ಪತ್ನಿಯನ್ನು ಕೊಲೆಗೈದು ಗೋಣಿಚೀಲದಲ್ಲಿಟ್ಟಿದ್ದ ಪತಿಯ ಬಂಧನ

Saturday, November 26th, 2022
imran-shiekh

ಸುಳ್ಯ : ಪತ್ನಿಯನ್ನು ಕೊಲೆಗೈದು ಗೋಣಿಚೀಲದಲ್ಲಿ ಮೃತದೇಹವನ್ನು ತುಂಬಿಸಿಟ್ಟು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತಿಯನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಇಮ್ರಾನ್ ಶೇಖ್ ಬಂಧಿತ ಆರೋಪಿ. ಪಶ್ಚಿಮ ಬಂಗಾಳದ ಪೊಲೀಸರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸಿ ಸುಳ್ಯ ಪೊಲೀಸರು ನವೆಂಬರ್ 24ರಂದು ಸಂಜೆ ಸುಳ್ಯಕ್ಕೆ ಕರೆ ತಂದಿದ್ದಾರೆ. ಸುಳ್ಯದ ಬೀರಮಂಗಳದ ಮನೆಯೊಂದರಲ್ಲಿ ಕಳೆದ ಏಳು ತಿಂಗಳಿಂದ ವಾಸವಾಗಿದ್ದು, ಸ್ಥಳೀಯ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಕೆಲ ದಿನಗಳ ಹಿಂದೆ ಊರಿಗೆ ತೆರಳುವುದಾಗಿ ಹೊಟೇಲ್‌ನವರಲ್ಲಿ ಹೇಳಿ ಹೋಗಿದ್ದ. […]