Blog Archive

ತಂದೆಯನ್ನೇ ಕಡಿದು ಕೊಲೆ ಮಾಡಿದ ಇಬ್ಬರು ದುರುಳ ಮಕ್ಕಳು

Monday, June 15th, 2020
murder

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಕರಾಯ ಗ್ರಾಮದ ಮುಗ್ಗದ ಆನೆಪಲ್ಲ ಎಂಬಲ್ಲಿ ತಂದೆಯನ್ನೇ ಇಬ್ಬರು ಮಕ್ಕಳು ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ  ಭಾನುವಾರ  ಮಧ್ಯರಾತ್ರಿ ನಡೆದಿದೆ. ಧರ್ನಪ್ಪ ಪೂಜಾರಿ (65), ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಅವರ ಮಕ್ಕಳಾದ ಮೋನಪ್ಪ ಹಾಗೂ ನವೀನ ಎಂಬುವವರು ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಆರೋಪಿಗಳು. ಮನೆಯ ಹಿತ್ತಲಿನಲ್ಲಿದ್ದ ತೆಂಗಿನ ಮರದ ತೆಂಗಿನಕಾಯಿ, ಬೊಂಡವನ್ನು ತೆಗೆದು ತಂದೆ ಮಾರಾಟ ಮಾಡುತ್ತಿದ್ದರು. ಇದೇ ವಿಚಾರಕ್ಕೆ ತಂದೆ – ಮಕ್ಕಳಿಬ್ಬರ ಮಧ್ಯೆ ಆಗಾಗ ಜಗಳ […]

ಪುತ್ತೂರು ತಾಲೂಕಿನಲ್ಲಿ ಆವರಿಸಿದ ಡೆಂಗ್ಯೂ ಸಾಂಕ್ರಾಮಿಕ ಜ್ವರದ ಭೀತಿ

Monday, June 8th, 2020
dengue

ಪುತ್ತೂರು : ಕಡಬ  ಮತ್ತು ಪುತ್ತೂರು ತಾಲೂಕಿನಲ್ಲಿ ಜೂನ್‌ ಮೊದಲ ವಾರದಲ್ಲಿ 53 ಸಾಂಕ್ರಾಮಿಕ ಡೆಂಗ್ಯೂ ಜ್ವರ ಬಾಧೆ  ಪ್ರಕರಣಗಳು ಕಂಡು ಬಂದಿವೆ. ಜೂ. 1ರಿಂದ 7ರ ತನಕ ಕಡಬ ಪ್ರಾ.ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 1, ಕೊçಲ-2, ಪುತ್ತೂರು ತಾಲೂಕಿನ ಉಪ್ಪಿನಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 8, ಕೊಳ್ತಿಗೆ-1, ಪಾಣಾಜೆ-31, ಸರ್ವೆ-3, ಶಿರಾಡಿ-1, ತಿಂಗಳಾಡಿ-3 ಪ್ರಕರಣಗಳು ಕಂಡು ಬಂದಿವೆ. ಜನವರಿಯಿಂದ ಜೂನ್‌ 7ರ ತನಕ ಉಭಯ ತಾಲೂಕುಗಳಲ್ಲಿ ಒಟ್ಟು 258 ಡೆಂಗ್ಯೂ ಜ್ವರ ಪ್ರಕರಣಗಳು ದೃಢಪಟ್ಟಿವೆ. […]

ದೆಹಲಿಗೆ ತೆರಳಿದ್ದ ಉಪ್ಪಿನಂಗಡಿಯ ವ್ಯಕ್ತಿಗೆ ಕೋವಿಡ್-19 ಸೋಂಕು

Friday, April 17th, 2020
covid19

ಮಂಗಳೂರು: ದೆಹಲಿಗೆ ತೆರಳಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ನಿವಾಸಿ ಯೋರ್ವರಿಗೆ ಕೋವಿಡ್-19 ಸೋಂಕು ಇರುವುದು ಶುಕ್ರವಾರ ದೃಢಪಟ್ಟಿದೆ. ವೈಯಕ್ತಿಕ ಕೆಲಸದ ಹಿನ್ನೆಲೆ ಇತ್ತೀಚೆಗೆ ಈ ಯುವಕ ದೆಹಲಿಗೆ ತೆರಳಿದ್ದ ಎನ್ನಲಾಗಿದೆ. ಕಳೆದ ಮಾ.21ರಂದು ನಿಜಾಮುದ್ದೀನ್ ರೈಲಿನಲ್ಲಿ ಮಂಗಳೂರಿಗೆ ವಾಪಾಸ್ ಬಂದಿದ್ದ. ಫೋನ್ ಟವರ್ ಲೊಕೇಶನ್ ಆಧಾರದಲ್ಲಿ ಜಿಲ್ಲಾಡಳಿತ ವ್ಯಕ್ತಿಯನ್ನು ಪತ್ತೆ ಮಾಡಿ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ವ್ಯಕ್ತಿಯನ್ನ ಕ್ವಾರಂಟೈನ್ ಮಾಡಿ ಗಂಟಲ ದ್ರಾವಣ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಬಂದ ವರದಿಯಲ್ಲಿ ಯುವಕನಿಗೆ ಕೋವಿಡ್-19 ಪಾಸಿಟಿವ್ […]

ಉಪ್ಪಿನಂಗಡಿ : ಬೈಕ್ ಕಳವು ಪ್ರಕರಣ; ಆರೋಪಿ ಬಂಧನ

Tuesday, March 3rd, 2020
uppinangady

ಉಪ್ಪಿನಂಗಡಿ : ಬೈಕ್ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದು, ಆತನಿಂದ ಕಳವು ಗೈಯಲಾದ ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಕೌಕ್ರಾಡಿ ಗ್ರಾಮದ ಮೂಡಬೈಲು ಬರಮೇಲು ಮನೆ ನಿವಾಸಿ ವಿನಯ (25)ಎಂದು ಗುರುತಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಕಲ್ಲೇರಿ ಪೇಟೆಯಲ್ಲಿ ಸತೀಶ್ ಗೌಡ ಎಂಬವರು ಫೆ.28ರಂದು ತನ್ನ ಬೈಕ್ ಅನ್ನು ನಿಲ್ಲಿಸಿ ಮಂಗಳೂರಿಗೆ ತೆರಳಿದ್ದು, ಫೆ.29ರಂದು ಸಂಜೆ ಬಂದು ನೋಡಿದಾಗ ಬೈಕ್ ಕಳವಾಗಿತ್ತು. ಈ ಬಗ್ಗೆ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ […]

ಉಪ್ಪಿನಂಗಡಿ : ಪೆರಿಯಡ್ಕದಲ್ಲಿ ಕಾರು, ಬೈಕ್-ಆಟೋರಿಕ್ಷಾ ನಡುವೆ ಸರಣಿ ಅಪಘಾತ : ಐವರಿಗೆ ಗಾಯ

Thursday, January 30th, 2020
periyadka

ಉಪ್ಪಿನಂಗಡಿ : ಕಾರು, ಬೈಕ್ ಹಾಗೂ ಆಟೋರಿಕ್ಷಾ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಐವರು ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪೆರಿಯಡ್ಕ ಎಂಬಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. ಉಪ್ಪಿನಂಗಡಿ ಕಡೆಯಿಂದ ಕಡಬ ಕಡೆಗೆ ಬರುತ್ತಿದ್ದ ಫೋರ್ಡ್ ಕಾರು ಹಾಗೂ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಆಟೋರಿಕ್ಷಾ ಮತ್ತು ಬೈಕ್ ನಡುವೆ ಪೆರಿಯಡ್ಕ ಸಮೀಪ ಅಪಘಾತವಾಗಿದೆ. ಘಟನೆಯಲ್ಲಿ ಮೂರು ವಾಹನಗಳು ಜಖಂಗೊಂಡಿದ್ದು, ಗಂಭೀರ ಗಾಯಗಿರುವ ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿರುವ ಬಗ್ಗೆ ಮಾಹಿತಿ ಲಭಿಸಿದೆ. […]

ಉಪ್ಪಿನಂಗಡಿ : ಕಾಲೇಜು ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

Friday, December 6th, 2019
Pratham

ಉಪ್ಪಿನಂಗಡಿ : ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಕ್ಕಾರು ಎಂಬಲ್ಲಿ ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಮರಮೆ ಮನೆ ನಿವಾಸಿ ಪ್ರಥಮ್ ಕೊಂಡೆ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಇವರು ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿಎ ವಿದ್ಯಾರ್ಥಿಯಾಗಿದ್ದರು. ನಿನ್ನೆ ರಾತ್ರಿ ಮನೆಯಲ್ಲಿದ್ದ ಇವರು ಬೆಳಗ್ಗೆ ಮನೆಯ ಬಳಿಯ ಮಾವಿನಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ […]

ಎಸಿಬಿ ಯ ಬಲೆಗೆ ಉಪ್ಪಿನಂಗಡಿಯ ಸರ್ವೇಯರ್

Saturday, October 5th, 2019
Gopala-Mogera

ಉಪ್ಪಿನಂಗಡಿ : ಭೂಮಿ ಪೋಡಿ ವಿಭಜನೆ(ಪ್ಲಾಟಿಂಗ್) ಮಾಡಿಕೊಡಲು ಲಂಚಕ್ಕೆ ಬೇಡಿಕೆಯೊಡ್ಡಿ ಮೊದಲ ಕಂತು ಪಡೆಯುತ್ತಿದ್ದ ಪುತ್ತೂರು ತಾಲೂಕು ಕಚೇರಿ ಭೂಮಾಪನ ಇಲಾಖೆ ಭೂಮಾಪಕ ಎಂ.ಶಿವಕುಮಾರ್ ಎಂಬಾತನನ್ನು ಭ್ರಷ್ಟಾಚಾರ ನಿಗ್ರಹದಳ ಉಪ್ಪಿನಂಗಡಿಯಲ್ಲಿ ಶುಕ್ರವಾರ ಮಧ್ಯಾಹ್ನ ರೆಡ್‌ಹ್ಯಾಂಡ್ ಆಗಿ ಬಂಧಿಸಿದೆ. ಹಿರೇಬಂಡಾಡಿ ಗ್ರಾಮ ನಿವಾಸಿ, ಕೂಲಿ ಕಾರ್ಮಿಕ ಗೋಪಾಲ ಮೊಗೇರ ಎಂಬುವರು ತನ್ನ ತಾಯಿ ಹಾಗೂ ಅಣ್ಣನ ಜಂಟಿ ಖಾತೆಯಲ್ಲಿದ್ದ ಜಮೀನಿನ ಪೋಡಿ ವಿಭಜನೆಗೆ 2015 ಜ.21ರಂದು ಅರ್ಜಿ ಸಲ್ಲಿಸಿದ್ದರು. ಆದರೆ 4 ವರ್ಷವಾದರೂ ಭೂಮಾಪನ ಇಲಾಖೆ ಸ್ಪಂದಿಸಿರಲಿಲ್ಲ. ಈ […]

ಉಪ್ಪಿನಂಗಡಿ : ನಾಡಕಚೇರಿಯಲ್ಲಿ ನೆಪವೊಡ್ಡಿ ಅರ್ಜಿ ವಿಲೇವಾರಿ ವಿಳಂಬ; ಗ್ರಾಮಸ್ಥರ ಆಕ್ರೋಶ

Friday, September 20th, 2019
uppinangady

ಉಪ್ಪಿನಂಗಡಿ : ನಾಡಕಚೇರಿಯಲ್ಲಿ ಯಾವುದೇ ಕೆಲಸಗಳು ಸಕಾಲದಲ್ಲಿ ಆಗುತ್ತಿಲ್ಲ. ನೆಟ್‌ವರ್ಕ್‌ ಸಮಸ್ಯೆ ಇದೆ ಎಂದು ವಿಳಂಬ ಮಾಡುತ್ತಾರೆ ಎಂದು ಗ್ರಾಮಸ್ಥರು ಹಿರೇಬಂಡಾಡಿ ಗ್ರಾಮಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧ್ಯಕ್ಷ ಹಮ್ಮಬ್ಬ ಶೌಕತ್‌ ಆಲಿ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಮುದಾಯ ಭವನದಲ್ಲಿ ಸಭೆ ನಡೆಯಿತು. ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ವಿದ್ಯಾರಾಣಿ ನೋಡಲ್‌ ಅಧಿಕಾರಿಯಾಗಿದ್ದರು. ಗ್ರಾಮಕರಣಿಕ ರಮಾನಂದ ಚಕ್ಕಡಿ ಮಾಹಿತಿ ನೀಡುತ್ತಿದ್ದ ವೇಳೆ ವಿಷಯ ಪ್ರಸ್ತಾವಿಸಿದ ಗ್ರಾಮಸ್ಥರಾದ ಕಿಶೋರ್‌, ರವಿ ಪಟಾರ್ತಿ, ಶೇಷಪ್ಪ ನೆಕ್ಕಿಲು ಮತ್ತು ಚೆನ್ನಕೇಶವ, ನಾಡಕಚೇರಿಯಲ್ಲಿ ಯಾವುದೇ […]

ಉಪ್ಪಿನಂಗಡಿಯಲ್ಲಿ ಜ್ಯುವೆಲ್ಲರಿ ದರೋಡೆ; ಲಕ್ಷಾಂತರ ಮೌಲ್ಯದ ಒಡವೆಗಳು ಕಳವು

Friday, August 16th, 2019
uppinangadi

ಉಪ್ಪಿನಂಗಡಿ : ಇಲ್ಲಿನ ಶಾಲಾ ರಸ್ತೆಯಲ್ಲಿರುವ ಆರ್‌. ಕೆ ಜ್ಯುವೆಲ್ಲರಿಗೆ ಬುಧವಾರ ತಡರಾತ್ರಿ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಒಡವೆಗಳನ್ನು ದೋಚಿದ ಘಟನೆ ಬೆಳಕಿಗೆ ಬಂದಿದೆ. ಜ್ಯುವೆಲ್ಲರಿಯಿಂದ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಚಿನ್ನ ದೋಚಲಾಗಿದೆ ಎಂದು ತಿಳಿದುಬಂದಿದೆ. ದರೋಡೆಕೋರರು ಗ್ಯಾಸ್‌ ಕಟ್ಟರ್‌ ಬಳಸಿ, ಅಂಗಡಿಯ ಶಟರ್‌ ಬಾಗಿಲು ಮುರಿದು ಒಳನುಗ್ಗಿದ್ದಾರೆ ಆದರೆ ಒಳಗಿದ್ದ ಲಾಕರ್ ರೂಮ್‌ ದೋಚಿಲ್ಲ. ಈ ಜ್ಯುವೆಲ್ಲರಿಗೆ ಒಬ್ಬ ಕಾವಲುಗಾರನಿದ್ದು, ಉಪ್ಪಿನಂಗಡಿ ಪೇಟೆಗೂ ಆತನೆ ಕಾವಲುಗಾರನಾಗಿದ್ದಾನೆ. ಆತ ರಾತ್ರಿ 1 […]

ವಿದ್ಯುತ್ತಿಲ್ಲದೆ ತೋಟಕ್ಕೆ ಹರಿಯುತ್ತಿದೆ ನೀರು!

Thursday, December 13th, 2018
nelyadi

ಉಪ್ಪಿನಂಗಡಿ: ಹರಿಯುವ ನೀರಿನ ಶಕ್ತಿಯನ್ನೇ ಬಳಸಿಕೊಂಡ ರೈತರೊಬ್ಬರು ತಮ್ಮ ತೋಟವನ್ನು ವಿದ್ಯುತ್ಛಕ್ತಿಯ ಸಹಾಯವೇ ಇಲ್ಲದೆ ನೀರಾವರಿ ವ್ಯವಸ್ಥೆಗೆ ಒಳಪಡಿಸಿದ್ದಾರೆ. ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಅಗರ್ತ ಮನೆ ನಿವಾಸಿ ಎ. ಬಾಳಪ್ಪ ಗೌಡ ಅವರಿಗೆ ಈಗ 65 ವರ್ಷ. ಆದರೆ, ಅವರ ಸಂಶೋಧನ ಪ್ರವೃತ್ತಿ ಯುವಕರನ್ನೂ ನಾಚಿಸುವಂತಿದೆ. ತೋಡಿನಲ್ಲಿ ಹರಿಯುವ ನೀರನ್ನು ಅವರು ಸರಳ ತಂತ್ರಜ್ಞಾನ ಬಳಸಿ ತುಸು ಎತ್ತರದಲ್ಲಿರುವ ತೋಟಕ್ಕೆ ಹರಿಯುವಂತೆ ಮಾಡಿದ್ದಾರೆ. ತೋಡಿನ ನೀರಿನ ವೇಗವನ್ನೇ ಶಕ್ತಿಯನ್ನಾಗಿಸಿ ನೀರಾವರಿಯ ತಂತ್ರಜ್ಞಾನವನ್ನು ಬಾಳಪ್ಪ ಗೌಡರು ಅಳವಡಿಸಿಕೊಂಡಿದ್ದಾರೆ. […]