Blog Archive

ಕಂಬಳ ವಿರುದ್ಧದ ಪೆಟಾ ಅರ್ಜಿ ವಜಾ

Tuesday, March 13th, 2018
peta-kambala

ಮಂಗಳೂರು: ರಾಜ್ಯದಲ್ಲಿ ಕಂಬಳ ಆಯೋಜನೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಪೆಟಾ (ಪೀಪಲ್‌ ಫಾರ್‌ ದ ಎಥಿಕಲ್‌ ಟ್ರೀಟ್‌ಮೆಂಟ್‌ ಆಫ್‌ ಎನಿಮಲ್‌) ಸಂಘಟನೆ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ಸುಪ್ರೀಂಕೋರ್ಟ್‌ ವಜಾ ಮಾಡಿದೆ. ಇದರೊಂದಿಗೆ ಕಂಬಳ ಆಯೋಜಿಸುವುದಕ್ಕೆ ಎದುರಾಗಿದ್ದ ಕಾನೂನು ಸಂಘರ್ಷ ಸದ್ಯಕ್ಕೆ ತೆರೆ ಕಂಡಿದೆ. ಈ ಹಿಂದೆ ಪೆಟಾ ಸಲ್ಲಿಸಿದ್ದ ಅರ್ಜಿಯ ಮುಂದುವರಿದ ವಿಚಾರಣೆಯನ್ನು ಸೋಮವಾರ ನಡೆಸಿದ ಸರ್ವೋಚ್ಚ ನ್ಯಾಯಾಲಯದ ತ್ರಿಸದಸ್ಯ ಪೀಠವು ಪೆಟಾ ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿತು. ರಾಜ್ಯದಲ್ಲಿ ಕಂಬಳಕ್ಕೆ ಅವಕಾಶ ನೀಡಿ ಹೊರಡಿಸಿರುವ ಅಧ್ಯಾದೇಶ […]

ಉಪ್ಪಿನಂಗಡಿಯಲ್ಲಿ ದಲಿತ ಯುವತಿಯ ಮೇಲೆ ಗ್ಯಾಂಗ್ ರೇಪ್

Saturday, February 17th, 2018
gang-rape

ಮಂಗಳೂರು: ದಲಿತ ಯುವತಿಯ ಮೇಲೆ ಯುವಕರಿಬ್ಬರು ಅತ್ಯಾಚಾರ ನಡೆಸಿದ ಪೈಶಾಚಿಕ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಈ ಘಟನೆ ನಡೆದಿದೆ. ಗುರುವಾರ ತಡ ರಾತ್ರಿ ಈ ಘಟನೆ ನಡೆದಿದ್ದು ದಲಿತ ಯುವತಿಯ ಮೇಲೆ ಕಾಮುಕರು ನೆಲ್ಯಾಡಿ ಎಂಬಲ್ಲಿ ಗ್ಯಾಂಗ್ ರೇಪ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಗುರುವಾರ ರಾತ್ರಿ ಬೆಟ್ಟಂಪಾಡಿಯ ಯುವತಿಯೋರ್ವಳನ್ನು ಕರೆತಂದು ನೆಲ್ಯಾಡಿ ಬಳಿಯ ಖಾಲಿ ಮನೆಯೊಂದರಲ್ಲಿ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ತಡರಾತ್ರಿ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಯುವತಿಯನ್ನು […]

ಬಡ ಸಂತ್ರಸ್ತೆಯ ಹಣ ಮರಳಿ ದೊರಕಿಸಿಕೊಟ್ಟ ಎಸ್ಐ ನಿಷ್ಠೆಗೆ ಸಾರ್ವಜನಿಕರ ಶ್ಲಾಘನೆ

Saturday, February 3rd, 2018
nanda-kumar

ಮಂಗಳೂರು: ಬಡವರ ದುಡ್ಡು ನುಂಗುವ ಅಧಿಕಾರಿಗಳಿಂದ ಕಸಿದು ಮತ್ತೆ ಬಡವರಿಗೆ ಹಂಚಿದ ನಿಷ್ಠಾವಂತ ಎಸ್ಐ ನಂದಕುಮಾರ್ ಅವರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ 2016ರಲ್ಲಿ ರಸ್ತೆ ಸಮೀಪದ ಮನೆಗಳನ್ನು ತೆರವುಗೊಳಿಸಿ, ಸಂತ್ರಸ್ತರಿಗೆ ಪರಿಹಾರವನ್ನೂ ನೀಡಿತ್ತು. ಆದರೆ ಆ ಸಂದರ್ಭ ಬಡ ಕುಟುಂಬದ ಮಹಿಳೆಯೊಬ್ಬರಿಗೆ ಭೂ ಸ್ವಾಧೀನ ಮಾಡಿದ ಹೆದ್ದಾರಿ ಪ್ರಾಧಿಕಾರ 5.20ಲಕ್ಷ ರೂ. ಪರಿಹಾರ ನೀಡಬೇಕಿತ್ತು. ಆದರೆ, ಮಧ್ಯವರ್ತಿಗಳ ತಂಡವೊಂದು 4.30ಲಕ್ಷ ರೂ. ವಂಚನೆ ಮಾಡಿತ್ತು. ಇದರಿಂದ ನೊಂದ ಆ […]

ಐಎಎಸ್‌ ಅಧಿಕಾರಿಗಳು ಬಂದರೂ ಅಭಿವೃದ್ಧಿ ಮರೀಚಿಕೆ

Thursday, January 4th, 2018
bridge-putur

ಪುತ್ತೂರು: ಮಂಜಲ್ಪಡ್ಪು ಬಳಿಯ ಶಿಂಗಾಣಿ ಸೇತುವೆ, ಪ್ರಮುಖ ರಸ್ತೆಗಳ ವಿಸ್ತರಣೆ, ಬಿರುಮಲೆ ಅಭಿವೃದ್ಧಿ,ಉಪ್ಪಿನಂಗಡಿ ಬಳಿಯ ನದಿ ಒತ್ತುವರಿ, ರೈಲ್ವೇ ಮೇಲ್ಸೇತುವೆ, ದಿನವಹಿ ಸಂತೆ ಹೀಗೆ ಹಲವು ವಿಷಯಗಳು ಕ್ರಮೇಣ ಮೂಲೆ ಗುಂಪಾಗುತ್ತಿವೆ. ಈ ಎಲ್ಲ ಯೋಜನೆಗಳಿಗಾಗಿ ಸಾಕಷ್ಟು ಅನುದಾನ ಬಳಸಿಕೊಳ್ಳಲಾಗಿದೆ. ಒಂದೆಡೆ ಬಳಕೆಗೂ ಲಭ್ಯವಾಗದೆ, ಇನ್ನೊಂದೆಡೆ ಅನುದಾನವೂ ಪೋಲಾಗುವ ಭೀತಿ ಎದುರಾಗಿದೆ. ಲಕ್ಷಾಂತರ ರೂ.ವನ್ನು ಯೋಜನೆಗೆ ವಿನಿಯೋಗಿಸಿದ್ದರೂ ಬಳಕೆಗೆ ಲಭ್ಯವಾಗಿಲ್ಲ. ಇದನ್ನು ಪ್ರಶ್ನಿಸಿದರೆ ಜನಪ್ರತಿನಿಧಿಗಳು ಅಧಿಕಾರಿಗಳ ಕಡೆ ಕೈ ತೋರಿಸುತ್ತಾರೆ. ಅಧಿಕಾರಿಗಳು ಮೇಲಧಿಕಾರಿಗಳ ಹೆಸರನ್ನು ಹೇಳಿ ನುಣುಚಿಕೊಳ್ಳುತ್ತಾರೆ. […]

ಕುಂತೂರು ಪದವು: ರಸ್ತೆ ಅಪಘಾತ; ಬೈಕ್ ಸವಾರರಿಗೆ ಗಾಯ

Wednesday, December 20th, 2017
bike-accident

ಕಡಬ: ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಂತೂರು ಪದವು ಎಂಬಲ್ಲಿ ಬೈಕ್ ಮಧ್ಯೆ ಅಪಘಾತ ಉಂಟಾಗಿ ಎರಡೂ ಬೈಕಿನ ಸವಾರರೂ ಗಂಭೀರ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ. ಗಾಯಗೊಂಡವರನ್ನು ಪುತ್ತೂರು ಒಕ್ಕಲಿಗ ಗೌಡ ಸಹಕಾರಿ ಸಂಘದ ಕಡಬ ಶಾಖೆಯ ಪಿಗ್ಮಿ ಸಂಗ್ರಾಹಕ ಪುತ್ತೂರು ತಾಲೂಕಿನ ಕೊಂಬಾರು ಗ್ರಾಮದ ಆರ್ದೇಲ್ ನಿವಾಸಿ ಬೆಳಿಯಪ್ಪ ಗೌಡ(32) ಎಂದು ಗುರುತಿಸಲಾಗಿದೆ. ಇನ್ನೊಂದು ಬೈಕಿನ ಸವಾರ ಪೆರಾಬೆ ನಿವಾಸಿ ಭುವನ್ (22) ಎಂದು ಗುರುತಿಸಲಾಗಿದೆ. ಬೆಳಿಯಪ್ಪ ಗೌಡ ಅವರು ಆಲಂಕಾರಿನಲ್ಲಿ ಪಿಗ್ಮಿ […]

ಹಲ್ಲೆ ಪ್ರಕರಣ: ಏಳು ಮಂದಿಗೆ ಶಿಕ್ಷೆ, ದಂಡ

Wednesday, December 13th, 2017
7-people

ಮಂಗಳೂರು: ವೈಯುಕ್ತಕ ಮತ್ತು ಹಾಗೂ ಕೌಟುಂಬಿಕ ವೈಷಮ್ಯದ ಹಿನ್ನೆಯಲ್ಲಿ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ 7 ಮಂದಿ ಅಪರಾಧಿಗಳಿಗೆ ಮಂಗಳೂರಿನ 4ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 5 ವರ್ಷಗಳ ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಉಪ್ಪಿನಂಗಡಿ ನಿವಾಸಿಗಳಾದ ಜೆಸಿಬಿ ಸಿದ್ದೀಕ್ (36), ಸುಲೈಮಾನ್ (33), ಸಿರಾಜ್ (31), ಅಬ್ದುಲ್ ಗಫೂರ್ (36), ಹಾರಿಸ್ (34), ಅಬ್ದುಲ್ ಸತ್ತಾರ್ (28), ಬಿ.ಟಿ. ಫಾರೂಕ್ (30) […]

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿಯಲ್ಲಿ ಗ್ಯಾಸ್ ಟ್ಯಾಂಕರ್‌ ಪಲ್ಟಿ

Tuesday, December 13th, 2016
Lpg-bullet-tanker

ಪುತ್ತೂರು: ಗ್ಯಾಸ್ ಟ್ಯಾಂಕರ್‌ವೊಂದು ಪಲ್ಟಿಯಾದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿ ಸಮೀಪದ ನೀರಕಟ್ಟೆ ಎಂಬಲ್ಲಿ ನಡೆದಿದೆ. ಗ್ಯಾಸ್ ಟ್ಯಾಂಕರ್‌ ಪಲ್ಟಿಯಾದ ಪರಿಣಾಮ ಗ್ಯಾಸ್‌‌ ಸೋರಿಕೆಯಾಗುತ್ತಿದೆ. ಇದರಿಂದ ಕೆಲಹೊತ್ತು ಆತಂಕಕ್ಕೆ ಕಾರಣವಾಗಿತ್ತು. ಆದ್ರೆ, ಹೆಚ್.ಪಿ.ಸಿ.ಎಲ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಗ್ಯಾಸ್ ಶಿಫ್ಟ್ ಮಾಡುವ ಕಾರ್ಯ ಆರಂಭಿಸಿದ್ದಾರೆ. ಯಾವುದೇ ಅನಾಹುತ ಸಂಭವಿಸಿದಂತೆ ಮುನ್ನೆಚ್ಚೆರಿಕ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹೆದ್ದಾರಿಯಲ್ಲಿ ತೆರಳುವ ವಾಹನಗಳಿಗೆ ಪೊಲೀಸರು ಪರ್ಯಾಯ ಮಾರ್ಗ ಕಲ್ಪಿಸಿದ್ದಾರೆ. ಬೆಂಗಳೂರಿನಿಂದ ಮಂಗಳೂರು […]

ಕಿಂಡಿ ಅಣೆಕಟ್ಟನ್ನು ಸ್ವಯಂ ಸ್ಫೂರ್ತಿಯಿಂದ ದುರಸ್ತಿ ಮಾಡಿ ನೀರು ಸಂಗ್ರಹಕ್ಕೆ ಅವಕಾಶ ಮಾಡಿದ ಯುವಕರ ಪಡೆ

Tuesday, December 6th, 2016
Uppinangadi

ಪುತ್ತೂರು: ಹಲವು ದಿನಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಕಿಂಡಿ ಅಣೆಕಟ್ಟನ್ನು ಸ್ವಯಂ ಸ್ಫೂರ್ತಿಯಿಂದ ದುರಸ್ತಿ ಮಾಡಿ ನೀರು ಸಂಗ್ರಹಕ್ಕೆ ಯುವಕರ ಪಡೆ ಅವಕಾಶ ಮಾಡಿ ಆದರ್ಶ ಮೆರೆದಿರುವ ವಿಶಿಷ್ಠ ಕಾರ್ಯ ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆಯಿತು. ಉಪ್ಪಿನಂಗಡಿ ಗ್ರಾಮದ ಅರ್ತಿಲನಾಲಯದ ಗುಂಡಿ ಎಂಬಲ್ಲಿನ ಕಿಂಡಿ ಅಣೆಕಟ್ಟು ನಿರ್ಲಕ್ಷ್ಯಕ್ಕೆ ತುತ್ತಾಗಿತ್ತು. ಕಿಂಡಿ ಅಣೆಕಟ್ಟಿನ ಹಲಗೆಯೂ ಕಣ್ಮರೆಯಾಗಿತ್ತು. ಬಳಕೆಯಾಗದೇ ಉಳಿದಿದ್ದ ಕಿಂಡಿ ಅಣೆಕಟ್ಟಿಗೆ ಅಡಕೆ ಮರದ ಪಟ್ಟಿಯನ್ನು ಅಳವಡಿಸಿ, ಸಿಮೆಂಟ್ ಗೋಣಿಚೀಲಗಳಲ್ಲಿ ಮರಳು ತುಂಬಿಸಿ ಅಣೆಕಟ್ಟಿನ ಕಿಂಡಿಯನ್ನು ಯುವಕರ ತಂಡ ಬಂದ್ ಮಾಡಿ […]

ಉಪ್ಪಿನಂಗಡಿ : ಮೃತನ ಪತ್ನಿ ಮತ್ತು ಆಕೆಯ ಪ್ರಿಯಕರನ ಬಂಧನ

Wednesday, April 23rd, 2014
Annaih Gowda

ಉಪ್ಪಿನಂಗಡಿ : ಶನಿವಾರ ರಾತ್ರಿ ಕಳೆಂಜ ಗ್ರಾಮದ ಶಾಲೆತಡ್ಕ ನಿವಾಸಿ ಅಣ್ಣಯ್ಯ ಗೌಡ (48) ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ಜಿಲ್ಲಾ ಅಪರಾಧಿ ಪತ್ತೆ ದಳ ಪೊಲೀಸರು, ಮೃತನ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ. ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿರುವ ರುದ್ರೇಶ್ (29) ಹಾಗು ಕೊಲೆಗೀಡಾದ ಅಣ್ಣಯ್ಯ ಗೌಡರ ಪತ್ನಿ ಅಮಿತಾ (38) ಬಂಧಿತ ಆರೋಪಿಗಳು. ಅಣ್ಣಯ್ಯ ಗೌಡರ ಮನೆಗೆ ಶನಿವಾರ ರಾತ್ರಿ ಬಂದಿದ್ದ ರುದ್ರೇಶ್ ತನ್ನ ಕಾಮದಾಟಕ್ಕೆ ತಡೆಯಾಗಿದ್ದ ಗೌಡರನ್ನು ಕಬ್ಬಿಣದ […]

ಉಪ್ಪಿನಂಗಡಿ ಬಳಿಯ ಪೆರ್ನೆ ಅಗ್ನಿ ದುರಂತ ಮಡಿದವರಿಗೆ ತಲಾ 1ಲಕ್ಷ ರೂಪಾಯಿ ಪರಿಹಾರ ಘೋಷಣೆ

Wednesday, April 10th, 2013
DC Harsha Gupta

ಮಂಗಳೂರು : ಉಪ್ಪಿನಂಗಡಿ ಸಮೀಪದ ಪೆರ್ನೆ, ರಾಷ್ಟೀಯ ಹೆದ್ದಾರಿ 75ರಲ್ಲಿ ಮಂಗಳವಾರ ಸಂಭವಿಸಿದ ಭೀಕರ ಅನಿಲ ಟ್ಯಾಂಕರ್ ದುರಂತದಲ್ಲಿ ಮಡಿದವರಿಗೆ ತಲಾ 1ಲಕ್ಷ ರೂಪಾಯಿಗಳ ಪರಿಹಾರವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶ್ರೀ ಹರ್ಷ ಗುಪ್ತ ಅವರು ಘೋಷಿಸಿದ್ದಾರೆ. ಶೇ.50 ಕ್ಕಿಂತಲೂ ಹೆಚ್ಚು ಸುಟ್ಟು ಗಾಯಗೊಂಡ ವ್ಯಕ್ತಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ಹಾಗೂ ಶೇ.50ಕ್ಕಿಂತಲೂ ಕಡಿಮೆ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ತಕ್ಷಣ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಮತ್ತು ಸಂಬಂಧಪಟ್ಟ ಅನಿಲ ಸರಬರಾಜು […]