ಕೊರೊನಾ ಭೀತಿ ಹಿನ್ನೆಲೆ : ದೆಹಲಿಯಲ್ಲಿ ಎಲ್ಲ ಐಪಿಎಲ್ ಪಂದ್ಯ ರದ್ದು

Friday, March 13th, 2020
IPL

ನವದೆಹಲಿ : ದೆಹಲಿಯಲ್ಲಿ ಆಯೋಜನೆಗೊಂಡಿದ್ದ ಎಲ್ಲ ಐಪಿಎಲ್ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಮುಂಜಾಗೃತಾ ಕ್ರಮವಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ತಿಳಿಸಿದ್ದಾರೆ. ಕ್ರಿಕೆಟ್ ವೀಕ್ಷಿಸಲು ಸಾವಿರಾರು ಮಂದಿ ಕ್ರೀಡಾಂಗಣಕ್ಕೆ ಬರುತ್ತಾರೆ. ಯಾರು ಬರುತ್ತಾರೆ? ಅವರು ಎಲ್ಲಿಂದ ಬರುತ್ತಿದ್ದಾರೆ ಎನ್ನುವುದು ತಿಳಿಯುವುದು ಅಸಾಧ್ಯ. ಒಬ್ಬ ವ್ಯಕ್ತಿ ಬಂದರೂ ಹಲವು ಮಂದಿಗೆ ಕೊರೊನಾ ಹರಡುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಐಪಿಎಲ್ ಸೇರಿದಂತೆ ಎಲ್ಲ ಕ್ರೀಡಾ ಕಾರ್ಯಕ್ರಮವನ್ನು […]

ಐಪಿಎಲ್​ನಿಂದ ಹೊರಬಿದ್ದ ಜೋಫ್ರಾ ಆರ್ಚರ್

Friday, February 7th, 2020
vegi

ಲಂಡನ್ : ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಬಲ ಮೊಣಕೈ ನೋವಿನಿಂದಾಗಿ ಮುಂಬರುವ ಐಪಿಎಲ್ನಿಂದ ಹೊರಬಿದ್ದಿದ್ದಾರೆ. ಇದರಿಂದ ಟೂರ್ನಿಯ ಆರಂಭಕ್ಕೂ ಮುನ್ನವೇ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಭಾರಿ ಹಿನ್ನಡೆಯುಂಟಾಗಿದೆ. ಜೋಫ್ರಾ ಆರ್ಚರ್ ಗಾಯದಿಂದಾಗಿ ಮುಂದಿನ ಮೂರು ತಿಂಗಳ ಕಾಲ ವಿಶ್ರಾಂತಿ ಪಡೆಯಲಿದ್ದು, ಮುಂಬರುವ ಶ್ರೀಲಂಕಾ ಪ್ರವಾಸದಿಂದಲೂ ಹೊರಗುಳಿಯಲಿದ್ದಾರೆ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ತಿಳಿಸಿದೆ. ಬಾರ್ಬಡೋಸ್ ಮೂಲದ 24 ವರ್ಷದ ಆರ್ಚರ್ ಕಳೆದ ಡಿಸೆಂಬರ್ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ […]

ಇಂದು ಐಪಿಎಲ್​ ಹರಾಜು…ಈ ಆಟಗಾರರ ಮೇಲಿದೆ ಫ್ರಾಂಚೈಸಿಗಳ ಕಣ್ಣು..!

Tuesday, December 18th, 2018
premier-legue

ಜೈಪುರ: ಐಪಿಎಲ್ ಆರಂಭಕ್ಕೆ ಇನ್ನು ಕೆಲ ತಿಂಗಳು ಬಾಕಿ ಇರುವಂತೆ ಚಟುವಟಿಕೆಗಳು ಜೋರಾಗಿ ನಡೆಯುತ್ತಿದ್ದು, ಇಂದು ಜೈಪುರದಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ತಂಡದಲ್ಲಿ ಹಲವು ಆಟಗಾರರನ್ನು ಉಳಿಸಿಕೊಂಡಿರುವ ಫ್ರಾಂಚೈಸಿಗಳು ಇಂದಿನ ಹರಾಜಿನಲ್ಲಿ ಬಲಿಷ್ಠ ಆಟಗಾರರನ್ನು ಖರೀದಿ ಮಾಡಲು ಪ್ಲಾನ್ ಮಾಡಿವೆ. ವೆಸ್ಟ್ ಇಂಡೀಸ್ ತಂಡದ ಯುವ ಆಟಗಾರ ಶಿಮ್ರೋನ್ ಹೇಟ್ಮಯರ್ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಬಿಕರಿಯಾಗುವ ಸಾಧ್ಯತೆ ಇದೆ. ಕೆಲ ತಿಂಗಳ ಹಿಂದೆ ಭಾರತ ಪ್ರವಾಸ ಕೈಗೊಂಡಿದ್ದ ವಿಂಡೀಸ್ ತಂಡದಲ್ಲಿ […]

2018ರ ಐಪಿಎಲ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ ಚೆನ್ನೈ ಸೂಪರ್‌ಕಿಂಗ್ಸ್‌..!

Monday, May 28th, 2018
chennai-super-kings

ಮುಂಬೈ: ಶೇನ್‌ ವಾಟ್ಸನ್‌ ಸಿಡಿಲಬ್ಬರದ ಶತಕದ(117) ನೆರವಿನಿಂದ ಚೆನ್ನೈ ಸೂಪರ್‌ಕಿಂಗ್ಸ್‌ ತಂಡ ಸನ್‌ರೈಸರ್ಸ್‌ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ 2018 ರ ಐಪಿಎಲ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. 179 ರನ್‌ಗಳ ಟಾರ್ಗೆಟ್‌ ಪಡೆದ ಚೆನ್ನೈ ನಿಧಾನಗತಿ ಆರಂಭ ಪಡೆಯಿತಲ್ಲದೆ ಆರಂಭಿಕ ಪ್ಲೆಸಿಸ್‌(10) ವಿಕೆಟ್‌ ಕಳೆದುಕೊಂಡು ಆಘಾತಕ್ಕೊಳಗಾಯಿತು. ಆದರೆ 5 ಓವರ್‌ನಿಂದ ತಮ್ಮ ನೈಜ ಆಟಕ್ಕೆ ಮರಳಿದ ವಾಟ್ಸನ್‌ ಸಿಡಿಲಬ್ಬರದ ಶತಕ(117) ಸಿಡಿಸಿದರು. ಎರಡನೇ ವಿಕೆಟ್‌ ಜೊತೆಯಾಟದಲ್ಲಿ ಸುರೇಶ್‌ ರೈನಾ ಜೊತೆ 117 ರನ್‌ಗಳ ಜೊತೆಯಾಟ […]

ಐಪಿಎಲ್‌‌ ಕನ್ನಡ ಸ್ಟಾರ್‌‌ ಸ್ಪೋರ್ಟ್‌‌ ರಾಯಭಾರಿಯಾಗಿ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌

Wednesday, March 28th, 2018
shivraj-kumar

ಬೆಂಗಳೂರು: ಸ್ಟಾರ್‌ ನೆಟವರ್ಕ್‌ನ ಸ್ಟಾರ್‌‌ ಸ್ಪೋರ್ಟ್‌‌ ಕನ್ನಡದಲ್ಲಿ ಪ್ರಸಾರವಾಗಲಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ರಾಯಭಾರಿಯಾಗಿ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಆಯ್ಕೆಯಾಗಿದ್ದಾರೆ. ಸ್ಟಾರ್‌ ಇಂಡಿಯಾ ಇದೇ ಮೊದಲ ಸಲ ನಾಲ್ಕು ಪ್ರಾದೇಶಿಕ ಭಾಷೆಗಳಾಗಿರುವ ತಮಿಳು, ತೆಲಗು, ಬಂಗಾಳಿ ಹಾಗೂ ಕನ್ನಡದಲ್ಲಿ ಸ್ಟೋರ್ಟ್ಸ್‌ ಚಾನೆಲ್‌ ಪ್ರಸಾರ ಮಾಡಲು ಮುಂದಾಗಿದೆ. ಜತೆಗೆ ಪ್ರಸಕ್ತ ಸಾಲಿನ ಐಪಿಎಲ್‌ ಪ್ರಸಾರ ಮಾಡಲು ಸಹ ಅವು ಮುಂದಾಗಿವೆ. ಹೀಗಾಗಿ ಕನ್ನಡದ ರಾಯಭಾರಿಯಾಗಿ ನಟ ಶಿವರಾಜ್‌ ಕುಮಾರ್‌ ಆಯ್ಕೆಗೊಂಡಿದ್ದಾರೆ. ಇನ್ನು ತಾವೂ ರಾಯಭಾರಿಯಾಗಿ ಆಯ್ಕೆಗೊಂಡಿರುವುದಕ್ಕೆ ಸಂಬಂಧಿಸಿದಂತೆ […]