ಬಸ್ ನಿಲ್ದಾಣದ ಬಳಿ ಇಬ್ಬರು ಯುವಕರೊಂದಿಗೆ ಹಿಂದೂ ಯುವತಿ ಪತ್ತೆ

Thursday, October 12th, 2023
ಬಸ್ ನಿಲ್ದಾಣದ ಬಳಿ ಇಬ್ಬರು ಯುವಕರೊಂದಿಗೆ ಹಿಂದೂ ಯುವತಿ ಪತ್ತೆ

ಬಂಟ್ವಾಳ : ಅನ್ಯಕೋಮಿನ ಯುವಕರೊಂದಿಗೆ ಹಿಂದೂ ಯುವತಿ ಪತ್ತೆಯಾದ ಘಟನೆ ವಿಟ್ಲ ಸಮೀಪದ ಪೆರುವಾಯಿಯಲ್ಲಿ ನಡೆದಿದೆ. ಇಬ್ಬರು ಅನ್ಯಕೋಮಿನ ಯುವಕರೊಂದಿಗೆ ಹಿಂದೂ ಯುವತಿಯೋರ್ವಳು ಪತ್ತೆಯಾಗಿದ್ದು, ಮೂವರೂ ಕೇರಳ ಮೂಲದವರೆನ್ನಲಾಗಿದೆ. ಪೆರುವಾಯಿ ಬಸ್ ನಿಲ್ದಾಣದ ಬಳಿ ಮೂವರು ಅನುಚಿತವಾಗಿ ವರ್ತಿಸುತ್ತಿದ್ದರೆನ್ನಲಾಗುತ್ತಿದ್ದು, ಈ ಬಗ್ಗೆ ಗಮನಿಸಿದ ಸ್ಥಳೀಯರು ಅವರನ್ನು ವಿಚಾರಿಸಿದ್ದಾರೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ ಎಂದು ತಿಳಿದುಬಂದಿದೆ.

ಅಮಲು ಪದಾರ್ಥ ಸೇವಿಸಿ ಮನೆಗೆ ಬಂದ ಮಗನನ್ನು ಕೊಡಲಿಯ ಮರದ ಹಿಡಿಯಿಂದ ಹೊಡೆದು ಕೊಲೆ ಮಾಡಿದ ತಂದೆ

Thursday, February 24th, 2022
dinesh

ವಿಟ್ಲ : ತಂದೆ ತನ್ನ ಮಗನನ್ನೇ ಹೊಡೆದು ಕೊಲೆಗೈದ ಘಟನೆ ವಿಟ್ಲಮುಡ್ನೂರು ಗ್ರಾಮದ ಕಾಂತಮೂಲೆ ಎಂಬಲ್ಲಿ ಫೆ.23ರಂದು ರಾತ್ರಿ ನಡೆದಿದೆ. ವಿಟ್ಲ ಮುಡ್ನೂರು ಗ್ರಾಮದ ಕಾಂತಮೂಲೆ ನಿವಾಸಿ ದಿನೇಶ್(40)ರವರು ಕೊಲೆಯಾದವರು. ಕಾಂತಮೂಲೆಯ ಮನೆಯಲ್ಲಿ ತಂದೆ ವಸಂತ ಗೌಡ ಮತ್ತು ಮಗ ಮಾತ್ರವೇ ವಾಸವಾಗಿದ್ದು, ಮೃತ ದಿನೇಶನು ಪ್ರತಿ ದಿನ ಅಮಲು ಪದಾರ್ಥ ಸೇವಿಸಿ ಮನೆಗೆ ಬಂದು ತಂದೆಯಲ್ಲಿ ಗಲಾಟೆ ಮಾಡುತ್ತಿದ್ದು ಇದರಿಂದ ತಂದೆ ವಸಂತ ಗೌಡ ಅದೇ ಕೋಪದಿಂದ ಫೆ.23ರಂದು ರಾತ್ರಿ ಕೊಡಲಿಯ ಮರದ ಹಿಡಿಯಿಂದ ದಿನೇಶನ ತಲೆ ಹಾಗೂ ಮುಖದ […]

ಎಸ್ಎಸ್ಎಲ್ ಸಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

Tuesday, January 4th, 2022
sandeep

ಪುತ್ತೂರು:  ಕೋವಿಡ್ ನಿಯಮಗಳಿಂದ ಬೇಸರಗೊಂಡ  ಎಸ್ ಎಸ್ ಎಲ್ ಸಿ ಓದುತ್ತಿರುವ ವಿದ್ಯಾರ್ಥಿಯೊರ್ವ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ವಿಟ್ಲ ಸಮೀಪದ ಅಳಿಕೆ ಗ್ರಾಮದ ನೆಕ್ಕಿತಪುಣಿ ಎಂಬಲ್ಲಿ ಜ . 4 ರಂದು ನಡೆದಿದೆ. ಅಳಿಕೆ ಗ್ರಾಮದ ನೆಕ್ಕಿತಪುಣಿ ನಿವಾಸಿ ಸವರ್ ಡಿ ಸೋಜ ಅವರ ಪುತ್ರ ಸಂದೀಪ್ ಅನಿಸಿತ್ ಡಿಸೋಜ(15) ಮೃತಪಟ್ಟ ಅಪ್ರಾಪ್ತ ಬಾಲಕ. ಸೋಮವಾರ ರಾತ್ರಿ ತನ್ನ ಕೋಣೆಯಲ್ಲಿ ಮಲಗಿದ್ದ ಈತ ಬೆಳಿಗ್ಗೆ ಎಷ್ಟು ಹೊತ್ತಾದರೂ ಎದ್ದಿರಲಿಲ್ಲ. ಹೀಗಾಗಿ ಮನೆಯವರು ಕೋಣೆಯೊಳಗೆ ಹೋಗಿ ನೋಡಿದಾಗ ಮೃತದೇಹ […]

ವಿಟ್ಲದಲ್ಲಿ ಭಗವತ್ ಧ್ವಜ ತೆರವುಗೊಳಿಸಿದ ಪಿಡಿಒ

Sunday, October 3rd, 2021
Bhagavath

ಮಂಗಳೂರು : ವಿಟ್ಲ ವೀರಕಂಬ ಗ್ರಾಮದ  ಮಂಗಳಪದವು ಎಂಬಲ್ಲಿ  ಹಾಕಲಾದ  ಭಗವತ್ ಧ್ವಜವನ್ನು ಪಿಡಿಒ ತೆರವುಗೊಳಿಸಿರುವುದನ್ನು ವಿರೋಧಿಸಿ ಹಿಂದು ಸಂಘಟನೆ ಕಾರ್ಯಕರ್ತರು ವಿಟ್ಲ ಪೊಲೀಸ್ ಠಾಣೆಯಲ್ಲಿ ಜಮಾಯಿಸಿದ್ದು. ಬಳಿಕ ಭಗವತ್ ಧ್ವಜವನ್ನು ಮರು ಹಾಕುವ ಮೂಲಕ ಪ್ರಕರಣ ಇತ್ಯರ್ಥಗೊಂಡಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ತಂಡಗಳ ನಡುವೆ ವಾಗ್ವಾದ ನಡೆದು ಠಾಣೆ ಮೆಟ್ಟಿಲೇರಿತ್ತು.

ಪಂಚಾಯತ್ ಚುನಾವಣೆ ವೇಳೆ ವಿಟ್ಲ ಪರಿಸರದಲ್ಲಿ ಅಲ್ಲಲ್ಲಿ ವಾಮಾಚಾರ

Thursday, December 24th, 2020
BlackMagic

ವಿಟ್ಲ : ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆ ವೇಳೆ ಕೊಳ್ನಾಡು ಗ್ರಾಮದ ಕುಳಾಲು ಎಂಬಲ್ಲಿ ತೆಂಗಿನಕಾಯಿಯಲ್ಲಿ ವಾಮಾಚಾರ ಮಾಡಿರುವುದು ಪತ್ತೆಯಾಗಿದ್ದು ಬಿಜೆಪಿ ಕಾರ್ಯಕರ್ತರು ಕುಳಾಲಿನ ಕಾರಣಿಕ ಶಕ್ತಿ ಶ್ರೀ ವಾರಹಿ ದೈವದ ಮೊರೆ ಹೋಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ತೆಂಗಿನಕಾಯಿ ಒಡೆದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅದರ ಹಿಂಭಾಗದಲ್ಲಿ ಯಾವುದೋ ಲಿಪಿಯಲ್ಲಿ ಬರೆಯಲಾಗಿದೆ.  ಇದನ್ನು ಬಿಜೆಪಿ ಅಭ್ಯರ್ಥಿಯ ಎದುರಾಳಿ ನಡೆಸಿರಬಹುದಾದ ಶಂಕೆ ವ್ಯಕ್ತವಾಗಿದೆ. ಬಿಜೆಪಿ ಅಭ್ಯರ್ಥಿಯ ಮನೆ ಸಂಪರ್ಕ ರಸ್ತೆಯಲ್ಲಿ ಮುಸ್ಸಂಜೆ ಹೊತ್ತಿಗೆ ಯಾವುದೋ ಲಿಪಿಯಲ್ಲಿ ಬರೆದು ತೆಂಗಿನಕಾಯಿ ಒಡೆದ ಸ್ಥಿತಿಯಲ್ಲಿ ಕಂಡುಬಂದಿದೆ. ಬಂಡಮುಗೇರು […]

ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

Friday, December 11th, 2020
shankara Narayana

ವಿಟ್ಲ: ಕೆಎಸ್ ಆರ್ ಟಿಸಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಾವನ್ನಪ್ಪಿದ್ದಾರೆ. ವಿಟ್ಲ ನೆತ್ರಕೆರೆ ನಿವಾಸಿ ಶಂಕರನಾರಾಯಣ ಭಟ್ (58) ಸಾವನ್ನಪ್ಪಿದ್ದು, ಅವರು ಗುರುವಾರ ತನ್ನ ಬೈಕಿನಲ್ಲಿ ವಿಟ್ಲಕ್ಕೆ ಆಗಮಿಸುತ್ತಿದ್ದಾಗ ಫರಂಗಿಪೇಟೆಯಲ್ಲಿ ಕೆಎಸ್ ಆರ್ ಟಿಸಿ ಬಸ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮುಂಜಾನೆ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಮಂಗಳೂರು ಲೋಕಾಯುಕ್ತ ಇಲಾಖೆಯ ಚಾಲಕ ವಿಟ್ಲದ ನಿವಾಸಿ ಲಾಡ್ಜ್‌ನಲ್ಲಿ ನಿಗೂಢ ಆತ್ಮಹತ್ಯೆ..!

Thursday, August 13th, 2020
lokesh

ವಿಟ್ಲ ; ಮಂಗಳೂರು ಲೋಕಾಯುಕ್ತ ಇಲಾಖೆಯಲ್ಲಿ ಚಾಲಕರಾಗಿದ್ದ ಕೊಳ್ನಾಡು ಗ್ರಾಮದ ನಿವಾಸಿ ಚೆನ್ನರಾಯಪಟ್ಟಣದ ಲಾಡ್ಜ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಕಾರಣ ನಿಗೂಢವಾಗಿದೆ. ಕೊಳ್ನಾಡು ಗ್ರಾಮದ ಮಂಕುಡೆ ನಿವಾಸಿ ಸೀನ ಆಚಾರ್ಯರ ಪುತ್ರ ಲೋಕೇಶ್೩೫)ಮೃತಪಟ್ಟ ಚಾಲಕ. ಕಳೆದ ಕೆಲವರ್ಷಗಳಿಂದ ಮಂಗಳೂರು ಲೋಕಾಯುಕ್ತ ಇಲಾಖೆಯಲ್ಲಿ ಚಾಲಕನಾಗಿ ಕರ್ತವ್ಯದಲ್ಲಿದ್ದ ಲೋಕೇಶ್ ಮಂಗಳವಾರ ಸಂಜೆಯಿಂದ ಮೇಲಾಧಿಕಾರಿಗಳಲ್ಲಿ ಮಾಹಿತಿ ನೀಡದೆ ನಿಗೂಢವಾಗಿ ನಾಪತ್ತೆಯಾಗಿದ್ದರು. ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದ ನಂದಗೋಕುಲ ಲಾಡ್ಜ್ ನಲ್ಲಿ ಮಂಗಳವಾರ ರಾತ್ರಿ ೧೦ಗಂಟೆಯ ಸುಮಾರಿಗೆ ಲೋಕೇಶ್ ರೂಮ್ ಪಡೆದಿದ್ದರೆನ್ನಲಾಗಿದೆ. ಬುಧವಾರ […]

ವಿಟ್ಲದ ಹಾಳೆತಟ್ಟೆ ಕಂಪನಿಯ 9ನೌಕರರಿಗೆ ಕೊರೊನಾ ಸೋಂಕು ದೃಡ, ಕಂಪೆನಿ ಸೀಲ್ ಡೌನ್

Wednesday, July 29th, 2020
Vitla Factory

ವಿಟ್ಲ : ಕೊಡಂಗಾಯಿ ಬಲಿಪಗುಳಿಯಲ್ಲಿರುವ ಇಕೋ-ಬ್ಲಿಝ್  ಕಂಪನಿಯ 9ನೌಕರರಿಗೆ ಕೊರೊನಾ ಸೋಂಕು ದೃಡ ವಾಗಿದ್ದು,  ಸುಮಾರು  300ಕ್ಕೂ ಹೆಚ್ಚಿನ ಕಾರ್ಮಿಕರಲ್ಲಿ ಆತಂಕ ಮಡುಗಟ್ಟಿದೆ. ಹಾಳೆತಟ್ಟೆ ತಯಾರಿಕೆಯಲ್ಲಿ ಅಂತರ್ರಾಷ್ಟೀಯ ಮಾರುಕಟ್ಟೆ ಹೊಂದಿರುವ ಇಕೋ-ಬ್ಲಿಝ್ ಕಂಪೆನಿಯಲ್ಲಿ ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹೊರರಾಜ್ಯಗಳ ಸಾಕಷ್ಟು ಜನ ಕಾರ್ಮಿಕರಿದ್ದಾರೆ. ಅದೇ ರೀತಿ ಸ್ಥಳೀಯರು ಕೂಡಾ ಸಾಕಷ್ಟು ಸಂಖ್ಯೆಯಲ್ಲಿ ದುಡಿಯುತ್ತಿದ್ದಾರೆ. ಇದೀಗ 9ಕಾರ್ಮಿಕರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು ಮಂಗಳವಾರ ಕಂಪೆನಿಗೆ ಆಗಮಿಸಿದ ಟಾಸ್ಕ್ ಫೋರ್ಸ್ ಅಧಿಕಾರಿಗಳ ತಂಡ ಸೀಲ್ ಡೌನ್ ಮಾಡಿದ್ದಾರೆ. ಮುನ್ನೆಚ್ಚರಿಕೆಯ […]

ವಿಟ್ಲ : ದ್ವಿಚಕ್ರ ವಾಹನ ಜೊತೆ ಸೇತುವೆಯಿಂದ ನದಿಗೆ ಬಿದ್ದು ಯುವಕ ಮೃತ್ಯು

Wednesday, November 6th, 2019
Vitla

ವಿಟ್ಲ : ಯುವಕನೋರ್ವ ದ್ವಿಚಕ್ರ ವಾಹನ ಜೊತೆ ಸೇತುವೆಯಿಂದ ನದಿಗೆ ಬಿದ್ದು ಸಾವನ್ನಪ್ಪಿದ ಘಟನೆ ಕಸಬಾ ಗ್ರಾಮದ ನೆಲ್ಲಿಗುಡ್ಡೆಯಲ್ಲಿ ನಡೆದಿದೆ. ಮಡಿಕೇರಿ ನಿವಾಸಿಯಾಗಿರುವ ಸುನಿಲ್ ಮೃತ ದುರ್ದೈವಿ. ವಿಟ್ಲ ಕಸಬಾ ಗ್ರಾಮದ ನೆಲ್ಲಿಗುಡ್ಡೆಯ ಬಂಧುಗಳ ಮನೆಗೆ ಬಂದಿದ್ದ ಯುವಕ ಸುನಿಲ್, ದ್ವಿಚಕ್ರ ವಾಹನದಲ್ಲಿ ಸೇತುವೆಯ ಮೇಲೆ ಸಂಚರಿಸುವಾಗ ಆಕಸ್ಮಿಕವಾಗಿ ನದಿಗೆ ಬಿದ್ದಿರಬೇಕೆಂದು ಊಹಿಸಲಾಗಿದೆ. ಸೇತುವೆ ನಿರ್ಮಾಣ ಹಂತದಲ್ಲಿದ್ದು, ಇನ್ನೂ ತಡೆಗೋಡೆ ಕಾಮಗಾರಿ ಬಾಕಿಯಿದೆ. ರಾತ್ರಿ ಹೊತ್ತಿನಲ್ಲಿ ಸೇತುವೆ ಗಮನಕ್ಕೆ ಬರದೆ ಈ ಅಪಘಾತ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಈತ […]

ವಿಟ್ಲ : ಬಡ ಹುಡುಗನಿಗೆ ಒಲಿದು ಬಂತು ವಿದೇಶಿ ಉನ್ನತ ಶಿಕ್ಷಣ

Friday, October 18th, 2019
Vitla

ವಿಟ್ಲ : ಕೆಳ ಮಧ್ಯಮ ವರ್ಗದಲ್ಲಿ ಜನಿಸಿದರೂ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಬೇಕೆಂಬ ಕನಸನ್ನು ಪ್ಲೇವನ್ ಗ್ಲೆನ್ ಮಸ್ಕರೇಂಞಸ್ ನನಸು ಮಾಡಿಕೊಳ್ಳುವ ಮೂಲಕ ಛಲ ಹಠದಿಂದ ಏನನ್ನೂ ಸಾಧಿಸಬಹುದು ಎಂಬುದಕ್ಕೆ ನಿದರ್ಶನವಾಗಿದ್ದಾರೆ. ಶ್ರೀಮಂತರು ವಿದೇಶಕ್ಕೆ ತೆರಳಿ ಉನ್ನತ ಶಿಕ್ಷಣ ಪಡೆಯುವುದನ್ನು ನೋಡಿದ ತಾನೂ ಒಂದು ದಿನ ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸ ಪಡೆದು, ತಾಯ್ನಡಿಗೆ ಮರಳಿ ಕೆಲಸ ಮಾಡುತ್ತ ಸಮಾಜಕ್ಕೆ, ದೇಶಕ್ಕೆ ಕೊಡುಗೆ ಕೊಡಬೇಕೆಂಬ ಕನಸು ಕಂಡವರು ವಿಟ್ಲ ನಿವಾಸಿ ಪ್ಲೇವನ್ ಗ್ಲೆನ್ ಮಸ್ಕರೇಂಞಸ್. ಇವರ ತಂದೆ ಫೆಲೆಕ್ಸ್ […]