ಸೆ.10ರಂದು ಆನ್‌ಲೈನ್ ಮೂಲಕ 36ನೇ ವರ್ಷದ ಕಲ್ಕೂರ ಪ್ರತಿಷ್ಠಾನದ ‘ಶ್ರೀಕೃಷ್ಣ ವೇಷ ಸ್ಪರ್ಧೆ’

Wednesday, September 2nd, 2020
Kalkura

ಮಂಗಳೂರು : ಕಲ್ಕೂರ ಪ್ರತಿಷ್ಠಾನದ ವತಿಯಿಂದ 36ನೇ ವರ್ಷದ  ರಾಷ್ಟೀಯ ಮಕ್ಕಳ ಉತ್ಸವ ‘ಶ್ರೀಕೃಷ್ಣ ವೇಷ ಸ್ಪರ್ಧೆ’ಯನ್ನು ಈ ಬಾರಿ ಕೊರೋನ ಹಿನ್ನೆಲೆಯಲ್ಲಿ ಆನ್‌ಲೈನ್ ಮೂಲಕ ನಡೆಸಲಾಗುವುದು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದ್ದಾರೆ. ಈ ಬಾರಿ ಶ್ರೀಕೃಷ್ಣ ವೇಷ ಸ್ಪರ್ಧೆಯ  ವಿಶೇಷತೆ ಅಂದರೆ ಸ್ಪರ್ಧಿಗಳು ವಿಶ್ವದ ಯಾವ ಮೂಲೆಯಿಂದ ಬೇಕಾದರೂ ಭಾಗವಹಿಸಬಹುದು. ಮೂರು ನಿಮಿಷದ ವಿಡಿಯೋ ಮೂಲಕ  ಶ್ರೀಕೃಷ್ಣ ವೇಷ ಧರಿಸಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ‘ಶ್ರೀಕೃಷ್ಣ ವೇಷ ಸ್ಪರ್ಧೆ’ ಸೆ.10ರಂದು ನಡೆಯಲಿದ್ದು, ಮನೆಯಿಂದಲೇ […]

ಜುಲೈ 30 ರಿಂದ ಆನ್‌ಲೈನ್ ಮೂಲಕ 9ನೆಯ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ

Wednesday, July 29th, 2020
Sanathana

ಮಂಗಳೂರು  : ಮೋದಿ ಸರಕಾರ ಕೇಂದ್ರದಲ್ಲಿ ಎರಡನೆಯ ಬಾರಿಗೆ ಬಂದ ಬಳಿಕ ಕಾಶ್ಮೀರಿ ಹಿಂದೂಗಳ ಪುನರ್ವಸತಿಯ ದೃಷ್ಟಿಯಿಂದ ಕಲಮ್ ೩೭೦ ರದ್ದುಗೊಳಿಸುವುದು, ಪೌರತ್ವ ತಿದ್ದುಪಡಿ ಕಾನೂನು (ಸಿ.ಎ.ಎ.), ಸರ್ವೋಚ್ಚ ನ್ಯಾಯಾಲಯವು ರಾಮಮಂದಿರದ ಪರವಾಗಿ ನೀಡಿರುವ ಐತಿಹಾಸಿಕ ತೀರ್ಪು, ಅಲ್ಲದೇ ೫ ಆಗಸ್ಟ್ ೨೦೨೦ ರಂದು ಆಯೋಜಿಸಲಾಗಿರುವ ರಾಮಮಂದಿರದ ಭೂಮಿಪೂಜೆ ಮುಂತಾದ ಸಕಾರಾತ್ಮಕ ವಿಷಯಗಳು ಘಟಿಸುತ್ತಿವೆ. ಇದರಲ್ಲಿ ಪೌರತ್ವ ತಿದ್ದುಪಡಿ ಕಾನೂನು ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ಫಲಶ್ರುತಿಯಾಗಿದೆ. ೨೦೧೪ ನೇ ಇಸವಿಯಲ್ಲಿ ‘ಹಿಂದೂ ರಾಷ್ಟ್ರ ಅಧಿವೇಶನದಲ್ಲಿ […]

ಆನ್‍ಲೈನ್ / ಡಿಜಿಟಲ್ ವಿಧಾನಗಳ ಮೂಲಕ ವಿದ್ಯುತ್ ಬಿಲ್ ಪಾವತಿ

Tuesday, April 7th, 2020
Mescom

ಮಂಗಳೂರು :  ವಿದ್ಯುತ್ ಗ್ರಾಹಕರೇ, ತಾವು ಮನೆಯಿಂದಲೇ ತಮ್ಮ ಕಚೇರಿ ಕೆಲಸಗಳನ್ನು ತೊಂದರೆ ಇಲ್ಲದೆ ನಿರ್ವಹಿಸಲು, ಅಡಚಣೆ ರಹಿತ ವಿದ್ಯುತ್ ನೀಡಲು 24×7 ಮೆಸ್ಕಾಂ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಹಾಗು ರಾಜ್ಯ ಸರ್ಕಾರಗಳು COVID-19 ಸೋಂಕು ಹರಡುವುದನ್ನು ತಡೆಗಟ್ಟಲು ವಿವಿಧ ಕ್ರಮಗಳನ್ನು ಕೈಗೊಂಡಿರುತ್ತವೆ. ಈ ಸಮಯದಲ್ಲಿ ತಾವು ಮನೆಯಲ್ಲಿ ಸುರಕ್ಷಿತವಾಗಿರಲು ಹಾಗು ಆರೋಗ್ಯವಂತರಾಗಿರಲು ಮೆಸ್ಕಾಂ ಬಯಸುತ್ತದೆ. ವಿದ್ಯುತ್ ಗ್ರಾಹಕರು 3 ತಿಂಗಳ ಅವಧಿಗೆ (ಜೂನ್ 2020 ರವರೆಗೆ) ಬಿಲ್ ಪಾವತಿಸುವುದನ್ನು ಮುಂದೂಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿ ಮಾಡಿರುತ್ತಾರೆ. ಆದರೆ ಈ […]