ಹುಟ್ಟುಹಬ್ಬದ ಪಾರ್ಟಿಗೆಂದು ಕರೆಸಿ 23 ವರ್ಷದ ಯುವತಿಯನ್ನು ಅತ್ಯಾಚಾರ ಗೈದ ಕಾಮುಕರು

Sunday, October 11th, 2020
Rape Accuced

ಲಕ್ನೋ: ಹುಟ್ಟುಹಬ್ಬದ ಪಾರ್ಟಿಗೆಂದು ಕರೆದು 23 ವರ್ಷದ ಯುವತಿಯ ಮೇಲೆ ಇಬ್ಬರು ಕಾಮುಕರು ಬಾರ್ರಾದ ಸಚನ್ ಸ್ಕ್ವೇರ್‌ನಲ್ಲಿರುವ ಹೋಟೆಲ್‌ನಲ್ಲಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಕಾನ್ಪುರದಲ್ಲಿ ನಡೆದಿದೆ. ಸಂತ್ರಸ್ತೆ ಕಲ್ಯಾಣ್ಪುರದ ನಿವಾಸಿ ಯುವತಿ ದೆಹಲಿಯ ಆರೋಗ್ಯಕೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ತಾಯಿಯ ಅನಾರೋಗ್ಯದಿಂದಾಗಿ ಒಂದು ವರ್ಷದ ಹಿಂದೆ ಕೆಲಸ ಬಿಟ್ಟು ಮನೆಯಲ್ಲಿದ್ದರು. ಸಂತ್ರಸ್ತೆಯ ನೆರೆಹೊರೆಯ ಮೋನಿಕಾ ಎನ್ನುವ  ಹುಡುಗಿಯೊಬ್ಬಳು ತನ್ನ ಸಹೋದರ ಅಶಿಶ್ ಹುಟ್ಟುಹಬ್ಬದ ಪಾರ್ಟಿಗೆ ಕರೆದಿದ್ದಳು. ಆಕೆಯ ತಂದೆ ಇನ್ಸ್‌ಪೆಕ್ಟರ್ ಆಗಿದ್ದರು. ನಂತರ ಸಂತ್ರಸ್ತೆ ಪಾರ್ಟಿಗೆಂದು ಸಚನ್ ಚೌರಾಹಾದ ಸೋನಾ […]

ಸುರತ್ಕಲ್ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್ ಅಮಾನತು

Wednesday, July 10th, 2019
Ramakrishna

ಮಂಗಳೂರು : ಮಾದಕವಸ್ತು ಪೂರೈಕೆ ಪ್ರಕರಣಗಳ ತನಿಖೆಯಲ್ಲಿ ನಿರ್ಲಕ್ಷ್ಯ ವಹಿಸಿರುವುದು ಹಾಗೂ ತನ್ನ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳ ನಿಯಂತ್ರಣದ ವಿಚಾರದಲ್ಲಿ ಕರ್ತವ್ಯಲೋಪ ಎಸಗಿರುವ ಆರೋಪದ ಮೇಲೆ ಮಂಗಳೂರಿನ ಸುರತ್ಕಲ್ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್ ಕೆ.ಕೆ.ರಾಮಕೃಷ್ಣ ಅವರನ್ನು ಅಮಾನತುಗೊಳಿಸಿ ಪೊಲೀಸ್‌ ಕಮಿಷನರ್‌ ಆದೇಶ ಹೊರಡಿಸಿದ್ದಾರೆ. ಮಂಗಳೂರಿನಲ್ಲಿ ಗಾಂಜಾ, ದನಕಳವು ಪ್ರಕರಣಗಳು ಹೆಚ್ಚುತ್ತಿದ್ದು, ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕಮಿಷನರ್‌ ಸಂದೀಪ್ ಪಾಟೀಲ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು. ಆದರೆ ಸುರತ್ಕಲ್ ಠಾಣಾ ಇನ್‌ಸ್ಪೆಕ್ಟರ್ ರಾಮಕೃಷ್ಣ ಅದನ್ನು ಗಂಭೀರವಾಗಿ […]

ಮಹದಾಯಿ ಹೋರಾಟ: ಲಾಠಿ ಪ್ರಹಾರಕ್ಕೆ ಸಂಬಂಧಪಟ್ಟಂತೆ ಒಬ್ಬ ಇನ್‌ಸ್ಪೆಕ್ಟರ್‌, 9 ಜನ ಪೊಲೀಸರು ಅಮಾನತು

Wednesday, August 3rd, 2016
Yamanooru

ಹುಬ್ಬಳ್ಳಿ: ಮಹದಾಯಿ ಹೋರಾಟದ ವೇಳೆ ಯಮನೂರಲ್ಲಿ ನಡೆದ ಲಾಠಿ ಪ್ರಹಾರಕ್ಕೆ ಸಂಬಂಧಪಟ್ಟಂತೆ ಒಬ್ಬ ಇನ್‌ಸ್ಪೆಕ್ಟರ್‌ ಸೇರಿದಂತೆ 9 ಜನ ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಲಾಠಿ ಚಾರ್ಜ್‌ನ ವಿಡಿಯೋ ಹಾಗೂ ಧಾರವಾಡ ಎಸ್ಪಿ ನೀಡಿರುವ ವರದಿ ಆಧರಿಸಿ ಬೆಳಗಾವಿ ಉತ್ತರ ವಲಯದ ಐಜಿಪಿ ಡಾ.ಕೆ. ರಾಮಚಂದ್ರ ರಾವ್‌ ಅವರು 9 ಜನರನ್ನು ಅಮಾನತುಗೊಳಿಸಿ ಮಂಗಳವಾರ ಆದೇಶಿಸಿದ್ದಾರೆ. ಧಾರವಾಡ ಜಿಲ್ಲೆಯ ನವಲಗುಂದ ಠಾಣಾಧಿಕಾರಿ ಅರುಣಕುಮಾರ ಹಪ್ಪಳಿ, ಇಬ್ಬರು ಪೇದೆಗಳು, ವಿಜಯಪುರ ಜಿಲ್ಲೆ ಇಬ್ಬರು, ಬೆಳಗಾವಿ ಜಿಲ್ಲೆಯ ನಾಲ್ವರು ಪೇದೆಗಳು ಸೇರಿ ಒಟ್ಟು […]

ಸಲಿಲಸಲಿಲ ಜಲ ಧಾರೆ- ಅದರಿಲ್ಲಿ ಬಾವಿಗೆ ಮಣ್ಣಿನ ಧಾರೆ

Sunday, February 21st, 2016
mogral

ಕುಂಬಳೆ: ಶತಮಾನಗಳಿಂದ ನೂರಾರು ಜನರಿಗೆ ನೀರುಣಿಸುತ್ತಿದ್ದ ಸಾರ್ವಜನಿಕ ಬಾವಿಯೊಂದಕ್ಕೆ ಮಣ್ಣು ತುಂಬಿಸಿ ಮುಚ್ಚಿದ ಘಟನೆ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ. ಮೊಗ್ರಾಲ್ ಪೇರಾಲ್ ರಸ್ತೆ ಅಭಿವೃದ್ದಿಯ ಹೆಸರಲ್ಲಿ ರಸ್ತೆ ಹೆದ್ದಾರಿಯನ್ನು ಸಂಪರ್ಕಿಸುವಲ್ಲಿರುವ ಬಾವಿಯನ್ನು ಮಣ್ಣು ತುಂಬಿಸಿ ಮುಚ್ಚಲಾಗಿದೆ. 1913ರಲ್ಲಿ ಸಾರ್ವಜನಿಕರಿಗೆ,ದಾರಿ ಹೋಕರಿಗೆ ನೀರಡಿಕೆಯನ್ನು ತಣಿಸಲು ಅಂದಿನ ಆಡಳಿತ ನಿರ್ಮಿಸಿದ್ದ ಶತಮಾನದ ಬಾವಿಯನ್ನು ಅಭಿವೃದ್ದಿಯ ಹೆಸರಲ್ಲಿ ಮುಚ್ಚಿರುವುದು ಭಾರೀ ಜನಾಕ್ರೋಶಕ್ಕೆ ಕಾರಣವಾಗಿದೆ. ಪ್ರಾಕೃತಿಕ ಅಸಮತೋಲನದಿಂದ ಹದಗೆಟ್ಟ ವಾತಾವರಣದಲ್ಲಿ ಏರುತ್ತಿರುವ ಉಷ್ಣಾಂಶ ಹಾಗೂ ಕುಸಿಯುತ್ತಿರುವ ನೀರ ಸೆಲೆಗಳ ತೀವ್ರ ಆತಂಕಕಾರಿ ಸ್ಥಿತಿಯಲ್ಲೂ […]