ಸಮುದ್ರಕ್ಕೆ ಹಾರಿದ ಪ್ರಿಯತಮೆಯನ್ನು ರಕ್ಷಿಸಲು ಹೋಗಿ ಪ್ರಾಣಕಳಕೊಂಡ ಯುವಕ

Saturday, January 29th, 2022
loyd

ಉಳ್ಳಾಲ : ಸಮುದ್ರಕ್ಕೆ ಹಾರಿದ ಪ್ರಿಯತಮೆಯನ್ನು ರಕ್ಷಿಸಲು ಮುಂದಾದ ಆಕೆಯ ಪ್ರಿಯಕರ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಸೋಮೇಶ್ವರ ಕಡಲ ಕಿನಾರೆಯಲ್ಲಿ‌ ಶುಕ್ರವಾರ ಸಂಜೆ ವರದಿಯಾಗಿದೆ. ಈ ನಡುವೆ ಯುವತಿಯನ್ನು ಸ್ಥಳೀಯ ಜೀವರಕ್ಷಕ ಈಜುಗಾರರು ರಕ್ಷಿಸಿದ್ದಾರೆ. ಮೃತರನ್ನು ಮುನ್ನೂರು ಗ್ರಾಮದ ಸೋಮನಾಥ ಉಳಿಯ ನಿವಾಸಿ ಲಾಯ್ಡ್ ಡಿಸೋಜ(28) ಯಾನೆ ಲಾಯ್ ಎಂದು ಗುರುತಿಸಲಾಗಿದೆ. ಕೋಟೆಕಾರು ಪಾನೀರು ನಿವಾಸಿ ಅಶ್ವಿತ ಫೆರಾವೊ(22)ಆತ್ಮ ಹತ್ಯೆಗೆ ಯತ್ನಿಸಿ ಪಾರಾದ ಯುವತಿ. ಅಶ್ವಿತಾ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಲಾಯ್ಡ್ ಡಿಸೋಜ ಮತ್ತು ಅಶ್ವಿತಾ […]