ರೈತರ ಮೇಲಿನ ಎಲ್ಲಾ ಕೇಸ್ ವಾಪಸ್ ಪಡೆದ ಸರ್ಕಾರ..!
Saturday, October 6th, 2018ತುಮಕೂರು: ತಾಲೂಕಿನ ಅಜ್ಜಗೊಂಡನಹಳ್ಳಿ ಘನತ್ಯಾಜ್ಯ ವಿಲೇವಾರಿ ಘಟಕದ ವಿರುದ್ಧ ಹೋರಾಟ ನಡೆಸುತ್ತಿದ್ದ ರೈತರ ಮೇಲೆ ಹೂಡಿದ್ದ ಪ್ರಕರಣಗಳನ್ನು ಸರ್ಕಾರ ವಾಪಸ್ ಪಡೆದಿದೆ. ಘಟಕ ವಿರೋಧಿಸಿ 116 ರೈತರ ಮೇಲೆ 307 ಪ್ರಕರಣ ದಾಖಲಿಸಲಾಗಿತ್ತು. ಎಲ್ಲಾ ಮೊಕದ್ದಮೆಗಳನ್ನು ಸರ್ಕಾರ ಯಾವುದೇ ಷರತ್ತಿಲ್ಲದೆ ವಾಪಸ್ ತೆಗೆದುಕೊಂಡಿದೆ. ತುಮಕೂರು ಮಹಾನಗರ ಪಾಲಿಕೆ ವತಿಯಿಂದ 2000 ರಿಂದಲೂ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕ ತೆರೆಯಲು ರೈತರಿಗೆ ಯಾವುದೇ ರೀತಿ ಸೂಚನೆ ನೀಡದೆ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಘಟಕ ಆರಂಭಿಸಬಾರದು ಎಂದು ಸುತ್ತಮುತ್ತಲ ಗ್ರಾಮದ […]