Blog Archive

ಶಿಕ್ಷಕಿ ಕೊರೋನಾ ಚಿಕಿತ್ಸೆಗೆ ಸ್ಪಂದಿಸಿದ ಸಿಎಂ ಹಾಗೂ ಶಿಕ್ಷಣ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಅಭಯಚಂದ್ರ ಜೈನ್

Thursday, October 15th, 2020
Abhayachandra Jain

ಮಂಗಳೂರು : ದೇಶ ಕೊರೊನದಿಂದ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದರೂ  ಪ್ರಧಾನಿ ಮೋದಿಯವರು 8 ಸಾವಿರ ಕೋಟಿ ರೂ.ಯ ವಿಮಾನ ಖರೀದಿಸಿದ್ದಾರೆ. ಕೊರೊನಾ ಸಂಕಷ್ಟದ ಕಾಲದಲ್ಲಿಯೂ ಈ ರೀತಿಯ ಖರೀದಿ ಎಷ್ಟು ಸಮಂಜಸ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಪ್ರಶ್ನಿಸಿದ್ದಾರೆ. ನಗರದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊರೊನಾದಲ್ಲಿ ಬಳಲುತ್ತಿರುವ ಜನತೆಗೆ ಸಂತಾಪ ಹಾಗೂ ಅವರ ಆಸ್ಪತ್ರೆಗಳ ಖರ್ಚು-ವೆಚ್ಚಗಳನ್ನು‌ ಸರ್ಕಾರ ಭರಿಸಿ, ಸಾಂತ್ವನ ಹೇಳಬೇಕಾಗಿರುವ ಕಾರ್ಯ ಈಗ ಆಗಬೇಕಾಗಿದೆ ಎಂದು ಹೇಳಿದರು. ಸಾವಿರಾರು ಸಂಖ್ಯೆಯಲ್ಲಿ ಶಿಕ್ಷಕರು ತಮ್ಮ ಜೀವವನ್ನು […]

ಸಿಎಂ ಕಾರ್ಯದರ್ಶಿ ವಾಹನ ಡಿಕ್ಕಿ : ಆಟೋ ಚಾಲಕನಿಗೆ ಗಾಯ

Tuesday, December 31st, 2019
accident

ಬೆಂಗಳೂರು : ಸಿಎಂ ಯಡಿಯೂರಪ್ಪನವರ ಕಾರ್ಯದರ್ಶಿ ವಾಹನ ಅಪಘಾತಕ್ಕೀಡಾಗಿರುವ ಘಟನೆ ಇಲ್ಲಿನ ಯಶವಂತಪುರದ ಬಳಿ ನಡೆದಿದೆ. ತಮ್ಮ ನಿವಾಸವಿರುವ ಡಾಲರ್ಸ್ ಕಾಲೋನಿಯಿಂದ ತುಮಕೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಸಿಎಂ ಕಾರ್ಯದರ್ಶಿ ಸೆಲ್ವಕುಮಾರ್ ಬಳಸುತ್ತಿದ್ದ Ka 01, G 6661 ನಂಬರ್ ಪ್ಲೇಟ್ ಹೊಂದಿದ್ದ ಇನ್ನೋವಾ ಕಾರು ಅಪಘಾತಕ್ಕೀಡಾಗಿದೆ. ಆದರೆ ಘಟನೆ ವೇಳೆ ಸೆಲ್ವಕುಮಾರ್ ಸಿಎಂ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಇದೆ. ಯಶವಂತಪುರದ ಬಳಿ ಅತಿ ವೇಗವಾಗಿ ಬಂದ‌ ಇನ್ನೋವಾ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಯ ಡಿವೈಡರ್ಗೆ ಡಿಕ್ಕಿ […]

ಬಿಜೆಪಿ ಕಚೇರಿ ಮುಂದೆ ಸಾರ್ವಜನಿಕ ಸಂಚಾರ ಬಂದ್

Friday, September 6th, 2019
badhrate

ಬೆಂಗಳೂರು : ಸಿಎಂ ನಿವಾಸದ ಮುಂದೆ ಸಾರ್ವಜನಿಕರ ಮುಕ್ತ ಸಂಚಾರ ನಿರ್ಬಂಧ ಮಾಡಿದ ಬೆನ್ನಲ್ಲೇ ಇದೀಗ ಬಿಜೆಪಿ ಕಚೇರಿ ಮುಂದೆಯೂ ಸಿಎಂ ಇರುವ ವೇಳೆ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಜನರು ಪರದಾಡುವಂತಾಗಿದೆ. ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಮಾಜಿ ಸಚಿವ ಡಿ ಕೆ ಶಿವಕುಮಾರ್ ಬಂಧನ ಖಂಡಿಸಿ ಬಿಜೆಪಿ ಕಚೇರಿಗೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕುವ ಸಾಧ್ಯತೆ ಹಿನ್ನಲೆಯಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಆದರೆ, ಮುಖ್ಯಮಂತ್ರಿಗಳು ಬಿಜೆಪಿ ಕಚೇರಿಗೆ ಬರುವ ವೇಳೆ […]

ಶಿವಮೊಗ್ಗ : ಪ್ರವಾಹ ಪರಿಹಾರ ಸಭೆಯಲ್ಲಿ ಸಿಎಂ ಭಾಗಿ

Saturday, August 31st, 2019
shivamugga

ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಖಾತೆ ಸಚಿವ ಕೆ ಎಸ್ ಈಶ್ವರಪ್ಪರನ್ನು ಸಿಎಂ ಬಿ ಎಸ್ ಯಡಿಯೂರಪ್ಪನವರು ಘೋಷಣೆ ಮಾಡಿದ್ದಾರೆ. ಇಂದು ಶಿವಮೊಗ್ಗ ಜಿಲ್ಲಾ ಪಂಚಾಯತ್‌ನಲ್ಲಿ ನಡೆದ ಜಿಲ್ಲಾ ಪ್ರವಾಹ ಪರಿಹಾರ ಸಭೆಯಲ್ಲಿ ಭಾಗಿಯಾಗಿ ಸಿಎಂ ಈ ಘೋಷಣೆ ಮಾಡಿದರು. ಇನ್ನು ಮುಂದೆ ಈಶ್ವರಪ್ಪ ಜಿಲ್ಲೆಯ ಎಲ್ಲಾ ಸಭೆಗಳನ್ನು ನಡೆಸಲಿದ್ದು, ಅವರಿಗೆ ಎಲ್ಲಾ ಅಧಿಕಾರಿಗಳು ಸಹಕಾರ ನೀಡಬೇಕು ಎಂದರು. ಇದೇ ವೇಳೆ ನೆರೆ ಪರಿಹಾರದ ಕುರಿತು ಅಧಿಕಾರಿಗಳಿಂದ ಮಾಹಿತಿ […]

ಬೆಳ್ತಂಗಡಿ : ಮನೆ ಕಟ್ಟಲು ಐದು ಲಕ್ಷ, ಮನೆಯಿಲ್ಲದವರಿಗೆ ಐದು ಸಾವಿರ ಬಾಡಿಗೆ , ತಕ್ಷಣದ ಪರಿಹಾರ ಹತ್ತು ಸಾವಿರ ಘೋಷಿಸಿದ ಸಿಎಂ

Monday, August 12th, 2019
Kakkavu bridge

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದ ಉಂಟಾದ ನಷ್ಟಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸಮರೋಪಾದಿ ಯಲ್ಲಿ ಪರಿಹಾರ ಘೋಷಿಸಿದ್ದಾರೆ. ವಿಮಾನದ ಮೂಲಕ ಮಂಗಳೂರಿಗೆ 11.20 ಕ್ಕೆ ಬಂದಿಳಿದ ಸಿಎಂ ಬೆಳ್ತಂಗಡಿ ಗೆ ತೆರಳಿ ನೆರೆಯಿಂದ ಕೊಚ್ಚಿ ಹೋದ ಕುಕ್ಕಾವು ಸೇತುವೆಗೆ ಭೇಟಿ ನೀಡಿದ ಬಳಿಕ ಕುಕ್ಕಾವು ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸಿದರು. ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು ಮಳೆಯಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮನೆ ನಿರ್ಮಾಣದ ತನಕ 5 ಸಾವಿರ ತಿಂಗಳಿಗೆ ಬಾಡಿಗೆ ಹಣ ಮತ್ತು 5 ಲಕ್ಷ ಪರಿಹಾರ ನೀಡಲಾಗುವುದು […]

ಸಚಿವ ಶಿವಾನಂದ ಪಾಟೀಲರಿಗೆ ಸಿಎಂ ಆಗುವ ಅರ್ಹತೆ ಇದೆ: ಪ್ರಭಾಕರ್​ ಕೋರೆ

Thursday, September 27th, 2018
prabhakar-kore

ಬೆಳಗಾವಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶಿವಾನಂದ ಪಾಟೀಲ್ ಹಿರಿಯ ರಾಜಕಾರಣಿಯಾಗಿದ್ದು, ಅವರಿಗೆ ಸಿಎಂ ಆಗುವ ಎಲ್ಲ ಅರ್ಹತೆ ಇದೆ ಎಂದು ಕೆಎಲ್‌ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದ್ದಾರೆ. ಬೆಳಗಾವಿಯ ಕೆಎಲ್‌ಇ ಶತಮಾನೋತ್ಸವ ಸಭಾಭವನದಲ್ಲಿ ನಡೆದ ಸ್ಕಿನ್‌ ಬ್ಯಾಂಕ್‌ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಿವಾನಂದ ಪಾಟೀಲರು 6 ಸಲ ಶಾಸಕರಾಗಿದ್ದಾರೆ. ಅವರು ಬೇರೆ ಬೇರೆ ಕ್ಷೇತ್ರ ಹಾಗೂ ಬೇರೆ ಪಕ್ಷಗಳಿಂದ ಗೆದ್ದಿದ್ದು ವಿಶೇಷ. ಶಿವಾನಂದ ಪಾಟೀಲ ಉತ್ತರ ಕರ್ನಾಟಕ […]

ಆರ್ ಎಸ್ ಎಸ್, ಬಿಜೆಪಿಯ ಕಾರ‍್ಯಕರ‍್ತರನ್ನು ಉಗ್ರಗಾಮಿ ಎಂದ ಸಿಎಂಗೆ ಸಂಘಪರಿವಾರವೇ ಉತ್ತರ ಕೊಡಲಿದೆ- ಡಿ ವೇದವ್ಯಾಸ ಕಾಮತ್

Monday, January 15th, 2018
Devdas-kamath

ಮಂಗಳೂರು :ಕಾಂಗ್ರೆಸ್ಸಿನ ಕೊನೆಯ ಮುಖ್ಯಮಂತ್ರಿಯಾಗಿ ಅಧಿಕಾರದಿಂದ ಕೆಳಗೆ ಇಳಿಯಲು ದಿನಗಣನೆ ಮಾಡುತ್ತಿರುವ ಸಿದ್ಧರಾಮಯ್ಯ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಭಾರತೀಯ ಜನತಾ ಪಾರ‍್ಟಿಯ ಕಾರ‍್ಯಕರ‍್ತರನ್ನು ಉಗ್ರಗಾಮಿಗಳು ಎಂದು ಕರೆದಿರುವುದು ಅವರು ಸೋಲಿನ ಭಯದಿಂದ ಕಂಗೆಟ್ಟಿರುವ ಮುನ್ಸೂಚನೆ ಎಂದು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ. ಲೋಕಸಭೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ಕೊಟ್ಟು ಬಿಜೆಪಿಯ ಕೈಯಲ್ಲಿ ರಾಷ್ಟ್ರದ ಚುಕ್ಕಾಣಿ ನೀಡಿದ ಭಾರತೀಯರು ಬಿಜೆಪಿಯ ಮೇಲೆ ಇಟ್ಟ ವಿಶ್ವಾಸವನ್ನು ಕೂಡ ಸಿದ್ಧರಾಮಯ್ಯ ಈಗ ಲೇವಡಿ […]

ಆತ್ಮರಕ್ಷಣೆಗೆ ಕರಾಟೆ ಕಲಿಯಿರಿ: ಹೆಣ್ಣುಮಕ್ಕಳಿಗೆ ಸಿಎಂ ಕರೆ

Saturday, November 4th, 2017
karate championship

ಮಂಗಳೂರು: ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದನ್ನು ದಿಟ್ಟವಾಗಿ ಎದುರಿಸುವ ಸಲುವಾಗಿ ಹೆಣ್ಣುಮಕ್ಕಳು ಆತ್ಮರಕ್ಷಣೆಗಾಗಿ ಕರಾಟೆ ಕಲಿಯುವುದು ಅಗತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಮಂಗಳೂರು ಡೋಜೊ (ರಿ) ಆಯೋಜಿಸಿದ್ದ ಇಂಡಿಯನ್ ಕರಾಟೆ ಚಾಂಪಿಯನ್‌ಶಿಪ್-2017 ಕೂಟ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಇಂದು ಹೆಣ್ಣುಮಕ್ಕಳ ಮೇಲೆ ಪೈಶಾಚಿಕ ದೌರ್ಜನ್ಯಗಳು ನಡೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಲೈಂಗಿಕ ದೌರ್ಜನ್ಯದಂಥ ಕೃತ್ಯಗಳಿಂದ ಪಾರಾಗುವ ಸಲುವಾಗಿ ಹೆಣ್ಣುಮಕ್ಕಳು ಆತ್ಮರಕ್ಷಣೆ ಮಾಡಿಕೊಳ್ಳುವುದು ಅಗತ್ಯ ಎಂದು […]

ಸಿಎಂ ಅವರನ್ನು ಅವಮಾನಿಸಿದ ಪೊಲೀಸ್ ಸಿಬ್ಬಂದಿ ಅಮಾನತು

Friday, November 3rd, 2017
police suspend

ಮಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯದ ಸಂದೇಶ ಪ್ರಕಟಿಸಿದ ಪೊಲೀಸ್ ಸಿಬ್ಬಂದಿಯೊಬ್ಬರನ್ನು ಅಮಾನತು ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣೆಯ ಕಾನ್ಸ್’ಟೇಬಲ್ ರಾಜ ಶಿವಪ್ಪ ಬೆಣ್ಣೆ ಅಮಾನತುಗೊಂಡ ಪೊಲೀಸ್ ಸಿಬ್ಬಂದಿಯಾಗಿದ್ದಾರೆ. ಇವರು ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಮಾನಿಸಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಪ್ರಕಟಿಸಿದ್ದರು. ಇದರ ವಿರುದ್ಧ ದೂರು ಕೂಡ ಸಲ್ಲಿಕೆಯಾಗಿತ್ತು. ಇದೀಗ ಅವರನ್ನು ಕೆಲಸದಿಂದ ವಜಾ ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ […]

ಶಾಸಕ ಜೆ.ಆರ್.ಲೋಬೊ ನೇತೃತ್ವದಲ್ಲಿ ಸಿಎಂ ಗೆ ಮನವಿ

Saturday, October 28th, 2017
JR lobo

ಮಂಗಳೂರು: ಬೆಂಗಳೂರಲ್ಲಿ ಮೀನುಗಾರ ಮುಖಂಡರು ಶಾಸಕ ಜೆ.ಆರ್.ಲೋಬೊ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಂಗಳೂರು 3 ನೇ ಜೆಟ್ಟಿ ನಿರ್ಮಾಣಕ್ಕೆ ಅನುದಾನ ಒದಗಿಸಿ ಕಾಮಗಾರಿಯನ್ನು ಅತ್ಯಂತ ಬೇಗ ಕೈಗೊಳ್ಳುವಂತೆ ಒತ್ತಾಯಿಸಿದರು. ಮುಖ್ಯಮಂತ್ರಿಯವರು ಮೀನುಗಾರ ಅಹವಾಲು ಸ್ವೀಕರಿಸಿ ಶೀಘ್ರ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.