Blog Archive

ಬೆದ್ರೋಡಿಯಲ್ಲಿ ಟ್ಯಾಂಕರ್ ಪಲ್ಟಿ: ಗ್ಯಾಸ್ ಸೋರಿಕೆ

Monday, December 3rd, 2018
tankar

ಮಂಗಳೂರು: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಉಪ್ಪಿನಂಗಡಿ ಬಳಿಯ ಬೆದ್ರೋಡಿ ಎಂಬಲ್ಲಿ ನಿನ್ನೆ ತಡ ರಾತ್ರಿ 1:50 ಕ್ಕೆ ಗ್ಯಾಸ್ ಟ್ಯಾಂಕರೊಂದು ಮಗುಚಿ ಬಿದ್ದ ಪರಿಣಾಮ ಅನಿಲ ಸೋರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ‌ ಸ್ಥಳೀಯ ನಿವಾಸಿಗಳಿಗೆ ಬೆಂಕಿ‌ ಉರಿಸದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಮಂಗಳೂರಿನಿಂದ ಬೆಂಗಳೂರಿಗೆ ಭಾರತ್ ಪೆಟ್ರೋಲಿಯಂ ಕಂಪೆನಿಯ ಅನಿಲ ಟ್ಯಾಂಕರ್ ತೆರಳುತ್ತಿತ್ತು. ಈ ವೇಳೆ ಬೆದ್ರೋಡಿಯ ತೂಗು ಸೇತುವೆ ಬಳಿಯ ತಿರುವಿನಲ್ಲಿ ಮಗುಚಿ ಬಿದ್ದಿದೆ. ಪರಿಣಾಮ ಅನಿಲ ಸೋರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಪರಿಸರದ ನಿವಾಸಿಗಳನ್ನು ಸುರಕ್ಷಿತಾ ಸ್ಥಳಗಳಿಗೆ […]

ರೌಡಿ ಶೀಟರ್ ಕೊಲೆ ಪ್ರಕರಣ: ನಟೋರಿಯಸ್​ ಗ್ಯಾಂಗ್​ನ ರೌಡಿ ಅರೆಸ್ಟ್

Friday, October 26th, 2018
mangaluru

ಮಂಗಳೂರು: ಉಪ್ಪಿನಂಗಡಿಯ ಕುಪ್ಪೆಟ್ಟಿ ನದಿ ಬಳಿ ನಡೆದ ಕೇರಳದ ರೌಡಿ ಶೀಟರ್ ಉಣ್ಣಿಕೃಷ್ಣನ್ ಕೊಲೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿವೋರ್ವನನ್ನು ಪೊಲೀಸರು ಕೊಚ್ಚಿಯಲ್ಲಿ ಬಂಧಿಸಿದ್ದಾರೆ. ಕೇರಳದ ಎರ್ನಾಕುಲಂ ನಿವಾಸಿ ನಟೋರಿಯಸ್ ಗ್ಯಾಂಗ್ನ ರೌಡಿ ಶೀಟರ್ ಅನಾಸ್(35) ಬಂಧಿತ ಆರೋಪಿ. ಸೆ.2 ರಂದು ಉನ್ನಿಕೃಷ್ಣನ್ನನ್ನು ಕೊಲೆ ಮಾಡಿ ಉಪ್ಪಿನಂಗಡಿಯ ಕುಪ್ಪೆಟ್ಟಿ ನದಿ ಬಳಿ ಶವ ಎಸೆದು ಹೋಗಿದ್ದರು. ಸೆ.4ರಂದು ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸಿ 4 ಜನರನ್ನು ಬಂಧಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ […]

ಸೊಸೆಯ ಕಿರುಕುಳ: ಗೃಹ ಬಂಧನದಲ್ಲಿದ್ದ ವ್ಯಕ್ತಿಗೆ ಉಪ್ಪಿನಂಗಡಿ ಎಸ್​ಐ ಆಶ್ರಯ

Tuesday, October 2nd, 2018
police

ಮಂಗಳೂರು: ಮನೆಮಂದಿಗೆ ಬೇಡವಾಗಿ ಗೃಹಬಂಧನದಲ್ಲಿದ್ದ ವ್ಯಕ್ತಿಯ ಬಗ್ಗೆ ಅರಿತುಕೊಂಡ ಉಪ್ಪಿನಂಗಡಿ ಎಸ್ಐ ತಮ್ಮ ಮನೆಯಲ್ಲೇ ಆಶ್ರಯ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಹೌದು.., ಉಪ್ಪಿನಂಗಡಿ ಸಮೀಪದ ನಟ್ಟಿಬೈಲ್ ನಿವಾಸಿಯಾದ ಸುಲೈಮಾನ್ ಎಂಬುವರು ಹಲವಾರು ದಿನಗಳಿಂದ ಸೊಸೆಯ ಕಿರುಕುಳದಿಂದ ಗೃಹಬಂಧನದಲ್ಲಿದ್ದರು. ಊಟ ಉಪಚಾರವಿಲ್ಲದೆ ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಬಗ್ಗೆ ಉಪ್ಪಿನಂಗಡಿ ನಾಗರಿಕರು ಉಪ್ಪಿನಂಗಡಿ ಎಸ್ಐ ಅವರಿಗೆ ಈ ವಿಷಯ ತಿಳಿಸಿದ್ದರು. ವಿಷಯ ತಿಳಿದು ಭಾನುವಾರ ಉಪ್ಪಿನಂಗಡಿ ಸಬ್ ಇನ್ಸ್ಪೆಕ್ಟರ್ ನಂದಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರು. ಊರವರಿಗೆ […]

ಇಂದು ಕೂಡ ದ.ಕ ಜಿಲ್ಲೆಯಲ್ಲಿ ವರುಣನ ಅಬ್ಬರ..ಜನಜೀವನ ಅಸ್ತವ್ಯಸ್ತ!

Friday, August 17th, 2018
heavy-rain

ಮಂಗಳೂರು: ಇಂದು ಕೂಡ ದ.ಕ ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ತೀವ್ರತೆ ಸ್ವಲ್ಪ ಕಡಿಮೆಯಾಗಿದ್ದರೂ ನೆರೆ ಹಾವಳಿ ಮುಂದುವರಿದಿದೆ. ನೇತ್ರಾವತಿ, ಕುಮಾರಧಾರ ನದಿಗಳು ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿ ನೆರೆ ಹಾವಳಿಯಿಂದ ಹಲವು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಬಂಟ್ವಾಳ ತಾಲೂಕಿನಲ್ಲಿ ನೆರೆಯಿಂದ ಸಂತ್ರಸ್ತರಾದ 101 ಮನೆಗಳ 539 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಜಿಲ್ಲೆಯ ಆಲಡ್ಕ, ಕಡಬ, ಕೂಟೇಲು, ಉಪ್ಪಿನಂಗಡಿ, ಗುಂಡ್ಯ, ಶಿರಾಡಿ, ಉದನೆ, ಇಚಿಲಂಪಾಡಿ, ಕುರಿಯಾಳಕೊಪ್ಪ, ಪಡುಬೆಟ್ಟು, ಪಟ್ರಮೆ, ಶಿಶಿಲ, ಶಿಬಾಜೆ ಹಾಗೂ ಸುಳ್ಯ ಭಾಗಗಳಲ್ಲಿ […]

ದ.ಕ. ಜಿಲ್ಲೆಯಾದ್ಯಂತ ವರುಣನ ಅಬ್ಬರ..ಹಲವೆಡೆ ಹಾನಿ!

Saturday, July 7th, 2018
heavy-rain-again

ಮಂಗಳೂರು: ದ.ಕ. ಜಿಲ್ಲೆಯಾದ್ಯಂತ ವರುಣನ ಅಬ್ಬರ ಮುಂದುವರೆದಿದೆ. ಜಿಲ್ಲೆಯಾದ್ಯಂತ ಕಳೆದ ಎರಡು ಮೂರು ದಿನಗಳಿಂದ ಬಿರುಸಿನ ಮಳೆ ಸುರಿಯುತ್ತಿದ್ದು, ಇಂದು ಕೂಡ ಕುಂಭದ್ರೋಣ ಮಳೆ ಮುಂದುವರೆದಿದೆ. ಜೊತೆಗೆ ಹಲವೆಡೆ ಹಾನಿಯೂ ಸಂಭವಿಸಿದೆ. ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕುಮಾರಧಾರಾ ನದಿ ಉಕ್ಕಿ ಹರಿಯುತ್ತಿದೆ. ಪರಿಣಾಮವಾಗಿ ಕಡಬ-ಉಪ್ಪಿನಂಗಡಿ ನಡುವಣ ಸಂಪರ್ಕ ಕೊಂಡಿ ಹೊಸ್ಮಠ ಸೇತುವೆ ಮುಳುಗಡೆಯಾಗಿದೆ. ಜೊತೆಗೆ ಸುಬ್ರಹ್ಮಣ್ಯದ ಸ್ನಾನಘಟ್ಟ ಕೂಡ ಜಲಾವೃತಗೊಂಡಿದೆ. ಪುತ್ತೂರಿನಲ್ಲಿ ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ಮನೆಯೊಂದರ ತಡೆಗೋಡೆ ಕುಸಿದು, ಮನೆಯೊಳಗೆ […]

ಶಿರಾಡಿ ಘಾಟಿ 2ನೇ ಹಂತದ ಕಾಂಕ್ರೀಟ್‌ ರಸ್ತೆ ಕಾಮಗಾರಿ ವೀಕ್ಷಿಸಿದ ಡಾ.ವೀರೇಂದ್ರ ಹೆಗ್ಗಡೆ

Tuesday, June 5th, 2018
veerendra-heggade-2

ಉಪ್ಪಿನಂಗಡಿ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಕಲೇಶಪುರದ ಕೆಂಪುಹೊಳೆಯಿಂದ ಶಿರಾಡಿ ಗ್ರಾಮದ ಅಡ್ಡಹೊಳೆ ತನಕ ನಡೆಯುತ್ತಿರುವ ಶಿರಾಡಿ ಘಾಟಿ ರಸ್ತೆ 2ನೇ ಹಂತದ ಕಾಂಕ್ರೀಟ್‌ ರಸ್ತೆ ಕಾಮಗಾರಿಯನ್ನು ಧರ್ಮಸ್ಥಳ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವೀಕ್ಷಿಸಿ ಕಾಮಗಾರಿಯ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವೀರೇಂದ್ರ ಹೆಗ್ಗಡೆಯವರು ಜೂ. 2ರಂದು ಪೂರ್ಣ 13 ಕಿ.ಮೀ. ದೂರದ ತನಕ ಕಾಮಗಾರಿ ವೀಕ್ಷಿಸಿದರು. ಕಾಂಕ್ರೀಟ್‌ ಕಾಮಗಾರಿಗಾಗಿ ಬಳಸುವ ಜರ್ಮನ್‌ ಯಂತ್ರ, ಕಾಮಗಾರಿ ಸಲುವಾಗಿ ಮಿಕ್ಸಿಂಗ್‌ ಯಂತ್ರ ಹಾಗೂ ಯುನಿಟ್‌ […]

ಭಾರಿ ಮಳೆಗೆ ಕಡಬದಲ್ಲಿ ಹೊಸ್ಮಠ ಸೇತುವೆ ರಸ್ತೆ ಕುಸಿತ

Monday, May 28th, 2018
heavy-rain

ಮಂಗಳೂರು: ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಪುತ್ತೂರು ತಾಲೂಕಿನ ಕಡಬದ ಬಳಿಯಿರುವ ಹೊಸ್ಮಠ ಸೇತುವೆಯ ರಸ್ತೆ ಕುಸಿದಿದೆ. ಸೇತುವೆಯ ಬದಿಯಲ್ಲಿರುವ ರಸ್ತೆ‌ ಕೂಡ ಕುಸಿದಿದೆ. ಕಡಬ ಮತ್ತು ಉಪ್ಪಿನಂಗಡಿ ಸಂಪರ್ಕಿಸುವ ರಸ್ತೆ ಇದಾಗಿದ್ದು ಸಂಚಾರ ಅಸ್ತವ್ಯಸ್ಥವಾಗಿದೆ. ಜೆಸಿಬಿ ಬಳಸಿ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದ್ದು, ವಾಹನ ಸಂಚಾರ ಮತ್ತೆ ಆರಂಭವಾಗಿದೆ.

ಲಾರಿ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Wednesday, April 25th, 2018
accident

ಉಪ್ಪಿನಂಗಡಿ: ಲಾರಿಯೊಂದು ಢಿಕ್ಕಿ ಹೊಡೆದು ಬೈಕ್ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಉಪ್ಪಿನಂಗಡಿ- ಗುರುವಾಯನಕೆರೆ ರಾಜ್ಯ ಹೆದ್ದಾರಿಯ ಪೆದಮಲೆ ಬಳಿ ಬುಧವಾರ ಬೆಳಗ್ಗೆ ನಡೆದಿದೆ. ಪಿಲಿಗೂಡಿನ ಮೂಡಬೈಲ್‌ನ ಅಶೋಕ್ ಪೂಜಾರಿ (29) ಮೃತ ಬೈಕ್ ಸವಾರ. ಇವರು ಉಪ್ಪಿನಂಗಡಿಯಿಂದ ಬೆಳ್ತಂಗಡಿ ಕಡೆ ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭ ಎದುರುಗಡೆಯಿಂದ ಬಂದ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಅಶೋಕ್ ಪೂಜಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪುತ್ತೂರು ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಕೂಟರ್-ಬಸ್ ನಡುವೆ ಡಿಕ್ಕಿ… ಸವಾರ ಸ್ಥಳದಲ್ಲೇ‌ ಸಾವು

Tuesday, March 27th, 2018
accident

ಮಂಗಳೂರು: ಸ್ಕೂಟರ್ ಹಾಗೂ ಬಸ್ ನಡುವೆ ಡಿಕ್ಕಿ ಸಂಭವಿಸಿದ್ದು ಸ್ಕೂಟರ್ ಸವಾರ ಸ್ಥಳದಲ್ಲೇ‌ ಸಾವಿಗೀಡಾಗಿರುವ ಘಟನೆ ಉಪ್ಪಿನಂಗಡಿ ಸಮೀಪದ ಕಲ್ಲೇರಿ ಎಂಬಲ್ಲಿ ನಡೆದಿದೆ. ಕಲ್ಲೇರಿ ನಿವಾಸಿ ಚಂದ್ರಶೇಖರ್ ಮೃತ ಸವಾರ. ಚಂದ್ರಶೇಖರ್ ಮೇಲೆ ಬಸ್‌‌ ಹರಿದಿದ್ದು, ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪುತ್ತೂರಿನಲ್ಲಿ ಮಾಜಿ ಸೈನಿಕನಿಗೆ ಗನ್ ತೋರಿಸಿ ಮನೆ ದೋಚಿದ ಕಳ್ಳರು

Thursday, March 22nd, 2018
puttur

ಮಂಗಳೂರು: ವೃದ್ದ ದಂಪತಿಯ ಮನೆಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಚಾಕು ಹಾಗು ಪಿಸ್ತೂಲ್ ತೋರಿಸಿ ಮನೆಯಲ್ಲಿದ್ದ ನಗ ನಗದು ದೋಚಿ ಪರಾರಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ . ಇಲ್ಲಿನ ಇಚಿಲಂಪಾಡಿ ಎಂಬಲ್ಲಿ ಈ ಘಟನೆ ನಡೆದಿದ್ದು ನಿವೃತ್ತ ಯೋಧ ನಾರಾಯಣ ಪಿಳ್ಳೆ ಎಂಬವರ ಮನೆಗೆ ಮಂಗಳವಾರ ರಾತ್ರಿ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಮನೆಯಲ್ಲಿದ್ದ ನಾರಾಯಣ ಪಿಳ್ಳೆ ಹಾಗೂ ಅವರ ಪತ್ನಿಯವರನ್ನು ಚಾಕು ಮತ್ತು ಪಿಸ್ತೂಲು ತೋರಿಸಿ ಬೆದರಿಸಿದ್ದಾರೆ . ನಂತರ ಮನೆಯಲ್ಲಿದ್ದ 35 […]