ಕಾಲೇಜು ವಿದ್ಯಾರ್ಥಿಯೋರ್ವ ಪ್ರೇಮ ವೈಫಲ್ಯದಿಂದ ರೈಲ್ವೇ ಹಳಿಗೆ ಬಿದ್ದು ಆತ್ಮಹತ್ಯೆ

Sunday, September 19th, 2021
Basayya Vastrada

ಹುಬ್ಬಳ್ಳಿ:  ಕಾಲೇಜು ವಿದ್ಯಾರ್ಥಿಯೋರ್ವ ಪ್ರೇಮ ವೈಫಲ್ಯದಿಂದ ರೈಲ್ವೇ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಅಮರಗೋಳದ ಬಸಯ್ಯ ವಸ್ತ್ರದ ಎಂಬ ಯುವಕ ರೈಲು ಹಳಿಗೆ ತೆಲೆ ಕೊಟ್ಟ ಸಾವನಪ್ಪಿದ ಪ್ರೇಮಿಯಾಗಿದ್ದಾನೆ. ಪಿಯುಸಿ ವ್ಯಾಸಂಗ ಮಾಡಿರುವ ಬಸಯ್ಯ, ಅಮರಗೋಳ ಪ್ರದೇಶದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಯುವತಿ ಬಸಯ್ಯನ ಪ್ರೀತಿಯನ್ನು ನಿರಾಕರಣೆ ಮಾಡಿದ್ದರಿಂದಲೇ ರೈಲು ಹಳಿಗೆ ತೆಲೆ ಕೊಟ್ಟು ಸಾವನಪ್ಪಿದ್ದಾನೆ ಎಂದು ಶಂಕಿಸಲಾಗಿದೆ. ಈತನ ತಂದೆ ಸಿಎಂ ಬಸವರಾಜ ಬೊಮ್ಮಾಯಿಯವರ ತಂದೆ-ತಾಯಿಯವರನ್ನು ಅಂತ್ಯಕ್ರಿಯೆ ಮಾಡಿದ ಪುತ್ಥಳಿ ಕಾವಲು […]

ತಂದೆ, ತಾಯಿಯವರ ಆಶೀರ್ವಾದ ಎಲ್ಲಕ್ಕೂ ಮಿಗಿಲು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Thursday, July 29th, 2021
Bommai

ಹುಬ್ಬಳ್ಳಿ : ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿಸ ಬಸವರಾಜ ಬೊಮ್ಮಾಯಿ ಅವರು , ಹುಬ್ಬಳ್ಳಿ ಧಾರವಾಡ ಅವಳಿನಗರಗಳ ಮಧ್ಯೆ ಅಮರಗೋಳದಲ್ಲಿರುವ ಮಾತೋಶ್ರೀ ಗಂಗಮ್ಮ ಎಸ್ ಬೊಮ್ಮಾಯಿ ಹಾಗೂ ತಂದೆ,ಮಾಜಿಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಸಮಾಧಿಗಳಿಗೆ ಪೂಜೆ ಸಲ್ಲಿಸಿ ,ಗೌರವ ಸಮರ್ಪಿಸಿದರು. ತಂದೆ -ತಾಯಿಯ ಸಮಾಧಿಗೆ ಪ್ರದಕ್ಷಿಣೆ ಹಾಕಿ ಕೆಲನಿಮಿಷ ಮೌನವಾಗಿ ಸ್ಮರಣೆ ಮಾಡಿದರು. ಉಭಯ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿದರು. ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿ ತಂದೆ ,ತಾಯಿಯವರ ಆಶೀರ್ವಾದ ಎಲ್ಲಕ್ಕೂ ಮಿಗಿಲು ಅಧಿಕಾರ […]

ಆಸ್ಪತ್ರೆಯಿಂದ ರೆಮಿಡಿಸಿವರ್ ಕದ್ದು ಮಾರಾಟ : ಪ್ರೇಮಿ ಬಂಧನ

Thursday, June 3rd, 2021
Siddana Gowda

ಹುಬ್ಬಳ್ಳಿ: ಮಾರಕ‌ ಕೊರೊನಾ ವೈರಸ್ ನಿತ್ಯವೂ ನೂರಾರು ಜನರ ಪ್ರಾಣ ಬಲಿ ಪಡೆಯುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಐನಾತಿಗಳು ಮಾತ್ರ ಹಣ ಮಾಡಲು ಹೋಗಿ ಜೈಲು ಸೇರುತ್ತಿದ್ದಾರೆ. ಹೌದು. ಹುಬ್ಬಳ್ಳಿಯಲ್ಲೂ ಕೂಡ ಕೊರೊನಾ ರೋಗಿಗಳ ಪಾಲಿನ ಸಂಜೀವಿನಿಯಾದ ರೆಮಡಸಿವರ್ ಇಂಜಕ್ಷನ್ ಕದ್ದು ಮಾರಾಟ ಮಾಡುತ್ತಿದ್ದ ಪ್ರೇಮಿಗಳು ಪೊಲೀಸರ ಅತಿಥಿಯಾಗಿದ್ದಾರೆ. ಹುಬ್ಬಳ್ಳಿಯ ವೆಂಕಟೇಶ್ವರ ಕಾಲೋನಿಯ ಸಿದ್ದನಗೌಡ ಪಾಟೀಲ್ ಹಾಗೂ ವಿನಾಯಕನಗರದ ರಿಯಾ ವಡ್ಡರ ಎಂಬುವವರೇ ಬಂಧಿತ ಆರೋಪಿಗಳು. ಬೇರೆ ಬೇರೆ ಆಸ್ಪತ್ರೆಯಲ್ಲಿ ಕೆಲಸ‌ ಮಾಡುತ್ತಿದ್ದ ಪ್ರೇಮಿಗಳಿಬ್ಬರು ಹಣ […]

ಹುಬ್ಬಳ್ಳಿ: ಸಿದ್ಯರಾಮಯ್ಯರಿಂದ ಕೊರೊನಾ ರೂಲ್ಸ್ ಬ್ರೇಕ್ !

Friday, May 28th, 2021
sidhramahia

ಹುಬ್ಬಳ್ಳಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇವತ್ತು ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿ ಗೆ ಆಗಮಿಸಿದ್ದರು. ಮೂರು ತಿಂಗಳು ಕಳೆದ ಮೇಲೆ ಸಿದ್ದರಾಮಯ್ಯ ಹುಬ್ಬಳ್ಳಿ ಗೆ ಆಗಮಿಸಿದ್ದರು. ತಾವು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರಕ್ಕೆ ತೆರಳಲು ಇವತ್ತು ಹುಬ್ಬಳ್ಳಿ ಗೆ ಆಗಮಿಸಿದ್ದರು.. ರಸ್ತೆ ಮುಖಾಂತರ ಹುಬ್ಬಳ್ಳಿ ಗೆ ತೆರಳಿದರು..ಕೊರೊನಾ ಕೊವಿಡ19 ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಸಾಮಾಜಿಕ ಅಂತರ ಹಾಗೂ ಮಾಸ್ಕ ಹಾಕಿಕೊಳ್ಳುವಂತೆ ಸರಕಾರ ಆದೇಶ ನೀಡಿದೆ..ಆದರೆ ಸಿದ್ದರಾಮಯ್ಯನವರ ವಾಹನದಲ್ಲಿ ಮಾತ್ರ ಸಾಮಾಜಿಕ ಅಂತರ ಕಾಣಲಿಲ್ಲ. ಹೌದು, […]

ಹುಬ್ಬಳ್ಳಿಗೆ ಜಂಬೋ ಸಿಲಿಂಡರ್ ಕಳಿಸಿಕೊಟ್ಟ ರಿಯಲ್ ಹೀರೋ ಸೋನು ಸೂದ್

Wednesday, May 26th, 2021
Sonu Sood

ಹುಬ್ಬಳ್ಳಿ: ಬಹುಭಾಷ ನಟ ಸೋನು ಸೂದ್ ಅವರು ಕೊರೊನಾ ಸಂಕಷ್ಟ ಕಾಲದಲ್ಲಿ ಅನೇಕರಿಗೆ ಸಹಾಯ ಮಾಡಿದ್ದಾರೆ. ಸದ್ಯ ವಾಣಿಜ್ಯ ನಗರಿ ಹುಬ್ಬಳ್ಳಿಗೂ ಸೋನು ಸೂದ್ ತಮ್ಮ ಆಕ್ಸಿಜನ್ ಸೆಂಟರ್ ವಿಸ್ತರಣೆ ಮಾಡಿದ್ದಾರೆ. ರಾಜ್ಯ ರೈಲ್ವೆ ಎಡಿಜಿಪಿ ಭಾಸ್ಕರ್ ರಾವ್ ಅವರ ಆಸಕ್ತಿ ಹಿನ್ನೆಲೆ ಸೋನು ಉತ್ತರ ಕರ್ನಾಟಕ ಭಾಗದ ಜನರಿಗೆ ಪ್ರಾಣವಾಯು ಒದಗಿಸೋಕೆ ಮುಂದಾಗಿದ್ದಾರೆ. ಅದಕ್ಕಾಗೇ ಹುಬ್ಬಳ್ಳಿಯ ರೈಲ್ವೆ ಪೊಲೀಸ್ ಠಾಣೆ ಆವರಣದಲ್ಲಿ ಆಕ್ಸಿಜನ್ ಸೆಂಟರ್ ಓಪನ್ ಮಾಡಿದ್ದಾರೆ. ಬೆಂಗಳೂರಿನ ಸ್ವ್ಯಾಗ್ ಸಂಸ್ಥೆಯ ಸಹಯೋಗದೊಂದಿಗೆ ಸದ್ಯ ಈ […]

ಹುಬ್ಬಳ್ಳಿ ಮೂರು ಸಾವಿರ ಮಠ ಸರ್ವನಾಶಕ್ಕೆ ಯತ್ನಿಸುತ್ತಿದ್ದಾರೆ, ದಾಖಲೆ ಇದೆ : ದಿಂಗಾಲೇಶ್ವರ ಶ್ರೀ ಆರೋಪ

Thursday, January 28th, 2021
Dingaleshwara Swamy

ಹುಬ್ಬಳ್ಳಿ: ಮೂರು ಸಾವಿರ ಮಠದ ಸರ್ವನಾಶಕ್ಕೆ ಉನ್ನತ ಮಟ್ಟದ ಸಮಿತಿ ಸಿದ್ದವಾಗಿದೆ. ದಿಂಗಾಲೇಶ್ವರ ಶ್ರೀಗಳಿಗೆ ಯಾವತ್ತು ತೊಂದರೆ ಆಗುವುದಿಲ್ಲ. ಮೂರು ಸಾವಿರ ಮಠಕ್ಕೆ ತೊಂದರೆ ಆಗಿದೆ. ಹೀಗಾಗಿ ನಾನು ಮಠದ ಉಳಿಗಾಗಿ ಹೋರಾಟ ಮಾಡುತ್ತಿದ್ದೇನೆ ಎಂದು ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ವಾಗ್ದಾಳಿ ನಡೆಸಿದರು. ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಾನು ಈಗ ಮಠದ ಆಸ್ತಿ ಉಳಿಸಬೇಕು ಎಂದು ಹೋರಾಟ ಮಾಡ್ತಾ ಇದೇನಿ. ನಾನು ಉತ್ತರಾಧಿಕಾರಕ್ಕಾಗಿ ಹೋರಾಟ ನಡೆಸಿಲ್ಲ. ನಾನು ಮಠದ ಆಸ್ತಿ ಉಳಿಸಲು ಹೋರಾಟ ನಡೆಸಿದಾಗ, […]

2.5 ಎಕರೆ ಜಾಗದಲ್ಲಿ ಅರಣ್ಯೀಕರಣ : ಶೆಟ್ಟರ

Thursday, January 28th, 2021
Shetter

ವರದಿ : ಶಂಭು, ಮೆಗಾಮೀಡಿಯಾ ನ್ಯೂಸ್, ಹುಬ್ಬಳ್ಳಿ ಬ್ಯೂರೋ. ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳು ವೇಗವಾಗಿ ಬೆಳೆಯುತ್ತಿರುವ ನಗರಗಳಾಗಿದ್ದು, ಜನಸಂಖ್ಯೆಯ ಅನುಗುಣವಾಗಿ ಹಸಿರು ಜಾಗ ಅಭಿವೃದ್ಧಿಪಡಿಸುವುದು ಅವಶ್ಯಕವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಜಗದೀಶ ಶೆಟ್ಟರ ಹೇಳಿದರು. ಹು-ಧಾ ಸ್ಮಾರ್ಟ್ ಸಿಟಿ ವತಿಯಿಂದ ನಗರದ ತೋಳನಕೆರೆ ಭಿವೃದ್ಧಿಪಡಿಸಲಾಗುತ್ತಿದ್ದು, 2.5 ಎಕರೆ ವಿಸ್ತೀರ್ಣತೆಯನ್ನು ಹೊಂದಿದ್ದು ಇದರಲ್ಲಿ 1/2 ಎಕರೆ ನಗರ ಅರಣ್ಯ ಮತ್ತು 1/2 ಎಕರೆ ಟ್ರೀಪಾರ್ಕ್ ಹಾಗೂ 1/2 ಎಕರೆ […]

ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ: ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ

Sunday, September 6th, 2020
basavaraj

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ನಗರದಲ್ಲಿ ಮಹಾನಗರ ಪಾಲಿಕೆ ಅಡಿಯಲ್ಲಿ ಕೈಗೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಹೇಳಿದರು. ನಗರದಲ್ಲಿ ನಡೆಯುತ್ತಿರುವ ವಿವಿದ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದ ನಂತರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಗೋಕುಲ ಕೈಗಾರಿಕಾ ವಸಹಾತು ಪ್ರದೇಶದಲ್ಲಿ 18.5ಕೋಟಿ ವೆಚ್ಚದಲ್ಲಿ ಮುಖ್ಯರಸ್ತೆ, 8.5 ಕೋಟಿ ವೆಚ್ಚದಲ್ಲಿ ಉಪರಸ್ತೆಗಳನ್ನು ಕಾಂಕ್ರೀಟ್ ನಿಂದ ನಿರ್ಮಿಸಲಾಗುತ್ತಿದೆ. ಕಾಮಗಾರಿ ಪ್ರಗತಿ ಹಂತದಲ್ಲಿ ಇದ್ದು, ಅಕ್ಟೋಬರ್ ವೇಳೆಗೆ […]

ಹುಬ್ಬಳ್ಳಿಯಿಂದ ಗೋವಾ ರಾಜ್ಯಕ್ಕೆ ಸಾರಿಗೆ ಬಸ್​​ ಸಂಚಾರ

Saturday, September 5th, 2020
ambari

ಹುಬ್ಬಳ್ಳಿ : ಹುಬ್ಬಳ್ಳಿಯಿಂದ ಗೋವಾ ರಾಜ್ಯಕ್ಕೆ ಸಾರಿಗೆ ಬಸ್ಗಳ ಸಂಚಾರವನ್ನು ಶನಿವಾರದಿಂದ ಮತ್ತೆ ಆರಂಭಿಸಲಾಗುತ್ತಿದೆ. ಈ ಬಸ್ಗಳು ಗೋಕುಲ್ ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣದಿಂದ ಹೊರಡುತ್ತವೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್ ರಾಮನಗೌಡರ ತಿಳಿಸಿದ್ದಾರೆ. ಲಾಕ್ಡೌನ್ ಪೂರ್ವದಲ್ಲಿ ಹುಬ್ಬಳ್ಳಿಯಿಂದ ಪ್ರತಿದಿನ ಪಣಜಿಗೆ 1 ರಾಜಹಂಸ ಮತ್ತು 8 ವೇಗಧೂತ ಸೇರಿ 9, ವಾಸ್ಕೋಗೆ 1 ಮತ್ತು ಮಡಗಾಂವಗೆ 1 ಒಟ್ಟು 11 ಬಸ್ಗಳು ಗೋವಾ ರಾಜ್ಯಕ್ಕೆ ಸಂಚರಿಸುತ್ತಿದ್ದವು. ಮೊದಲ ಹಂತದಲ್ಲಿ ಪಣಜಿಗೆ ನಾಲ್ಕು (1 ರಾಜಹಂಸ, 3 […]

ಹುಬ್ಬಳ್ಳಿಯ ರೌಡಿ ಷೀಟರ್‌ ಫ್ರೋಟ್ ಇರ್ಫಾನ್‍ ಆಸ್ಪತ್ರೆಯಲ್ಲಿ ಮೃತ

Friday, August 7th, 2020
irfan

ಹುಬ್ಬಳ್ಳಿ:  ಬೀಗರನ್ನು ಬೀಳ್ಕೊಡಲು  ರಸ್ತೆ ಬದಿಯಲ್ಲಿ ನಿಂತಿದ್ದ ವೇಳೆ ಗುಂಡಿನ ಸುರಿಮಳೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಹುಬ್ಬಳ್ಳಿಯ ರೌಡಿ ಷೀಟರ್‌ ಫ್ರೋಟ್ ಇರ್ಫಾನ್‍ (52) ಶುಕ್ರವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮೂಲತಃ ಉತ್ತರಕನ್ನಡ ಜಿಲ್ಲೆಯ ಇರ್ಫಾನ್ ಹೊಟ್ಟೆಪಾಡಿಗಾಗಿ ಧಾರವಾಡಕ್ಕೆ ಬಂದು ಅಲ್ಲಿಯೇ ನೆಲೆಯೂರಿ ತನ್ನ ಅಪರಾಧ ಜಗತ್ತನ್ನು ವಿಸ್ತಾರ ಮಾಡಿಕೊಂಡು ಡಾನ್ ಆಗಿದ್ದ. ಮಗನ ಮದುವೆ ಮುಗಿಸಿ ಅತಿಥಿಗಳನ್ನು ಕಳುಹಿಸಲು ರಸ್ತೆ ಬದಿಯಲ್ಲಿ ಬಂದು ನಿಂತಿದ್ದ ವೇಳೆ ಬೈಕ್‌ನಲ್ಲಿ ಬಂದ ಮೂವರು ಗುಂಡಿನ ಮಳೆಗರೆದಿದ್ದರು. ಇರ್ಫಾನ್ ತಮ್ಮ ಮಗನ ಮದುವೆ […]