Blog Archive

ಸಾಲಕೊಟ್ಟ 26 ಸಾವಿರ ವಾಪಸು ಕೊಟ್ಟಿಲ್ಲ ಎಂದು ಚಾರ್ಮಾಡಿ ಘಾಟಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ

Thursday, August 20th, 2020
Nagaraj Holalkere

ಚಿಕ್ಕಮಗಳೂರು : ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಹೊರಕೆರೆಯ  ವ್ಯಕ್ತಿಯೋರ್ವ ಚಾರ್ಮಾಡಿ ಘಾಟಿಯ ಮಲಯ ಮಾರುತ ಬಳಿ ತನ್ನ ಕಾರಿನಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಕಿಗೆ ಬಂದಿದೆ. ಕಾರಿನಲ್ಲಿ ದೊರೆತ ದಾಖಲೆಗಳ ಪ್ರಕಾರ ಮೃತಪಟ್ಟ ವ್ಯಕ್ತಿಯನ್ನು 44 ವರ್ಷದ ನಾಗರಾಜು ಎಂದು ಗುರುತಿಸಲಾಗಿದೆ. ಈತ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಹೊರಕೆರೆ ದೇವಪುರ ಗ್ರಾಮದವರು ಎನ್ನಲಾಗಿದೆ. ವಿಷ ಸೇವಿಸಿದ ವ್ಯಕ್ತಿಯ ಬಾಯಲ್ಲಿ ನೊರೆ ಬಂದಿಲ್ಲ. ಅಷ್ಟೆ ಅಲ್ದೆ ಜುಲೈ 31ನೇ ತಾರೀಖಿನಂದೆ ಬರೆದಿರೋ ಡೆತ್ ನೋಟ್ ಕೂಡ ಜೇಬಲ್ಲಿರುವುದು  ಸಂಶಯಕ್ಕೆ […]

ಸೇತುವೆಯಿಂದ ಜಿಗಿದು ಪ್ರೇಮಿಗಳಿಬ್ಬರು ಆತ್ಮಹತ್ಯೆ

Friday, August 14th, 2020
Tunga River

ಶಿವಮೊಗ್ಗ: ಇಲ್ಲಿನ ಬೈಪಾಸ್ ರಸ್ತೆಯ ಸೇತುವೆಯಿಂದ ಪ್ರೇಮಿಗಳಿಬ್ಬರು ತುಂಗಾ ನದಿಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹುರುಳಿ ಹಳ್ಳಿ ಗ್ರಾಮದ ಸಂತೋಷ್ (25) ಹಾಗೂ ಕಾಕನಹಸುಡಿ ಗ್ರಾಮದ ಅನುಷಾ (20) ಅವರೇ ಆತ್ಮಹತ್ಯೆಗೆ ಶರಣಾಗಿರುವವರೆಂದು ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.  ನಗರದಲ್ಲಿರುವ ವಿಧಾತ್ರಿ ಭವನ ಹೊಟೇಲ್ ನಲ್ಲಿ ಸಂತೋಷ ಕೆಲಸಮಾಡುತ್ತಿದ್ದ. ಅನುಷಾ ಇತ್ತೀಚೆಗಷ್ಟೇ ಪಿ.ಯು. ಶಿಕ್ಷಣವನ್ನು ಮುಗಿಸಿದ್ದಳು. ಇವರಿಬ್ಬರು ಕೆಲವು ಸಮಯಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಂದು ಮಧ್ಯಾಹ್ನದ ಸಮಯದಲ್ಲಿ ಇವರಿಬ್ಬರು ಇದ್ದಕ್ಕಿದ್ದಂತೆಯೇ ತುಂಗಾ ನದಿಗೆ ಹಾರಿದ್ದಾರೆ, ಕೂಡಲೇ […]

ಮಂಗಳೂರು ಲೋಕಾಯುಕ್ತ ಇಲಾಖೆಯ ಚಾಲಕ ವಿಟ್ಲದ ನಿವಾಸಿ ಲಾಡ್ಜ್‌ನಲ್ಲಿ ನಿಗೂಢ ಆತ್ಮಹತ್ಯೆ..!

Thursday, August 13th, 2020
lokesh

ವಿಟ್ಲ ; ಮಂಗಳೂರು ಲೋಕಾಯುಕ್ತ ಇಲಾಖೆಯಲ್ಲಿ ಚಾಲಕರಾಗಿದ್ದ ಕೊಳ್ನಾಡು ಗ್ರಾಮದ ನಿವಾಸಿ ಚೆನ್ನರಾಯಪಟ್ಟಣದ ಲಾಡ್ಜ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಕಾರಣ ನಿಗೂಢವಾಗಿದೆ. ಕೊಳ್ನಾಡು ಗ್ರಾಮದ ಮಂಕುಡೆ ನಿವಾಸಿ ಸೀನ ಆಚಾರ್ಯರ ಪುತ್ರ ಲೋಕೇಶ್೩೫)ಮೃತಪಟ್ಟ ಚಾಲಕ. ಕಳೆದ ಕೆಲವರ್ಷಗಳಿಂದ ಮಂಗಳೂರು ಲೋಕಾಯುಕ್ತ ಇಲಾಖೆಯಲ್ಲಿ ಚಾಲಕನಾಗಿ ಕರ್ತವ್ಯದಲ್ಲಿದ್ದ ಲೋಕೇಶ್ ಮಂಗಳವಾರ ಸಂಜೆಯಿಂದ ಮೇಲಾಧಿಕಾರಿಗಳಲ್ಲಿ ಮಾಹಿತಿ ನೀಡದೆ ನಿಗೂಢವಾಗಿ ನಾಪತ್ತೆಯಾಗಿದ್ದರು. ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದ ನಂದಗೋಕುಲ ಲಾಡ್ಜ್ ನಲ್ಲಿ ಮಂಗಳವಾರ ರಾತ್ರಿ ೧೦ಗಂಟೆಯ ಸುಮಾರಿಗೆ ಲೋಕೇಶ್ ರೂಮ್ ಪಡೆದಿದ್ದರೆನ್ನಲಾಗಿದೆ. ಬುಧವಾರ […]

ಹೆಂಡತಿ ಹಾಗೂ ಎರಡು ವರ್ಷದ ಮಗಳಿಗೆ ವಿಷ ನೀಡಿ ಆತ್ಮಹತ್ಯೆಗೆ ಶರಣಾದ ಉದ್ಯೋಗಿ

Saturday, July 25th, 2020
Mounesh Pattara

ಧಾರವಾಡ: ಶನಿವಾರ ಬೆಳ್ಳಂಬೆಳಿಗ್ಗೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಧಾರವಾಡದ ಮೆಹಬೂಬ್ ನಗರದಲ್ಲಿ ನಡೆದಿದೆ. ಆತ್ಮಹತ್ಯೆಗೀಡಾದವರನ್ನು ಟಾಟಾ ಮಾರ್ಕೋಪೋಲೋ ಕಂಪನಿಯ ಉದ್ಯೋಗಿ ಮೌನೇಶ್ ವೀರಪ್ಪ ಪತ್ತಾರ ( 36 ) ಎಂದು ಗುರುತಿಸಲಾಗಿದೆ. ಇವರು ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕಿನ ಅಸೂಟಿ ಗ್ರಾಮದವರು. ಟಾಟಾ ಮಾರ್ಕೋಪೋಲೋ ಕಂಪೆನಿಯ ಉದ್ಯೋಗಿಯಾಗಿದ್ದರಿಂದ ಧಾರವಾಡದಲ್ಲಿ ನೆಲೆಸಿದ್ದರು. ಕಂಪನಿಯ 50ಕ್ಕೂ ಹೆಚ್ಚು ನೌಕರರಿಗೆ ಕೊರೊನಾ ಪಾಸಿಟಿವ್ ಬಂದಿದ್ದರಿಂದ ಆತಂಕಗೊಂಡಿದ್ದ ಈ ನೌಕರ, ಎಲ್ಲಿ ತಮ್ಮ ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ […]

ತಾಯಿಯನ್ನು ನೋಡಿಕೊಳ್ಳಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ

Friday, July 17th, 2020
Raviteja

ಶಿರಸಿ  : ತಾಯಿ ಮತ್ತು ಮಗ ಇಬ್ಬರೇ ಇದ್ದು ಮನೆಯಲ್ಲಿನ ಕಷ್ಟ ನೋಡಲಾಗದೇ ಕಾಲೇಜು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ‌ನೀರ್ನಳ್ಳಿಯಲ್ಲಿ‌ ನಡೆದಿದೆ. ನಿರ್ನಳ್ಳಿಯ ರವಿತೇಜ ಗಣಪತಿ ಭಟ್ (21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಮನೆಯಲ್ಲಿ ತಾಯಿ ಮತ್ತು ಮಗ ಇಬ್ಬರೇ ಇದ್ದು ಮನೆಯ ನಿರ್ವಹಣೆ ಕಷ್ಟ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಮೊದಲು ತಿಮಿಟ್ ಸೇವಿಸಿ ನಂತರ ‌ನೇಣು‌ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ […]

ಗುರು ರಾಘವೇಂದ್ರ ಬ್ಯಾಂಕಿನ ಮಾಜೀ ಸಿಇಓ ಆತ್ಮಹತ್ಯೆ

Tuesday, July 7th, 2020
Guru Raghavendra

ಉಡುಪಿ  : ಉಡುಪಿ ಜಿಲ್ಲೆಯ ಕೋಟ ಸಮೀಪದ ಮಣೂರಿನ ವಾಸುದೇವ ಮಯ್ಯ ಅವರು ಸೋಮವಾರ ಬೆಂಗಳೂರಿನ ಉತ್ತರಹಳ್ಳಿ ಸಮೀಪ ಆತ್ಮ ಹತ್ಯೆಗೆ ಶರಣಾಗಿದ್ದಾರೆ. ಗುರು ರಾಘವೇಂದ್ರ ಬ್ಯಾಂಕಿನಲ್ಲಿ ನಡೆದಿದೆ ಎನ್ನಲಾಗಿರುವ ಸಾವಿರಾರು ಕೋಟಿ ರೂಪಾಯಿಗಳ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕಿನ ಮಾಜೀ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ (CEO) ಮಯ್ಯರು ಈ ವಿಚಾರಕ್ಕೆ ಸಂಬಂಧಿಸಿಯೇ ಆತ್ಯಹತ್ಯೆ ಮಾಡಿಕೊಂಡಿರಬಹುದೆಂಬ ಗುಮಾನಿಗಳು ಇದೀಗ ವ್ಯಕ್ತವಾಗಿವೆ. ಬೆಂಗಳೂರಿನ ಉತ್ತರಹಳ್ಳಿ ಬಳಿ ಇರುವ ಪೂರ್ಣಪ್ರಜ್ಞಾ ಲೇ ಔಟ್ ನಲ್ಲಿ ರಸ್ತೆ ಬದಿಯಲ್ಲೇ ಕಾರನ್ನು ನಿಲ್ಲಿಸಿ ಅದರೊಳಗೇ ವಿಷ ಸೇವಿಸಿ ಆತ್ಮಹತ್ಯೆ […]

ಪುಂಡರ ಗುಂಪೊಂದು ತಾಯಿಯ ತಾಳಿಯನ್ನುಕಸಿದು ಅವಮಾನಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಯುವಕ

Saturday, July 4th, 2020
balaraj

ಮೈಸೂರು:  ತಾಯಿಯ ತಾಳಿಯನ್ನು ಕಿತ್ತುಹಾಕಿ ಅವಮಾನಿಸಿದ್ದಕ್ಕೆ ಬೇಸರಗೊಂಡ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಕೆ.ಆರ್.ನಗರ ತಾಲೂಕಿನ ಮೂಲೆಪೆಟ್ಲು ಗ್ರಾಮದ ನಿವಾಸಿ ಬಾಲರಾಜ್(23) ಮೃತ ಯುವಕ. ಬಾಲರಾಜ್ ತಾಯಿಯೊಂದಿಗೆ ವಾಸವಿದ್ದ. ಇತ್ತೀಚೆಗೆ ನಾಲ್ವರು ಯುವಕರು ಮನೆಗೆ ನುಗ್ಗಿ ಗಲಾಟೆ ಮಾಡಿದ್ದರು. ಅಲ್ಲದೆ, ತಾಯಿಯ ತಾಳಿ ಕಿತ್ತುಹಾಕಿ ಅವಮಾನ ಮಾಡಿದ್ದರು. ಯಾವ ವಿಚಾರಕ್ಕೆ ಗಲಾಟೆ ಮಾಡಿದ್ದರು ಎಂಬುದು ಸ್ಪಷ್ಟವಿಲ್ಲ. ಆದರೆ, ಬಾಲರಾಜ್ ಕೆ.ಆರ್.ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ. ಬಳಿಕ ಪೊಲೀಸರು ಯುವಕರನ್ನು ಕರೆಸಿ ರಾಜಿ ಮಾಡಿ […]

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕ

Friday, July 3rd, 2020
Bihari

ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಬಳಿ ಇರುವ ಶೌಚಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ 25 ವರ್ಷ ವಯಸ್ಸಿನ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮದ್ಯಾಹ್ನದ ವೇಳೆಗೆ ಕೆಲಸಕ್ಕೆ ಆಗಮಿಸಿದ್ದ ಈ ಯುವಕ ಶೌಚಾಲಯದ ಒಳಗಡೆಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ಪ್ಯಾಂಟು ಉಪಯೋಗಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಅಪರಿಚಿತ ವ್ಯಕ್ತಿ

Saturday, June 13th, 2020
hanging

ವಿಟ್ಲ: ಪ್ಯಾಂಟನ್ನೇ ಉಪಯೋಗಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ  ಮಾಡಿಕೊಂಡ  ವ್ಯಕ್ತಿಯ ಶವ  ರಾಷ್ಟ್ರೀಯ ಹೆದ್ದಾರಿಯ ಮಾಣಿಯ ಪಳಿಕೆಯಲ್ಲಿ ಮರದ ಬುಡವೊಂದರಲ್ಲಿ ಶನಿವಾರ ಬೆಳಿಗ್ಗೆ ಪತ್ತೆಯಾಗಿದೆ. ಈ ಅಪರಿಚಿತ ವ್ಯಕ್ತಿ ನೇಣಿಗೆ ಶರಣಾಗಿದ್ದಾರೆನ್ನಲಾಗಿದೆ. ಈತನ ಗುರುತು ಪತ್ತೆಯಾದಲ್ಲಿ ವಿಟ್ಲ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಕೋರಲಾಗಿದೆ. ಮರದ ಕಟ್ಟೆಯ ಬುಡದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಮೃತನ ಹೆಸರು ಮತ್ತು ವಿಳಾಸ ಇನ್ನೂ ತಿಳಿದು ಬಂದಿಲ್ಲ. ಮರದಲ್ಲಿ ವ್ಯಕ್ತಿಯ ಪ್ಯಾಂಟು ನೇತಾಡುತ್ತಿದ್ದು, ಆತ ಆ ಪ್ಯಾಂಟನ್ನೇ ಉಪಯೋಗಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ […]

ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಮಂಗಳೂರು ಆಸ್ಪತ್ರೆಯಲ್ಲಿ ಸಾವು

Tuesday, April 21st, 2020
vidya

ಮಂಗಳೂರು :  ಬಾಳುಗೋಡು ಗ್ರಾಮದ ಉಪ್ಪುಕಳದ ನಿವಾಸಿ ವಿದ್ಯಾ (20) ಬಂದ್ಯಡ್ಕ ಅವರು ಮಂಗಳವಾರ  ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮಂಗಳೂರಿನಲ್ಲಿ ನರ್ಸಿಂಗ್‌ ಮಾಡುತ್ತಿದ್ದ ಯುವತಿ ಇತ್ತೀಚೆಗೆ ಊರಿಗೆ ಬಂದಿದ್ದು ಮೂರು ದಿನದ ಹಿಂದೆ ಮನೆಯಲ್ಲಿ ವಿಷ ಸೇವಿಸಿದ್ದರು. ಅಸ್ವಸ್ಥಗೊಂಡ ಆಕೆಯನ್ನು ಮನೆಯವರು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆ ಮಂಗಳವಾರ ಕೊನೆಯುಸಿರೆಳೆದಿರುವುದಾಗಿ ತಿಳಿದು ಬಂದಿದೆ. ಮೃತರು ಉಪ್ಪುಕಳದ ವೆಂಕಟ್ರಮಣ ಅವರ ಪುತ್ರಿಯಾಗಿದ್ದು ತಾಯಿ, ಸಹೋದರರನ್ನು ಅಗಲಿದ್ದಾರೆ.