Blog Archive

ಜಾಗದ ವಿವಾದ : ಕೊಲೆಯಲ್ಲಿ ಅಂತ್ಯವಾದ ಜಗಳ, ತಂದೆ-ಮಗ ಬಂಧನ

Monday, February 10th, 2020
kole

ಬೆಳ್ತಂಗಡಿ : ಜಮೀನು ವಿವಾದಕ್ಕೆ ಸಂಬಂಧಿಸಿ ನೆರೆಹೊರೆಯವರ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಇಲ್ಲಿನ ಲಾಯಿಲ ಗ್ರಾಮದ ಪುತ್ರಬೈಲು ಎಂಬಲ್ಲಿ ರವಿವಾರ ರಾತ್ರಿ ನಡೆದಿದೆ. ಲಾಯಿಲ ಗ್ರಾಮದ ಪುತ್ರಬೈಲು 1 ನೇ ಅಡ್ಡ ರಸ್ತೆಯ ನಿವಾಸಿ ಉಮೇಶ್ (48) ಕೊಲೆಯಾದ ವ್ಯಕ್ತಿ. ಇವರ ನೆರೆಮನೆಯವರಾದ ಯೋಗೀಶ್ ಮತ್ತು ಆತನ ಮಗ ಜೀವನ್ ಕೊಲೆ ಆರೋಪಿಗಳಾಗಿದ್ದಾರೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈನಲ್ಲಿ ಕೆಲಸದಲ್ಲಿದ್ದ ಉಮೇಶ್ ಸಮಗಾರ ಇತ್ತೀಚೆಗೆ ಊರಿಗೆ ಆಗಮಿಸಿದ್ದರು. ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ […]

ಸುಳ್ಯ : ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಆಸ್ಪತ್ರೆಯಲ್ಲಿ ಮೃತ್ಯು

Friday, February 7th, 2020
vineeth

ಸುಳ್ಯ : ಸುಳ್ಯ-ಬಡ್ಡಡ್ಕ ರಸ್ತೆಯ ಕುಡೆಕಲ್ಲು ಬಳಿ ಜ.19 ರಂದು ಸಂಭವಿಸಿದ ಬೈಕ್- ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕಲ್ಲಪಳ್ಳಿ‌ ನಿವಾಸಿ ವಿನೀತ್ ಚಿಕಿತ್ಸೆ ಫಲಕಾರಿಯಾಗದೆ ಫೆ. 6 ರಂದು ರಾತ್ರಿ ಮೃತಪಟ್ಟಿದ್ದಾರೆ. ಜ.19 ರಂದು ಬೆಳಿಗ್ಗೆ ಸುಳ್ಯ ಕಡೆಯಿಂದ ಬಡ್ಡಡ್ಕ ಕಡೆಗೆ ಸಂಚರಿಸುತ್ತಿದ್ದ ವ್ಯಾಗನರ್ ಕಾರಿಗೆ ಬಡ್ಡಡ್ಕದಿಂದ ಸುಳ್ಯಕ್ಕೆ ಬರುತ್ತಿದ್ದ ಬೈಕ್ ಆಲೆಟ್ಟಿಯ ಕುಡೆಕಲ್ಲು ಎಂಬ ತಿರುವಿನಲ್ಲಿ ಕಾರಿಗೆ ಡಿಕ್ಕಿ ಹೊಡೆದಿತ್ತು. ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ನಂತರ ಅವರನ್ನು […]

ಹಿರಿಯ ಸಾಹಿತಿ ಡಾ.ಎಂ ಚಿದಾನಂದ ಮೂರ್ತಿ ನಿಧನ

Saturday, January 11th, 2020
M-Chidanadmurty

ಬೆಂಗಳೂರು : ಹಿರಿಯ ಸಾಹಿತಿ, ಲೇಖಕ ಸಂಶೋಧಕ ಡಾ. ಎಂ ಚಿದಾನಂದಮೂರ್ತಿ ಇಂದು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಮೂರ್ತಿ ಅವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಇತ್ತೀಚೆಗೆ ನ್ಯುಮೋನಿಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಶ್ವಾಸಕೋಶದ ಸೋಂಕು ನಿಯಂತ್ರಣಕ್ಕೆ ಬಾರದೆ ಶನಿವಾರ ಮುಂಜಾನೆ ಅಸ್ತಂಗತರಾಗಿದ್ದಾರೆ. ಬೆಂಗಳೂರಿನ ವಿಜಯನಗರ ಸಮೀಪ ಹಂಪಿ ನಗರದ ಮೂರನೇ ಕ್ರಾಸ್‌ನಲ್ಲಿರುವ ಸ್ವಗೃಹದಲ್ಲಿ ಬೆಳಗ್ಗೆ 9ಗಂಟೆ ನಂತರ ಅಂತಿಮ ದರ್ಶನಕ್ಕೆ ಅವಕಾಶ […]

ಎದೆ ನೋವು, ಹೈ ಬಿಪಿಯಿಂದ ಬಳಲುತ್ತಿರುವ ಡಿಕೆ ಶಿವಕುಮಾರ್​ ಮತ್ತೆ ಆಸ್ಪತ್ರೆಗೆ ದಾಖಲು ನೋವು

Tuesday, November 12th, 2019
DK-Shiv-Kumar

ಬೆಂಗಳೂರು : ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಎದೆ ನೋವಿನಿಂದ ಬಳಲುತ್ತಿದ್ದು, ತಡರಾತ್ರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಧ್ಯರಾತ್ರಿ 1.30ರ ಸುಮಾರಿಗೆ ಆಸ್ಪತ್ರೆಗೆ ದಾಖಲಾಗಿರೋ ಮಾಜಿ ಸಚಿವ ಡಿಕೆಶಿ ಎದೆ ನೋವು, ಹೈ ಬಿಪಿಯಿಂದ ಬಳಲುತ್ತಿದ್ದಾರೆ. ತಡರಾತ್ರಿ ಏಕಾಏಕಿ ಆರೋಗ್ಯ ಸಮಸ್ಯೆಗೆ ತುತ್ತಾದ ಅವರನ್ನು ಕುಟುಂಬ ಸದಸ್ಯರು ಬೆಂಗಳೂರಿನ ಶೇಷಾದ್ರಿಪುರದ ಅಪೋಲೋ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ. ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಶಿವಕುಮಾರ್ ಕುಟುಂಬ ವೈದ್ಯರಾದ ಡಾ. ಶಂಕರ್ ಚಿಕಿತ್ಸೆ ನೀಡುತ್ತಿದ್ದು ಯಾವುದೇ ಆತಂಕ ಪಡುವ ಅಗತ್ಯವಿಲ್ಲ […]

ನುಳ್ಳಿಪ್ಪಾಡಿ : ಖಾಸಗಿ ಆಸ್ಪತ್ರೆಗೆ ನುಗ್ಗಿ ದಾಂಧಲೆ ನಡೆಸಿದ ಯುವಕರು

Monday, September 23rd, 2019
nulippady

ಕಾಸರಗೋಡು : ಯುವಕರ ತಂಡವೊಂದು ಖಾಸಗಿ ಆಸ್ಪತ್ರೆಗೆ ನುಗ್ಗಿ ದಾಂಧಲೆ ನಡೆಸಿದ ಘಟನೆ ಭಾನುವಾರ ರಾತ್ರಿ ನಗರ ಹೊರವಲಯದ ನುಳ್ಳಿಪ್ಪಾಡಿಯಲ್ಲಿ ನಡೆದಿದೆ. ನಿಮಿಷಗಳ ಕಾಲ ತಂಡವು ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದ್ದು, ರೋಗಿಗಳು, ಸಿಬಂದಿಗಳ ಮೇಲೆ ಹಲ್ಲೆ ನಡೆಸಿದೆ. ಗಾಜು, ಪೀಠೋಪಕರಣ ಹಾಗೂ ಇತರ ವಸ್ತುಗಳಿಗೆ ಹಾನಿ ಎಸಗಿದ್ದಾರೆ. ಕೊಲೆ ಪ್ರಕರಣವೊಂದರ ಆರೋಪಿ ನೇತೃತ್ವದಲ್ಲಿ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ದಾಂಧಲೆಯಿಂದ ರೋಗಿಗಳು, ಸಿಬಂದಿಗಳು ಅಲ್ಲಿಂದ ಭಯದಿಂದ ಓಡುವಂತಾಯಿತು. ಬೈಕ್ ಅಪಘಾತ ವೊಂದರಲ್ಲಿ ಗಾಯಗೊಂಡ ಇಬ್ಬರನ್ನು ಈ ಆಸ್ಪತ್ರೆಗೆ […]

ಆಸ್ಪತ್ರೆ ನಿರ್ಮಾಣದಲ್ಲಿ ಕಾರ್ಪೋರೇಟ್‌ ಕಂಪನಿಗಳು ಮುಂದೆ ಬರಲಿ: ಪರಮೇಶ್ವರ್

Saturday, November 24th, 2018
parameshwar

ಬೆಂಗಳೂರು: ಕಾರ್ಪೋರೇಟ್‌ ಕಂಪನಿಗಳು ರಾಜ್ಯದಲ್ಲಿ ಆರೋಗ್ಯ ಸೇವೆ ನೀಡಲು ಹೆಚ್ಚು ಆಸ್ಪತ್ರೆ ನಿರ್ಮಾಣ ಮಾಡುವ ಹೆಜ್ಜೆ ಇಟ್ಟರೆ ಕರ್ನಾಟಕ ಹೆಲ್ತ್‌ ಟೂರಿಸಂ ಆಗಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು. ಹೆಚ್‌ಕೆಪಿ ರಸ್ತೆಯಲ್ಲಿರುವ ಚರ್ಚ್‌ ಆಫ್‌ ಸೌತ್‌ ಇಂಡಿಯಾ ಆಸ್ಪತ್ರೆಯ‌ 125ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕ್ರಿಶ್ಚಿಯನ್‌ ಮಿಷನರಿಗಳು ವಿಶ್ವದಾದ್ಯಂತ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿವೆ. ವಿಶ್ವದ ಯಾವುದೇ ಮೂಲೆಗೆ ತೆರಳಿದರು‌ ಮಿಷನರಿಗಳ ಶಿಕ್ಷಣ ಸಂಸ್ಥೆ ನೋಡಬಹುದು. ಹಲವು ವರ್ಷಗಳ […]

ಪುತ್ತೂರಲ್ಲಿ ವಿದ್ಯಾರ್ಥಿಗಳ ನಡುವೆ ಹೊಡೆದಾಟ..ಓರ್ವ ವಿದ್ಯಾರ್ಥಿ ಆಸ್ಪತ್ರೆಗೆ ದಾಖಲು!

Saturday, July 14th, 2018
fighiting

ಮಂಗಳೂರು: ಪುತ್ತೂರಲ್ಲಿ ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆದು, ಓರ್ವ ವಿದ್ಯಾರ್ಥಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಪುತ್ತೂರು ತಾಲೂಕಿನ ದರ್ಬೆ ಜಂಕ್ಷನ್ ಬಳಿ ಮೂವರು ವಿದ್ಯಾರ್ಥಿಗಳು ಓರ್ವ ವಿದ್ಯಾರ್ಥಿ ಜೊತೆ ಕ್ಷುಲ್ಲಕ ಕಾರಣಕ್ಕೆ ಹೊಡೆದಾಡಿಕೊಂಡಿದ್ದಾರೆ. ಘಟನೆಯಲ್ಲಿ ವಿದ್ಯಾರ್ಥಿ ವಿನಯಕುಮಾರ್ಗೆ ಗಾಯವಾಗಿದ್ದು, ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಮಾಡಿದ ಮೂವರು ವಿದ್ಯಾರ್ಥಿಗಳು ಪರಾರಿಯಾಗಿದ್ದಾರೆಂದು ತಿಳಿದುಬಂದಿದೆ.

ಕಲ್ಲಡ್ಕ ಬಳಿ ಭೀಕರ ಸರಣಿ ಅಪಘಾತ: ಕಾರಿನಲ್ಲಿದ್ದವರು ಪವಾಡಸದೃಶ ಪಾರು

Friday, March 2nd, 2018
accident

ಮಂಗಳೂರು: ಕಲ್ಲಡ್ಕ ಬಳಿ ಭೀಕರ ಸರಣಿ ಅಪಘಾತ ನಡೆದಿದ್ದು, ಕಾರಿನಲ್ಲಿದ್ದ ನಾಲ್ಕು ಮಂದಿ ಪ್ರಯಾಣಿಕರು ಪವಾಡ ಸದೃಶವಾಗಿ ಪಾರಾಗಿದ್ದಾರೆ. ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ಈ ಘಟನೆ ನಡೆದಿದೆ. ಬಸ್‌ ಹಾಗೂ ಕಾರಿಗೆ ಡಿಕ್ಕಿಯಾದ ಟಿಪ್ಪರ್ ಲಾರಿ ಕಾರಿನ ಮೇಲೇರಿದೆ. ಅದಾಗ್ಯೂ ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಪವಾಡ ಸದೃಶವೆಂಬಂತೆ ಪಾರಾಗಿದ್ದಾರೆ. 6 ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ವ್ಯಾಪ್ತಿ ಮೀರಿ ಸೇವೆ ನೀಡುತ್ತಿರುವ ಆಸ್ಪತ್ರೆ

Thursday, January 11th, 2018
Hospital

ಮೂಲ್ಕಿ : ಜಿಲ್ಲೆ ಬದಲಾಯ್ತು, ತಾಲೂಕು ಬದಲಾಯ್ತು ಆದರೆ ಪಶುಸಂಗೋಪನಾ ಇಲಾಖೆಯ ಪಶು ವೈದ್ಯಾಲಯ ಮಾತ್ರ ಅದೇ ಇದೆ. ಹೌದು ಸುಮಾರು ಆರು ದಶಕಗಳ ಹಿಂದೆ ಅವಿಭಜಿತ ದ.ಕ. ಜಿಲ್ಲೆಯ ವ್ಯಾಪ್ತಿಗೆ ಸೇರಿದ್ದ ಮೂಲ್ಕಿ ಸಮೀಪದ ಕಾರ್ನಾಡಿನಲ್ಲಿದ್ದ ಪಶು ಸಂಗೋಪನಾ ಇಲಾಖೆಯ ಪಶು ವೈದ್ಯಾಲಯ ಮಂಗಳೂರು ತಾಲೂಕು ಹಾಗೂ ದ.ಕ. ಜಿಲ್ಲೆಯ ವ್ಯಾಪ್ತಿಯಲ್ಲಿದ್ದರೂ, ಉಡುಪಿ ಜಿಲ್ಲೆಯ ಜನರಿಗೆ ಸೇವೆಯನ್ನು ಒದಗಿಸುತ್ತಿದೆ. ಉಡುಪಿ ಜಿಲ್ಲೆಯ ಪಡುಬಿದ್ರಿ, ಹೆಜಮಾಡಿ ಮತ್ತು ಪಲಿಮಾರು ಪ್ರದೇಶದ ಜನರು ತಮ್ಮ ಸಾಕು ಪ್ರಾಣಿ, ಜಾನುವಾರುಗಳಿಗೆ ಚಿಕಿತ್ಸೆ […]

ಅಪ್ರಾಪ್ತ ಬಾಲಕನ ಮೇಲೆ ಆಸ್ಪತ್ರೆ ಸೆಕ್ಯೂರಿಟಿ ಗಾರ್ಡ್‌ನಿಂದ ಲೈಂಗಿಕ ದೌರ್ಜನ್ಯ

Thursday, July 20th, 2017
Security

ಮಂಗಳೂರು: ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ತಾಯಿಯನ್ನು ನೋಡಿಕೊಳ್ಳಲು ಬಂದಿದ್ದ ಬಾಲಕನಿಗೆ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್‌ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಲಾಗಿದ್ದು, ಈ ಬಗ್ಗೆ ಕದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ಗೋಳ್ತಮಜಲಿನ ಸೀತಾರಾಮ ಶೆಟ್ಟಿ (35) ಬಂಧಿತ ಆರೋಪಿ. ಸುರತ್ಕಲ್‌ ಕೃಷ್ಣಾಪುರ ಮೂಲದ ಮಹಿಳೆಯೋರ್ವರು ಅಪಘಾತಕ್ಕೊಳಗಾಗಿ ಕಳೆದ 5-6 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಅವರನ್ನು ನೋಡಿಕೊಳ್ಳಲು ಮಂಗಳವಾರ ಅವರ ಅಪ್ರಾಪ್ತ ವಯಸ್ಕ ಪುತ್ರ ಆಸ್ಪತ್ರೆಗೆ ಬಂದಿದ್ದ. ರಾತ್ರಿ ವೇಳೆ ಆತನಿಗೆ ಮಲಗಲು […]