesday, March 11th, 2020
jyothiradhithya

ಬೆಂಗಳೂರು : ಕಾಂಗ್ರೆಸ್ ತೊರೆದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆಪ್ತ ಜ್ಯೋತಿರಾದಿತ್ಯ ಸಿಂಧಿಯಾ ಸದ್ಯದಲ್ಲೇ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ನಾಳೆ ಅಂದರೆ ಗುರುವಾರ ದೆಹಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲೇ ಸಿಂಧಿಯಾ ಕಮಲದ ಕೈ ಹಿಡಿಯಲಿದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತೊರೆದ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದೆ. ಮಂಗಳವಾರ ಬೆಳಗ್ಗೆಯೇ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ […]

ಮುಂದಿನ ನಾಲ್ಕು ತಿಂಗಳಲ್ಲಿ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ

Saturday, February 15th, 2020
basana-gowda-yathnal

ವಿಜಯಪುರ : ರಾಜ್ಯ ರಾಜಕೀಯಲ್ಲಿ ಭಾರೀ ಬದಲಾವಣೆಯಾಗಲಿದ್ದು, ಮುಂದಿನ ನಾಲ್ಕು ತಿಂಗಳಲ್ಲಿ ಈ ಬದಲಾವಣೆ ಕಾಣಲಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬಜೆಟ್ ಅಧಿವೇಶನ ಬಳಿಕ ಸಂಪುಟ ಪುನಾರಚನೆಯಾಗಲಿದ್ದು, ಸಚಿವ ಸಂಪುಟ ಬದಲಾವಣೆ ಮಾಡಲೇಕಾಗುತ್ತದೆ. ಈ ಬಗ್ಗೆ ಹೈಕಮಾಂಡ್ ಒಳ್ಳೆಯ ನಿರ್ಧಾರ ಕೈಗೊಳ್ಳಬಹುದು ಎಂಬ ನಿರೀಕ್ಷೆ ಇದೆ ಎಂದಿದ್ದಾರೆ. ಸಚಿವ ಸ್ಥಾನಕ್ಕಾಗಿ ಈಗಾಗಲೇ ಪಕ್ಷದಲ್ಲಿ ಹಿರಿಯ ನಾಯಕರು ಅಸಮಾಧಾನ ತೋರಿದ್ದಾರೆ. ಸಿಎಂ ಸಂಪುಟ ಪುನಾರಚನೆ ಮಾಡಬೇಕು ಎಂದು‌ ಗಂಭೀರ […]

ರಾಜಕೀಯದಲ್ಲಿ ಇದೆಲ್ಲ ಸಹಜ, ಮುಂದಿನ ದಿನಗಳಲ್ಲಿ ಸಚಿವನಾಗುವ ನಿರೀಕ್ಷೆ ಇದೆ : ಮಾಜಿ ಶಾಸಕ ಎಚ್. ವಿಶ್ವನಾಥ್ ವಿಶ್ವಾಸ

Thursday, February 6th, 2020
h-vishwanath

ಬೆಂಗಳೂರು : ನೂತನ ಸಚಿವರ ಪಟ್ಟಿ ಪ್ರಕಟವಾಗುತ್ತಿದ್ದಂತೆ ಬಿಜೆಪಿಯಲ್ಲಿ ಒಳಗಿಂದೊಳಗೆ ಅಸಮಾಧಾನ ತಲೆದೋರಿದೆ. ಮಂತ್ರಿ ಸ್ಥಾನದಿಂದ ವಂಚಿತರಾಗಿರುವ ಎಚ್. ವಿಶ್ವನಾಥ್ ತಮ್ಮ ಅಸಮಾಧಾನದ ನಡುವೆಯೂ ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಿರುವವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗಿದ್ದವರು ಸಚಿವರಾಗುತ್ತಿರುವುದು ಸಂತೋಷ ತಂದಿದೆ. ನೂತನ ಸಚಿವರಿಂದ ಅಭಿವೃದ್ಧಿ ಸಾಧ್ಯವಾಗಲಿ. ಸಂದರ್ಭ, ಸಮಯ ಬಂದಾಗ ನನಗೂ ಸ್ಥಾನ ಸಿಗುತ್ತದೆ. ರಾಜಕಾರಣದಲ್ಲಿ ಇದೆಲ್ಲ ಸಹಜ. ಮುಂದಿನ ದಿನಗಳಲ್ಲಿ ಸಚಿವನಾಗುವ ನಿರೀಕ್ಷೆ ಇದೆ ಎಂದು ಮಾಜಿ ಶಾಸಕ ಎಚ್. ವಿಶ್ವನಾಥ್ ಹೇಳಿದ್ದಾರೆ. ಜೆಡಿಎಸ್ ತೊರೆದು […]

ಶಾಸಕ ತನ್ವೀರ್‌ಸೇಠ್ ರವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಸಂಸದ ಪ್ರತಾಪ್​ ಸಿಂಹ

Friday, January 10th, 2020
pratap-simha

ಮೈಸೂರು : ಕಳೆದ ನವೆಂಬರ್‌ ನಲ್ಲಿ ದುಷ್ಕರ್ಮಿಯೊಬ್ಬನಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಶಾಸಕ ತನ್ವೀರ್‌ಸೇಠ್ ಅವರನ್ನು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಗುರುವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ರಾಜಕೀಯ ವೇದಿಕೆಗಳಲ್ಲೂ ಅತ್ಯಂತ ಅಪ್ತರಾಗಿರುತ್ತಿದ್ದ ತನ್ವೀರ್‌ಸೇಠ್ ಹಾಗೂ ಪ್ರತಾಪ್ ಸಿಂಹ ನಡುವೆ ಒಳ್ಳೆಯ ಒಡನಾಟವಿದೆ. ತನ್ವೀರ್ ಸೇಠ್ ಹಲ್ಲೆಗೊಳಗಾದ ಮರುದಿನವೇ ಪ್ರತಾಪ್ ಸಿಂಹ ಆಸ್ಪತ್ರೆಗೆ ಭೇಟಿ ನೀಡಿದ್ದರು. ಹಲ್ಲೆ ಬಳಿಕ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತನ್ವೀರ್‌ಸೇಠ್, ಆರೋಪಿಗಳ ಗುರುತು ಪತ್ತೆ ಮಾಡಲು ನಿನ್ನೆ ಮೈಸೂರಿಗೆ ಬಂದಿದ್ದಾರೆ. ಸದ್ಯ […]

ಅಯೋಧ್ಯೆಯಲ್ಲಿ ನಡೆದಿದ್ದು ಧರ್ಮ ಸಭೆಯಲ್ಲ.. ಅದು ರಾಜಕೀಯ ಸಭೆ: ಮಹೇಂದ್ರ ಕುಮಾರ್​

Monday, December 3rd, 2018
manglore

ಮಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಯಾವುದೇ ಅಡೆತಡೆಗಳಿಲ್ಲ, ಆದರೂ ಮಂದಿರ ಕಟ್ಟುತ್ತಿಲ್ಲ. ಅಯೋಧ್ಯೆಯಲ್ಲಿ ನಡೆದಿದ್ದು ಧರ್ಮ ಸಭೆಯಲ್ಲ. ಅದು ರಾಜಕೀಯ ಸಭೆ ಎಂದು ನಿರ್ಮೋಹಿ ಅಖಾಡದ ಗುರುಗಳು ಹೇಳಿದ್ದಾರೆ. ನಗರದ ನಂತೂರಿನಲ್ಲಿ‌ ಅಭಿಮತ ಮಂಗಳಾ ಆಯೋಜಿಸಿದ್ದ ಜನನುಡಿ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮಂದಿರ ಕಟ್ಟುವುದಕ್ಕೆ ಯಾರ ವಿರೋಧವೂ ಇಲ್ಲವೆಂದು ಅಯೋಧ್ಯೆಯ ಅನ್ಸಾರಿ ಹೇಳಿದ್ದಾರೆ. ಏಕೆಂದರೆ ಇದು ರಾಜಕೀಯ ಪ್ರೇರಿತ ಕುತಂತ್ರ ಎಂದು ನಮ್ಮ ಧ್ವನಿ ಸಂಘಟನೆಯ ಮಹೇಂದ್ರ ಕುಮಾರ್ ಆರೋಪಿಸಿದರು. ನರೇಂದ್ರ ಮೋದಿಯವರು ಎಲ್ಲಾ […]