Blog Archive

ಜನಜಾಗ್ರತಿ ಸಮಿತಿಯಿಂದ ಗೋಮಾತೆಯ ರಕ್ಷಣೆಗಾಗಿ ಸಾರ್ವಜನಿಕ ಪ್ರತಿಭಟನಾ ಸಭೆ

Wednesday, August 14th, 2013
ಜನಜಾಗ್ರತಿ ಸಮಿತಿಯಿಂದ ಗೋಮಾತೆಯ ರಕ್ಷಣೆಗಾಗಿ ಸಾರ್ವಜನಿಕ ಪ್ರತಿಭಟನಾ ಸಭೆ

ಮಂಗಳೂರು : ಇತೀಚೆಗೆ ಕರಾವಳಿಯಲ್ಲಿ ಗೋಕಳ್ಳತನ, ಗೋಹತ್ಯೆ, ಅಕ್ರಮ ಹಾಗೂ ಹಿಂಸಾತ್ಮಕ ಗೋಸಾಗಟ ತೀವ್ರಗೊಳ್ಳುವುದರಿಂದ ಅದನ್ನು ತಡೆಯಲು ಪೋಲಿಸ್ ಇಲಾಖೆ ಮತ್ತು ಸರಕಾರವನ್ನು ಎಚ್ಚರಿಸುವ ಸಲುವಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಆಗಸ್ಟ್ 19 ರಂದು ಸಾರ್ವಜನಿಕ ಪ್ರತಿಭಟನಾ ಸಭೆ ನಡೆಯಲಿದೆ. ಅದೇ ದಿನ ಬೆಳಿಗ್ಗೆ 10 ಗಂಟೆಗೆ ಮಂಗಳೂರಿನಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ತಾಲೂಕು ಕಛೇರಿಯ ಎದುರು ಸಾರ್ವಜನಿಕ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಜನಜಾಗ್ರತಿ ಸಮಿತಿಯ ಸಂಚಾಲಕರಾದ ಕಟೀಲು […]

ದ್ವಿತೀಯ ಪಿಯುಸಿ ಫಲಿತಾಂಶ : ಅಕ್ಷಯ ಕಾಮತ್ ರಾಜ್ಯಕ್ಕೆ ಪ್ರಥಮ

Tuesday, May 7th, 2013
Akshay Kamath -Sooraj Hegde

ಮಂಗಳೂರು : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಉಡುಪಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದರೆ, ದಕ್ಷಿಣ ಕನ್ನಡ ದ್ವಿತೀಯ ಸ್ಥಾನವನ್ನು ಪಡೆದಿದೆ. ಕೆನರಾ ಕಾಲೇಜಿನ ಅಕ್ಷಯ ಕಾಮತ್ ವಿಜ್ಞಾನ ವಿಭಾಗದಲ್ಲಿ  ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದರೆ, ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಯಾಗಿರುವ ಸೂರಜ್ ಹೆಗ್ಡೆ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಅಗ್ರ ಸ್ಥಾನವನ್ನು ಪಡೆದಿದ್ದಾನೆ. ಮಂಗಳೂರಿನ ಕೆನರಾ ಪಿ.ಯು. ಕಾಲೇಜಿನ ವಿದ್ಯಾರ್ಥಿಯಾಗಿರುವ ಅಕ್ಷಯ್‌ ಕಾಮತ್‌ ಈ ಬಾರಿಯ ದ್ವಿತೀಯ ಪಿಯುಸಿ ವಿಜ್ಞಾನ […]

ಸಿದ್ದರಾಮಯ್ಯ ರಾಜ್ಯದ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ

Tuesday, April 9th, 2013
Siddaramaiah CM candidate

ಉಡುಪಿ : ಬಿಜೆಪಿಯ ಭದ್ರ ಕೋಟೆಯಾಗಿದ್ದ ಉಡುಪಿಯಲ್ಲಿ ಸ್ಥಳೀಯ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಹಿನ್ನಲೆಯಲ್ಲೆ ರಾಜ್ಯದಲ್ಲೂ ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸ ಹೊಂದಿರುವ ಉಡುಪಿ ಕಾಂಗ್ರೆಸ್ ಕಾರ್ಯಕರ್ತರು ಆಸ್ಪತ್ರೆಯಲ್ಲಿ ಗುಣಮುಖರಾಗುತ್ತಿರುವ ಸಿದ್ದರಾಮಯ್ಯ ನವರೆ ರಾಜ್ಯದ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದಾಗಿ ಘೋಷಿಸಿದ್ದಾರೆ. ಸೋಮವಾರ ಉಡುಪಿ ತಾಲುಕಿನ ಪರ್ಕಳದಲ್ಲಿರುವ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಿದ್ದಾರಮಯ್ಯನವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿದ ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಮಯ್ಯನವರೆ ಮುಖ್ಯಮಂತ್ರಿಯಾಗಬೇಕೆಂದು ಪ್ರಾರ್ಥಿಸಿ ದೇವಾಲಯದಲ್ಲಿ  ವಿಶೇಷ ಪೂಜೆ ಸಲ್ಲಿಸಿದರು.

ಉಡುಪಿ ವಿದಾನಸಭಾ ಚುನಾವಣೆ : ಸುಧಾಕರ್ ಶೆಟ್ಟಿಯವರಿಗೆ ಟಿಕೆಟ್

Saturday, April 6th, 2013
Sudhakar Shetty

ಉಡುಪಿ : ಹತ್ತು ವರ್ಷಗಳ ಹಿಂದೆ ಉಡುಪಿ ಶಾಸಕ ರಘುಪತಿ ಭಟ್ ರಿಂದ ಟಿಕೇಟ್ ವಂಚಿತರಾಗಿದ್ದ  ಸುಧಾಕರ್ ಶೆಟ್ಟಿಯವರಿಗೆ ಇದೀಗ ರಘುಪತಿ ಭಟ್ ರ ಕಾರಣದಿಂದಲೇ ಉಡುಪಿ ವಿದಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷ ಟಿಕೆಟ್ ನೀಡಿದೆ. ರಾಸಲೀಲೆ ಪ್ರಕರಣದ ಹಿನ್ನಲೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದ  ಉಡುಪಿ ಶಾಸಕ ರಘುಪತಿ ಭಟ್  ಕಾರ್ಯಕರ್ತರ ಒತ್ತಡಕ್ಕೆ ಮಣಿದು ಪಕ್ಷ ಅವರಿಗೆ ಸ್ಪರ್ಧಿಸಲು ಅವಕಾಶ ನೀಡಿದರೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದರು. ಆದರೆ ಇದೀಗ ಪಕ್ಷ ರಘುಪತಿ ಭಟ್ ಗೆ ಸ್ಪರ್ಧಿಸಲು ಅವಕಾಶ […]

ಸ್ಥಳೀಯ ಸಂಸ್ಥೆ ಚುನಾವಣೆ ದ.ಕ 50.97% ಉಡುಪಿ 51.85% ಮತ ಚಲಾವಣೆ.

Thursday, March 7th, 2013
MCC election

ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ನಡೆಯುತ್ತಿರುವ ಸ್ಥಳೀಯ ಸಂಸ್ಥೆ ಚುನಾವಣೆ ಮದ್ಯಾಹ್ನ 1 ಗಂಟೆಗೆ ವೇಳೆಗೆ ಚೇತರಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ 544 ಮತಗಟ್ಟೆಗಳಲ್ಲಿ ಶೇಕಡಾ 5.97% ಮತದಾನವಾಗಿದೆ. ಉಡುಪಿ ಜಿಲ್ಲೆಯ ಒಟ್ಟು 148 ಮತಗಟ್ಟೆಗಳಲ್ಲಿ 51.85% ಮತದಾನವಾಗಿದೆ. ಮಂಗಳೂರು 41% ಉಳ್ಳಾಲ 43.8% ಮೂಡಬಿದ್ರೆ 52.2% ಬಂಟ್ವಾಳ 52.8% ಪುತ್ತೂರು 52.4%, ಬೆಳ್ತಂಗಡಿ 55.5% ಸುಳ್ಯ 59.1% ಮತದಾನವಾಗಿದೆ. ಉಡುಪಿ ನಗರ ಸಭೆ 48.25, ಸಾಲಿಗ್ರಾಮ 56.42, ಕುಂದಾಪುರ 49.31, ಕಾರ್ಕಳ 53.40% […]

ಕಾರ್ ಡಿಕ್ಕಿ ಓರ್ವಳ ಸಾವು ಮತ್ತೊಬ್ಬಳ ಸ್ಥಿತಿ ಗಂಭೀರ

Monday, February 25th, 2013
tragic incident

ಉಡುಪಿ : ಫೆಬ್ರವರಿ ೨೪  ರವಿವಾರ ದಂದು ತೆಂಕ ಬೋರ್ಡ್‌ ಶಾಲಾ ಸಮೀಪ ರಾಷ್ಟ್ರೀಯ ಹೆದ್ದಾರಿ ಬದಿ ಬಸ್ಸಿಗಾಗಿ ಕಾಯುತ್ತಿದ್ದ ಸಹೋದರಿಯರೀರ್ವರಿಗೆ ಮುಂಬೈನಿಂದ ಕೇರಳದ ಕುಂಬ್ಳೆಗೆ ತೆರಳುತ್ತಿದ್ದ ಮಾರುತಿ ಆಲ್ಟೋ ಕಾರೊಂದು  ಢಿಕ್ಕಿಯಾದ ಪರಿಣಾಮ ಸಾದಿಯಾ ಸದಫ್ (೧೩) ಎಂಬಾಕೆ ತೀವ್ರವಾಗಿ ಗಾಯಗೊಂಡು ಮೃತಪಟ್ಟ ಘಟನೆ ನಡೆದಿದೆ. ರವಿವಾರ ಮಧ್ಯಾಹ್ನ ತಂದೆ ಮೌಲಾನ ಮಹಮ್ಮದ್ ಶೌಕತ್ ಆಲಿ, ತಾಯಿ ಸಂಜರಿ ಖಾತೂನ್ ಮತ್ತು ತಂಗಿ ಸೈಮಾ ಪರ್ವಿನ್‌ಳೊಂದಿಗೆ ನತದೃಷ್ಟೆ ಸಾದಿಯಾ ಸದಫ್ ಉಚ್ಚಿಲಕ್ಕೆ ಸಮಾರಂಭವೊಂದಕ್ಕೆ ತೆರಳುವ ಸಲುವಾಗಿ ಬಸ್‌ಗಾಗಿ ಕಾಯುತ್ತಿದ್ದಳು. […]

ಉಡುಪಿ ಶ್ರೀಕೃಷ್ಣ ಮಠದ ನೂತನ ಬ್ರಹ್ಮರಥ ಶ್ರೀಕೃಷ್ಣನ ಸೇವೆಗೆ ಅರ್ಪಣೆ

Tuesday, January 15th, 2013
Brahmaratha Sri Krishna Mutt

ಉಡುಪಿ : ಶ್ರೀಕೃಷ್ಣ ಇಹಲೋಕ ತ್ಯಜಿಸಿದ ಬಳಿಕ ಅರ್ಜುನನ ಮೇಲೆ ಇತರರು ಆಕ್ರಮಣ ನಡೆಸಿದರು. ಆಗ ಅರ್ಜುನ ಸೋತು ಹೋಗುತ್ತಾನೆ. ಕಾರಣವೆಂದರೆ ಕೃಷ್ಣ ಇಲ್ಲದೆ ಇರುವುದು. ಇಲ್ಲಿಯೂ ರಥ ನಿರ್ಮಿಸಿರಬಹುದು. ಅದರಲ್ಲಿ ಶ್ರೀಕೃಷ್ಣ ಪ್ರತಿಷ್ಠೆ ಆದರೆ ಮಾತ್ರ ಶೋಭೆ’ ಎಂದು ಶ್ರೀಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭತೀರ್ಥರು ಹೇಳಿದರು. ಅವರು ಉಡುಪಿ ಶ್ರೀಕೃಷ್ಣ ಮಠದಲ್ಲಿ ನೂತನವಾಗಿ ನಿರ್ಮಿಸಲಾದ ರಥವನ್ನು ಶ್ರೀಕೃಷ್ಣನ ಸೇವೆಗೆ ಅರ್ಪಿಸಿದರು. ಉಡುಪಿ ಶ್ರೀಕೃಷ್ಣ ಮಠದಲ್ಲಿ ನಿರ್ಮಿಸಲಾದ ನೂತನ ಬ್ರಹ್ಮರಥ ಶ್ರೀಕೃಷ್ಣನ ಸೇವೆಗೆ ಸೋಮವಾರ ಮಕರ ಸಂಕ್ರಮಣ […]

ಉಡುಪಿ ಮಿಲಾಗ್ರಿಸ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

Saturday, December 1st, 2012
Rakshitha Milagres College

ಉಡುಪಿ :ಕಲ್ಯಾಣ್ ಪುರ ಮಿಲಾಗ್ರಿಸ್ ಕಾಲೇಜಿನ ಅಂತಿಮ ಬಿಎಸ್ಸಿ ವಿದ್ಯಾರ್ಥಿನಿ ರಕ್ಷಿತಾ ಎಂಬಾಕೆ ಸಂತೆಕಟ್ಟೆ ಬಳಿಯ ನಯಂಪಳಿಯಲ್ಲಿರುವ ತನ್ನ ಮನೆಯ ಕೋಣೆಯಲ್ಲಿ ನೇಣು ಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದಾಳೆ. ಉಡುಪಿ ಸಂತೇಕಟ್ಟೆ ನಯಂಪಳಿ ನಿಸರ್ಗ ಹೌಸ್ ನಿವಾಸಿ ನಿತ್ಯಾನಂದ ಕೆ.ಪಿ. ಮತ್ತು ಮಾಲತಿ ಎನ್ ಎಂಬವರ ಪುತ್ರಿಯಾಗಿರುವ ರಕ್ಷಾ ಶುಕ್ರವಾರ ಕಾಲೇಜಿಗೆ ರಜೆ ಇದ್ದ ಕಾರಣ ಓದಲೆಂದು ತನ್ನ ಕೋಣೆ ಸೇರುದ್ದಾಳೆನ್ನಲಾಗಿದೆ. ರಕ್ಷಿತಾಳ ಸ್ನೇಹಿತೆಯೊಬ್ಬಳು ಮನೆಗೆ ಫೋನ್ ಕರೆ ಮಾಡಿ ಕಂಪ್ಯೂಟರ್ ಕ್ಲಾಸ್ ಇರುವ ಬಗ್ಗೆ ಆಕೆಗೆ […]

ಇಂದು ಸಾರಿಗೆ ಸಚಿವ ಆರ್‌. ಅಶೋಕ್‌ ರವರಿಂದ ಮಣಿಪಾಲದ ನೂತನ ಆರ್‌ಟಿ‌ಒ ಕಚೇರಿ ಉದ್ಘಾಟನೆ

Friday, November 23rd, 2012
New RTO Office Udupi

ಉಡುಪಿ : ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಬಳಿ ನೂತನವಾಗಿ ನಿರ್ಮಿಸಲಾದ ಸುಸಜ್ಜಿತ ಆರ್‌ಟಿ‌ಒ ಕಚೇರಿ ಕಟ್ಟಡ ಪೂರ್ಣಗೊಂಡಿದ್ದು ಉಪಮುಖ್ಯಮಂತ್ರಿ, ಸಾರಿಗೆ ಸಚಿವರಾದ ಆರ್‌. ಅಶೋಕ್‌ ಇಂದು ಮಧ್ಯಾಹ್ನ 12 30 ಕ್ಕೆ ಈ ನೂತನ ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ಒಟ್ಟು 2.32 ಎಕ್ರೆ ಪ್ರದೇಶದಲ್ಲಿ ಸುಮಾರು 5.94 ಕೋ.ರೂ. ವೆಚ್ಚದಲ್ಲಿ ಕಟ್ಟಡವನ್ನು ನಿರ್ಮಿಸಲಾಗಿದ್ದು, ಕಟ್ಟಡವು ತಳ‌ಅಂತಸ್ತು, ನೆಲ ಅಂತಸ್ತು, ಮತ್ತು ಮೊದಲ ಮಹಡಿಗಳನ್ನೊಳಗೊಂಡಿದೆ . ರಾಜ್ಯದ ವಿವಿಧ ಆರ್‌ಟಿ‌ಒ ಕಚೇರಿಗಳಲ್ಲಿ ವಿಶಾಲ, ವಿಸ್ತಾರವಾದ ಕಚೇರಿ ಎಂಬ ಹೆಗ್ಗಳಿಕೆ ಮಣಿಪಾಲದ […]

ಪಿಯುಸಿ ಫಲಿತಾಂಶಃ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಉಡುಪಿ ದ್ವಿತೀಯ

Thursday, May 24th, 2012
PUC Result

ಮಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದ್ದು,ಶೇ. 86.1 ಫಲಿತಾಂಶ ಲಭಿಸಿದೆ. ಉಡುಪಿ ದ್ವಿತೀಯ (ಶೇ.85.32) ಸ್ಥಾನ ಹಾಗೂ ಕೊಡಗು ತೃತೀಯ ಸ್ಥಾನ ಪಡೆದಿದ್ದು, ಯಾದಗಿರಿ ಶೇ.32.21ಫಲಿತಾಂಶ ಪಡೆದು ಕೊನೆಯ ಸ್ಥಾನ ಪಡೆದಿದೆ. ರಾಜ್ಯದಲ್ಲಿ ಈ ಬಾರಿ ಪಿಯುಸಿಯಲ್ಲಿ ಒಟ್ಟು ಶೇ.57.03ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಇದು ಕಳೆದ ವರ್ಷಕ್ಕಿಂತ ಶೇ.8.01ರಷ್ಟು ಹೆಚ್ಚಳವಾಗಿದೆ. ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂದರೆ ಎಂ.ದೀಪಾ ಮಲ್ಲೇಶ್ವರದ ಎಂಇಎಸ್ ಕಿಶೋರ ವಿದ್ಯಾಲಯದ ವಿದ್ಯಾರ್ಥಿನಿ 593 […]