ಜಾಗದ ವಿವಾದ : ಕೊಲೆಯಲ್ಲಿ ಅಂತ್ಯವಾದ ಜಗಳ, ತಂದೆ-ಮಗ ಬಂಧನ
Monday, February 10th, 2020ಬೆಳ್ತಂಗಡಿ : ಜಮೀನು ವಿವಾದಕ್ಕೆ ಸಂಬಂಧಿಸಿ ನೆರೆಹೊರೆಯವರ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಇಲ್ಲಿನ ಲಾಯಿಲ ಗ್ರಾಮದ ಪುತ್ರಬೈಲು ಎಂಬಲ್ಲಿ ರವಿವಾರ ರಾತ್ರಿ ನಡೆದಿದೆ. ಲಾಯಿಲ ಗ್ರಾಮದ ಪುತ್ರಬೈಲು 1 ನೇ ಅಡ್ಡ ರಸ್ತೆಯ ನಿವಾಸಿ ಉಮೇಶ್ (48) ಕೊಲೆಯಾದ ವ್ಯಕ್ತಿ. ಇವರ ನೆರೆಮನೆಯವರಾದ ಯೋಗೀಶ್ ಮತ್ತು ಆತನ ಮಗ ಜೀವನ್ ಕೊಲೆ ಆರೋಪಿಗಳಾಗಿದ್ದಾರೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈನಲ್ಲಿ ಕೆಲಸದಲ್ಲಿದ್ದ ಉಮೇಶ್ ಸಮಗಾರ ಇತ್ತೀಚೆಗೆ ಊರಿಗೆ ಆಗಮಿಸಿದ್ದರು. ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ […]