ದೃಷ್ಟಿಮಾಂದ್ಯ ಮಕ್ಕಳ ಶಿಕ್ಷಣಕ್ಕೆ ಪ್ರವೇಶಾವಕಾಶ

Thursday, July 22nd, 2021
visually- impaired

ಮಂಗಳೂರು  : ದೃಷ್ಟಿಮಾಂದ್ಯ ಮಕ್ಕಳ ಜೀವನಕ್ಕೊಂದು ದಾರಿದೀಪವಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಏಕಮಾತ್ರ ಶಿಕ್ಷಣ ಸಂಸ್ಥೆಯಾದ ರೋಮನ್ ಮತ್ತು ಕ್ಯಾಥರಿನ್ ಲೋಬೊ ದೃಷ್ಟಿಮಾಂದ್ಯ ಮಕ್ಕಳ ವಸತಿಯುತ ಶಾಲೆಯು (ಮಂಗಳೂರಿನ ಸೇವಾ ಭಾರತಿಯ ಅಂಗ ಸಂಸ್ಥೆ) ಕಳೆದ 11 ವರ್ಷಗಳಿಂದ ತೊಡಗಿಸಿಕೊಂಡಿದೆ. ಈವರೆಗೆ 30ಕ್ಕೂ ಹೆಚ್ಚು ದೃಷ್ಟಿಮಾಂದ್ಯ ಮಕ್ಕಳು ಈ ವಿಶೇಷ ವಿದ್ಯಾ ಸಂಸ್ಥೆಯಲ್ಲಿ 10ನೇ ತರಗತಿಯನ್ನು ಪೂರೈಸಿ, ಹೆಚ್ಚಿನ ಶಿಕ್ಷಣವನ್ನು ಮುಂದುವರಿಸಿದ್ದಾರೆ. 2021-22 ರ ಶೈಕ್ಷಣಿಕ ವರ್ಷಕ್ಕೆ, 5 ರಿಂದ 16 ವರ್ಷದೊಳಗಿನ ದೃಷ್ಟಿಮಾಂದ್ಯ ಮಕ್ಕಳಿಗೆ, […]

14 ಕೇಂದ್ರಗಳಲ್ಲಿ 14 ಗಣ್ಯರಿಂದ ಕಾರ್ಯಕ್ರಮಕ್ಕೆ ಚಾಲನೆ: 2000 ಗಿಡ ನೆಡುವ ಮೂಲಕ ಹಸಿರು ಕುಕ್ಕೆ ಯೋಜನೆ ಆರಂಭ

Wednesday, July 14th, 2021
Kukke

ಸುಬ್ರಹ್ಮಣ್ಯ : ಕುಮಾರಧಾರ ತಪ್ಪಲಿನ ನಿತ್ಯ ಹರಿದ್ವರ್ಣ ಕಾಡುಗಳ ನಡುವಣ ಇರುವ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯವನ್ನು ಮತ್ತಷ್ಟು ಹಸಿರುಮಯವಾಗಿಸಲು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ಹಮ್ಮಿಕೊಂಡಿದ್ದ ಬೃಹತ್ ವನ ಸಂವರ್ಧನಾ ಕಾರ್ಯಕ್ರಮವು ಮಂಗಳವಾರ ಸಂಪನ್ನವಾಯಿತು. ಏಕಕಾಲದಲ್ಲಿ 14 ಕಡೆ ವಿವಿಧ ಜಾತಿಯ ಸಸ್ಯಗಳನ್ನು 14 ಗಣ್ಯರು ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೋವಿಡ್-19 ಮಾರ್ಗಸೂಚಿಗೆ ಅನುಗುಣವಾಗಿ ಅಗಾಧ ಫಲ ನೀಡುವ ಕಾರ್ಯಕ್ರಮವು ಪುಟ್ಟದಾಗಿ ನೆರವೇರಿತು. ಸೇವಾ ಭಾರತಿ ಸುಳ್ಯ, ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಮತ ಇತರ ಸಂಘ […]

ಧನ್ವಂತರಿ ಹೋಮದಲ್ಲಿ ಪಾಲ್ಗೊಂಡು ಕೊರೊನಾ ಸೋಂಕು ಇಳಿಮುಖವಾಗಲು ಪ್ರಾರ್ಥನೆ ಮಾಡಿದ ಸಚಿವ ಈಶ್ವರಪ್ಪ

Tuesday, May 18th, 2021
Eswarappa

ಶಿವಮೊಗ್ಗ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ  ಕೊರೊನಾ ಸೋಂಕಿತ ರು ಬೇಗ ಗುಣಮುಖರಾಗಲೆಂದು ಮತ್ತು ಸೋಂಕಿತರ ಸಂಖ್ಯೆ ಕಡಿಮೆಯಾಗಲಿ ಎಂದು ಸಚಿವ ಈಶ್ವರಪ್ಪ ಧನ್ವಂತರಿ ಹೋಮದಲ್ಲಿ ಪಾಲ್ಗೊಂಡು ಪ್ರಾರ್ಥನೆ ಮಾಡಿದ್ದಾರೆ ಸೇವಾ ಭಾರತಿ ಹಾಗೂ ಕೋವಿಡ್ ಸುರಕ್ಷಾ ಪಡೆ ವತಿಯಿಂದ ಶಿವಮೊಗ್ಗದ ಶುಭಮಂಗಳ ಸಮುದಾಯ ಭವನದ ಆವರಣದಲ್ಲಿರುವ ದೇವಾಲಯದಲ್ಲಿ,  ಆಯೋಜಿಸಿದ್ದ ಧನ್ವಂತರಿ ಹೋಮದಲ್ಲಿ, ಸಚಿವ ಈಶ್ವರಪ್ಪ ಕುಟುಂಬ ಸಮೇತ ಭಾಗವಹಿಸಿ, ಪೂಜೆ ನೆರವೇರಿಸಿದ್ದಾರೆ. ಈಶ್ವರಪ್ಪ ದಂಪತಿ ಸಮೇತ ಪೂರ್ಣಾಹುತಿ ನೆರವೇರಿಸಿ,  ಕೊರೊನಾ ಇಳಿಕೆಗೆ ಭಗವಂತನಿಗೆ ನಮಿಸಿದ್ದಾರೆ.